2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು?

Written By:

ಪ್ರತಿದಿನವೂ ನೂರಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತವೆ. ಆದರೆ ಉತ್ತಮ ಫಿಚರ್, ಬೆಲೆ ಮತ್ತು ಗ್ರಾಹಕರ ಇತರ ಅಗತ್ಯತೆಗಳನ್ನು ಪೂರೈಸುವ ಕೆಲವು ಸ್ಮಾರ್ಟ್‌ಫೋನ್‌ಗಳು ಮಾತ್ರ ಮಾರುಕಟ್ಟೆಯಲ್ಲಿ ಉಳಿಯುತ್ತವೆ. ಹಾಗಾಗಿ ಅಂತಹ ಸ್ಮಾರ್ಟ್‌ಫೋನ್‌ಗಳು ಯಾವುವು? ವರ್ಷದಲ್ಲಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು? ಎಂಬುದನ್ನು ನಾವು ಇಂದಿನ ಲೆಖನದಲ್ಲಿ ತಿಳಿಯೋಣ.

2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು?

ಭಾರತೀಯ ಮೊಬೈಲ್ ಮಾರುಕಟ್ಟೆಯನ್ನು ಶೇ.25% ಪರ್ಸೆಂಟ್‌ಗಿಂತಲೂ ಹೆಚ್ಚು ವ್ಯಾಪಿಸಿರುವ ಸ್ಯಾಮ್ ಸಂಗ್ ಸಂಸ್ಥೆ 2016 ನೇ ವರ್ಷದಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಡಿ.10 ರಂದು ಬಿಡುಗಡೆಯಾಗಿರುವ ವರದಿಯ ಪ್ರಕಾರ ಸ್ಯಾಮ್ ಸಂಗ್ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಮಾರಾಟವಾಗಿರುವ ಫೋನ್‌ಗಳಾಗಿವೆ.

2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು?

ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

ಎರಡನೆ ಸ್ಥಾನವನ್ನು ಆಪಲ್ ಮತ್ತು ಮೂರನೇ ಸ್ಥಾನವನ್ನು ಮೋಟರೋಲಾ ಗಳಿಸಿಕೊಂಡಿದೆ. ಲೆನೊವೋ ಕಂಪೆನಿ ಒಡೆತನದ ಮೋಟೊ ಸಿರಿಸ್ ಸ್ಮಾರ್ಟ್‌ಫೋನ್‌ಗಳು ಮೊಬೈಲ್‌ ಪ್ರಿಯರ ಮನಗೆದ್ದಿದೆ ಎನ್ಗನಬಹುದು. ಐಫೋನ್ ಸಂಸ್ಥೆ ಶೇ.14.87, ಮೋಟರೋಲಾ ಸಂಸ್ಥೆ ಶೇ.10.75 ರಷ್ಟು ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ವ್ಯಾಪಿಸಿದೆ.

2016 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಯಾವುದು?

ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಗ್ರಾಂಡ್ ಅತ್ಯಂತ ಹೆಚ್ಚು ಮಾರಾಟವಾಗಿರುವ ಸ್ಮಾರ್ಟ್‌ಫೋನ್‌ ಆಗಿದ್ದು, ಮಾರುಕಟ್ಟೆಯಲ್ಲಿ ಮಾರಾಟವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ.3.02 ರಷ್ಟು ಇದೊಂದೆ ಸ್ಮಾರ್ಟ್‌ಫೋನ್‌ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
After two consecutive quarters of negative growth, the smartphone market in India finally saw growth last quarter.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot