ಆ್ಯಪಲ್ ಐಫೋನ್ 7 vs ಐಫೋನ್ 6ಎಸ್: ವ್ಯತ್ಯಾಸಗಳೇನು?

|

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪಲ್ ಬಹುನಿರೀಕ್ಷಿತ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅನ್ನು ಬಿಡುಗಡೆಗೊಳಿಸಿತು. ಹೊರನೋಟಕ್ಕೆ ಕಳೆದ ವರುಷ ಬಿಡುಗಡೆಯಾದ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಗೂ ಈ ವರ್ಷ ಬಿಡುಗಡೆಯಾಗಿರುವ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಗೂ ಅಂತಹ ವ್ಯತ್ಯಾಸಗಳೇನಿಲ್ಲ ಆದರೆ ಒಳಗಡೆ ಬಹಳಷ್ಟು ಬದಲಾವಣೆಗಳಾಗಿವೆ.

ಆ್ಯಪಲ್ ಐಫೋನ್ 7 vs ಐಫೋನ್ 6ಎಸ್: ವ್ಯತ್ಯಾಸಗಳೇನು?

ಹೊರನೋಟದಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ಹಿಂಬದಿಯ ಕ್ಯಾಮೆರಾ ದೊಡ್ಡದಾಗಿದೆ ಮತ್ತು ಐಫೋನ್ 7 ಪ್ಲಸ್ ನಲ್ಲಿ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳಿವೆ. ಹೊಸ ಬಣ್ಣ ಜೆಟ್ ಬ್ಲ್ಯಾಕಿನ ಐಫೋನ್ ಅತ್ಯಾಕರ್ಷಕವಾಗಿದೆ.

ಓದಿರಿ: ಅತಿ ಕಡಿಮೆ ಬೆಲೆಯಲ್ಲಿ ಐಫೋನ್ 7 ಲಭ್ಯ!!!

ಹೊಸ ಐಫೋನಿನಲ್ಲಿ ಶಕ್ತಿಯುತ ಹಾರ್ಡ್ ವೇರ್ ಇದೆ, ದೊಡ್ಡ ಮತ್ತು ಉತ್ತಮ ಬ್ಯಾಟರಿ ಇದೆ. ಹೊಸ ಐಫೋನಿಗೆ ಅಪ್ ಗ್ರೇಡ್ ಆಗುವುದು ನಿಜಕ್ಕೂ ಉತ್ತಮವಾ? ನೋಡೋಣ ಬನ್ನಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನ್ಯಾಸ.

ವಿನ್ಯಾಸ.

ಹಳೆಯ ಫೋನಿಗೂ ಹೊಸ ಫೋನಿಗೂ ಗಾತ್ರದಲ್ಲಿ ವ್ಯತ್ಯಾಸಗಳಿಲ್ಲ. ಆದರೆ ಹೊಸ ಐಫೋನುಗಳು ಹಿಂದಿನ ಫೋನುಗಳಿಗಿಂತ ಹಗುರವಾಗಿರುತ್ತವೆ ಎನ್ನಲಾಗಿದೆ. ಹೊಸ ಫೋನುಗಳು ಜಲ ಮತ್ತು ಧೂಳು ನಿರೋಧಕವಾಗಿದೆ.

ವಿನ್ಯಾಸದಲ್ಲಿರುವ ಪ್ರಮುಖ ಬದಲಾವಣೆ ಹಿಂಬದಿಯ ಕ್ಯಾಮೆರಾದಲ್ಲಿ. ಹಿಂಬದಿಯ ಕ್ಯಾಮೆರಾ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಗೆ ಹೋಲಿಸಿದರೆ ದೊಡ್ಡದಾಗಿದೆ. ಹೋಮ್ ಬಟನ್ ಕೂಡ ಬದಲಾಗಿದೆ, ಈಗದನ್ನು ಒತ್ತುವಂತಿಲ್ಲ. ಕಂಪನಿಯು ಹೊಸತಾದ 'ಟಾಪ್ಟಿಕ್ ಇಂಜಿನ್' ಅನ್ನು ಸೇರಿಸಿದೆ, ಇದು ಮ್ಯಾಕ್ ಬುಕ್ ಪ್ರೋದಲ್ಲಿರುವ ಫೋರ್ಸ್ ಟಚ್ ಬಟನ್ನಿನಂತೆ ಕಾರ್ಯನಿರ್ವಹಿಸುತ್ತದೆ.

ಪರದೆ.

ಪರದೆ.

ಪರದೆಯ ರೆಸೊಲ್ಯೂಷನ್, ಪರದೆಯ ಗಾತ್ರವೆಲ್ಲವೂ ಹಿಂದಿನ ಫೋನುಗಳಂತೆಯೇ ಇರಲಿದೆ. ಆದರೆ ಹೊಸ ಐಫೋನುಗಳಲ್ಲಿನ ಪರದೆಯು ಹಿಂದಿನ ಫೋನುಗಳಿಗಿಂತ 25 ಪ್ರತಿಶತಃ ಹೆಚ್ಚು ಪ್ರಖರವಾಗಿರಲಿದೆ.

ಸಂಗ್ರಹ ಸಾಮರ್ಥ್ಯ.

ಸಂಗ್ರಹ ಸಾಮರ್ಥ್ಯ.

ಗಾಳಿಸುದ್ದಿಗಳು ನಿಜವಾಗಿವೆ. ಆ್ಯಪಲ್ 16 ಜಿಬಿಯ ಫೋನಿನ ತಯಾರಿಯನ್ನು ನಿಲ್ಲಿಸಿದೆ. ಈಗ ಕಂಪನಿಯು ಕನಿಷ್ಟ 32 ಜಿಬಿಯ ಫೋನನ್ನು ಹೊರತರುತ್ತಿದೆ, ಉಳಿದ ಆಯ್ಕೆಗಳೆಂದರೆ 128 ಹಾಗೂ 256 ಜಿಬಿಯ ಫೋನುಗಳು.

ಈ ಫೋನುಗಳ ಬೆಲೆಯನ್ನು ಆ್ಯಪಲ್ ತನ್ನ ಹೊಸ ಸರಣಿಯ ಫೋನುಗಳಿಗೆ ಇಡುವಷ್ಟೇ ಇಟ್ಟಿದೆ. ಭಾರತದ ಮಟ್ಟಿಗೆ ಹೊಸ ಫೋನುಗಳ ಬೆಲೆ ಐಫೋಣ್ 6ಎಸ್ ಗೆ ಹೋಲಿಸಿದರೆ 4 ಪರ್ಸೆಂಟ್ ಕಡಿಮೆ ಇರಲಿದೆ.

ಪ್ರೊಸೆಸರ್ ಮತ್ತು ಗ್ರಾಫಿಕ್ಸ್.

ಪ್ರೊಸೆಸರ್ ಮತ್ತು ಗ್ರಾಫಿಕ್ಸ್.

ಆ್ಯಪಲ್ ಹೊಸ ತಲೆಮಾರಿನ ಚಿಪ್ ಸೆಟ್ 'ಎ10 ಫ್ಯೂಷನ್ ಚಿಪ್' ಅನ್ನು ಪರಿಚಯಿಸಿದೆ. ಆ್ಯಪಲ್ ಪ್ರಕಾರ, ಈ ಚಿಪ್ ನಲ್ಲಿ ಕ್ವಾಡ್ ಕೋರ್ ಪ್ರೊಸೆಸರ್ ಇರಲಿದೆ ಮತ್ತು ಐಫೋನ್ 6ಎಸ್ ಗೆ ಹೋಲಿಸಿದರೆ ಹೊಸ ಸ್ಮಾರ್ಟ್ ಫೋನ್ 40 ಪರ್ಸೆಂಟ್ ವೇಗವಾಗಿ ಕಾರ್ಯನಿರ್ವಹಿಸಲಿದೆ. ಮೋಷನ್ ಪ್ರೊಸೆಸರ್ ಅನ್ನು ಕೂಡ ಆ್ಯಪಲ್ ಅಪ್ ಗ್ರೇಡ್ ಮಾಡಿದೆ, ಹೊಸ ಪ್ರೊಸೆಸರ್ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಗಿಂತ 50 ಪರ್ಸೆಂಟ್ ವೇಗವಾಗಿ ಕೆಲಸ ಮಾಡಲಿದೆ.

ಕ್ಯಾಮೆರ.

ಕ್ಯಾಮೆರ.

ಕ್ಯಾಮೆರಾದಲ್ಲಿ ಬಹಳಷ್ಟು ಪ್ರಮುಖ ಬದಲಾವಣೆಗಳಾಗಿವೆ. ಐಫೋನ್ 7 ಮತ್ತು 7ಪ್ಲಸ್ ನಲ್ಲಿ 12 ಮೆಗಾಪಿಕ್ಸೆಲ್ಲಿನ ಹೊಸ ಸೆನ್ಸಾರ್ ಇರುವ ಕ್ಯಾಮೆರ ಇರಲಿದೆ. ಈ ಮುಂಚೆ ಐಫೋನ್ 6ಎಸ್ ಪ್ಲಸ್ ನಲ್ಲಿ ಮಾತ್ರ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಲಭ್ಯವಿತ್ತು, ಈಗ ಐಫೋನ್ 7ನಲ್ಲೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ ಇರಲಿದೆ.

ಐಫೋನ್ 7 ಪ್ಲಸ್ ನ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳಿರಲಿವೆ, ಎರಡೂ 12 ಮೆಗಾಪಿಕ್ಸೆಲ್ಲಿನದು. ಇದರಿಂದಾಗಿ ಈ ಕ್ಯಾಮೆರಾದಿಂದ ಉತ್ತಮ ವೈಡ್ ಆ್ಯಂಗಲ್ ಜೂಮ್ ಹಾಗೂ ಡೆಪ್ತ್ ಆಫ್ ಫೀಲ್ಡ್ ಲಭಿಸಲಿದೆ ಎಂದು ಆ್ಯಪಲ್ ತಿಳಿಸಿದೆ.

ಪೋರ್ಟ್ಸ್.

ಪೋರ್ಟ್ಸ್.

ಇದು ಮತ್ತೊಂದು ಪ್ರಮುಖ ಬದಲಾವಣೆ. ಐಫೋನ್ 7 ಮತ್ತು 7ಪ್ಲಸ್ ನಲ್ಲಿ 3.5 ಎಂ.ಎಂ ಹೆಡ್ ಫೋನ್ ಜ್ಯಾಕ್ ಇರುವುದಿಲ್ಲ, ಬದಲಿಗೆ ಹೆಡ್ ಫೋನಿಗೆ ಸಂಪರ್ಕಿಸಲು ಲೈಟನಿಂಗ್ ಪೋರ್ಟ್ ಇರಲಿದೆ. 3.5 ಎಂ.ಎಂ ಹೆಡ್ ಫೋನ್ ಜ್ಯಾಕ್ ಕನ್ವರ್ಟರ್ ಅನ್ನು ಫೋನಿನ ಜೊತೆಗೆ ನೀಡಲಿದೆಯಂತೆ ಆ್ಯಪಲ್.

ಬಣ್ಣಗಳು.

ಬಣ್ಣಗಳು.

ಹೊಸ ಐಫೋನುಗಳು ಐದು ಬಣ್ಣಗಳಲ್ಲಿ ಲಭ್ಯ - ಜೆಟ್ ಬ್ಲ್ಯಾಕ್, ಬ್ಲ್ಯಾಕ್, ಗೋಲ್ಡ್, ರೋಸ್ ಗೋಲ್ಡ್ ಮತ್ತು ಸಿಲ್ವರ್. ಸ್ಪೇಸ್ ಗ್ರೇ ಬಣ್ಣದ ಫೋನುಗಳು ಈ ಬಾರಿ ಲಭ್ಯವಿರುವುದಿಲ್ಲ. ಚಿತ್ರಗಳಲ್ಲಂತೂ ಜೆಟ್ ಬ್ಲ್ಯಾಕ್ ಬಣ್ಣದ ಫೋನು ಅತ್ಯಾಕರ್ಷಕವಾಗಿ ಕಾಣುತ್ತದೆ.

ಬೆಲೆ.

ಬೆಲೆ.

ಬೆಲೆಗಳ ಮಟ್ಟಿಗೆ ಆ್ಯಪಲ್ ಒಂದು ಸಂಪ್ರದಾಯವನ್ನು ಪಾಲಿಸುತ್ತದೆ. ಐಫೋನ್ 7 ಬೆಲೆ $649 ಮತ್ತು ಆ್ಯಪಲ್ ನ ಭಾರತೀಯ ವೆಬ್ ಪುಟದ ಪ್ರಕಾರ ಭಾರತದಲ್ಲಿ 32 ಜಿಬಿಯ ಫೋನಿಗೆ 60,000ರುಪಾಯಿ ಇರಲಿದೆ. ಐಫೋನ್ 7 ಪ್ಲಸ್ $749 ಯಿಂದ ಪ್ರಾರಂಭವಾಗಲಿದೆ. ಕಳೆದ ಬಾರಿಯ ಫೋನುಗಳ ಬೆಲೆಯನ್ನು $100 ನಷ್ಟು ಇಳಿಸಲಾಗಿದೆ.

Most Read Articles
Best Mobiles in India

English summary
At the Keynote event in San Fransisco, Apple finally pulled the wraps of the much anticipated iPhone 7 and iPhone 7 Plus along with their pricing. At the first glance, the iPhone 7 and 7 Plus won't differ much in terms of design when compared to last year's iPhone 6s and 6s Plus, but a lot has changed internally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more