ಆಸೂಸ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ..!!

|

ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊತ್ತು ಬರುವ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರು ಖರೀದಿಸಲು ಮುಂದಾಗುತ್ತಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿಗ ದರ ಸಮರ ಶುರುವಾಗಿದೆ. ಪ್ರಮುಖ ಸ್ಮಾರ್ಟ್‌ಫೋನ್‌ ಕಂಪನಿಗಳು ಸೇರಿದಂತೆ ಬಹುತೇಕ ಎಲ್ಲ ಮೊಬೈಲ್‌ ಕಂಪನಿಗಳು ಬಜೆಟ್‌ ಫೋನ್‌ಗಳನ್ನು ಪರಿಚಯಿಸುತ್ತಿವೆ. ಇದೀಗ ಅವುಗಳಗೆ ಪೈಪೋಟಿ ನೀಡಲು ಆಸೂಸ್‌ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆಮಾಡಿದೆ.

ಆಸೂಸ್‌ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ..!!

ಜನಪ್ರಿಯ ಆಸೂಸ್‌ ಕಂಪನಿಯು ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಭಾರೀ ಇಳಿಕೆಮಾಡಿದ್ದು, ಈ ಮೂಲಕ ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್‌ ಮತ್ತು ಶಿಯೋಮಿ ಕಂಪನಿಗಳ ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. ಹಾಗಾದರೇ ಆಸೂಸ್‌ತನ್ನ ಯಾವೆಲ್ಲಾ ಪ್ರಮುಖ ಸ್ಮಾರ್ಟ್‌ಫೋನ್‌ಗಳಿಗೆ ಬೆಲೆ ಇಳಿಕೆ ಮಾಡಿದೆ ಎಂಬುದನ್ನು ನೋಡೋಣ ಬನ್ನಿ.

'ಝೆನ್‌ಫೋನ್ ಮ್ಯಾಕ್ಸ್‌ ಪ್ರೋ M1'

'ಝೆನ್‌ಫೋನ್ ಮ್ಯಾಕ್ಸ್‌ ಪ್ರೋ M1'

3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ವೇರಿಯಂಟ್ 9,999ರೂ.ಗಳು ಆಗಿದ್ದು, ಆಫರ್ ಬೆಲೆ 8,499ರೂ.ಗಳು ಆಗಿದೆ. ಹಾಗೇ 4GB RAM ಮತ್ತು 64GB ವೇರಿಯಂಟ್‌ ಬೆಲೆ 11,999 ಇದ್ದು, ಆಫರ್‌ ಬೆಲೆ 10,499 ಹಾಗೂ 6GB RAM/ 64GB ವೇರಿಯಂಟ್‌ ಬೆಲೆ 13,999ಇದ್ದು, ಆಫರ್‌ನಲ್ಲಿ 12,499ರೂ.ಗಳಿಗೆ ದೊರೆಯಲಿದೆ.

'ಝೆನ್‌ಫೋನ್ ಮ್ಯಾಕ್ಸ್‌ ಪ್ರೋ M2'

'ಝೆನ್‌ಫೋನ್ ಮ್ಯಾಕ್ಸ್‌ ಪ್ರೋ M2'

3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ 12,999 ರೂ.ಗಳು ಹೊಂದಿದ್ದು, ಆಫರ್ ಬೆಲೆ 9,999ರೂ.ಗಳು ಆಗಿದೆ. ಹಾಗೇ 4GB RAM ಮತ್ತು 64GB ವೇರಿಯಂಟ್‌ ಬೆಲೆ 14,999 ಇದ್ದು, ಆಫರ್‌ ಬೆಲೆ 11,999 ಹಾಗೂ 16,999ರೂ.ಗಳಿಗೆ 6GB RAM/64GB ವೇರಿಯಂಟ್‌ ಆಫರ್‌ನಲ್ಲಿ ದೊರೆಯಲಿದೆ.

'ಝೆನ್‌ಫೋನ್ ಮ್ಯಾಕ್ಸ್‌ M2'

'ಝೆನ್‌ಫೋನ್ ಮ್ಯಾಕ್ಸ್‌ M2'

3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ 8,499 ರೂ.ಗಳು ಲಭ್ಯವಿದ್ದು, ಮೊದಲಿದ್ದ ಬೆಲೆ 9,999ರೂ.ಗಳು ಆಗಿದೆ. ಹಾಗೇ 4GB RAM ಮತ್ತು 64GB ವೇರಿಯಂಟ್‌ ಡಿಸ್ಕೌಂಟ್‌ ಬೆಲೆಯು 11,999ರೂ.ಗಳು ಆಗಿದೆ. ಇದರ ಮೊದಲಿನ ಬೆಲೆಯು 10,499ರೂ.ಗಳಲ್ಲಿ ದೊರೆಯುತ್ತಿತ್ತು.

'ಝೆನ್‌ಫೋನ್ 5Z'

'ಝೆನ್‌ಫೋನ್ 5Z'

6GB RAM/ 128GB ಸಂಗ್ರಹ ಸಾಮರ್ಥ್ಯದ ವೇರಿಯಂಟ್ 27,999ರೂ.ಗಳಿಗೆ ದೊರೆಯಲಿದ್ದು, ಇದರ ಆರಂಭದ ಬೆಲೆ 32,999 ಆಗಿತ್ತು. ಹಾಗೇ 8GB RAM/ 256GB ವೇರಿಯಂಟ್‌ 31,999ರೂ.ಗಳಿಗೆ ದೊರೆಲಿದ್ದು, ಇದರ ಮೊದಲ ಬೆಲೆ 36,999ರೂ.ಗಳು ಆಗಿತ್ತು.

Best Mobiles in India

English summary
Asus has revised the prices of ZenFone Max Pro M1, ZenFone Max Pro M2, ZenFone Max M2, and ZenFone 5Z phones in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X