ಹೊಸ ಜೂಮ್‌ನೊಂದಿಗೆ ಅಸೂಸ್ ಹೊರತಂದಿದೆ ಜೆನ್‌ಫೋನ್ ಜೂಮ್ ಎಸ್

ತೈವಾನ್‌ನ ಸ್ಮಾರ್ಟ್‌ಫೋನ್ ತಯಾರಕ ಅಸೂಸ್ ಫೋನ್ ಅನ್ನು ಲಾಂಚ್ ಮಾಡಿದ್ದು ಇದಕ್ಕೆ ಅಸೂಸ್ ಜೆನ್‌ಫೋನ್ ಜೂಮ್ ಎಸ್ ಎಂಬುದಾಗಿ ಹೆಸರನ್ನಿಟ್ಟಿದೆ.

By Shwetha Ps
|

ತೈವಾನ್‌ನ ಸ್ಮಾರ್ಟ್‌ಫೋನ್ ತಯಾರಕ ಅಸೂಸ್ ಫೋನ್ ಅನ್ನು ಲಾಂಚ್ ಮಾಡಿದ್ದು ಇದಕ್ಕೆ ಅಸೂಸ್ ಜೆನ್‌ಫೋನ್ ಜೂಮ್ ಎಸ್ ಎಂಬುದಾಗಿ ಹೆಸರನ್ನಿಟ್ಟಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದು ವಿಶೇಷವಾಗಿ ಮಾರಾಟಕ್ಕೆ ಸಿದ್ಧಗೊಳ್ಳುತ್ತಿದ್ದು ಸಿಲ್ವರ್ ಮತ್ತು ನ್ಯಾವಿ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇದದರ ಬೆಲೆ ರೂ 26,999 ಆಗಿದೆ.

ಹೊಸ ಜೂಮ್‌ನೊಂದಿಗೆ ಅಸೂಸ್ ಹೊರತಂದಿದೆ ಜೆನ್‌ಫೋನ್ ಜೂಮ್ ಎಸ್

ಅಸೂಸ್ ಜೆನ್‌ಫೋನ್ ಜೂಮ್ ಎಸ್ ಅನ್ನು ಈಗಾಗಲೇ ಅಸೂಸ್ ಜೆನ್‌ಫೋನ್ 3 ಜೂಮ್ ಎಂಬುದಾಗಿ ಹೆಸರನ್ನಿಟ್ಟಿದ್ದು ಸಿಇಎಸ್ 2017 ರಲ್ಲಿ ಲಾಂಚ್ ಆಗಲಿದೆ. ವಲಯ ಮುಖ್ಯಸ್ಥರಾಗಿರುವ ಪೀಟರ್ ಚಾಂಗ್ ಮಾಧ್ಯಮದೊಂದಿಗೆ ಫೋನ್ ಕುರಿತು ವಿಶೇಷತೆಗಳನ್ನು ಹಂಚಿಕೊಂಡಿದ್ದು ವಿಶ್ವ ಫೋಟೋಗ್ರಫಿ ದಿನದ ವಿಶೇಷತೆಯಾಗಿ ಜೆನ್‌ಫೋನ್ ಜೂಮ್ ಎಸ್ ಅನ್ನು ಲಾಂಚ್ ಮಾಡುತ್ತಿದೆ.

'ಫೋಟೋಗ್ರಫಿಗಾಗಿಯೇ ವಿಶೇಷವಾಗಿಯೇ ಈ ಹ್ಯಾಂಡ್‌ಸೆಟ್ ಅನ್ನು ತಯಾರಿಸಲಾಗಿದೆ. ಇದು ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಫೋಟೋಗ್ರಫಿ ವಲಯದಲ್ಲಿಯೇ ಈ ಡಿವೈಸ್ ಹೊಸ ಮೈಲಿಗಲ್ಲನ್ನು ಬರೆಯಲಿದೆ.

ಇಂದಿನ ಲೇಖನದಲ್ಲಿ ಫೋನ್ ಕುರಿತು ಒಂದಿಷ್ಟು ವಿವರಗಳನ್ನು ವಿಷದವಾಗಿ ತಿಳಿದುಕೊಳ್ಳೋಣ

ಡಿಸ್‌ಪ್ಲೇ, ಪ್ರೊಸೆಸರ್ RAM ಮತ್ತು ಸ್ಟೋರೇಜ್

ಡಿಸ್‌ಪ್ಲೇ, ಪ್ರೊಸೆಸರ್ RAM ಮತ್ತು ಸ್ಟೋರೇಜ್

ಅಸೂಸ್ ಜೆನ್‌ಫೋನ್ ಜೂಮ್ 5.5 ಇಂಚಿನ ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು ರೆಸಲ್ಯೂಶನ್ 1920x1080 ಪಿಕ್ಸೆಲ್‌ಗಳನ್ನು ಹೊಂದಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಶನ್ ಇದರಲ್ಲಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಓಕ್ಟಾ ಕೋರ್ 2GHZ ಪ್ರೊಸೆಸರ್ ಇದರಲ್ಲಿದ್ದು 4ಜಿಬಿ RAM ಡಿವೈಸ್‌ನಲ್ಲಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 2 ಟಿಬಿಗೆ ವಿಸ್ತರಿಸಬಹುದು.

ಕ್ಯಾಮೆರಾ

ಕ್ಯಾಮೆರಾ

ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಇದ್ದು ಇದು ಹೆಚ್ಚಿನ ವಿಶೇಷತೆ ಎಂದೆನಿಸಿದೆ. ಸ್ಮಾರ್ಟ್‌ಫೋನ್‌ನಲ್ಲಿ 12 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು 25 ಎಮ್‌ಎಮ್ ಆಂಗಲ್ ಅನ್ನು ಇದು ಹೊಂದಿದೆ. 59 ಎಮ್‌ಎಮ್ ಲೆನ್ಸ್ ಇದರಲ್ಲಿದೆ. 25 ಎಮ್‌ಎಮ್ ಅಗಲ ಲೆನ್ಸ್ ಹೆಚ್ಚಿನ ಫೋಟೋಗಳನ್ನು ಉತ್ತಮ ಗುಣಮಟ್ಟದೊಂದಿಗೆ ಸೆರೆಹಿಡಿಯಲಿದೆ. ಸೂಪರ್ ಪಿಕ್ಸೆಲ್ ಕ್ಯಾಮೆರಾ ತಂತ್ರಜ್ಞಾನವನ್ನು ಡಿವೈಸ್ ಬಳಸುತ್ತಿದ್ದು ಇದು ಸ್ಮಾರ್ಟ್‌ಫೋನ್ ಪೋಕಸ್ ಹೆಚ್ಚು ತ್ವರಿತವಾಗಿ ಸಕ್ರಿಯಗೊಳಿಸಲಿದೆ.

ರಾತ್ರಿಯಲ್ಲಿ ಕೂಡ ಹೆಚ್ಚು ನಿಖರವಾಗಿ ಇದು ಫೋಟೋಗಳನ್ನು ಸೆರೆಹಿಡಿಯಲಿದೆ. ನಾಲ್ಕು ಆಕ್ಸಿಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನವನ್ನು ಇದು ಪಡೆದುಕೊಂಡಿದ್ದು 19 ವಿಭಿನ್ನ ವರ್ಸಟೈಲ್ ಮೋಡ್‌ಗಳಲ್ಲಿ ಕ್ಯಾಮೆರಾ ಫೋಟೋ ಸೆರೆಹಿಡಿಯಲಿದೆ. 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದು ಮುಂಭಾಗದಲ್ಲಿ ಪಡೆದುಕೊಂಡಿದೆ.

ದೀಪಾವಳಿಗೆ ನೋಕಿಯಾ ಧಮಾಕ: ಬರಲಿದೆ ನೋಕಿಯಾ 8 ಸ್ಮಾರ್ಟ್ ಫೋನ್.!ದೀಪಾವಳಿಗೆ ನೋಕಿಯಾ ಧಮಾಕ: ಬರಲಿದೆ ನೋಕಿಯಾ 8 ಸ್ಮಾರ್ಟ್ ಫೋನ್.!

ಬ್ಯಾಟರಿ ಮತ್ತು ಸಾಫ್ಟ್‌ವೇರ್

ಬ್ಯಾಟರಿ ಮತ್ತು ಸಾಫ್ಟ್‌ವೇರ್

ಹ್ಯಾಂಡ್‌ಸೆಟ್ 5000mAh ಬ್ಯಾಟರಿಯನ್ನು ಒಳಗೊಂಡಿದ್ದು ಪವರ್ ಬ್ಯಾಂಕಿಂಗ್ ಚಾರ್ಜಿಂಗ್ ಸಾಧನಗಳನ್ನು ಇದು ಹೊಂದಿದೆ. ಇದು 42 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ 4 ಕೆ ಯುಎಚ್‌ಡಿ ವೀಡಿಯೊಗಳನ್ನು ಸೆರೆಹಿಡಿಯಬಹುದಾಗಿದೆ.

ಇತರ ವೈಶಿಷ್ಟ್ಯಗಳು

ಇತರ ವೈಶಿಷ್ಟ್ಯಗಳು

ಜೆನ್‌ಫೋನ್ ಜೂಮ್ ಎಸ್ ಹೈಬ್ರೀಡ್ ಸಿಮ್ ಅನ್ನು ಪಡೆದುಕೊಂಡಿದ್ದು 4ಜಿ ಎಲ್‌ಟಿಇ, ವೈಫೈ, ಜಿಪಿಎಸ್,ಏಜಿಪಿಎಸ್, ಎನ್‌ಎಫ್‌ಸಿ, ಬ್ಲೂಟೂತ್ ಅನ್ನು ಇದು ಹೊಂದಿದೆ. ಇದು ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.

Best Mobiles in India

Read more about:
English summary
Asus has today launched Asus Zenfone Zoom S in India for Rs 26,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X