ಈ ತಿಂಗಳು ಫೋನ್ ಖರೀದಿಸುವ ಪ್ಲ್ಯಾನ್‌ ಇದೆಯಾ?..ಹಾಗಿದ್ರೆ ಇಲ್ಲಿವೆ ನೋಡಿ ಬೆಸ್ಟ್ ಆಯ್ಕೆ!

|

ಸದ್ಯ ಸ್ಮಾರ್ಟ್‌ಫೋನ್ ಇಲ್ಲದೇ ಕೈಕಾಲೇ ಆಡುವುದಿಲ್ಲ ಎನ್ನವ ಮಟ್ಟಕ್ಕೆ ಬಹುತೇಕರು ಸ್ಮಾರ್ಟ್‌ಫೋನ್‌ಗಳಿಗೆ ಅಡಿಕ್ಟ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯುತ್ತಲೇ ಸಾಗಿದೆ. ದಿನೇ ದಿನೇ ನೂತನ ಸ್ಮಾರ್ಟ್‌ಫೋನ್‌ಗಳ ಪ್ರವೇಶ ಸಹ ಹೆಚ್ಚಾಗಿದೆ. ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ, ಡಿಸೈನ್ ಹಾಗೂ ಬೆಲೆ ಎಲ್ಲದರ ಲೆಕ್ಕಾಚಾರ ಮಾಡಿಯೇ ಖರೀದಿಗೆ ಮುಂದಾಗುತ್ತಾರೆ.

ತ್ರಿವಳಿ/ಕ್ವಾಡ್‌ ಕ್ಯಾಮೆರಾ

ಪ್ರಸ್ತುತ ಮಾರುಕಟ್ಟೆಗೆ ಬಜೆಟ್‌ ಬೆಲೆಯಿಂದ ದುಬಾರಿ ಬೆಲೆಯವರೆಗೂ ಅನೇಕ ನೂತನ ಸ್ಮಾರ್ಟ್‌ಫೋನ್ ಎಂಟ್ರ ಕೊಡುತ್ತಲೇ ಇವೆ. ಅವುಗಳಲ್ಲಿ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು ತ್ರಿವಳಿ/ಕ್ವಾಡ್‌ ಕ್ಯಾಮೆರಾ, ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್‌ ಫೀಚರ್ಸ್‌ಗಳಿಂದ ತುಂಬಿಕೊಂಡಿರುತ್ತವೆ. ಫೋನ್ ಖರೀದಿಸುವಾಗ ಗ್ರಾಹಕರು ಸಹ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳತ್ತ ಹೆಚ್ಚು ವಾಲುತ್ತಾರೆ. ಹಾಗೇನಾದರೂ ಈ ತಿಂಗಳು ನೀವು 15,000ರೂ ಪ್ರೈಸ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವುದಿದ್ದರೇ ಇಲ್ಲಿವೆ ನೋಡಿ ಕೆಲವು ಬೆಸ್ಟ್ ಆಯ್ಕೆಗಳು. ಮುಂದೆ ಓದಿರಿ.

'ರೆಡ್ಮಿ ನೋಟ್ 8 ಪ್ರೊ'

'ರೆಡ್ಮಿ ನೋಟ್ 8 ಪ್ರೊ'

ಜನಪ್ರಿಯ ಶಿಯೋಮಿಯ ಬೆಸ್ಟ್‌ ಬಜೆಟ್ ಫೋನ್‌ ಎಂದೇ ಬಿಂಬಿತವಾಗಿರುವ 'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮೀಡಿಯಾ ಟೆಕ್‌ ಹಿಲಿಯೊ G90T ಪ್ರೊಸೆಸರ್, ಆಂಡ್ರಾಯ್ಡ್ 9 ಓಎಸ್‌, 4500mAh ಬ್ಯಾಟರಿ ಹಾಗೂ 18W ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಫೀಚರ್ ಪಡೆದಿದೆ. 6GB+64GB ಸ್ಟೋರೇಜ್‌ನ ಬೇಸ್‌ ಬೆಲೆಯು 14,999ರೂ.ಗಳಾಗಿದೆ.

ರಿಯಲ್‌ ಮಿ 5 ಪ್ರೊ

ರಿಯಲ್‌ ಮಿ 5 ಪ್ರೊ

ಇತ್ತೀಚಿಗಿನ ಹೊಸ ಫೋನ್‌ಗಳಿಂದ 'ರಿಯಲ್‌ ಮಿ' ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಪಡೆದಿದೆ. ಸಂಸ್ಥೆಯ ರಿಯಲ್‌ ಮಿ 5 ಪ್ರೊ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 712 ಪ್ರೊಸೆಸರ್‌ ಹೊಂದಿದ್ದು, 4035mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಈ ಫೋನ್‌ ಸಹ ಕ್ವಾಡ್‌ ಕ್ಯಾಮೆರಾ ಆಯ್ಕೆ ಹೊಂದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದೆ. ಈ ಫೋನಿನ ಬೇಸ್‌ ವೇರಿಯಂಟ್‌ 13,999ರೂ.ಗಳಿಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30s

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ M30s

ಸ್ಯಾಮ್‌ಸಂಗ್ ಕಂಪನಿಯ ಇತ್ತೀಚಿನ ಗ್ಯಾಲ್ಯಾಕ್ಸಿ M30s ಸ್ಮಾರ್ಟ್‌ಫೋನ್ ಬಜೆಟ್‌ ಬೆಲೆಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹಿಲಿಯೊ G90T ಪ್ರೊಸೆಸರ್‌ ಜೊತೆಗೆ 6000mAh ಬ್ಯಾಟರಿ ಲೈಫ್‌ ಅನ್ನು ಪಡೆದಿರುವುದು ಪ್ಲಸ್‌ ಪಾಯಿಂಟ್ ಆಗಿದೆ. 15w ಫಾಸ್ಟ್‌ ಚಾರ್ಜಿಂಗ ಸೌಲಭ್ಯವನ್ನು ಪಡೆದಿದ್ದು, ತ್ರಿವಳಿ ಕ್ಯಾಮೆರಾ ಅಟ್ರ್ಯಾಕ್ಷನ್ ಹೊಂದಿದೆ. ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಬೇಸ್‌ ವೇರಿಯಂಟ್‌ ಬೆಲೆಯು 13,999ರೂ.ಆಗಿದೆ.

ಮೊಟೊರೊಲಾ ಒನ್‌ ವಿಷನ್

ಮೊಟೊರೊಲಾ ಒನ್‌ ವಿಷನ್

ಮೊಟೊರೊಲಾ ಸಂಸ್ಥೆಯು ಇತ್ತೀಚಿಗೆ ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಮೊಟೊರೊಲಾ ಒನ್‌ ವಿಷನ್ ಸ್ಮಾರ್ಟ್‌ಫೋನ್ 15 ಸಾವಿರ ಬೆಲೆಯೊಳಗೆ ಗಮನಸೆಳೆದಿದೆ. ಈ ಫೋನ್ ಸ್ಯಾಮ್‌ಸಂಗ್ Exynos 9609 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಕಾರ್ಯನಿರ್ವಹಿಸುತ್ತದೆ. ಡಿಸ್‌ಪ್ಲೇಯಲ್ಲಿ ಪಂಚ್‌ಹೋಲ್ ಕಟ್‌ಔಟ್‌ ರಚನೆ ಇದೆ. ಆರಂಭಿಕ ಬೆಲೆಯು 14,999ರೂ.ಗಳಾಗಿವೆ.

Most Read Articles
Best Mobiles in India

English summary
These best android phones under Rs. 15000 are not just well-priced, but some of them can even perform as good as flagship smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X