ಗ್ರಾಹಕ ಸ್ನೇಹಿ ಬೆಲೆಯಲ್ಲಿ ಗಮನ ಸೆಳೆದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯು ಬಹಳ ವಿಸ್ತಾರವಾಗಿ ಬೆಳೆಯುತ್ತಿದ್ದು, ಇತ್ತೀಚಿಗೆ ನೂತನ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್‌ಗಳನ್ನು ಮತ್ತಷ್ಟು ಸ್ಮಾರ್ಟ್‌ಮಾಡುತ್ತಿವೆ. ಗ್ರಾಹಕರಿಗೆ ವಿವಿಧ ಕಂಪನಿಗಳ ವೇರೈಟಿ ಸ್ಮಾರ್ಟ್‌ಫೋನ್‌ಗಳ ಆಯ್ಕೆಗಳು ಲಭ್ಯವಿದ್ದು, ಯಾವ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎನ್ನುವ ಗೊಂದಲ ಮೂಡಿರುತ್ತದೆ. ಆದರೆ ಬಹುತೇಕ ಗ್ರಾಹಕರು ಬಜೆಟ್‌ ಬೆಲೆಯಲ್ಲಿ ಹೆಚ್ಚಿನ ಹೊಸ ಫೀಚರ್ಸ್‌ಗಳಿರುವ ಫೋನ್‌ನತ್ತ ವಾಲುತ್ತಾರೆ.

ಗ್ರಾಹಕ ಸ್ನೇಹಿ ಬೆಲೆಯಲ್ಲಿ ಗಮನ ಸೆಳೆದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

ಹೌದು, ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಇದ್ದು, ಡಿಸ್‌ಪ್ಲೇ, ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಅಗತ್ಯ ಫೀಚರ್ಸ್‌ಗಳಲ್ಲಿ ಹೊಸತನ ಪರಿಚಯಿಸುತ್ತಿವೆ. ಗ್ರಾಹಕರನ್ನು ಸೆಳೆಯಲು ಕೆಲವು ಕಂಪನಿಗಳು ಅಗ್ಗದ ದರದಲ್ಲಿ ಫೋನ್‌ ಲಾಂಚ್ ಮಾಡಿದರೂ ಸಹ ಗ್ರಾಹಕರು ಬೆಲೆಯೊಂದಿಗೆ ಫೋನ್‌ ಗುಣಮಟ್ಟ ಮತ್ತು ಫೀಚರ್ಸ್‌ಗಳ ಬಗ್ಗೆಯು ಗಮನಿಸುತ್ತಾರೆ.

ಓದಿರಿ : ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ! ಓದಿರಿ : ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!

ಗ್ರಾಹಕ ಸ್ನೇಹಿ ಬೆಲೆಯಲ್ಲಿ ಗಮನ ಸೆಳೆದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

ಮಾರುಕಟ್ಟೆಯಲ್ಲಿ ಇಪ್ಪತ್ತು ಸಾವಿರದೊಳಗೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಿಗೆನೆ ಹೆಚ್ಚಿನ ಬೇಡಿಕೆಯಿದ್ದು, ಅವುಗಳಲ್ಲಿ ಸ್ಯಾಮ್‌ಸಂಗ್‌, ನೋಕಿಯಾ, ವಿವೋ ಮತ್ತು ಶಿಯೋಮಿ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಸದ್ಯ ಹೆಚ್ಚು ಗಮನ ಸೆಳೆದಿವೆ. ಇಂದಿನ ಈ ಲೇಖನದಲ್ಲಿ 20,000ರೂ.ಗಳ ಒಳಗೆ ಲಭ್ಯವಿರುವ ಈ ನಾಲ್ಕು ಮೊಬೈಲ್ ಕಂಪನಿಗಳ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಫೀಚರ್ಸ್‌ಗಳೆನು ಎಂಬುದನ್ನು ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌! ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

ಸ್ಯಾಮ್‌ಸಂಗ್ ಎಂ40

ಸ್ಯಾಮ್‌ಸಂಗ್ ಎಂ40

ಇತ್ತೀಚಿಗೆ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ ಎಂ40 ಸ್ಮಾರ್ಟ್‌ಫೋನ್ 6.3 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್‌ 2340x1080 ಸಾಮರ್ಥ್ಯದಲ್ಲಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 SoC ಪ್ರೊಸೆಸರ್‌, 6GB RAM ಜೊತೆಗೆ 3,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಹಾಗೆಯೇ 32ಎಂಪಿ+ 5ಎಂಪಿ+ 8ಎಂಪಿ ತ್ರಿವಳಿ ಕ್ಯಾಮೆರಾ ಇದೆ. ಇದರ ಬೆಲೆಯು 19,990ರೂ.ಗಳು.

ನೋಕಿಯಾ 8.1

ನೋಕಿಯಾ 8.1

2244x1080 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.18 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 710 SoC ಇದ್ದು, 12ಎಂಪಿ + 13ಎಂಪಿಯ ಡ್ಯುಯಲ್‌ ಕ್ಯಾಮೆರಾ ಹೊಂದಿದೆ. ಜೊತೆಗೆ 3,500mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನಿನ 4GB RAM + 64GB ವೇರಿಯಂಟ್ ಬೆಲೆ 19,999ರೂ ಮತ್ತು 6GB RAM + 128GB ವೇರಿಯಂಟ್ ಬೆಲೆಯು 22,999ರೂ.ಗಳು ಆಗಿದೆ.

ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

ಶಿಯೋಮಿ ನೋಟ್ 7 ಪ್ರೊ

ಶಿಯೋಮಿ ನೋಟ್ 7 ಪ್ರೊ

ಈ ಸ್ಮಾರ್ಟ್‌ಫೋನ್ ಹಿಂಬದಿ 48ಎಂಪಿ + 5ಎಂಪಿ ಡ್ಯುಯಲ್‌ ಕ್ಯಾಮೆರಾ ಹೊಂದಿದ್ದು, 2340x1080 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.3 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಸ್ನ್ಯಾಪ್‌ಡ್ರಾಗನ್ 675 SoC ಪ್ರೊಸೆಸರ್‌ ಶಕ್ತಿ ಇದ್ದು, 4,000mAh ಬಲದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಎರಡು ವೇರಿಯಂಟ್ ಆಯ್ಕೆ ಇದ್ದು, 4GB RAM + 64GB ವೇರಿಯಂಟ್ ಬೆಲೆಯು 13,999ರೂ.ಗಳು ಮತ್ತು 6GB RAM + 128GB ವೇರಿಯಂಟ್ ಬೆಲೆಯು 16,999ರೂ.ಗಳು ಆಗಿದೆ.

ವಿವೋ ವಿ15

ವಿವೋ ವಿ15

2340x1080 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 6.53 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್‌ P70 SoC ಪ್ರೊಸೆಸರ್‌ ಬಲದೊಂದಿಗೆ 4,000mAh ಸಾಮರ್ಥ್ಯದ ಬ್ಯಾಟರಿ ಪವರ್‌ ಅನ್ನು ಪಡೆದುಕೊಂಡಿದೆ. 12ಎಂಪಿ + 8ಎಂಪಿ + 5ಎಂಪಿ ಸಾಮರ್ಥ್ಯ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, 6GB RAM + 64GB ಸ್ಟೋರೇಜ್‌ ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಬೆಲೆಯು 19,990ರೂ.ಗಳು.

ಓದಿರಿ : ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆಗೆ! ಓದಿರಿ : ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆಗೆ!

Best Mobiles in India

English summary
Best smartphone in budget price tag: Samsung Galaxy M40 vs Xiaomi Redmi Note 7 Pro vs Nokia 8.1 vs Vivo V15. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X