ಪುಸ್ತಕದ ರೀತಿಯಲ್ಲಿ ಮಡುಚಬಲ್ಲ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ಮುಂದಿರುವುದನ್ನು ನೋಡಿ ಎಚ್ಚೆತ್ತಿರುವ ವಿಶ್ವ ಟೆಕ್ ದಿಗ್ಗಜ ಆಪಲ್ ಕೂಡ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆಗೆ ಒಲವನ್ನು ತೋರಿದೆ. ವಿಶ್ವದಾಧ್ಯಂತ ಐಫೋನ್ ತಯರಿಕೆ ಬಿಡಿಭಾಗಗಳ ಪೂರೈಕೆದಾರರ ಜೊತೆ ಈ ನಿಟ್ಟಿನಲ್ಲಿ ಆಪಲ್ ಸಂಸ್ಥೆ ಮಾತುಕತೆ ನಡೆಸಿದೆ.
ಆಪಲ್ ಸಂಸ್ಥೆ ಜೊತೆ ಪೂರೈಕೆದಾರರಾಗಿ ಕೆಲಸ ಮಾಡುತ್ತಿರುವ ಕಂಪೆನಿಗಳ ಮಾಹಿತಿಯಂತೆ, ಭವಿಷ್ಯದ ಐಫೋನ್ ಅನ್ನು ಟ್ಯಾಬ್ಲೆಟ್ ರೀತಿಯಲ್ಲೂ ಉಪಯೋಗಿಸಬಹುದಾದ ಬಿಗ್‌ಸ್ಕ್ರೀನ್ ಹೊಂದಿರುವ ಫೋನ್‌ಗಳಂತೆ ತಯಾರಿಸಲು ಬಗ್ಗೆ ಆಪಲ್ ತಲೆಕೆಡಿಸಿಕೊಂಡಿದೆಯಂತೆ. 2020ರ ವೇಳೆಗೆ ಮಡುಚಬಲ್ಲ ಸ್ಮಾರ್ಟ್‌ಪೋನ್ ತಯಾರಿಸುವುದು ಆಪಲ್ ಕಂಪೆನಿಯ ಗುರಿಯಾಗಿದೆಯಂತೆ.!!

ಮಾಧ್ಯಮಗಳಿಗೆ ಸಿಕ್ಕಿರುವ ಮತ್ತೊಂದು ಮಾಹಿತಿ ಪ್ರಕಾರ, ಮಡುಚಬಲ್ಲ ಸ್ಮಾರ್ಟ್‌ಪೋನ್ ತಯಾರಿಕೆಯಂತಹ ವಿಶೇಷ ಫೀಚರ್ ಇರುವ ಐಫೋನ್ನ ತಯಾರಿಕೆಗೆ ಆಪಲ್ ಕಂಪೆನಿ ಏಷ್ಯಾದ ಟೆಕ್ ದಿಗ್ಗಜ ಎಲ್‌ಜಿ ಸಂಸ್ಥೆ ಜೊತೆ ಜಂಟಿಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಹಾರ್ಡ್‌ವೇರ್ ತಯಾರಿಕೆ ಕೆಲಸವನ್ನು ಎಲ್‌ಜಿ ಕಂಪೆನಿಗೆ ವಹಿಸಿದೆ ಎನ್ನಲಾಗಿದೆ.!!
ಈಗಾಗಲೇ ಮಡುಚಬಲ್ಲ ಸ್ಮಾರ್ಟ್‌ಪೋನ್ ತಯಾರಿಕೆಗೆ ಆಪಲ್ ಪೇಟೆಂಟ್ ಹಕ್ಕು ಪಡೆದಿದ್ದು, ಇದರ ಸ್ಕ್ರೀನ್ ಅನ್ನೂ ಕೂಡ ಬಗ್ಗಿಸಲು ಸಾಧ್ಯವಿರುವ ಮಡುಚಬಲ್ಲ ಸ್ಮಾರ್ಟ್‌ಪೋನ್‌ಗಳ ತಯಾರಿಕೆ ಇನ್ನೇನು ಆರಂಭವಾಗಲಿದೆ. ಹಾಗಾಗಿ, ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಜೊತೆಗೆ ಆಪಲ್‌ನ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳನ್ನು ಸಹ ಗ್ರಾಹಕ ಎದುರು ನೋಡಬಹುದಾಗಿದೆ.!!

ಓದಿರಿ: ನಿಮ್ಮ ಮೇಲೆ ಎಷ್ಟು ಹುಡುಗಿಯರಿಗೆ ಕ್ರಶ್ ಆಗಿದೆ?..ಲಿಂಕ್ ಒತ್ತಿ ಸಮಸ್ಯೆ ಎದುರಿಸಿ!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.