ಐಫೋನ್ 7, ಐಫೋನ್ 7 ಪ್ಲಸ್ ಆಕರ್ಷಕ ವಿಶೇಷತೆಗಳೇನು?

By Shwetha
|

ಅಂತೂ ಆಪಲ್ ಬಳಕೆದಾರರು ನಿರೀಕ್ಷೆಯಿಂದ ಕಾಯುತ್ತಿದ್ದ ಸಪ್ಟೆಂಬರ್ 7 ಬಂದೇ ಬಿಟ್ಟಿದೆ. ವರ್ಷದ ಅತಿ ದೊಡ್ಡ ಸ್ಮಾರ್ಟ್‌ಫೋನ್ ಲಾಂಚ್‌ಗಾಗಿ ಭರದಿಂದ ತಯಾರಿಗಳು ನಡೆಯುತ್ತಿದ್ದು ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ ಲಾಂಚ್‌ಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಹಿಂದಿನ ಐಫೋನ್ ಲಾಂಚ್‌ನಂತೆಯೇ, ಕಳೆದ ಹಲವು ತಿಂಗಳುಗಳಿಂದ ಈ ಲಾಂಚ್ ಕುರಿತು ಅಷ್ಟಿಷ್ಟು ವರದಿಗಳು ಸೋರಿಕೆಯಾಗುತ್ತಲೇ ಇದ್ದವು.

ಓದಿರಿ: ಆಪಲ್ ಐಫೋನ್ 7 ಲಾಂಚ್: ಟಿಮ್ ಕುಕ್ ಮಾಡಿರುವ ಮಾರ್ಪಾಡುಗಳೇನು?

ಇದೀಗ ಕೆಜಿಐ ಸೆಕ್ಯುರಿಟೀಸ್ ಅನಾಲಿಸ್ಟ್ ಮಿಂಗ್ - ಚಿ, ಕು ತಮ್ಮ ಟ್ರ್ಯಾಕ್ ರೆಕಾರ್ಡ್‌ನಿಂದ ಹೆಸರುವಾಸಿಯಾಗಿದ್ದು, ಆಪಲ್ ಡಿವೈಸ್‌ಗಳ ರೂಮರ್‌ಗಳ ಬಗ್ಗೆ ವಿವರವಾದ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಈ ಐಫೋನ್‌ಗಳ ಲೀಕ್ ಆದ ಫೀಚರ್‌ಗಳನ್ನು ನೀವು ಕಂಡುಕೊಳ್ಳಬಹುದಾಗಿದೆ. ಮುಂಬರುವ ಐಫೋನ್‌ಗಳ ಬಗೆಗಿನ ವಿವರ ಮಾಹಿತಿ ಇಲ್ಲಿದೆ.

ಹೊಸ ಪ್ರೊಸೆಸರ್

ಹೊಸ ಪ್ರೊಸೆಸರ್

ಐಫೋನ್ 7 ಆಪಲ್‌ನ ಹೊಸ A10 ಚಿಪ್ (TSMC ತಯಾರಕರು) ಇದು ಗರಿಷ್ಟ ಕ್ಲಾಕ್ ಸ್ಪೀಡ್ 2.4 GHZ ಅನ್ನು ಒದಗಿಸಲಿದೆ. ಈ ಚಿಪ್ ಆಪಲ್ ಎ9 ಚಿಪ್‌ನಾದ್ಯಂತ ಅಪ್‌ಗ್ರೇಡ್ ಎಂದೆನಿಸಿದ್ದು ಪ್ರಸ್ತುತ ಐಫೋನ್‌ಗಳಲ್ಲಿ ಬಳಕೆಯಾಗುತ್ತಿದೆ.

ಹೆಚ್ಚು ಸ್ಟೋರೇಜ್, ಹೆಚ್ಚು RAM

ಹೆಚ್ಚು ಸ್ಟೋರೇಜ್, ಹೆಚ್ಚು RAM

ಹೊಸ ಐಫೋನ್‌ಗಳಿಗೆ RAM ಮತ್ತು ಸ್ಟೋರೇಜ್ ಬೂಸ್ಟ್ ಅನ್ನು ಆಪಲ್ ನೀಡುತ್ತಿದೆ ಎಂಬುದಾಗಿ ಕೆಜಿಐ ವರದಿ ತಿಳಿಸಿದೆ. 16 ಜಿಬಿ ಮತ್ತು 64 ಜಿಬಿ ಹಾಗೂ 256 ಜಿಬಿ ಆವೃತ್ತಿಯನ್ನು ಲಾಂಚ್ ಮಾಡುವ ಯೋಜನೆ ಕಂಪೆನಿಯದ್ದಾಗಿದೆ.

ಹೊಸ ಬಣ್ಣಗಳಲ್ಲಿ

ಹೊಸ ಬಣ್ಣಗಳಲ್ಲಿ

ಹೊಸ ಕಲರ್ ಆಪ್ಶನ್‌ಗಳನ್ನು ಐಫೋನ್‌ಗಳಲ್ಲಿ ಕಂಪೆನಿ ಅಳವಡಿಕೆ ಮಾಡಲಿದೆ. 'ಡಾರ್ಕ್ ಬ್ಲ್ಯಾಕ್' ಮತ್ತು 'ಗ್ಲಾಸಿ ಪಿಯಾನೊ ಬ್ಲ್ಯಾಕ್' ಆವೃತ್ತಿಗಳನ್ನು ಐಫೋನ್ ಶ್ರೇಣಿಯಲ್ಲಿ ಕಂಪೆನಿ ಸೇರಿಸಲಿದೆ.

ಡ್ಯುಯಲ್ ಲೆನ್ಸ್ ಕ್ಯಾಮೆರಾ

ಡ್ಯುಯಲ್ ಲೆನ್ಸ್ ಕ್ಯಾಮೆರಾ

ಆಪಲ್‌ನ ಬ್ರ್ಯಾಂಡ್ ನ್ಯೂ ಐಫೋನ್‌ಗಳು ಡ್ಯುಯಲ್ ಲೆನ್ಸ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ವೈಡ್ ಆಂಗಲ್ ಮತ್ತು ಟೆಲಿಫೋಟೋ ಕ್ಯಾಮೆರಾವನ್ನು ಇದು ಒಳಗೊಂಡಿದೆ.

ವಾಟರ್ ಪ್ರೂಫ್

ವಾಟರ್ ಪ್ರೂಫ್

ಹೊಸ ಐಫೋನ್‌ಗಳು ಜಲ ಪ್ರತಿರೋಧಕ ಅಂಶಗಳನ್ನು ಒಳಗೊಂಡಿವೆ. ಐಫೋನ್ 7 ಮತ್ತು ಐಫೋನ್ 7 ಪ್ಲಸ್ ವಾಟರ್ ಪ್ರೂಫ್ ಎಂದೆನಿಸಿದ್ದು IPX7 ರೇಟಿಂಗ್‌ನದ್ದಾಗಿದೆ.

ಸ್ಕ್ರೀನ್ ಅಪ್‌ಗ್ರೇಡ್

ಸ್ಕ್ರೀನ್ ಅಪ್‌ಗ್ರೇಡ್

ಹೊಸದಾಗಿ ಬರುವ ಐಫೋನ್‌ಗಳ ಸ್ಕ್ರೀನ್ ಗಾತ್ರದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಒಂದೇ ಬಣ್ಣ ಗಾತ್ರವನ್ನು ಈ ಹೊಸ ಐಫೋನ್‌ಗಳು ಪಡೆದುಕೊಳ್ಳಲಿದ್ದು ಐಪ್ಯಾಡ್ ಪ್ರೊನ ತಂತ್ರಜ್ಞಾನವನ್ನು ಇದು ಪಡೆದುಕೊಳ್ಳಬಹುದಾದ ಸಾಧ್ಯತೆ ಇದೆ.

ಹೆಡ್‌ಫೋನ್ ಜ್ಯಾಕ್ ಇಲ್ಲ

ಹೆಡ್‌ಫೋನ್ ಜ್ಯಾಕ್ ಇಲ್ಲ

ಹೆಚ್ಚು ವದಂತಿ ಏನೆಂದರೆ ಮುಂಬರಲಿರುವ ಐಫೋನ್‌ಗಳು 3.5 ಎಮ್‌ಎಮ್ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿಲ್ಲ ಎಂಬುದಾಗಿದೆ.

ಫೋರ್ಸ್ ಟಚ್ ಸೆನ್ಸಾರ್ಸ್

ಫೋರ್ಸ್ ಟಚ್ ಸೆನ್ಸಾರ್ಸ್

3.5 ಎಮ್‌ಎಮ್ ಹೆಡ್‌ಫೋನ್ ಜ್ಯಾಕ್ ಅನ್ನು ಫೋರ್ಸ್ ಟಚ್ ಗುರುತಿಸುವಿಕೆ ಸಿಸ್ಟಮ್ ಅನ್ನು ವರ್ಧಿಸಲು ಬಳಸಲಾಗಿದೆ ಎಂಬುದಾಗಿ ಕೆಜಿಐ ವರದಿ ತಿಳಿಸಿದೆ.

ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ

ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ

ಆಪಲ್ ತನ್ನ ಮುಂಬರಲಿರುವ ಐಫೋನ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ. ತನ್ನ ಮುಂದಿನ ವರ್ಷದ ಐಫೋನ್‌ಗಳಲ್ಲಿ ಮುಖ್ಯ ವಿನ್ಯಾಸಗಳಿಗೆ ಅಪ್‌ಗ್ರೇಡ್ ಮಾಡಲಿದೆ.

16 ನೇ ದಿನಾಂಕದಿಂದ ಮಾರಾಟ

16 ನೇ ದಿನಾಂಕದಿಂದ ಮಾರಾಟ

ಇದನ್ನು ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಒಂದು ಮಾಹಿತಿಯ ಪ್ರಕಾರ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಸಪ್ಟೆಂಬರ್ 16 ರಿಂದ ಯುಎಸ್‌ನಲ್ಲಿ ಮಾರಾಟವಾಗಲಿದೆ.

Best Mobiles in India

English summary
Kuo's report offers peek into iPhone 7 and iPhone Plus features. Here's all that Kuo predicts and more about the upcoming iPhones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X