ಅತಿ ಕಡಿಮೆ ದರದ ಐಫೋನ್‌ ಮುಂದಿನ ತಿಂಗಳು ಮಾರುಕಟ್ಟೆಗೆ..?

By Gizbot Bureau
|

ಆಪಲ್ ಕಂಪನಿ ಕೈಗೆಟುಕುವ ಐಫೋನ್‌ನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಮುಂದಿನ ಐಫೋನ್‌ನ್ನು ಐಫೋನ್ SE2 ಅಥವಾ ಐಫೋನ್ 9 ಎಂದು ಕರೆಯುವ ಸಾಧ್ಯತೆಯಿದೆ. ಈಗ ಹೊಸ ವರದಿಯ ಪ್ರಕಾರ ಮಾರ್ಚ್ ಅಂತ್ಯಕ್ಕೆ ಆಪಲ್‌ ಕಂಪನಿ ಮಾಧ್ಯಮ ಕಾರ್ಯಕ್ರಮವೊಂದನ್ನು ನಡೆಸಲಿದೆ ಎಂಬ ಮಾಹಿತಿಯನ್ನು ನೀಡಿದೆ.

ಅತಿ ಕಡಿಮೆ ದರದ ಐಫೋನ್‌ ಮುಂದಿನ ತಿಂಗಳು ಮಾರುಕಟ್ಟೆಗೆ..?

ಜರ್ಮನ್ ವೆಬ್‌ಸೈಟ್ ಐಫೋನ್-ಟಿಕ್ಕರ್.ಡಿ ವರದಿ ಮಾಡಿದಂತೆ, ಆಪಲ್ ಮಾರ್ಚ್ 31 ಕ್ಕೆ ಲಾಂಚಿಂಗ್‌ ಕಾರ್ಯಕ್ರಮವನ್ನು ಆಯೋಜಿಸಲು ಯೋಚಿಸುತ್ತಿದೆ. ಹಾಗೂ ಮತ್ತು ಕಡಿಮೆ ಬೆಲೆಯ ಹೊಸ ಐಫೋನ್ ಏಪ್ರಿಲ್ 3ರಂದು ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಲಾಗಿದೆ.

ಜನಪ್ರಿಯ ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಅವರ ಪ್ರಕಾರ, ಮುಂಬರುವ ಐಫೋನ್ 399 ಡಾಲರ್‌ ಆರಂಭಿಕ ಬೆಲೆಯಲ್ಲಿ ದೊರೆಯಲಿದೆ. ಭಾರತೀಯ ಕರೆನ್ಸಿ ಪ್ರಕಾರ ಅಂದಾಜು 28,000 ರೂ. ಆಗಲಿದೆ. ಕೆಲವು ಆನ್‌ಲೈನ್ ವರದಿಗಳು ಐಫೋನ್ 9ರ ಅನೇಕ ಫೀಚರ್‌ಗಳನ್ನು ಐಫೋನ್ 8 ರಿಂದ ಎರವಲು ಪಡೆಯಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತವೆ. ಮುಂಬರುವ ಐಫೋನ್ 9 ಸ್ಲಿಮ್ಮರ್ ಬೆಜೆಲ್‌ಗಳೊಂದಿಗೆ ಐಫೋನ್ 8 ರಂತೆ ಕಾಣುತ್ತದೆ ಎನ್ನಲಾಗಿದೆ.

ಹೊಸ ಐಫೋನ್‌ 4.7 ಇಂಚು ಮತ್ತು 5.4 ಇಂಚಿನ ಪರದೆಯ ಗಾತ್ರಗಳಲ್ಲಿ ಬರಲಿದೆ ಎನ್ನಲಾಗಿದ್ದು, ಎರಡೂ ಡಿಸ್‌ಪ್ಲೇ ಗಾತ್ರಗಳು 2019 ಐಫೋನ್‌ಗಳಿಗಿಂತ ಚಿಕ್ಕದಾಗಿದೆ. ಐಫೋನ್ 9 ಐಫೋನ್ 11 ಸರಣಿಯಂತೆಯೇ ಆಪಲ್‌ನ ಎ​​13 ಬಯೋನಿಕ್ ಚಿಪ್‌ಸೆಟ್‌ನ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 3GB RAM ಮತ್ತು 64GB ಮತ್ತು 128GB ಮೆಮೊರಿ ಆಯ್ಕೆಗಳನ್ನು ಈ ಐಫೋನ್‌ನಲ್ಲಿ ನಿರೀಕ್ಷಿಸಬಹುದು.

ಕಡಿಮೆ ಬೆಲೆಯ ಐಫೋನ್ ಜೊತೆಗೆ, ಕ್ಯುಪರ್ಟಿನೋ ಮೂಲದ ಟೆಕ್ ದೈತ್ಯ ಮುಂದಿನ ತಿಂಗಳಿನಲ್ಲಿ ಇತರ ಆಪಲ್ ಉತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆಪಲ್ ಐಪ್ಯಾಡ್ ಪ್ರೊ ಹೊಸ ಮಾದರಿಗಳು, 13 ಇಂಚಿನ ಮ್ಯಾಕ್‌ಬುಕ್ ಪ್ರೊ ಮತ್ತು ಆಪಲ್‌ನ ಟೈಲ್ ತರಹದ 'ಏರ್‌ಟ್ಯಾಗ್ಸ್’ ಬಿಡುಗಡೆಯಾಗುವ ಸಾಧ್ಯತೆಯಿದೆ,

Most Read Articles
Best Mobiles in India

Read more about:
English summary
Apple iPhone SE 2 Launch Date Revised; Expected Rollout On April 3

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X