ಸದ್ಯದಲ್ಲೇ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಆಗಲಿದೆ ಗೆಲಾಕ್ಸಿ ಎಸ್‌4,ನೋಟ್‌ 3

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮತ್ತು ಗೆಲಾಕ್ಸಿ ನೋಟ್‌ 3 ಖರೀದಿಸಿದ ಗ್ರಾಹಕರಿಗೆ ಗುಡ್‌ನ್ಯೂಸ್‌. ಸದ್ಯದಲ್ಲೇ ನೀವು ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ಗೆ ನಿಮ್ಮ ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಮಾಡಬಹುದು.

ಕಳೆದ ವಾರವಷ್ಟೇ  ಗೆಲಾಕ್ಸಿಎಸ್‌3 ಗ್ರಾಹಕರಿಗೆ ಜೆಲ್ಲಿ ಬೀನ್‌ 4.3ಗೆ ಅಪ್‌ಡೇಟ್‌ ಅವಕಾಶ ಕಲ್ಪಿಸಿದ್ದ ಸ್ಯಾಮ್‌ಸಂಗ್‌,ಈಗ ಕಳೆದ ವರ್ಷ ವಿಶ್ವದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದ ಗೆಲಾಕ್ಸಿ ಎಸ್‌ 4 ಮತ್ತು ನೋಟ್‌ 3 ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌‌ ಓಎಸ್ ಅಪ್‌ಡೇಟ್‌ ಅವಕಾಶ ನೀಡಲಿದೆ.

ಸ್ಯಾಮ್‌ಸಂಗ್‌ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ ಸ್ಯಾಮ್‌ಸಂಗ್‌ ಮೊಬೈಲ್‌ಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸುವ ಸ್ಯಾಮ್‌ ಮೊಬೈಲ್‌ ಈ ಕಿಟ್‌ಕ್ಯಾಟ್‌ ಅಪ್‌ಡೇಟ್‌ ಸುದ್ದಿಯನ್ನು ಪ್ರಕಟಿಸಿದೆ. ಸ್ಯಾಮ್‌ ಮೊಬೈಲ್‌ ಪ್ರಕಾರ ಇನ್ನು ಎರಡು ವಾರದೊಳಗೆ ಸ್ಯಾಮ್‌ಸಂಗ್‌ ಅಧಿಕೃತವಾಗಿ ಈ ಸುದ್ದಿಯನ್ನು ಪ್ರಕಟಿಸಲಿದೆ ಎಂದು ಹೇಳಿದೆ.

ಸದ್ಯದಲ್ಲೇ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಆಗಲಿದೆ ಗೆಲಾಕ್ಸಿ ಎಸ್‌4,ನೋಟ್‌ 3

ಗೂಗಲ್‌ ಕಳೆದ ನವೆಂಬರ್‌ನಲ್ಲಿ ಕಿಟ್‌ಕ್ಯಾಟ್‌ ಓಎಸ್‌ನ್ನು ಬಿಡುಗಡೆ ಮಾಡಿದ್ದು, ಈ ಓಎಸ್‌ನಲ್ಲಿ ಹೊಂದಿರುವ ಯಾವುದೇ ಸ್ಮಾರ್ಟ್‌ಫೋನ್‌ನ್ನು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿಲ್ಲ.ಕಳೆದ ವಾರ ಸಿಇಎಸ್‌ನಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್‌ ಟ್ಯಾಬ್ಲೆಟ್‌ಗಳು ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾಗಿದ್ದು, ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಗೆಲಾಕ್ಸಿ ಎಸ್‌5 ಕಿಟ್‌ಕ್ಯಾಟ್‌ ಓಎಸ್‌ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.


ಸದ್ಯ ಭಾರತದ ಮಾರುಕಟ್ಟೆಯಲ್ಲಿ ಗೂಗಲ್‌ ಸ್ಮಾಟ್‌‌‌‌ಫೋನ್‌ ಹೊರತು ಪಡಿಸಿ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಯಾವುದೇ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿಲ್ಲ.ಹೊಸದಾಗಿ ಬಿಡುಗಡೆಯಾದ ನೆಕ್ಸಸ್‌ 5 ಭಾರತದ ಮಾರುಕಟ್ಟೆಯಲ್ಲಿ 28,990 ಬೆಲೆಯಲ್ಲಿ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot