ಭಾರತೀಯರಿಗಾಗಿಯೇ ಡುಯಲ್ ಸಿಮ್ ಐಪೋನ್ ಅಭಿವೃದ್ಧಿಪಡಿಸಲು ಮುಂದಾದ ಆಪಲ್...!

Written By:

ಇಂದಿನ ದಿನಗಳಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಹೊಸ ಹೊಸ ಮೊಬೈಲ್ ತಯಾರಕ ಕಂಪನಿಗಳು ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿವೆ, ಇದರೊಂದಿಗೆ ಈಗಾಗಲೇ ಬೇರೂರಿರುವ ಹಲವು ಕಂಪನಿಗಳು ತಮ್ಮ ಉಳಿವಿಗಾಗಿ ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ. ಇದೇ ಹಾದಿಯಲ್ಲಿ ಸಾಗಿರುವ ಜಗತ್ತಿನ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಆಪಲ್ ಕಂಪನಿ ಭಾರತೀಯರಿಗಾಗಿಯೇ ಹೊಸ ಪೋನ್ ಗಳನ್ನು ತಯಾರಿಸಲು ಮುಂದಾಗಿದೆ.

ಭಾರತೀಯರಿಗಾಗಿಯೇ ಡುಯಲ್ ಸಿಮ್ ಐಪೋನ್ ಅಭಿವೃದ್ಧಿಪಡಿಸಲು ಮುಂದಾದ ಆಪಲ್....!

ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ಪ್ರಪ್ರಥಮವಾಗಿ ಡುಯಲ್ ಸಿಮ್ ಹಾಕಬಹುದಾದ ಐಪೋನ್ ತಯಾರಿಸಲು ಆಪಲ್ ಮುಂದಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಅಂತ್ಯದಲ್ಲಿ ಡುಯಲ್ ಸಿಮ್ ಆಪಲ್ ಐಪೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು?

ಸದ್ಯ ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ಒಂದಕ್ಕಿಂತ ಹೆಚ್ಚು ಸಿಮ್ ಬಳಸುತ್ತಿದ್ದು, ಅದರಲ್ಲಿಯೂ ರಿಲಯನ್ಸ್ ಮಾಲಿಕತ್ವದ ಜಿಯೋ ಸಿಮ್ ಮಾರುಕಟ್ಟೆಗೆ ಬಂದ ಮೇಲೆ ಏರುಗತಿಯಲ್ಲಿ ಸಾಗುತ್ತಿರುವ ಸ್ಮಾರ್ಟ್ ಪೋನ್ ಬಳಕೆದಾರರು ಎರಡೆರಡು ಸಿಮ್ ಬಳಸುವ ಪೋನ್ ಕಡೆಗೆ ಹೆಚ್ಚಿನ ಒಲವೂ ತೊರಿಸುತ್ತಿದ್ದಾರೆ.

ಭಾರತೀಯರಿಗಾಗಿಯೇ ಡುಯಲ್ ಸಿಮ್ ಐಪೋನ್ ಅಭಿವೃದ್ಧಿಪಡಿಸಲು ಮುಂದಾದ ಆಪಲ್....!

ಈ ಹಿನ್ನಲೆಯಲ್ಲಿ ಪ್ರಮುಖ ಮೊಬೈಲ್ ತಯಾರಕ ಕಂಪನಿಗಳು ಡುಯಲ್ ಸಿಮ್ ಹ್ಯಾಂಡ್ ಸೆಟ್ ಗಳನ್ನು ಹೆಚ್ಚಾಗಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಟಾಪ್ ಎಂಡ್ ಹ್ಯಾಂಡ್ ಸೆಟ್ ಗಳಲ್ಲಿಯೂ ಡುಯಲ್ ಸಿಮ್ ಹಾಕುವ ವ್ಯವಸ್ಥೆಯನ್ನು ಕಾಣಬಹುದಾಗಿದೆ.

ಈ ಹಿನ್ನಲೆಯಲ್ಲಿ ಸಿಂಗಲ್ ಸಿಮ್ ವ್ಯವಸ್ಥೆ ಇರುವ ಹ್ಯಾಂಡ್ ಸೆಟ್ ಗಳು ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವ ಕಾರಣದಿಂದ, ಪ್ರಮುಖ ಮೊಬೈಲ್ ತಯಾರಕ ಕಂಪನಿಗಳು ಸಾಗಿದ ಹಾದಿಯಲ್ಲೇ ಸಾಗಲು ಆಪಲ್ ಮುಂದಾಗಿದೆ, ಹೊಸದಾಗಿ ಡುಯಲ್ ಸಿಮ್ ಹಾಕುವ ಹ್ಯಾಂಡ್ ಸೆಟ್ ಅಭಿವೃದ್ಧಿ ಪಡಿಸುಲು ಮುಂದಾಗಿದೆ.

ಇಷ್ಟು ದಿನ ತಾನು ಒಂದೇ ಸಿಮ್ ಹಾಕುವ ಹ್ಯಾಂಡ್ ಸೆಟ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಆಪಲ್, ಸದ್ಯ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಈಗಾಗಲೇ ಅಮೇರಿಕಾದಲ್ಲಿ ಡುಯಲ್ ಸಿಮ್ ಹ್ಯಾಂಡ್ ಸೆಟ್ ತಯಾರಿಸಲು ಪೆಟೆಂಟ್ ಪಡೆದುಕೊಂಡಿದೆ ಎಂದು ಪೋರ್ಬ್ಸ್ ವರದಿ ಮಾಡಿದೆ.

ಭಾರತೀಯರಿಗಾಗಿಯೇ ಡುಯಲ್ ಸಿಮ್ ಐಪೋನ್ ಅಭಿವೃದ್ಧಿಪಡಿಸಲು ಮುಂದಾದ ಆಪಲ್....!

ಅಲ್ಲದೇ ಈ ಡುಯಲ್ ಸಿಮ್ ಹ್ಯಾಂಡ್ ಸೆಟ್ ಗಳನ್ನು ಕೇವಲ ಭಾರತ ಮತ್ತು ಚೀನಾದಲ್ಲಿ ಮಾತ್ರ ಮಾರಾಟ ಮಾಡಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಕಾರಣ ಪಶ್ವಿಮ ರಾಷ್ಟ್ರಗಳಲ್ಲಿ ಡುಯಲ್ ಸಿಮ್ ಬಳಕೆಯ ಪ್ರಮಾಣ ತೀರಾ ಕೆಳಮಟ್ಟದಲ್ಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Apple Release a dual-SIM iPhone only in select markets including India and China. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot