2018 ರಲ್ಲಿ ಬಿಡುಗಡೆಗೊಂಡ ಟಾಪ್ 15 ಸ್ಮಾರ್ಟ್ ಫೋನ್ ಗಳು

|

2018 ಮುಗಿಯುತ್ತಾ ಬಂತು. ಈ ವರ್ಷ ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಅಭಿವೃದ್ಧಿಗಳ ನಡೆದಿದೆ. ಹೊಸ ಹೊಸ ಆವಿಷ್ಕಾರಗಳಾಗಿದೆ. ಕೆಲವು ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಿದರೆ ಮತ್ತೂ ಕೆಲವು ಯಶಸ್ಸು ಕಾಣದೆ ಮೂಲೆ ಸೇರಿದೆ. ಹಾಗಾದ್ರೆ ಇದೀಗ 2018 ನ್ನು ಮತ್ತೆ ಮೆಲುಕು ಹಾಕುವ ಸಮಯ. ಈ ವರ್ಷ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಫೋನ್ ಗಳು ಯಾವುದು .

2018 ರಲ್ಲಿ ಬಿಡುಗಡೆಗೊಂಡ ಟಾಪ್ 15 ಸ್ಮಾರ್ಟ್ ಫೋನ್ ಗಳು

ಯಾವ ಫೋನ್ ಗಳಿಗೆ ಗ್ರಾಹಕ ತನ್ನ ಇಷ್ಟದ ಮುದ್ರೆಯನ್ನು ಒತ್ತಿದ್ದಾನೆ ಎಂದು ನೋಡುತ್ತಾ ಹೋದರೆ ಹಲವು ಫೋನ್ ಗಳು ಲಭ್ಯವಾಗುತ್ತದೆ. ಆದರೆ ನಾವು ತಿಳಿಸುತ್ತಿರುವ ಈ 15 ಸ್ಮಾರ್ಟ್ ಫೋನ್ ಗಳು ಈ ವರ್ಷ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದವು ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಹಾಗಾದ್ರೆ ಯಾವೆಲ್ಲ ಪೋನ್ ಗಳು ಈ ಬಾರಿ ಬೆಸ್ಟ್ ಅನ್ನಿಸಿಕೊಂಡವು ಎಂಬ 15 ಸ್ಮಾರ್ಟ್ ಫೋನ್ ಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ.

ಸೂಚನೆ: ಸ್ಥಾನಗಳ ಆಧಾರದಲ್ಲಿ ನಮೂದಿಸಿಲ್ಲ.ಕೇವಲ ಇಚ್ಛಿಕವಾಗಿ ಆಯ್ಕೆ ಮಾಡಿ ಬರೆಯಲಾಗಿದೆ.

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (ಆರಂಭಿಕ ಬೆಲೆ Rs 1,09,900): ಇದುವರೆಗಿನ ಬೆಸ್ಟ್ ಐಫೋನ್

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (ಆರಂಭಿಕ ಬೆಲೆ Rs 1,09,900): ಇದುವರೆಗಿನ ಬೆಸ್ಟ್ ಐಫೋನ್

ದೊಡ್ಡ ಸ್ಕ್ರೀನ್, ದೊಡ್ಡ ಬೆಲೆ. ಈ ವರ್ಷದ ಆಪಲ್ ನ ಬೆಸ್ಟ್ ಐಫೋನ್.6.5 ಇಂಚಿನ ಡಿಸ್ಪ್ಲೇ ಹೊಂದಿದೆ. ಬ್ಯುಸಿನೆಸ್ ನಲ್ಲಿ ಬೆಸ್ಟ್ ಅನ್ನಿಸಿಕೊಂಡಿರುವ ಪ್ರೊಸೆಸರ್ ನ್ನು ಇದು ಒಳಗೊಂಡಿದೆ. ಒಂದೇ ಒಂದು ಸಮಸ್ಯೆಯೆಂದರೆ ಭಾರೀ ಬೆಲೆ. A12 ಬಯೋನಿಕ್ ಚಿಪ್ ನ್ನು ಹೊಂದಿದೆ. ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದ್ದು 12-ಮೆಗಾಪಿಕ್ಸಲ್ ವೈಡ್ ಆಂಗಲ್ ಮತ್ತು ಟೆಲಿಫೋಟೋ ಕ್ಯಾಮರಾವಿದೆ. ಮುಂಭಾಗದಲ್ಲಿ 7 ಮೆಗಾಪಿಕ್ಸಲ್ ಕ್ಯಾಮರಾವಿದೆ. ಮೂರು ವಿಭಿನ್ನ ಸ್ಟೋರೇಜ್ ವೇರಿಯಂಟ್ ನಲ್ಲಿ ಲಭ್ಯವಿದೆ - 64GB (Rs 1,09,900), 256GB (1,24,900) ಮತ್ತು 512GB (Rs 1,44,900).

ಗೂಗಲ್ ಪಿಕ್ಸಲ್ 3ಎಕ್ಸ್ಎಲ್ (ಆರಂಭಿಕ ಬೆಲೆ 78,500): 2018 ರ ಬೆಸ್ಟ್ ಕ್ಯಾಮರಾ ಸ್ಮಾರ್ಟ್ ಫೋನ್

ಗೂಗಲ್ ಪಿಕ್ಸಲ್ 3ಎಕ್ಸ್ಎಲ್ (ಆರಂಭಿಕ ಬೆಲೆ 78,500): 2018 ರ ಬೆಸ್ಟ್ ಕ್ಯಾಮರಾ ಸ್ಮಾರ್ಟ್ ಫೋನ್

ಎಂದಿನಂತೆ ಈ ವರ್ಷವೂ ಕೂಡ ಗೂಗಲ್ ಪಿಕ್ಸಲ್ 3ಎಕ್ಸ್ಎಲ್ ಫೋನ್ ಬೆಸ್ಟ್ ಕ್ಯಾಮರಾ ಫೋನ್ ಎನ್ನಿಸಿಕೊಂಡಿದೆ. ಇತರೆ ಬ್ರ್ಯಾಂಡ್ ಗಳು ಎರಡು,ಮೂರು, ನಾಲ್ಕು ಕ್ಯಾಮರಾ ಗಳನ್ನು ಅಳವಡಿಸುವುದರಲ್ಲಿ ಬ್ಯುಸಿ ಇದ್ದರೆ ಪಿಕ್ಸಲ್ ಫೋನ್ ನಲ್ಲಿ ಒಂದೇ ಕ್ಯಾಮರಾವು 12.2 ಮೆಗಾಪಿಕ್ಸಲ್ ಸಾಮರ್ಥ್ಯವನ್ನುಹೊಂದಿದೆ. 6.3 ಇಂಚಿನ QHD+ OLED ಸ್ಕ್ರೀನ್, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ 4GB RAM ಮತ್ತು ಎರಡು ಸ್ಟೋರೇಜ್ ವೇರಿಯಂಟ್ ಗಳು ಈ ಫೋನಿನಲ್ಲಿ ಲಭ್ಯ -- 64GB (Rs 78,500) ಮತ್ತು 128GB (87,500).

ಒನ್ ಪ್ಲಸ್ 6ಟಿ (ಆರಂಭಿಕ ಬೆಲೆ Rs 37,999): ಎಲ್ಲಾ ವೈಶಿಷ್ಟ್ಯತೆಗಳು ಒಂದರಲ್ಲೇ ಇರುವ ಬೆಸ್ಟ್ ಸ್ಮಾರ್ಟ್ ಫೋನ್

ಒನ್ ಪ್ಲಸ್ 6ಟಿ (ಆರಂಭಿಕ ಬೆಲೆ Rs 37,999): ಎಲ್ಲಾ ವೈಶಿಷ್ಟ್ಯತೆಗಳು ಒಂದರಲ್ಲೇ ಇರುವ ಬೆಸ್ಟ್ ಸ್ಮಾರ್ಟ್ ಫೋನ್

ಉತ್ತಮ ಆಂಡ್ರಾಯ್ಡ್ ಅನುಭವ ಸಿಗಬೇಕು ಎಂದರೆ ಒನ್ ಪ್ಲಸ್ 6ಟಿ ಫೋನ್ ಖರೀದಿಸುವುದು ಬೆಸ್ಟ್. ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ಇದು ನೀಡುತ್ತದೆ. ನೂತನ ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಇದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಒಳಗೊಂಡಿರುವ ಇದು ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಮೂರು ಸ್ಟೊರೇಜ್ ವೇರಿಯಂಟ್ ಗಳು ಲಭ್ಯವಿದೆ. 6GB RAM +128 GB (Rs 37,999), 8GB RAM +128 GB (Rs 41,999) ಮತ್ತು 8GB RAM + 256GB (Rs 43,999).

ಆಪಲ್ ಐಫೋನ್ ಎಕ್ಸ್ಆರ್ (ಆರಂಭಿಕ ಬೆಲೆ Rs 76,900): ಅತ್ಯಂತ ಕಡಿಮೆ ಬೆಲೆಯ ಹೊಸ ಐಫೋನ್

ಆಪಲ್ ಐಫೋನ್ ಎಕ್ಸ್ಆರ್ (ಆರಂಭಿಕ ಬೆಲೆ Rs 76,900): ಅತ್ಯಂತ ಕಡಿಮೆ ಬೆಲೆಯ ಹೊಸ ಐಫೋನ್

ನೀವು ಅತ್ಯುತ್ತಮವಾಗಿರುವ ಪವರ್ ಫುಲ್ ಪ್ರೊಸೆಸರ್ ನ ಅನುಭವವನ್ನು ಪಡೆಯಲು ಇಚ್ಛಿಸುವುದಾದರೆ A12 ಬಯೋನಿಕ್ ನಲ್ಲಿ ಐಫೋನ್ ಎಕ್ಸ್ ಎಸ್ ಮತ್ತು ಐಫೋನ್ ಎಕ್ಸ್ ಎಸ್ ಮ್ಯಾಕ್ ನಿಮಗೆ ಸ್ವಲ್ಪ ದುಬಾರಿಯಾಗುತ್ತದೆ ಆದರೆ ಐಫೋನ್ ಎಕ್ಸ್ ಆರ್ ನ್ನು ಖರೀದಿಸಬಹುದು.ಹಿಂಭಾಗದಲ್ಲಿ ಒಂದೇ ಕ್ಯಾಮರಾ ಮತ್ತು ಎಲ್ ಸಿಡಿ ಡಿಸ್ಪ್ಲೇಯನ್ನು ಇದು ಹೊಂದಿದೆ. ಆರು ಕಲರ್ ಗಳ ವೇರಿಯಂಟ್ ನಿಮಗೆ ಲಭ್ಯವಾಗುತ್ತದೆ- ಕೆಂಪು, ಹಳದಿ, ಬಿಳಿ, ಕೋರಲ್, ಕಪ್ಪು ಮತ್ತು ನೀಲಿ. ಮೂರು ಸ್ಟೋರೇಜ್ ಆಯ್ಕೆಗಳು ಲಭ್ಯವಾಗುತ್ತದೆ. 64GB (Rs 76,900), 128GB (Rs 81,900) ಮತ್ತು 256GB (Rs 91,900).

ಹುವಾಯಿ ಪಿ20 ಪ್ರೋ (Rs 59,999): ವಿಶ್ವದ ಮೊದಲ ಟ್ರಿಪಲ್ ಕ್ಯಾಮರಾ ವೈಶಿಷ್ಟ್ಯತೆಯನ್ನು ಒಳಗೊಂಡ ಫೋನ್

ಹುವಾಯಿ ಪಿ20 ಪ್ರೋ (Rs 59,999): ವಿಶ್ವದ ಮೊದಲ ಟ್ರಿಪಲ್ ಕ್ಯಾಮರಾ ವೈಶಿಷ್ಟ್ಯತೆಯನ್ನು ಒಳಗೊಂಡ ಫೋನ್

ಹಿಂಭಾಗದಲ್ಲಿ ಮೂರು ಕ್ಯಾಮರಾವನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ. 20MP ಮೊನೊಕ್ರೋಮ್ ಸೆನ್ಸರ್,40MP RGB ಸೆನ್ಸರ್ ಮತ್ತು 8MP ಟೆಲಿಫೋಟೋ ಸೆನ್ಸರ್ ನ್ನು ಇದು ಹೊಂದಿದೆ. 6.1-ಇಂಚಿನ ಫುಲ್ HD+ OLED ಡಿಸ್ಪ್ಲೇ, 24MP ಮುಂಭಾಗದ ಕ್ಯಾಮರಾ,ಆಕ್ಟಾ-ಕೋರ್ Kirin 970 ಪ್ರೊಸೆಸರ್, 6GB RAM, 128GB ಇನ್-ಬಿಲ್ಟ್ ಸ್ಟೋರೇಜ್, 4000mAh ಬ್ಯಾಟರಿಯನ್ನು ಇದು ಹೊಂದಿದ್ದು ಬೆಲೆ 59,999 ರುಪಾಯಿಗಳಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 (ಆರಂಭಿಕ ಬೆಲೆ Rs 67,900): 2018 ರ ಬೆಸ್ಟ್ ಫ್ಯಾಬ್ಲೆಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 (ಆರಂಭಿಕ ಬೆಲೆ Rs 67,900): 2018 ರ ಬೆಸ್ಟ್ ಫ್ಯಾಬ್ಲೆಟ್

ಬಹಳ ಅಭಿವೃದ್ಧಿಗೊಳಿಸಿದ ಎಸ್-ಪೆನ್ ಜೊತೆಗೆ ಬ್ಲೂ ಟೂತ್ ಬೆಂಬಲಿತ ಫೋನ್ ಇದಾಗಿದೆ. ಎಸ್-ಪೆನ್ ಸಹಾಯದಿಂದ ಬಳಕೆದಾರರು ಪಿಕ್ಚರ್ ಕ್ಲಿಕ್ಕಿಸಬಹುದು, ಆಪ್ಸ್ ಆಕ್ಸಿಸ್ ಮಾಡಬಹುದು ಮತ್ತು ಪ್ರಸೆಂಟೇಷನ್ ಮಾಡಬಹುದು ಜೊತೆಗೆ ಇನ್ನೂ ಹಲವು ಕೆಲಸಗಳಿಗೆ ಬಳಕೆ ಮಾಡಲು ಸಹಾಯಕವಾಗಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಹೊಂದಿದೆ. 4000mAh ಬ್ಯಾಟರಿ, 512GB ವರೆಗಿನ ಇಂಟರ್ನಲ್ ಸ್ಟೋರೇಜ್, ವಾಟರ್ ಕಾರ್ಬನ್ ಕೂಲಿಂಗ್ ಸಿಸ್ಟಮ್ ನ್ನು ಇದು ಒಳಗೊಂಡಿದೆ. ಎರಡು ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. 128GB (Rs 67,900) ಮತ್ತು 512GB (84,900).

ಶಿಯೋಮಿ ಪೋಕೋ ಎಫ್1 (ಆರಂಭಿಕ ಬೆಲೆ Rs 19,999): 20,000 ರುಪಾಯಿ ಒಳಗೆ ಲಭ್ಯವಾಗುವ ಮೋಸ್ಟ್ ಪವರ್ ಫುಲ್ ಸ್ಮಾರ್ಟ್ ಪೋನ್

ಶಿಯೋಮಿ ಪೋಕೋ ಎಫ್1 (ಆರಂಭಿಕ ಬೆಲೆ Rs 19,999): 20,000 ರುಪಾಯಿ ಒಳಗೆ ಲಭ್ಯವಾಗುವ ಮೋಸ್ಟ್ ಪವರ್ ಫುಲ್ ಸ್ಮಾರ್ಟ್ ಪೋನ್

ಫ್ಲ್ಯಾಗ್ ಶಿಪ್ ಪ್ರೊಸೆಸರ್ ನ್ನು ಇದು ಆಫರ್ ಮಾಡುತ್ತದೆ ಅದೇ ಕಾರಣಕ್ಕೆ ಪೋಕೋ ಎಫ್ 1 ಕೂಡ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಇದೆ. 6.18-ಇಂಚಿನ FHD+ ಸ್ಕ್ರೀನ್, 4000mAh ಬ್ಯಾಟರಿ, 12MP+5MP ಹಿಂಭಾಗದ ಕ್ಯಾಮರಾ, 20MP ಮುಂಭಾಗದ ಕ್ಯಾಮರಾ ಸೇರಿದಂತೆ ಇನ್ನು ಹಲವು ವೈಶಿಷ್ಟ್ಯತೆಗಳಿಗೆ. ಮೂರು ವಿಭಿನ್ನ ಸ್ಟೋರೇಜ್ ಆಯ್ಕೆಗಳು ಇದರಲ್ಲಿ ಲಭ್ಯವಾಗುತ್ತದೆ. 6GB+128GB (Rs 19,999), 6GB+64GB (Rs 22,999), 8GB+256GB (Rs 27,999).

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ (ಆರಂಭಿಕ ಬೆಲೆ Rs 64,900): ವೇರಿಯೇಬಲ್ ಅಪರ್ಚರ್ ನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ (ಆರಂಭಿಕ ಬೆಲೆ Rs 64,900): ವೇರಿಯೇಬಲ್ ಅಪರ್ಚರ್ ನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್

ಹ್ಯೂಮನ್ ಐ ಪ್ರಭಾವಿತ ವೇರಿಯೇಬಲ್ ಅಪರ್ಚರ್ ನ್ನು ಇದು ಹೊಂದಿದೆ. F1.5 ಮತ್ತು F2.4 ಮೋಡ್ ಗಳಿದೆ. ಇದು ವಿಭಿನ್ನ ಬೆಳಕಿನ ಕಂಡೀಷನ್ ನಲ್ಲಿ ಸ್ವಯಂಚಾಲಿತವಾಗಿ ಸ್ವಿಚ್ ಆಗುತ್ತದೆ. ಒಂದು ವೇಳೆ ಕತ್ತಲೆ ಇದ್ದಲ್ಲಿ ಲೆನ್ಸ್ F1.5 ಮೋಡ್ ತೆರೆದುಕೊಳ್ಳುತ್ತದೆ ಮತ್ತು ಒಂದು ವೇಳೆ ಬೆಳಕಿದ್ದಲ್ಲಿ ಲೆನ್ಸ್ F2.4 ಮೋಡ್ ನಲ್ಲಿ ಕೆಲಸ ಮಾಡುತ್ತದೆ.ಇದು 5.8-ಇಂಚಿನ QHD+ ಸ್ಕ್ರೀನ್, 8MP ಸೆನ್ಸರ್, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್, 3,500mAh ಬ್ಯಾಟರಿಯನ್ನು ಇದು ಒಳಗೊಂಡಿದೆ. ಇದು ಮೂರು ವಿಭಿನ್ನ ಸ್ಟೋರೇಜ್ ಅವಕಾಶಗಳನ್ನು ಹೊಂದಿದೆ. 64GB (Rs 64,900), 128GB (Rs 68,900) ಮತ್ತು 256GB (Rs 72,900).

ವಿವೋ ನೆಕ್ಸ್ (Rs 44,990): ಪಾಪ್ ಅಪ್ ಮುಂಭಾಗದ ಕ್ಯಾಮರಾವನ್ನು ಅಳವಡಿಸಲಾಗಿದೆ.

ವಿವೋ ನೆಕ್ಸ್ (Rs 44,990): ಪಾಪ್ ಅಪ್ ಮುಂಭಾಗದ ಕ್ಯಾಮರಾವನ್ನು ಅಳವಡಿಸಲಾಗಿದೆ.

ಬಜೆಟ್ ಮತ್ತು ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಲ್ಲಿರುವ ನಾಚ್ ನ್ನು ಹೊರತುಪಡಿಸಿ ಪಾಪ್ ಅಪ್ ಸ್ಲೈಡರ್ ನ್ನು ಕ್ಯಾಮರಾದಲ್ಲಿ ಬಳಸಿ ವಿವೋ ನೆಕ್ಸ್ ಅತ್ಯುತ್ತಮ ಎನ್ನಿಸಿಕೊಂಡಿದೆ. ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್, 4000mAh ಬ್ಯಾಟರಿ ಮತ್ತು 6.59-ಇಂಚಿನ FHD+ ಡಿಸ್ಪ್ಲೇ ಇದೆ, 128GB ಸ್ಟೋರೇಜ್ ಮತ್ತು 8GB RAM ಇದೆ. ಒಂದೇ ಒಂದು ಸ್ಟೋರೇಜ್ ವೇರಿಯಂಟ್ ಇದ್ದು ಅದರ ಬೆಲೆ 44,990 ರುಪಾಯಿಗಳಾಗಿರುತ್ತದೆ.

ಆಸೂಸ್ ROG ಫೋನ್ (Rs 69,999): ವಿಶ್ವದ ಮೋಸ್ಟ್- ಪವರ್ ಫುಲ್ ಗೇಮಿಂಗ್ ಸ್ಮಾರ್ಟ್ ಫೋನ್

ಆಸೂಸ್ ROG ಫೋನ್ (Rs 69,999): ವಿಶ್ವದ ಮೋಸ್ಟ್- ಪವರ್ ಫುಲ್ ಗೇಮಿಂಗ್ ಸ್ಮಾರ್ಟ್ ಫೋನ್

ಮೊಬೈಲ್ ಗೇಮಿಂಗ್ ಭಾರತದಲ್ಲಿ ಪ್ರಸಿದ್ಧಿಯಾಗಿದೆ.ಅದು ಕೂಡ ಗೇಮಿಂಗ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಕಾಲಿಟ್ಟ ಘಳಿಗೆಯಿಂದ ಇದರ ಪ್ರಸಿದ್ಧಿ ಮತ್ತಷ್ಟು ಮೇಲೇರಿದೆ. ಉತ್ತಮ ಗೇಮಿಂಗ್ ಗಾಗಿ ಆಸೂಸ್ ROG ಫೋನ್ ಗಳು ಎಲ್ಲಾ ರೀತಿಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಉತ್ತಮ AMOLED ಸ್ಕ್ರೀನ್, ಪವರ್ ಫುಲ್ ಆಗಿರುವ ಪ್ರದರ್ಶನ, ದೊಡ್ಡ ಬ್ಯಾಟರಿ ಮತ್ತು ಆಕ್ಸಸರಿ ಬೆಂಬಲವನ್ನು ಕೂಡ ಇದು ನೀಡುತ್ತದೆ. ಇದರ ಬೆಲೆ Rs 69,999, 6-ಇಂಚಿನ FHD+ ಡಿಸ್ಪ್ಲೇ , ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ,ಸ್ಪೆಷಲ್ ಆಗಿ ಆಪ್ಟಿಮೈಸ್ ಮಾಡಿರುವ Adreno 630 GPU ಮತ್ತು LPPDR4X 8GB RAM ನ್ನು ಇಗು ಒಳಗೊಂಡಿದೆ.

ಎಲ್ ಜಿ ಜಿ7+ ThinQ (Rs 39,990): 2018 ರಲ್ಲಿ ಉತ್ತಮ ಆಡಿಯೋಅನುಭವ ನೀಡುವ ಬೆಸ್ಟ್ ಸ್ಮಾರ್ಟ್ ಫೋನ್

ಎಲ್ ಜಿ ಜಿ7+ ThinQ (Rs 39,990): 2018 ರಲ್ಲಿ ಉತ್ತಮ ಆಡಿಯೋಅನುಭವ ನೀಡುವ ಬೆಸ್ಟ್ ಸ್ಮಾರ್ಟ್ ಫೋನ್

ಎಂಪಿ3 ಪ್ಲೇಯರ್ ಗಳು ಇತಿಹಾಸದ ವಸ್ತುಗಳಾಗಿ ಮಾರ್ಪಟ್ಟಿದೆ. ಹೌದು ಇದೀಗ ಸ್ಮಾರ್ಟ್ ಫೋನ್ ನಲ್ಲಿ ಉತ್ತಮ ಆಡಿಯೋ ಕ್ವಾಲಿಟಿಯನ್ನು ಗ್ರಾಹಕರು ಬಯಸುತ್ತಿರುವ ಸಮಯ ಮತ್ತು ಅದು ಗ್ರಾಹಕರಿಗೆ 2018 ರ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಾಗಿದೆ . ಅದರಲ್ಲೂ ಈ ವಿಚಾರದಲ್ಲಿ ಎಲ್ ಜಿ ನಿಮಗೆ ನಿರಾಸೆಯನ್ನು ಮಾಡುವುದಿಲ್ಲ. ಇದು ಬೂಮ್ ಬಾಕ್ಸ್ ಸ್ಪೀಕರ್ ನ್ನು ಒಳಗೊಂಡಿದ್ದು ಮಿನಿ ಸ್ಪೀಕರ್ ನಂತೆ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ Hi-Fi ಕ್ವಾಡ್ DAC ಆಡಿಯೋ ತಂತ್ರಜ್ಞಾನವಿದೆ. ಇತರೆ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ LG G7+ ThinQ ನಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಇದ್ದು 6GB RAM, 3000mAh ಬ್ಯಾಟರಿ ಮತ್ತು 6.1-ಇಂಚಿನ QHD+ ಫುಲ್ ವಿಷನ್ ಡಿಸ್ಪ್ಲೇಯನ್ನು ಇದು ಒಳಗೊಂಡಿದೆ. ಇದರ ಬೆಲೆ Rs 39,990.

ನೋಕಿಯಾ 6.1ಪ್ಲಸ್ (Rs 15,999): ಬೆಸ್ಟ್ ಬಡ್ಜೆಟ್ ಸ್ಮಾರ್ಟ್ ಫೋನ್

ನೋಕಿಯಾ 6.1ಪ್ಲಸ್ (Rs 15,999): ಬೆಸ್ಟ್ ಬಡ್ಜೆಟ್ ಸ್ಮಾರ್ಟ್ ಫೋನ್

ನೋಕಿಯಾ 6.1 ಪ್ಲಸ್ ನಲ್ಲಿ 19:9 ಅನುಪಾತದ ಸ್ಕ್ರೀನ್ ಇದೆ. ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್, ಉತ್ತಮ ಕ್ಯಾಮರಾಗಳು, ಉತ್ತಮ ಬ್ಯಾಟರಿ ಲೈಫ್ ಮತ್ತು ಆಂಡ್ರಾಯ್ಡ್ 9.0 ಪೈ ಬೆಂಬಲ ಹಾಗೂ ಉತ್ತಮ ಬೆಲೆಯಲ್ಲಿ ಲಭ್ಯವಾಗುವ ಬೆಸ್ಟ್ ಫೋನ್ ಎಂದೆನಿಸಿಕೊಂಡಿದೆ. ನೋಕಿಯಾ 6.1 ಪ್ಲಸ್ ನಲ್ಲಿ 5.5-ಇಂಚಿನ ಫುಲ್ HD ಡಿಸ್ಪ್ಲೇ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 630 ಪ್ರೊಸೆಸರ್ ನ್ನು ಹೊಂದಿದೆ. ನೋಕಿಯಾ 6.1 ಪ್ಲಸ್ ನಲ್ಲಿ 3060mAh ಬ್ಯಾಟರಿ ಮತ್ತು 16MP (f/2.0 aperture) + 5MP (f/2.4 aperture) ಹಿಂಭಾಗದ ಕ್ಯಾಮರಾವಿದ್ದು LED ಫ್ಲ್ಯಾಶ್ ಹೊಂದಿದೆ. ಇದರಲ್ಲಿ ಒಂದೇ ಒಂದು ಸ್ಟೋರೇಜ್ ವ್ಯವಸ್ಥೆಯಿದ್ದು 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆ ಇದೆ ಮತ್ತು ಇದರ ಬೆಲೆ Rs 15,999.

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 (ಆರಂಭಿಕ ಬೆಲೆ Rs 12,999): ಬೆಸ್ಟ್ ಬ್ಯಾಟರಿ ಬಡ್ಜೆಟ್ ಸ್ಮಾರ್ಟ್ ಫೋನ್ 2018

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2 (ಆರಂಭಿಕ ಬೆಲೆ Rs 12,999): ಬೆಸ್ಟ್ ಬ್ಯಾಟರಿ ಬಡ್ಜೆಟ್ ಸ್ಮಾರ್ಟ್ ಫೋನ್ 2018

ಅತಿಯಾಗಿ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುವವರು ಪದೇ ಪದೇ ಸ್ಮಾರ್ಟ್ ಫೋನ್ ನ್ನು ಚಾರ್ಜ್ ಮಾಡುವುದಕ್ಕೆ ಇಚ್ಛಿಸುವುದಿಲ್ಲ. ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ2' ನಲ್ಲಿ 5000mAh ನ ಬ್ಯಾಟರಿ ಸೌಲಭ್ಯವಿದ್ದು ಈ ಸಮಸ್ಯೆಯನ್ನು ನಿವಾರಿಸಿದೆ. ಬಳಕೆದಾರರಿಗೆ ಸ್ಟಾಕ್ ಆಂಡ್ರಾಯ್ಡ್ ಅನುಭವವವು ಲಭ್ಯವಾಗುತ್ತದೆ. 6.2-ಇಂಚಿನ ಫುಲ್ HD+ ಸ್ಕ್ರೀನ್, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್, 12MP (f/1.8 ಅಪರ್ಚರ್) + 5MP (Depth Sensor) ಹಿಂಭಾಗದ ಕ್ಯಾಮರಾ ಮತ್ತು ಇನ್ನು ಹಲವು ವೈಶಿಷ್ಟ್ಯತೆಗಳಿದೆ. ಮೂರು ವಿಭಿನ್ನ ಸ್ಟೋರೇಜ್ ವೇರಿಯಂಟ್ ಗಳು ಲಭ್ಯವಿದೆ-- 3GB RAM +3 2GB (Rs 12,999), 4GB RAM + 64GB (Rs 14,999) 6GB RAM + 64GB (Rs 16,999).

ರಿಯಲ್ ಮಿ 2 (ಆರಂಭಿಕ ಬೆಲೆ Rs 9,499): 10,000 ರುಪಾಯಿ ಒಳಗೆ ಲಭ್ಯವಾಗುವ ಬೆಸ್ಟ್ ಸ್ಮಾರ್ಟ್ ಫೋನ್

ರಿಯಲ್ ಮಿ 2 (ಆರಂಭಿಕ ಬೆಲೆ Rs 9,499): 10,000 ರುಪಾಯಿ ಒಳಗೆ ಲಭ್ಯವಾಗುವ ಬೆಸ್ಟ್ ಸ್ಮಾರ್ಟ್ ಫೋನ್

10ಕೆ ಒಳಗಿನ ಬೆಲೆಯಲ್ಲಿ ಬಿಡುಗಡೆಗೊಂಡ ಮೊದಲ ನಾಚ್ ಫೋನ್ ಇದಾಗಿರುವುದರಿಂದಾಗಿ ರಿಯಲ್ ಮಿಯನ್ನು ಬೆಸ್ಟ್ ಫೋನ್ ಎಂಬ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಮಿಡ್-ರೇಂಜ್ ಫೋನ್ ಗಳು ನೀಡುವ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಈ ಫೋನ್ ನಲ್ಲಿ ಪಡೆಯಬಹುದು. 4230mAh ಬ್ಯಾಟರಿಯನ್ನು ಹೊಂದಿದೆ. 6.2-ಇಂಚಿನ ಸ್ಕ್ರೀನ್, 13MP+2MP ಹಿಂಭಾಗದ ಕ್ಯಾಮರಾಗಳು, 8MP ಮುಂಭಾಗದ ಕ್ಯಾಮರಾ, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಇತ್ಯಾದಿಗಳಿದೆ. ಎರಡು ಸ್ಟೋರೇಜ್ ವೇರಿಯಂಟ್ ಗಳು ಲಭ್ಯವಿದೆ -3GB RAM +32GB (Rs 9,499) ಮತ್ತು 4GB + 64GB (Rs 10,990).

ಶಿಯೋಮಿ ರೆಡ್ಮಿ ನೋಟ್ 5 ಪ್ರೋ 5 (ಆರಂಭಿಕ ಬೆಲೆ Rs 13,999): ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್

ಶಿಯೋಮಿ ರೆಡ್ಮಿ ನೋಟ್ 5 ಪ್ರೋ 5 (ಆರಂಭಿಕ ಬೆಲೆ Rs 13,999): ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್

ಮಾರುಕಟ್ಟೆಯ ಅಧ್ಯಯನ ಸಂಸ್ಥೆ ಐಡಿಸಿ ಪ್ರಕಾರ ಶಿಯೋಮಿ ರೆಡ್ಮಿ ನೋಟ್ 5 ಪ್ರೋ 20,000 ರುಪಾಯಿ ಒಳಗಿನ ಸ್ಮಾರ್ಟ್ ಫೋನ್ ಗಳಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗಿರುವ ಫೋನ್ ಆಗಿದೆ. ಇದರಲ್ಲಿ 5.99-ಇಂಚಿನ ಸ್ಕ್ರೀನ್ ಜೊತೆಗೆ FHD+ ರೆಸಲ್ಯೂಷನ್, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ನ್ನು ಹೊಂದಿದೆ.4000mAh ಬ್ಯಾಟರಿ, ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ 12MP+5MP RGB ಸೆನ್ಸರ್, 20MP ಮುಂಭಾಗದ ಕ್ಯಾಮರಾ ಮತ್ತು ಇತ್ಯಾದಿ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಎರಡು ವಿಭಿನ್ನ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. 4GB+64GB (Rs 13,999) ಮತ್ತು 6GB+64GB (Rs 15,999).

Best Mobiles in India

English summary
Best of the best: 15 top smartphones launched in 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X