Subscribe to Gizbot

10,999ರೂ.ಬೆಲೆಯ ಈ ಫೋನ್ ಮುಂದೆ ರೆಡ್‌ಮಿ ನೋಟ್ 5 ಕೂಡ ವೇಸ್ಟ್!!

Written By:

ಪ್ರಸ್ತುತ ಶಿಯೋಮಿ ಮೊಬೈಲ್ ಕಂಪೆನಿ ತನ್ನ ಬಜೆಟ್ ಸ್ಮಾರ್ಟ್‌ಫೋನ್‌ಗಳಿಂದ ಭಾರತದ ಮೊಬೈಲ್ ಮಾರುಕಟ್ಟೆಯ ದಿಗ್ಗಜನಾಗಿ ಮೆರೆಯುತ್ತಿದೆ. ಆದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಯಾವ ಮೊಬೈಲ್ ಕಂಪೆನಿ ಕೂಡ ಏಕಾಧಿಪತ್ಯ ಸಾಧಿಸಲು ಸಾಧ್ಯವಿಲ್ಲ ಎಂದು ನಿರೂಪಿಸಲು ಆಸುಸ್ ಮೊಬೈಲ್ ಕಂಪೆನಿ ಮಾತ್ರ ಮೊದಲು ಯಶಸ್ವಿಯಾಗಿದೆ ಎನ್ನಬಹುದು.!

ಹೌದು, ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಶಿಯೋಮಿಗೆ ಸೆಡ್ಡು ಹೊಡೆಯಲು ಆಸುಸ್ ಮೊಬೈಲ್ ಕಂಪೆನಿ ಮತ್ತೆ ಎಂಟ್ರಿ ನಿಡಿದೆ. ಶಿಯೋಮಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನಿಗೂ ಹೆಚ್ಚು ಫೀಚರ್ಸ್ ಹೊಂದಿರುವ ಆಸುಸ್ ಕಂಪೆನಿ ಸ್ಮಾರ್ಟ್‌ಫೋನ್ ಒಂದು ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

10,999ರೂ.ಬೆಲೆಯ ಈ ಫೋನ್ ಮುಂದೆ ರೆಡ್‌ಮಿ ನೋಟ್ 5 ಕೂಡ ವೇಸ್ಟ್!!

ಆಂಡ್ರಾಯ್ಡ್ ಒನ್ ಫೀಚರ್ ಮೂಲಕ ಆಸುಸ್ ಕಂಪೆನಿಯ ಆಸುಸ್ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿದ್ದು, ಹಾಗಾದರೆ, ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗೆ ಸೆಡ್ಡು ಹೊಡೆಯುತ್ತಿರುವ ಆಸುಸ್ 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನಿನ ಬೆಲೆ ಎಷ್ಟು ಎಂಬೆಲ್ಲಾ ಮಾಹಿತಿಗಳನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1' ಸ್ಮಾರ್ಟ್‌ಫೋನ್ 18:9 ಅನುಪಾತದ 6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 2,160x1,080 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವುದು ಡಿಸ್‌ಪ್ಲೇಯ ಪ್ರಮುಖ ವಿಶೇಷವಾಗಿದೆ. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಫೋನ್ ವಿನ್ಯಾಸ ಅತ್ಯುತ್ತಮವಾಗಿದೆ.

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಪ್ರಬಲ ಸ್ನಾಪ್ಡ್ರಾಗನ್ 636 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ, ಇದು ರೆಡ್‌ ಮಿ ನೋಟ್ 5 ಫೋನಿನಲ್ಲಿ ಬಳಸಲಾಗಿರುವ ಸ್ನಾಪ್ಡ್ರಾಗನ್ 625 ಆಕ್ಟಾ-ಕೋರ್ ಪ್ರೊಸೆಸರ್ಗಿಂತ ವೇಗವಾಗಿದೆ. 3GB+32GB, 4GB+64GB ಮತ್ತು 6GB RAM+64GB ಮೆಮೊರಿಯ ಮೂರು ವೆರಿಯಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಡ್ಯುಯಲ್ ಕ್ಯಾಮೆರಾ!!

ಡ್ಯುಯಲ್ ಕ್ಯಾಮೆರಾ!!

'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಓಮ್ನಿವಿಷನ್ ಸಂವೇದಕ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಆಳ ಸಂವೇದಕ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದ 5 ಮೆಗಾಪಿಕ್ಸೆಲ್ ಕ್ಯಾಮೆರಾ ಬೊಕೆ ಚಿತ್ರಗಳನ್ನು ತೆಗೆಯಲು ಹೊಂದುತ್ತದೆ.! 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹೆಚ್‌ಡಿಆರ್, 9 ಫಿಲ್ಟರ್, ಬ್ಯೂಟಿ ಶಾಟ್, 9 ಸೀನ್ಸ್ ಮೂಡ್ ಮತ್ತು ಬೊಕೆ ಮೂಡ್ ತಂತ್ರಜ್ಞಾನಗಳು ಕ್ಯಾಮೆರಾ ಅಂದವನ್ನು ಹೆಚ್ಚಿಸಿವೆ.

5000mAh ಬ್ಯಾಟರಿ ಕ್ಯಾಪಾಸಿಟಿ!!

5000mAh ಬ್ಯಾಟರಿ ಕ್ಯಾಪಾಸಿಟಿ!!

35 ದಿಗಳು ಸ್ಟಾಂಡ್ ಬೈ ಕೆಪಾಸಿಟಿ ಇರುವಂತಹ 5000mAh ಕ್ಯಾಪಾಸಿಟಿ ಹೊಂದಿರುವ ಬ್ಯಾಟರಿಯನ್ನು 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಹೊಂದಿದೆ. 3.0 ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ 28 ಗಂಟೆಗಳ ಕಾಲ 28 ಗಂಟೆಗಳ ನಿರಂತರ ವೈಫೈ ವೆಬ್‌ ಬ್ರೌಸಿಂಗ್ ಮತ್ತು 199 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ ಎಂದು ಆಸುಸ್ ಕಂಪೆನಿ ಹೇಳಿಕೊಂಡಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಇತರೆ ಏನೆಲ್ಲಾ ಪೀಚರ್ಸ್?

ಇತರೆ ಏನೆಲ್ಲಾ ಪೀಚರ್ಸ್?

5-ಮ್ಯಾಗ್ನೆಟ್ ಧ್ವನಿವರ್ಧಕ, 1080p ಎಫ್‌ಹೆಚ್‌ಡಿ ವಿಡಿಯೋ ರೆಕಾರ್ಡಿಂಗ್, 802.11 b / g / n 2.4GHz WLAN , ಬ್ಲೂಟೂತ್ 4.2, Wi-Fi ಡೈರೆಕ್ಟ್ ಮತ್ತು ಆಂಡ್ರಾಯ್ಡ್ ಓರಿಯೊ 8.0 ಫೀಚರ್ಸ್‌ಗಳನ್ನು 'ಜೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ಹೊಂದಿದೆ. ಇನ್ನು 3GB+32GB, 4GB+64GB ಮತ್ತು 6GB RAM+64GB ಮೆಮೊರಿಯ ಮೂರು ವೆರಿಯಂಟ್‌ಗಳ ಸ್ಮಾರ್ಟ್‌ಪೋನ್ ಬೆಲೆಗಳು ಕ್ರಮವಾಗಿ, 10,999 (3GB+32GB), 12,999 (4GB+64GB) ಮತ್ತು 14,999 (6GB+64GB) ರೂಪಾಯಿಗಳಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
he number of new phones this year has been growing steadily and a few more were added to the list last month.to know more this visit to kannada. gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot