ಆಪಲ್ ಐಫೋನ್‌ ಗ್ರಾಹಕರಿಗೆ ಮಾಡಿದ್ಯಾ ಮೋಸ.? ಕ್ಷಮೆ ಕೇಳಿದ್ದು ಯಾಕೆ? ತಪ್ಪಿಗೆ ಪರಿಹಾರ?

|

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿರುವ ಆಪಲ್ ಕಂಪನಿ, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದಾ ರಾಜನ ಹಾಗೇ ಮೆರೆಯುತ್ತಲೇ ಇದೆ. ತನ್ನ ಹೈ ಎಂಡ್ ದುಬಾರಿ ಬೆಲೆಯ ಐಫೋನ್‌ಗಳನ್ನು ಗ್ರಾಹಕರ ಕೈಗೆ ಕಾಲದಿಂದ ಕಾಲಕ್ಕೆ ನೀಡುತ್ತಲೇ ಬಂದಿದೆ. ಆದರೆ ಈ ಬಾರಿ ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಐಪೋನ್ X ಬಿಡುಗಡೆ ಮಾಡುವ ಮೂಲಕ ಇಡೀ ಸ್ಮಾರ್ಟ್‌ಫೋನ್ ಜಗತ್ತನ್ನೇ ತನ್ನ ಕಡೆಗೆ ತಿರುಗುವಂತೆ ಮಾಡಿತ್ತು.

ಆಪಲ್ ಐಫೋನ್‌ ಗ್ರಾಹಕರಿಗೆ ಮಾಡಿದ್ಯಾ ಮೋಸ.? ಕ್ಷಮೆ ಕೇಳಿದ್ದು ಯಾಕೆ?

ಓದಿರಿ: ಬ್ರಾಡ್‌ಬ್ಯಾಂಡ್‌ಗಿಂತಲೂ ಅತೀ ಕಡಿಮೆ ಬೆಲೆಗೆ, ಅತೀ ವೇಗದ ನೆಟ್‌‌ಅನ್ನು PCಗೆ ಪಡೆಯುವುದು ಹೇಗೆ..?

ಆಪಲ್ ಐಫೋನ್ 8, ಐಫೋನ್ 8 ಪ್ಲಸ್‌ ಸ್ಮಾರ್ಟ್‌ಫೋನ್‌ ನೊಂದಿಗೆ ಐಪೋನ್ X ಬಿಡುಗಡೆ ಮಾಡಿದ ನಂತರದಲ್ಲಿ ಇತರೇ ಐಫೋನ್‌ ಬಳಕೆದಾರರು ಹೊಸ ಸಮಸ್ಯೆಯನ್ನು ಎದುರಿಸಲು ಆರಂಭಿಸಿದರು. ಹಿಂದಿನ ಐಫೋನ್‌ಗಳು ತಮ್ಮ ವೇಗವನ್ನು ಕಳೆದುಕೊಂಡು ನಿಧಾನ ಗತಿಯಲ್ಲಿ ಕಾರ್ಯನಿರ್ವಹಿಸಲು ಮುಂದಾದವು. ಈ ಹಿನ್ನಲೆಯಲ್ಲಿ ಬಳಕೆದಾರರು ತಮ್ಮ ಅಸಮಾಧಾನವನ್ನು ಹೊರಹಾಕಲು ಮುಂದಾದರು.

ಹೊಸ ಫೋನ್‌ ಕೊಳ್ಳಲು:

ಹೊಸ ಫೋನ್‌ ಕೊಳ್ಳಲು:

ಪ್ರತಿ ಬಾರಿ ಹೊಸ ಐಫೋನ್ ಲಾಂಚ್ ಆದ ಸಂದರ್ಭದಲ್ಲಿ ಹಿಂದಿನ ಐಫೋನ್ ಬಳಕೆದಾರರು ಹೊಸ ಫೋನ್‌ ಕೊಂಡುಕೊಳ್ಳಲಿ ಎಂದು ಆಪಲ್ ಬಯಸುತ್ತದೆ. ಈ ಹಿನ್ನಲೆಯಲ್ಲಿ ಹಳೇ ಫೋನ್‌ಗಳ ವೇಗವನ್ನು ಬೇಕೆಂದೆ ಕಡಿಮೆ ಮಾಡುತ್ತಿದೆ ಎಂದು ಆಪಲ್ ಬಳಕೆದಾರರು ಆರೋಪಸಿದ್ದಾರೆ.

ಕ್ಷಮೆ ಕೇಳಿದ ಆಪಲ್:

ಕ್ಷಮೆ ಕೇಳಿದ ಆಪಲ್:

ಈ ಕಾರಣಕ್ಕಾಗಿ ತನ್ನ ಐಫೋನ್‌ ಬಳಕೆದಾರರನ್ನು ಕ್ಷಮೆ ಕೇಳಲು ಮುಂದಾಗಿದ್ದು, ತನ್ನ ಹಿಂದಿನ ಫೋನ್‌ಗಳು ನಿಧಾನವಾಗಿ ಕಾರ್ಯನಿರ್ವಹಿಸುತ್ತಿರುದಕ್ಕೆ ವಿ‍ಷಾದ ವ್ಯಕ್ತ ಪಡಿಸಿದೆ. 'ಆಪಲ್ ತನ್ನ ಗ್ರಾಹಕರನ್ನು ಬಿಟ್ಟುಕೊಡುತ್ತಿದೆ ಎಂದು ಬಳಕೆದಾರರು ಭಾವಿಸಬಹುದು, "ಗ್ರಾಹಕರು ಆಪಲ್ ನಿಷ್ಠೆಯನ್ನು ಉದ್ದೇಶಗಳನ್ನು ಸಂಶಯಿಸಿರಬಹುದು, ಗ್ರಾಹಕರ ವಿಶ್ವಾಸವನ್ನು ಮರಳಿ ಪಡೆದುಕೊಳ್ಳಲು ಆಪಲ್ ಪ್ರಯತ್ನಿಸುತ್ತಿದೆ. ಕೆಲವರು ನಮ್ಮಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ಹಾಗಾಗಿ "ನಾವು ಕ್ಷಮೆಯಾಚಿಸುತ್ತೇವೆ" ಎಂದು ಆಪಲ್ ತನ್ನ ವೆಬ್‌ ಸೈಟಿನಲ್ಲಿ ಪ್ರಕಟಿಸಿದೆ.

ನಿಧಾನವಾಗಿದ್ದ ಫೋನ್‌ಗಳು:

ನಿಧಾನವಾಗಿದ್ದ ಫೋನ್‌ಗಳು:

ಮಾರುಕಟ್ಟೆಯಲ್ಲಿ ಇನ್ನು ಬೇಡಿಕೆಯನ್ನು ಉಳಿಸಿಕೊಂಡಿರುವ ಐಫೋನ್ 6, ಐಪೋನ್ 6 ಪ್ಲಸ್, ಐಪೋನ್ 6S, ಐಫೋನ್ 6S ಪ್ಲಸ್ ಹಾಗೂ ಐಫೋನ್ SE ಫೋನ್‌ಗಳು ಹೊಸ ಆಪ್‌ಡೇಟ್ ಸ್ವೀಕರಿಸಿದ ನಂತರದಲ್ಲಿ ನಿಧಾನಗತಿಯ ಕಾರ್ಯಚರಣೆಯನ್ನು ಮಾಡುತ್ತಿವೆ ಎನ್ನುವ ದೂರೊಂದು ಕೇಳಿ ಬಂದಿದೆ.

ಬ್ಯಾಟರಿ ಬದಲಾಯಿಸಿ ಕೊಡಲಿದೆ:

ಬ್ಯಾಟರಿ ಬದಲಾಯಿಸಿ ಕೊಡಲಿದೆ:

ತನ್ನ ಐಫೋನ್‌ಗಳು ನಿಧಾವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಜನವರಿಯಲ್ಲಿ ಅತೀ ಕಡಿಮೆ ಬ್ಯಾಟರಿಗಳನ್ನು ಬದಲಾಯಿಸಿಕೊಡುವುದಾಗಿ ಆಪಲ್ ತಿಳಿಸಿದ್ದು, ಜನವರಿಯಲ್ಲಿ ಗ್ರಾಹಕರು ಈ ಸೇವೆಯನ್ನು ಪಡೆಬಹುದಾಗಿದೆ. ಒಟ್ಟಿನಲ್ಲಿ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಳ್ಳಲು ಆಪಲ್‌ ಉತ್ತಮ ಕಾರ್ಯಕ್ಕೆ ಮುಂದಾಗಿದೆ.

Best Mobiles in India

English summary
Apple apologises to users over slowing down older iPhones. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X