Subscribe to Gizbot

ಜೆನ್ ಫೋನ್ 4 ಸರಣಿಯ 6 ಸ್ಮಾರ್ಟ್ ಫೋನ್ ಗಳು ಲಾಂಚ್: ಯಾವುವು..?

Written By: Lekhaka

ಸಾಕಷ್ಟು ರೂಮರ್ ಗಳಿಗೆ ಸಾಕ್ಷಿಯಾಗಿದ್ದ ಆಸುಸ್ ಕಂಪನಿಯ ಜೆನ್ ಫೋನ್ 4 ಸರಣಿಯ ಸ್ಮಾರ್ಟ್ ಫೋನ್ ಗಳು ಕೊನೆಗೂ ಲಾಂಚ್ ಆಗಿದೆ. ಒಟ್ಟು ಆರು ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಜೆನ್ ಫೋನ್ 4 ಸರಣಿಯ 6 ಸ್ಮಾರ್ಟ್ ಫೋನ್ ಗಳು ಲಾಂಚ್: ಯಾವುವು..?

ಆಸುಸ್ ಕಂಪನಿಯ ಟಾಪ್ ಎಂಡ್ ಫೋನ್ ಗಳಾದ ಜೆನ್ ಫೋನ್ 4ಯ ಒಟ್ಟು ಆರು ವಿವಿಧ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಜೆನ್ ಫೋನ್ 4, ಜೆನ್ ಫೋನ್ 4 ಪ್ರೋ, ಜೆನ್ ಫೋನ್ 4 ಸೆಲ್ಫಿ, ಜೆನ್ ಫೋನ್ 4 ಸೆಲ್ಪಿ ಪ್ರೋ, ಜೆನ್ ಫೋನ್ 4 ಮಾಕ್ಸ್ ಮತ್ತು ಜೆನ್ ಫೋನ್ 4 ಮಾಕ್ಸ್ ಪ್ರೋ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದೆ.

ಈ ಹೊಸ ಸ್ಮಾರ್ಟ್ ಫೋನ್ ಗಳು ಹೆಚ್ಚಾಗಿ ಕ್ಯಾಮೆರಾಗೆ ಆದ್ಯತೆಯನ್ನು ನೀಡಿದ್ದು, ಈ ಎಲ್ಲಾ ಸ್ಮಾರ್ಟ್ ಫೋನ್ ಗಳು ಡ್ಯುಯಲ್ ಕ್ಯಾಮೆರಾವನ್ನು ಹೊಂದಿದವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಸುಸ್ ಜೆನ್ ಫೋನ್ 4:

ಆಸುಸ್ ಜೆನ್ ಫೋನ್ 4:

ಜೆನ್ ಫೋನ್ 4 ಸ್ಮಾರ್ಟ್ ಪೋನ್ 5.5 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಚಿಪ್ ಸೆಟ್ ಹೊಂದಿದ್ದು, 6GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 3300 mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI 4.0 ಸಹ ಇದೆ.'

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್ ಫೋನಿನಲ್ಲಿ 12MP + 8MP ಡ್ಯುಯಲ್ ಕ್ಯಾಮೆರಾ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಜೆನ್ ಫೋನ್ 4 ಪ್ರೋ:

ಜೆನ್ ಫೋನ್ 4 ಪ್ರೋ:

ಜೆನ್ ಫೋನ್ 4 ಪ್ರೋ ಪ್ರೀಮಿಯಮ್ ಸ್ಮಾರ್ಟ್ ಪೋನ್ ಆಗಿದ್ದು, 5.5 ಇಂಚಿನ FHD ಅಮೊಲೈಡ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಚಿಪ್ ಸೆಟ್ ಹೊಂದಿದ್ದು, 6GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

ಸ್ಮಾರ್ಟ್ ಫೋನಿ ನಲ್ಲಿ 12MP + 16 MP ಡ್ಯುಯಲ್ ಕ್ಯಾಮೆರಾ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಕಾಣಬಹುದಾಗಿದೆ. 3600 mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI 4.0 ಸಹ ಇದೆ.'

ಜೆನ್ ಫೋನ್ 4 ಸೆಲ್ಫಿ:

ಜೆನ್ ಫೋನ್ 4 ಸೆಲ್ಫಿ:

ಜೆನ್ ಫೋನ್ 4 ಸೆಲ್ಫಿ ಸ್ಮಾರ್ಟ್ ಪೋನ್ 5.5 ಇಂಚಿನ HD IPS ಡಿಸ್ ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 430 ಚಿಪ್ ಸೆಟ್ ಹೊಂದಿದ್ದು, 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 3000 mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI 4.0 ಸಹ ಇದೆ.'

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್ ಫೋನಿನ ಮುಂಭಾಗದಲ್ಲಿ 20MP + 8MP ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

BSNL ನಿಂದ ಮೊಬೈಲ್ ವ್ಯಾಲೆಟ್ ಆಪ್ ಬಿಡುಗಡೆ

ಜೆನ್ ಫೋನ್ 4 ಸೆಲ್ಫಿ ಪ್ರೋ:

ಜೆನ್ ಫೋನ್ 4 ಸೆಲ್ಫಿ ಪ್ರೋ:

ಜೆನ್ ಫೋನ್ 4 ಸೆಲ್ಫಿ ಸ್ಮಾರ್ಟ್ ಪೋನ್ 5.5 ಇಂಚಿನ FHD ಅಮೊಲೈಡ್ ಡಿಸ್ ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಚಿಪ್ ಸೆಟ್ ಹೊಂದಿದ್ದು, 4GB/6GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 3000 mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI 4.0 ಸಹ ಇದೆ.'

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್ ಫೋನಿನ ಮುಂಭಾಗದಲ್ಲಿ 24MP + 5MP ಡ್ಯುಯಲ್ ಕ್ಯಾಮೆರಾ ನೀಡಲಾಗಿದ್ದು, ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಆಸುಸ್ ಜೆನ್ ಫೋನ್ 4 ಮ್ಯಾಕ್ಸ್:

ಆಸುಸ್ ಜೆನ್ ಫೋನ್ 4 ಮ್ಯಾಕ್ಸ್:

ಜೆನ್ ಫೋನ್ 4 ಮಾಕ್ಸ್ ಸ್ಮಾರ್ಟ್ ಪೋನ್ 5.5 ಇಂಚಿನ HD IPS ಡಿಸ್ ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 425 or 430 ಚಿಪ್ ಸೆಟ್ ಹೊಂದಿದ್ದು, ಮೂರು ಆವೃತ್ತಿಯಲ್ಲಿ ಲಭ್ಯವಿದೆ. 2GB, 3GB ಮತ್ತು 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 3300 mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI 4.0 ಸಹ ಇದೆ.'

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್ ಫೋನಿನಲ್ಲಿ 13MP + 5MP ಡ್ಯುಯಲ್ ಕ್ಯಾಮೆರಾ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಆಸುಸ್ ಜೆನ್ ಫೋನ್ 4 ಮ್ಯಾಕ್ಸ್ ಪ್ರೋ:

ಆಸುಸ್ ಜೆನ್ ಫೋನ್ 4 ಮ್ಯಾಕ್ಸ್ ಪ್ರೋ:

ಜೆನ್ ಫೋನ್ 4 ಮಾಕ್ಸ್ ಪ್ರೋ ಸ್ಮಾರ್ಟ್ ಪೋನ್ 5.5 ಇಂಚಿನ HD IPS ಡಿಸ್ ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಮ್ ಸ್ನಾಪ್ ಡ್ರಾಗನ್ 425 or 430 ಚಿಪ್ ಸೆಟ್ ಹೊಂದಿದ್ದು, ಎರದು ಆವೃತ್ತಿಯಲ್ಲಿ ಲಭ್ಯವಿದೆ. 2GB ಮತ್ತು 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 5000 mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಜೆನ್ UI 4.0 ಸಹ ಇದೆ.'

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್ ಫೋನಿನಲ್ಲಿ 16MP + 5MP ಡ್ಯುಯಲ್ ಕ್ಯಾಮೆರಾ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ಬೆಲೆ:

ಬೆಲೆ:

ಆಸುಸ್ ಜೆನ್ ಫೋನ್ 4 ಬೆಲೆ $ 399( ಸುಮಾರು ರೂ.25,575), ಪ್ರೋ ಆವೃತ್ತಿ ಬೆಲೆ $ 599( ಸುಮಾರು ರೂ.38,395), ಇನ್ನು ಸೆಲ್ಫಿ ಮತ್ತು ಸೆಲ್ಪಿ ಪ್ರೋ ಬೆಲೆ ಕ್ರಮವಾಗಿದೆ $279 (ಸುಮಾರು ರೂ.17,883) ಮತ್ತು $ 379( ಸುಮಾರು ರೂ.24,293). ಮ್ಯಾಕ್ಸ್ ಮಾಡಲ್ ಗಳ ಬೆಲಯನ್ನು ಕಂಪನಿಯೂ ತಿಳಿಸಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Asus has finally pulled the wraps off its ZenFone 4 series smartphones and it includes six new smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot