'ಮುಖ್ಯ ಸೆಕ್ಯುರಿಟಿ ಅಪ್‌ಡೇಟ್‌'ನೊಂದಿಗೆ ಆಪಲ್‌ನ ಹೊಸ ಐಓಎಸ್ ರಿಲೀಸ್

Written By:

ಆಂಡ್ರಾಯ್ಡ್ ಬಳಕೆದಾರರಿಗೆ ಲೇಟೆಸ್ಟ್ ಓಎಸ್‌ 'ನ್ಯೂಗಾ'. ಆದರೆ ಪ್ರತಿಸ್ಪರ್ಧಿ ಆಪಲ್‌ ಸಹ ತನ್ನ ಐಫೋನ್ ಮತ್ತು ಐಪಾಡ್‌ ಬಳಕೆದಾರರಿಗಾಗಿ ಹೊಸ ಸಾಫ್ಟ್‌ವೇರ್‌ ರಿಲೀಸ್‌ ಮಾಡಿದೆ. ಅಂತೂ ಐಫೋನ್‌ ಮತ್ತು ಐಪಾಡ್‌ ಬಳಕೆದಾರರು ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳಲು ಗ್ರೇಟ್‌ ಟೈಮ್‌ ಎಂದೇ ಹೇಳಬಹುದು. ಸಾಫ್ಟ್‌ವೇರ್‌ ಅಪ್‌ಡೇಟ್‌ ಬಗ್ಗೆ ಮಾಹಿತಿಗಾಗಿ ಸ್ಲೈಡರ್‌ ಓದಿರಿ.

ಆಪಲ್‌ 'ಸ್ಪೇಸ್‌ಶಿಪ್‌' ಕ್ಯಾಂಪಸ್ ಬಗೆಗಿನ 12 ಕುತೂಹಲಕಾರಿ ವಿಷಯಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌

ಆಪಲ್‌

ಆಪಲ್ iOS 9.3.4 ಅನ್ನು ರಿಲೀಸ್‌ ಮಾಡಿದ್ದು, 'ಮುಖ್ಯ ಸೆಕ್ಯುರಿಟಿ ಅಪ್‌ಡೇಟ್‌' ಅನ್ನು ಹೊಂದಿದೆಯಂತೆ. ಕಂಪನಿಯು ಎಲ್ಲಾ ಐಓಎಸ್‌ ಬಳಕೆದಾರರು ಇದನ್ನು ಪಡೆಯುವಂತೆ ಹೇಳಿದೆ.

ಲೇಟೆಸ್ಟ್‌ ಅಪ್‌ಡೇಟ್‌ ಬಗ್ಗೆ

ಲೇಟೆಸ್ಟ್‌ ಅಪ್‌ಡೇಟ್‌ ಬಗ್ಗೆ

ಅಪ್‌ಡೇಟ್‌ 'ಮೆಮೊರಿ ಕರಪ್ಟ್‌ ಸಮಸ್ಯೆ' ಮತ್ತು ಪಂಗು ಜೈಲ್‌ಬ್ರೇಕ್‌ ಸಮಸ್ಯೆಗಳನ್ನು ಹೋಗಲಾಡಿಸಲು ಎಂದು ಆಪಲ್‌ ಕಂಪನಿ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

 ಸಾಫ್ಟ್‌ವೇರ್‌ ಅಪ್‌ಡೇಟ್‌

ಸಾಫ್ಟ್‌ವೇರ್‌ ಅಪ್‌ಡೇಟ್‌

ಐಓಎಸ್‌ ಬಳಕೆದಾರರು ಈಗಾಗಲೇ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಪಡೆದಿಲ್ಲ ಎಂದಾದಲ್ಲಿ ಸೆಟ್ಟಿಂಗ್ಸ್‌ ಆಪ್‌ಗೆ ಹೋಗಿ General>> software Update ಎಂಬಲ್ಲಿ ಪರಿಶೀಲಿಸಬೇಕು.

ಐಓಎಸ್‌ 10

ಐಓಎಸ್‌ 10

ಪ್ರಸ್ತುತದಲ್ಲಿ ರಿಲೀಸ್‌ ಆಗಿರುವ ಆಪಲ್‌ನ ಈ ಅಪ್‌ಡೇಟ್‌ ಸಾಫ್ಟ್‌ವೇರ್‌ ಐಓಎಸ್‌ 10 ಗಿಂತ ಮೊದಲಿನದಾಗಿದೆ. ಆಪಲ್‌ ಸೆಪ್ಟೆಂಬರ್‌ ತಿಂಗಳಿನಲ್ಲಿ ತನ್ನ ಮುಂದಿನ ವರ್ಷನ್‌ ಐಓಎಸ್‌ ಅನ್ನು ನೀಡಲಿದೆಯಂತೆ.

ಆಪಲ್‌ ಮುಂದಿನ ವರ್ಸನ್‌ಗಳು

ಆಪಲ್‌ ಮುಂದಿನ ವರ್ಸನ್‌ಗಳು

ಆಪಲ್‌ ಮುಂದಿನ ವರ್ಸನ್‌ ಐಓಎಸ್‌ 10 ಆಗಿದ್ದು, ಮೆಸೇಜ್‌ ಆಪ್‌, ಮರುವಿನ್ಯಾಸದ ಮ್ಯೂಸಿಕ್‌ ಮತ್ತು ಮ್ಯಾಪ್‌ ಆಪ್‌ಗಳನ್ನು ನೀಡಲಿದೆ. ಅಲ್ಲದೇ ವಿಶೇಷವಾಗಿ ಸ್ಟಾಕ್‌ ಆಪ್‌ಗಳನ್ನು ಡಿಲೀಟ್‌ ಮಾಡುವ ವಿಶೇಷ ಫೀಚರ್‌ ಅನ್ನು ನೀಡಲಿದೆಯಂತೆ. ಪರಿಷ್ಕರಿಸಿದ ನೋಟಿಫಿಕೇಶನ್‌ ಮತ್ತು ಲಾಕ್‌ ಸ್ಕ್ರೀನ್‌, ಮರುವಿನ್ಯಾಸ ನಿಯಂತ್ರಣ ಕೇಂದ್ರ ಮತ್ತು ಸಿರಿ ಅನ್ನು ಚಾಲನೆ ಮಾಡಲಿದೆಯಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Apple's latest iOS update includes an 'important security update' To know more about this visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot