ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಬ್ಯಾಟರಿ ಬ್ಯಾಕ್ ಅಪ್ ಇರುವ ಟ್ಯಾಬ್ಲೆಟ್ಸ್ ಗಳು

By Gizbot B
|

ದೊಡ್ಡ ಸ್ಕ್ರೀನ್ ಇರುವ, ದೊಡ್ಡ ಹಾರ್ಡ್ ವೇರ್ ವೈಶಿಷ್ಟ್ಯತೆಗಳಿರುವ ಮತ್ತು ದೊಡ್ಡ ಬ್ಯಾಟರಿ ಬ್ಯಾಕ್ ಅಪ್ ಇರುವ ಹೊಸ ಟ್ಯಾಬ್ಲೆಟ್ ನ್ನು ಖರೀದಿಸಬೇಕು ಎಂದುಕೊಳ್ಳುತ್ತಿದ್ದೀರಾ?ಹಾಗಾದ್ರೆ ನೀವು ಈ ಲೇಖನವನ್ನು ಓದಲೇಬೇಕು. ನಾವಿಲ್ಲಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಬ್ಯಾಟರಿ ಬ್ಯಾಕ್ ಅಪ್ ಇರುವ ಕೆಲವು ಟ್ಯಾಬ್ಲೆಟ್ ಗಳನ್ನು ಪಟ್ಟಿ ಮಾಡಿದ್ದೇವೆ.

ಬ್ಯಾಟರಿ ಬ್ಯಾಕ್ ಅಪ್

ಗರಿಷ್ಟ ಪ್ರದರ್ಶನ ಇರುವ, ಗೇಮ್ ಆಡಲು ಹೇಳಿ ಮಾಡಿಸಿದ ಟ್ಯಾಬ್ಲೆಟ್ ಗಳು ಇವಾಗಿವೆ. ಮಲ್ಟಿ ಮೀಡಿಯಾ ಕಂಟೆಂಟ್ ಗಳನ್ನು ಇವು ಹೊಂದಿವೆ. ಇವು ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಬ್ಯಾಟರಿ ಬ್ಯಾಕ್ ಅಪ್ ಇರುವ ಟ್ಯಾಬ್ಲೆಟ್ ಗಳಾಗಿವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 10.1 2019

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 10.1 2019

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 10.1 2019 ನಿಮಗೆ 19,990 ರುಪಾಯಿ ಬೆಲೆಗೆ ಸಿಗುತ್ತದೆ. ಇದರಲ್ಲಿ ಅತ್ಯುತ್ತಮ ಸ್ಪೆಸಿಫಿಕೇಷನ್ ಗಳಿವೆ. 10.1-ಇಂಚಿನ ಸ್ಕ್ರೀನ್ ಜೊತೆಗೆ FHD ರೆಸಲ್ಯೂಷನ್. ಕೇವಲ ಅಷ್ಟು ಮಾತ್ರವಲ್ಲ, ಇದರಲ್ಲಿ ದೊಡ್ಡದಾದ 6,000 mAh ನ ಬ್ಯಾಟರಿ ವ್ಯವಸ್ಥೆ ಇರುತ್ತದೆ. ಇದು ಒಮ್ಮೆ ಚಾರ್ಜ್ ಮಾಡಿದರೆ 12 ತಾಸುಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 8.0 2019

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 8.0 2019

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 8.0 2019 ಟ್ಯಾಬ್ ಎ10.1 ಇಂಚಿನ ಸಣ್ಣ ವರ್ಷನ್ ಆಗಿದ್ದು ಅದಕ್ಕಿಂತ ಸ್ವಲ್ಪ ಸಣ್ಣ ಡಿಸ್ಪ್ಲೇ ಜೊತೆಗೆ 720p ಸ್ಕ್ರೀನ್ ರೆಸಲ್ಯೂಷನ್ ನ್ನು ಹೊಂದಿದೆ. ಇದು ನಿಮಗೆ 12,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ. 5,100 mAh ನ ಬ್ಯಾಟರಿ ಲೈಫ್ ನ್ನು ಇದು ಹೊಂದಿದ್ದು 12 ತಾಸುಗಳ ಬ್ಯಾಟರಿ ಬ್ಯಾಕ್ ಅಪ್ ಸಿಗುತ್ತದೆ.

ಆಪಲ್ ಐಪ್ಯಾಡ್ 10.2

ಆಪಲ್ ಐಪ್ಯಾಡ್ 10.2

ಆಪಲ್ ಐಪ್ಯಾಡ್ 10.2 29,000 ರುಪಾಯಿ ಬೆಲೆಗೆ ಭಾರತದಲ್ಲಿ ಲಭ್ಯವಾಗುತ್ತದೆ. 10.2- ಇಂಚಿನ ಡಿಸ್ಪ್ಲೇ ಜೊತೆಗೆ QHD+ ರೆಸಲ್ಯೂಷನ್ ನ್ನು ಹೊಂದಿದೆ.ಟೆಂಪರ್ಡ್ ಗ್ಲಾಸ್ ಡಿಸೈನ್ ನ್ನು ಹೊಂದಿದೆ. ಈ ಟ್ಯಾಬ್ಲೆಟ್ 32.4 ವ್ಯಾಟ್-ಹವರ್ ನ ಬ್ಯಾಟರಿಯನ್ನು ಹೊಂದಿದೆ.ಒಂದು ಘಂಟೆ ಚಾರ್ಜ್ ಮಾಡಿದರೆ 10 ತಾಸುಗಳ ಬ್ಯಾಟರಿ ಬ್ಯಾಕ್ ಅಪ್ ನ್ನು ಇದು ನೀಡುತ್ತದೆ. ಲೈಟನಿಂಗ್ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದು.

ಐಬಾಲ್ ಐಟ್ಯಾಬ್ ಮೂವಿ ಝಡ್ ಪ್ರೋ

ಐಬಾಲ್ ಐಟ್ಯಾಬ್ ಮೂವಿ ಝಡ್ ಪ್ರೋ

ಐಬಾಲ್ ಐಟ್ಯಾಬ್ ಮೂವಿ ಝಡ್ ಪ್ರೋ ಕೈಗೆಟುಕುವ ಬೆಲೆಯ ಟ್ಯಾಬ್ಲೆಟ್ ಆಗಿದ್ದು 14,490 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು FHD ರೆಸಲ್ಯೂಷನ್ ಡಿಸ್ಪ್ಲೇ ಜೊತೆಗೆ ಕನಿಷ್ಟ ಬೆಝಲ್ ಡಿಸೈನ್ ನ್ನು ಹೊಂದಿದೆ. ಈ ಟ್ಯಾಬ್ಲೆಟ್ 7,000 mAh ನ ಬ್ಯಾಟರಿ ವ್ಯವಸ್ಥೆಯನ್ನು ಹೊಂದಿದ್ದು ಒಮ್ಮೆ ಚಾರ್ಜ್ ಮಾಡಿದರೆ 12 ತಾಸಿಗೂ ಅಧಿಕ ಸಮಯದ ಬ್ಯಾಕ್ ಅಪ್ ನ್ನು ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್6 ಎಲ್ ಟಿಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್6 ಎಲ್ ಟಿಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್6 LTE ಫ್ಲ್ಯಾಗ್ ಶಿಪ್ ಟ್ಯಾಬ್ಲೆಟ್ ಆಗಿದ್ದು 4ಜಿ ಕನೆಕ್ಟಿವಿಟಿಗೆ ಈ ಸ್ಯಾಮ್ ಸಂಗ್ ಟ್ಯಾಬ್ ಸಹಕರಿಸುತ್ತದೆ. ಇದರ ಬೆಲೆ 59,900 ರುಪಾಯಿಗಳು ಮತ್ತು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾಡೆಲ್ ನಲ್ಲಿ 7,040 mAh ನ ಬ್ಯಾಟರಿಯನ್ನು ಹೊಂದಿದೆ. ಇದು 15 ತಾಸುಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ ಮತ್ತು ಫಾಸ್ಟ್ ಚಾರ್ಜಿಂಗ್ ಗೆ ಇದು ಬೆಂಬಲ ನೀಡುತ್ತದೆ ಜೊತೆಗೆ USB- ಟೈಪ್ ಸಿ ಪೋರ್ಟ್ ನ್ನು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್5ಇ ಎಲ್ ಟಿಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್5ಇ ಎಲ್ ಟಿಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್5ಇ ಎಲ್ ಟಿಇ 39,999 ರುಪಾಯಿ ಬೆಲೆಗೆ ಸಿಗುತ್ತದೆ. ಇದು ಕೈಗೆಟುಕುವ ಬೆಲೆಯ ಸ್ಯಾಮ್ ಸಂಗ್ ನ ಹೈ-ಎಡ್ ಟ್ಯಾಬ್ಲೆಟ್ ಆಗಿದೆ. 10.5- ಇಂಚಿನ ಡಿಸ್ಪ್ಲೇ ಜೊತೆಗೆ QHD+ ರೆಸಲ್ಯೂಷನ್ ಮತ್ತು 14.5 ತಾಸುಗಳ ಬ್ಯಾಟರಿ ಬ್ಯಾಕ್ ಅಪ್ ನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸಿಗುತ್ತದೆ.

Most Read Articles
Best Mobiles in India

Read more about:
English summary
Best Tablets With Best Battery Backup To Buy In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X