ಸ್ಮಾರ್ಟ್‌ಫೋನನ್ನು ಇಷ್ಟು ಸ್ಮಾರ್ಟ್‌ ಆಗಿರುವ ಆಂಡ್ರಾಯ್ಡ್ P: ಕಂಪ್ಯೂಟರ್ ನಿಯಂತ್ರಿಸಲು ಸಾಧ್ಯ..!

|

ಮಾರುಕಟ್ಟೆಯಲ್ಲಿ ಶೀಘ್ರವೇ ಆಂಡ್ರಾಯ್ಡ್ P ಕಾಣಿಸಿಕೊಳ್ಳಲಿದ್ದು, ಗೂಗಲ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸದನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಆಂಡ್ರಾಯ್ಡ್ P ನಲ್ಲಿ ಸಾಕಷ್ಟು ಹೊಸತನಗಳನ್ನು ನೀಡಲು ಮುಂದಾಗಿದೆ. ಆಪಲ್ ಮೀರಿಸುವ ಆಯ್ಕೆಗಳನ್ನು ಅಳವಡಿಸಲು ಯೋಜನೆಯನ್ನು ರೂಪಿಸಿದೆ. ಈಗಾಗಲೇ ಸದ್ದು ಮಾಡುತ್ತಿರುವ ಆಂಡ್ರಾಯ್ಡ್ ಒರಿಯೋವನ್ನು ಮೀರಿಸುವ ಆಯ್ಕೆಗಳನ್ನು ನೀಡಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನನ್ನು ಇಷ್ಟು ಸ್ಮಾರ್ಟ್‌ ಆಗಿರುವ ಆಂಡ್ರಾಯ್ಡ್ P

ಈಗಾಗಲೇ ಆಂಡ್ರಾಯ್ಡ್ P ನಲ್ಲಿ ಇರುವ ಆಯ್ಕೆಗಳ ಕುರಿತು ಚರ್ಚೆಯೂ ಶುರುವಾಗಿದ್ದು, ಮೂಲಗಳ ಪ್ರಕಾರ, ಆಂಡ್ರಾಯ್ಡ್ P ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಬ್ಲೂಟೂತ್ ಕಿಬೋರ್ಡ್ ಮತ್ತು ಮೌಸ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನೀವು ಕಂಪ್ಯೂಟರ್ ನಿಯಂತ್ರಿಸಬಹುದಾಗಿದೆ.

ರೂಮರ್‌ಗಳು:

ರೂಮರ್‌ಗಳು:

ಆಂಡ್ರಾಯ್ಡ್ P ಕುರಿತಂತೆ ಸಾಕಷ್ಟು ರೂಮರ್ ಗಳು ಕೇಳಿ ಬರುತ್ತಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಈ ಆವೃತ್ತಿಯೂ, ಹಿಂದಿನ ಆವೃತ್ತಿಗಳಿಗಿಂತ ತೀರಾ ಭಿನ್ನವಾಗಿರಲಿದೆ ಎನ್ನುವ ಮಾತು ಗೂಗಲ್ ಕಡೆಯಿಂದಲೇ ಕೇಳಿ ಬಂದಿದೆ. ಆಪಲ್ ಸೆಡ್ಡು ಹೊಡೆಯುವ ಸಲುವಾಗಿ ಹೊಸ ಆಯ್ಕೆಗಳನ್ನು ನೀಡಲಿದೆ.

ಸೆಕ್ಯೂರ್:

ಸೆಕ್ಯೂರ್:

ಹೆಚ್ಚಿನ ಸೆಕ್ಯೂರಿಟಿಯನ್ನು ನೀಡಲು ಗೂಗಲ್ ಮುಂದಾಗಿದ್ದು, ದಿನೇ ದಿನೇ ಪೇಮೆಂಟ್ ಪ್ರಕ್ರಿಯೆಗಳು ಸ್ಮಾರ್ಟ್‌ಫೋನ್‌ನಲ್ಲಿಯೇ ನಡೆಯುತ್ತಿರುವ ಕಾರಣದಿಂದಾಗಿ ಸ್ಮಾರ್ಟ್‌ಫೋನ್ ಗೆ ಮಾಲ್ವೇರ್ ದಾಳಿಯನ್ನು ತಡೆಯಲು ಫೈರ್ ವಾಲ್‌ಗಳನ್ನು ಉತ್ತಮಪಡಿಸುವ ಕಾರ್ಯಕ್ಕೆ ಮುಂದಾಗಿದೆ.

ಬ್ಯಾಟರಿ ಬಾಳಿಕೆ

ಬ್ಯಾಟರಿ ಬಾಳಿಕೆ

ಸ್ಮಾರ್ಟ್‌ಫೋನ್ ಬಳಕೆದಾರರ ಪ್ರಮುಖ ಸಮಸ್ಯೆಯಾದ ಶೀಘ್ರ ಬ್ಯಾಟರಿ ಇಳಿಕೆಗೆ ಪರಿಹಾರವನ್ನು ನೀಡುವ ಸಲುವಾಗಿ ಮತ್ತು ಬ್ಯಾಟರಿ ಬಾಳಿಕೆಯನ್ನು ಏರಿಕೆ ಮಾಡುವ ಸಲುವಾಗಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲು ಗೂಗಲ್ ಮುಂದಾಗಿದೆ.

ನೋಟಿಫಿಕೇಷನ್:

ನೋಟಿಫಿಕೇಷನ್:

ನೋಟಿಫಿಕೇಷನ್ ಮತ್ತು ಎಮೋಜಿಗಳನ್ನು ಆಂಡ್ರಾಯ್ಡ್ P ನಲ್ಲಿ ಹೊಸ ಮಾದರಿಯಲ್ಲಿ ನೀಡಲು ಗೂಗಲ್ ಮುಂದಾಗಿದ್ದು, ಸ್ಟಾಕ್ ಆಂಡ್ರಾಯ್ಡ್ ವಿನ್ಯಾಸದಲ್ಲಿಯೂ ಬದಲಾವಣೆಯನ್ನು ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವರ್ಷದ ಅಂತ್ಯದಲ್ಲಿ ಲಾಂಚ್ ಆಗಲಿರುವ ಆಂಡ್ರಾಯ್ಡ್ P ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ.

How to Activate UAN Number? KANNADA

ಓದಿರಿ: ವಾಟ್ಸ್ಆಪ್-ಪೇಟಿಎಂಗೆ ಸೆಡ್ಡು: ಗೂಗಲ್ ತೇಜ್ ನಿಂದ ಹಣ ಪಡೆಯುವುದು ಇನ್ನು ಸುಲಭ..!

Best Mobiles in India

English summary
Android P may allow your phone to work as a Bluetooth keyboard or mouse. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X