ಆಪಲ್‌ನ ತ್ರಿವಳಿ ಕ್ಯಾಮೆರಾದ 'ಐಫೋನ್ ‍XI' ಫಸ್ಟ್‌ಲುಕ್ ರಿಲೀಸ್!..ಹೇಗಿದೆ ಗೊತ್ತಾ?

|

ಜಗತ್ತಿನ ಸ್ಮಾರ್ಟ್‌ಫೋನ್ ದಿಗ್ಗಜ ಎಂದೆನಿಸಿಕೊಂಡಿರುವ ಆಪಲ್ ಮೊಬೈಲ್ ಸಂಸ್ಥೆ, ಇಲ್ಲಿಯವರೆಗೆ ಹಲವು ಐಫೋನ್ ಶ್ರೇಣಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ಸನ್ನು ಕಂಡಿದೆ. ಅಲ್ಲದೇ ತನ್ನದೇ ನಿರ್ದಿಷ್ಟ ಗ್ರಾಹಕ ವರ್ಗವನ್ನು ಹೆಚ್ಚಿಸಿಕೊಂಡಿದೆ. ಇಂತಹ ಗ್ರಾಹಕರಿಗೆ ಆಪಲ್ ಮತ್ತೊಂದು ಸಿಹಿ ಸುದ್ದಿ ನೀಡುತ್ತಿದೆ. ಅದೇನೆಂದರೆ, ಆಪಲ್ ಕಂಪನಿ ತನ್ನ ಐಪೋನ್ ಆವೃತಿಗಳ ಶ್ರೇಣಿಗೆ ಹೊಸ ಐಫೋನ್ ಅನ್ನು ಸೇರಿಸುತ್ತಿದೆ.

 ಆಪಲ್‌ನ ತ್ರಿವಳಿ ಕ್ಯಾಮೆರಾದ 'ಐಫೋನ್ ‍XI' ಫಸ್ಟ್‌ಲುಕ್ ರಿಲೀಸ್!

ಹೌದು, ಆಪಲ್‌ನ ಹನ್ನೊಂದನೆ ಆವೃತಿಯ ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಹಿಂದಿನ ಐಫೋನ್‌ಗಳಿಗಿಂತ ಈ ಹೊಸ ಐಫೋನ್ ಹೊಸ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ದಾವಿಸುವುದಾಗಿ ಕಂಪನಿ ಹೇಳಿದೆ. ಹಾಗಾದರೇ, ಇದೀಗ ಬಿಡುಗಡೆಯಾಗುತ್ತಿರುವ ಆಪಲ್‌ನ ಹನ್ನೊಂದನೆ ಆವೃತಿಯ ಐಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿದೆ?, ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕ್ಯಾಮರಾ ಸ್ಪೇಷಲ್...!

ಕ್ಯಾಮರಾ ಸ್ಪೇಷಲ್...!

ಈ ವರ್ಷ ಬಿಡುಗಡೆಗೆ ಸಿದ್ದವಿರುವ ಐಫೋನಗಳಲ್ಲಿ ಪ್ರಮುಖ ಆಕರ್ಷಣೆಯೇ ಕ್ಯಾಮರಾ. ಹೌದು, ಕಂಪನಿ ಹನ್ನೊಂದನೆ ಆವೃತಿಯ ಐಫೋನಗಳಲ್ಲಿ ತ್ರಿವಳಿ ಕ್ಯಾಮರಾ ನೀಡುತ್ತಿದೆ. ಈ ತ್ರಿವಳಿ ಕ್ಯಾಮರಾಗಳಲ್ಲಿನ ಪ್ರತಿ ಕ್ಯಾಮರಾ ಕೂಡ ತನ್ನದೇ ವಿಶೇಷತೆಯನ್ನು ಹೊಂದಿರಲಿದೆ. ಮೊದಲನೇ ಕ್ಯಾಮರಾ ವೈಲ್ಡ್ ಆಂಗಲ್ ಲೆನ್ಸ ಹೊಂದಿದ್ದರೆ, ಎರಡನೇ ಕ್ಯಾಮರಾ 2 ಆಪ್ಟಿಕಲ್ ಝೂಮ್ ಸಾಮರ್ಥ್ಯವನ್ನು ಹೊಂದಿದೆ. ಇನ್ನೂ ಮೂರನೇ ಕ್ಯಾಮರಾದ ವಿಶೇಷತೆಯ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ. ಇದು ಗ್ರಾಹಕರಲ್ಲಿ ಕೂತುಹಲ ಮೂಡಿಸಿದೆ.!

ಹೊಸ ಐಫೋನ್ ಮಾದರಿಗಳು.

ಹೊಸ ಐಫೋನ್ ಮಾದರಿಗಳು.

ಆಪಲ್ ಕಂಪನಿಯು ಈ ವರ್ಷ ಮೂರು ಹೊಸ ಮಾದರಿಗಳನ್ನು ಗ್ರಾಹಕರಿಗೆ ಪರಿಚಯಿಸಲು ಕಾಯುತ್ತಿದೆ. ಆ ಮೂರು ಮಾದರಿಯ ಐಪೋನಗಳನ್ನು ನೋಡುವುದಾರೇ, ಐಫೋನ್ ಲೋ ಎಂಡ್ ವೆರಿಂಟ್, ಐಫೋನ್ ಎಕ್ಸ್ ಆರ್ ಮತ್ತು ಹೈ ಎಂಡ್ ವೆರಿಂಟ್. ಈ ಮೂರು ಹೊಸ ಫೋನಗಳು ತ್ರಿವಳಿ ಕ್ಯಾಮರಾಗಳನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಆದರೆ ಆಪಲ್ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.

ವಿಶೇಷತೆಗಳೆನಿರಬಹುದು..?!

ವಿಶೇಷತೆಗಳೆನಿರಬಹುದು..?!

* 5.8 ಇಂಚು ಫುಲ್‌ ಸ್ಕ್ರಿನ್ ಡಿಸ್ಪ್ಲೇ.
* 1125 x 2436 ಪಿಕ್ಸಲ್ ರೆಸಲ್ಯೂಶನ್.
* ಫ್ಯಾಬ್ಲಟ್ ಮಾದರಿಯ ಫೋನ್ ಆಗಿರಲಿದೆ.
* ಈ ಹೊಸ ಐಫೋನ ಒಂದು ಸಿಮ್ ಸ್ಲಾಟ್ ಅನ್ನು ಮಾತ್ರ ಹೊಂದಿರುತ್ತದೆ. ಆ ಸ್ಲಾಟ್ ನ್ಯಾನೋ ಸಿಮ್ ಆಗಿರುತದೆ.
* ಪೋನಿನ ಪ್ರೊಸೆಸರ್ ವಿಷಯಕ್ಕೆ ಬರುವುದಾದರೇ, ಆಪಲ್ A11 ಹೆಕ್ಸಾಕೋರ್ ಸಿಪಿಯು ಮೂಲಕ ಕಾರ್ಯ ನಿರ್ವಹಿಸುವುದು.
* ಈ ಐಫೋನಗಳು 3ಜಿಬಿ ರಾಮ್ ಹೊಂದಿರುತ್ತವೆ. ಇದರೊಂದಿಗೆ 64ಜಿಬಿ ಆಂತರಿಕ ಶೇಕರಣಾ ಸಾಮರ್ಥ್ಯವನ್ನು ಹೊಂದಿರಲಿದೆ.

Best Mobiles in India

English summary
Apple iPhone XI With Triple Rear Cameras First Picture is Out: Everything You Need to Know. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X