ಓಲಾ, ಒನ್‌ಪ್ಲಸ್ ಕಂಪನಿಗಳ 'ಏಪ್ರಿಲ್ ಫೂಲ್‌' ಸುದ್ದಿ ನಿಮಗೆ ಶಾಕ್‌ ಜೊತೆ ನಗು ತರಿಸಲಿದೆ.!

|

ಮೂರ್ಖರ ದಿನವೆಂದು ಕರೆಯಲಾಗುವ 'ಏಪ್ರಿಲ್ 1' ರಂದು ಪ್ರಾಂಕ್ ಮಾಡುವುದು ಸಾಮಾನ್ಯವಾಗಿದ್ದು, ಪ್ರತಿಷ್ಠಿತ ಟೆಕ್‌ ಕಂಪನಿಗಳು ಸಹ ಇದಕ್ಕೆ ಹೊರತಾಗಿಲ್ಲ. ಈ ದಿನಕ್ಕೆ ಗ್ರಾಹಕರಿಗೆ ನಂಬಲಾಗದಂತಹ ಉತ್ಪನ್ನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ, ಗ್ರಾಹಕರನ್ನು ಹುಬ್ಬೆರಿಸುವಂತೆ ಮಾಡುತ್ತವೆ. ಪ್ರಸ್ತುತ ಈ ಸಲವು ಸಹ ಕೆಲವು ಟೆಕ್‌ ಸಂಸ್ಥೆಗಳು ಗ್ರಾಹಕರಿಗೆ ಏಪ್ರಿಲ್ ಫೂಲ್‌ ಮಾಡಲು ಪ್ರಯತ್ನಿಸಿವೆ.

ಓಲಾ, ಒನ್‌ಪ್ಲಸ್ ಕಂಪನಿಗಳ 'ಏಪ್ರಿಲ್ ಫೂಲ್‌' ಸುದ್ದಿ ಶಾಕ್‌ ಜೊತೆ ನಗು ತರಿಸಲಿದೆ!

ಹೌದು, ಒನ್‌ಪ್ಲಸ್‌, ಓಲಾ ಕ್ಯಾಬ್ ಮತ್ತು ಟಿ-ಮೊಬೈಲ್ ಸಂಸ್ಥೆಗಳು ಸೇರಿದಂತೆ ಇನ್ನೂ ಕೆಲವು ಕಂಪನಿಗಳು ಹೊಸ ನಂಬಲಾರದ ಉತ್ಪನ್ನಗಳನ್ನು ರಿಲೀಸ್‌ ಮಾಡುವುದಾಗಿ ಹೇಳಿದ್ದು, ಈ ಮೂಲಕ ಗ್ರಾಹಕರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳನ್ನು ಮಾಡಿವೆ. ಕಂಪನಿಗಳು ಪ್ರಾಂಕ್ ಮಾಡಿರುವ ಉತ್ಪನ್ನಗಳು ಸಖತ್ ಸುದ್ದಿಯಾಗಿವೆ. ಹಾಗಾದರೇ ಈ ಕಂಪನಿಗಳು ಯಾವೆಲ್ಲ ರೀತಿ ಗ್ರಾಹಕರನ್ನು ಪ್ರಾಂಕ್ ಮಾಡಲು ಯತ್ನಿಸಿವೆ ಎಂಬುದನ್ನು ನೋಡೋಣ ಬನ್ನಿರಿ.

ಒನ್‌ಪ್ಲಸ್‌

ಒನ್‌ಪ್ಲಸ್‌

ಚೀನಾ ಮೂಲದ ಜನಪ್ರಿಯ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಕಂಪನಿಯು ಇದೀಗ ಕಾರ ಒಂದನ್ನು ಪರಿಚಯಿಸಲು ಮುಂದಾಗಲಿದೆ ಎನ್ನುವ ಕಂಪನಿಯ ಟೀಸರ್‌ ಸುದ್ದಿಯಾಗಿದೆ. ಈ ಉತ್ಪನ್ನ ವಾರ್ಪ್ ಚಾರ್ಚ್‌ ಟೆಕ್ನೊಲಜಿಯನ್ನು ಹೊಂದಿರಲಿದೆ ಎಂದು ತಿಳಿಸಿದೆ. ಕಂಪನಿಯ ಒನ್‌ಪ್ಲಸ್‌ 6T McLaren ಎಡಿಷನ್‌ನಲ್ಲಿ ಈ ಟೆಕ್ನಾಲಜಿಯ ಇದೆ. ಒನ್‌ಪ್ಲಸ್‌ನ ಕಾರ ಟೀಸರ್, ತೆಲ್ಸಾ ಟೀಸ್‌ ಮಾಡಿದ್ದ ಎಲೆಕ್ಟ್ರಿಕ್ ಕಾರಿನಂತೆ ಇದೆ.

ಓಲಾ ಕ್ಯಾಬ್‌

ಓಲಾ ಕ್ಯಾಬ್‌

ಓಲಾ(ola) ಭಾರತದಲ್ಲಿ ಅತೀ ದೊಡ್ಡ ಬಾಡಿಗೆ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಸಂಸ್ಥೆಯಾಗಿದ್ದು, ಈ ಟ್ಯಾಕ್ಸಿ ಸೇವೆ ಆಪ್‌ ಆಧಾರಿತವಾಗಿದೆ. ಸಂಸ್ಥೆಯು 'ಟಾಯ್ಲಟ್ ಆನ್‌ ವಿಲ್ಸ್' ಎಂಬ ಹೊಸ ಸೇವೆಯನ್ನು ಏಪ್ರಿಲ್ 1 ರಂದು ಘೋಷಿಸಿದ್ದು, ಗ್ರಾಹಕರು ಓಲಾ ಆಪ್‌ ಮೂಲಕ ಈ ಸೇವೆಯನ್ನು ಬುಕ್ಕ್ ಮಾಡಬಹುದಂತೆ. 'ಟಾಯ್ಲಟ್ ಆನ್‌ ವಿಲ್ಸ್' ಕುರಿತ ವಿಡಿಯೊ ಒಂದು ವೈರಲ್‌ ಆಗಿದೆ. ಈ ಸೇವೆ ಗ್ರಾಹಕರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಟಿ-ಮೊಬೈಲ್

ಟಿ-ಮೊಬೈಲ್

ಯುಎಸ್‌ ಮೂಲದ ಪ್ರಮುಖ ಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಟಿ-ಮೊಬೈಲ್ ಸಹ ಏಪ್ರಲ್‌ ಮೊದಲ ದಿನ ಪ್ರಾಂಕ್ ಮಾಡಿದೆ. ಕಂಪನಿ ಫೋನ್ ಬೂತ್‌ಇ ಸೇವೆಯನ್ನು ಆರಂಭಿಸುವ ಮೂಲಕ ಪ್ರಾಂಕ್ ಮಾಡಿದ್ದು, ಅದು ನಕಲಿ 5G E ಸೇವೆ ಆಗಿದೆ ಎಂದು ಹೇಳಲಾಗಿದೆ.

ಇದೇ ಮೊದಲಲ್ಲಾ

ಇದೇ ಮೊದಲಲ್ಲಾ

ಈ ಹಿಂದೆಯು ಪ್ರಮುಖ ಟೆಕ್‌ ಕಂಪನಿಗಳು ಗ್ರಾಹಕರು ಊಹಿಸಿರದಂತಹ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಪ್ರಾಂಕ್ ಮಾಡಿವೆ. 2017ರಲ್ಲಿ ಗೂಗಲ್ ಸಾಕುಪ್ರಾಣಿಗಳಿಗೆ ಗೂಗಲ್ ಪ್ಲೇ ಸ್ಟೋರ್‌ ಅನ್ನು ಬಿಡುಗಡೆ ಮಾಡುವುದಾಗಿ ಹೇಳಿ ಪ್ರಾಂಕ್ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Best Mobiles in India

English summary
Brands such as OnePlus, Ola Cabs and T-Mobile have started their April Fool's Day 2019 celebration with pranks by posting some unbelievable videos and teasers of some of the most hilarious products ever.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X