ಡಿಸೆಂಬರ್ 11 ಕ್ಕೆ ಬಿಡುಗಡೆಯಾಗಲಿದೆ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2

|

ಆಸೂಸ್ ಸಂಸ್ಥೆ ಅಂತಿಮವಾಗಿ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 ಗೇಮಿಂಗ್ ಸ್ಮಾರ್ಟ್ ಫೋನ್ ನ್ನು ಇಂಡೋನೇಷಿಯಾದಲ್ಲಿ ಡಿಸೆಂಬರ್ 11 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ. ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ನ ಯಶಸ್ಸಿನ ಮತ್ತೊಂದು ಆವೃತ್ತಿಯಾಗಿರುವ ಇದು ಇಂಡೋನೇಷಿಯಾದಲ್ಲಿ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.

ಡಿಸೆಂಬರ್ 11 ಕ್ಕೆ ಬಿಡುಗಡೆಯಾಗಲಿದೆ  ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2

ಬಿಡುಗಡೆಗೂ ಮುನ್ನವೇ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 ಫೋನಿನ ವೈಶಿಷ್ಟ್ಯತೆಗಳು ಬಿಡುಗಡೆಗೊಂಡಿದೆ.ಇದರ ಜೊತೆಗೆ ಝೆನ್ ಪೋನ್ ಮ್ಯಾಕ್ಸ್ ಎಂ1 ಮತ್ತು ಝೆನ್ ಫೋನ್ ಮ್ಯಾಕ್ಸ್ ಎಂ2 ನ ಯಶಸ್ಸಿನ ಸ್ಮಾರ್ಟ್ ಫೋನ್ ನ್ನು ಕೂಡ ತಯಾರಿಸುವ ಬಗ್ಗೆ ಸಂಸ್ಥೆ ಸಾಕಷ್ಟು ಕೆಲಸ ಮಾಡುತ್ತಿದೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

ಗೇಮಿಂಗ್ ಫೋಕಸ್ ಸ್ಮಾರ್ಟ್ ಫೋನ್:

ಗೇಮಿಂಗ್ ಫೋಕಸ್ ಸ್ಮಾರ್ಟ್ ಫೋನ್:

ಹಾನರ್ ಪ್ಲೇ ನಲ್ಲಿ ನಾವು ಈ ಹಿಂದೆ ಗಮನಿಸಿದಂತೆ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ಮತ್ತು ಮ್ಯಾಕ್ಸ್ ಪ್ರೋ ಎಂ2 ಗೇಮಿಂಗ್ ಸ್ಮಾರ್ಟ್ ಫೋನ್ ಗಳಲ್ಲೂ ಕೂಡ ಗೇಮಿಂಗ್ ಗೆ ಫೋಕಸ್ ಮಾಡುವಂತ ಸಾಫ್ಟ್ ವೇರ್ ಫೀಚರ್ ಗಳನ್ನು ಅಳವಡಿಸಲಾಗಿರುತ್ತದೆ. ಆನ್ ಲೈನ್ ನಲ್ಲಿ ಈ ಹೊಸ ಫೋನ್ ಹೇಗಿರಲಿದೆ ಎಂಬ ಬಗೆಗಿನ ಚಿತ್ರವೂ ಕೂಡ ಹರಿದಾಡುತ್ತಿದೆ.

ಮೂರು ಹಿಂಭಾಗದ ಕ್ಯಾಮರಾವಿದೆ:

ಮೂರು ಹಿಂಭಾಗದ ಕ್ಯಾಮರಾವಿದೆ:

ಈ ಲೀಕ್ ಹೇಳುವಂತೆ ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 ಆಕ್ಟಾ ಕೋರ್ 14nm ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 AIE ಪ್ರೊಸೆಸರ್ ನ್ನು ವಿವೋ ವಿ11 ಪ್ರೋ ಮತ್ತು ವಿ9 ಪ್ರೋ ನಂತೆಯೇ ಹೊಂದಿರಲಿದೆ. ಇದರ ಜೊತೆಗೆ ಮತ್ತೊಂದು ಹೈಲೆಟ್ ಏನೆಂದರೆ ಇದರಲ್ಲಿ ಮೂರು ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇರಲಿದೆ. ಪ್ರೈಮರಿ ಸೆನ್ಸರ್ 13 ಮೆಗಾಪಿಕ್ಸಲ್ ನ್ನು ಹೊಂದಿರಲಿದೆ.

ಯಾವೆಲ್ಲ ವರ್ಷನ್ ನಲ್ಲಿ ಲಭ್ಯವಿದೆ?

ಯಾವೆಲ್ಲ ವರ್ಷನ್ ನಲ್ಲಿ ಲಭ್ಯವಿದೆ?

ಈಗಾಗಲೇ ಹಬ್ಬಿರುವ ವದಂತಿಯು ಹೇಳುವಂತೆ 3 ಇಂಚಿನ IPS LCD ಡಿಸ್ಪ್ಲೇ ಮತ್ತು ಫುಲ್ HD+ ಸ್ಕ್ರೀನ್ ರೆಸಲ್ಯೂಷನ್ ಇದರಲ್ಲಿರಲಿದೆ.3 ವಿಭಿನ್ನ ಕಾನ್ಫಿಗರೇಷನ್ ನಲ್ಲಿ ಫೋನ್ ಲಭ್ಯವಾಗುತ್ತದೆ. 4GB RAM/64GB ಸ್ಟೋರೇಜ್ ,4GB RAM ಜೊತೆಗೆ 128GB ಸ್ಟೋರೇಜ್ ಮತ್ತು 6GB RAM,128GB ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಿರಲಿವೆ.

ಬೆಲೆ ಎಷ್ಟಿರಬಹುದು?

ಆಕ್ಟಾ ಕೋರ್ 14nm ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 AIE ಪ್ರೊಸೆಸರ್ ಆಸೂಸ್ ಫೋನ್ ನ್ನು ಹೆಚ್ಚು ಪವರ್ ಫುಲ್ ಆಗಿಸಿದ್ದು ಈ ಬೆಲೆಯಲ್ಲಿ ಸಿಗುವ ಇತರೆ ಫೋನ್ ಗಳ ಜೊತೆಗೆ ಸ್ಪರ್ಧೆ ಮಾಡಲು ನೆರವಾಗುವಂತಿದೆ.ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ1 ನ್ನು ಪರಿಗಣಿಸಿದರೆ ಮ್ಯಾಕ್ಸ್ ಎಂ2 ಬೆಲೆ 15,000 ಇರುವ ಸಾಧ್ಯತೆ ಇದೆ.

ಆಂಡ್ರಾಯ್ಡ್ ಪೈ ನಲ್ಲಿ ರನ್ ಆಗುತ್ತದೆ:

ಸಾಫ್ಟ್ ವೇರ್ ವಿಚಾರದಲ್ಲಿ ಹೇಳುವುದಾದರೆ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 ಆಂಡ್ರಾಯ್ಡ್ ಪೈ ಆಪರೇಟಿಂಗ್ ಸಿಸ್ಟಮ್ ಔಟ್ ಆಫ್ ಬಾಕ್ಸ್ ನಲ್ಲಿ ರನ್ ಆಗುತ್ತದೆ.ಇದು ಗೂಗಲ್ ನೂತನ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುವ ಮೊದಲ ಆಸೂಸ್ ಫೋನ್ ಆಗಿರಲಿದೆ.

Best Mobiles in India

Read more about:
English summary
Asus ZenFone Max Pro M2 triple rear camera gaming smartphone to launch on Dec 11

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X