Subscribe to Gizbot

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಟ್ರೋಜನ್‌ ಎಸ್‌ಎಂಎಸ್‌ ಹಾವಳಿ

Posted By:

ಕಂಪ್ಯೂಟರ್‌ಗೆ ಟ್ರೋಜನ್‌ಗಳನ್ನು ಬಿಟ್ಟು ಮಾಹಿತಿ ಕದಿಯುವುದು ನೀವು ತಿಳಿದಿರಬಹುದು. ಈಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಹ್ಯಾಕರ್‌ಗಳು ಮಾಹಿತಿ ಕದಿಯಲು ಆರಂಭಿಸಿದ್ದು,ಟ್ರೋಜನ್‌ಗಳಿರುವ ಎಸ್‌ಎಂಎಸ್‌ ಸೃಷ್ಟಿಸಿ ಬಳಕೆದಾರರ ಮಾಹಿತಿ ಕದಿಯಲು ಆರಂಭಿಸಿದ್ದಾರೆ.

ಆಂಟಿವೈರಸ್‌ ತಯಾರಕ ಕಂಪೆನಿ ಕ್ಯಾಸ್ಪರಸ್ಕಿ ಈ ಹೊಸ ಟ್ರೋಜನ್‌ನ್ನು ಪತ್ತೆ ಹಚ್ಚಿದ್ದು ರಷ್ಯಾ,ಉಕ್ರೇನ್‌,ಉಜ್ಬೇಕಿಸ್ತಾನ್,ಕಝಾಕಿಸ್ತಾನ್‌ದ ಆಂಡ್ರಾಯ್ಡ್‌ ಬಳಕೆದಾರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಟ್ರೋಜನ್‌ ಎಸ್‌ಎಂಎಸ್‌ ಹಾವಳಿ

ಟ್ರೋಜನ್‌ ಮೆಸೇಜ್‌ ಹೀಗೆ ಬರುತ್ತದೆ
ಎಲ್ಲಿಂದಲೋ ಒಂದು ಒಂದು ಮೆಸೇಜ್‌ ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ಬರುತ್ತದೆ. ಈ ಮೆಸೇಜ್‌ನಲ್ಲಿ ಕೇವಲ ಮೆಸೇಜ್‌ ಮಾತ್ರವಲ್ಲದೆ ಕೆಲವೊಂದು ಲಿಂಕ್‌,ಜಾಹೀರಾತುಗಳಿರುತ್ತದೆ.ಈ ಮೆಸೇಜ್‌‌ನ ಕೊನೆಯಲ್ಲಿ ಬಳಕೆದಾರನ ಹತ್ತಿರ ಮತ್ತೊಮ್ಮೆ ಈ ಮೆಸೇಜ್‌ ಓದಬೇಕಾ?(reload a previously read message?) ಎಂದು ಕೇಳುತ್ತದೆ.ಈ ಸಂದರ್ಭದಲ್ಲಿ ಬಳಕೆದಾರ ಆ ರೀಲೋಡ್‌ ಲಿಂಕ್‌ನ್ನುಆರಿಸಿದ್ದಲ್ಲಿ ಆ ಮೆಸೇಜ್‌ನಲ್ಲಿರುವ ಟ್ರೋಜನ್‌ ಬಳಕೆದಾರನ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಆಗುತ್ತದೆ. ಡೌನ್‌ಲೋಡ್‌ ಆಗಿದ್ದೇ ತಡ ನಂತರ ಬಳಕೆದಾರನಿಗೆ ಗೊತ್ತಿಲ್ಲದಂತೆ ಅವನ ಫೋನ್‌ನಲ್ಲಿರುವ ಸಂಗ್ರಹವಾಗಿರುವ ಇತರೇ ವ್ಯಕ್ತಿಗಳ ನಂಬರ್‌ಗಳಿಗೂ ಇದೇ ರೀತಿಯ ಟ್ರೋಜನ್‌ ಎಸ್‌ಎಂಎಸ್‌ಗಳನ್ನು ಕಳುಹಿಸುತ್ತದೆ ಎಂದು ಕ್ಯಾಸ್ಪರಸ್ಕಿ ಹೇಳಿದೆ.

ನಿರಪಾಯಕಾರಿ ತಂತ್ರಾಂಶದ ಸೋಗಿನಲ್ಲಿ ಬರುವ ಕುತಂತ್ರಾಂಶಗಳು ಕಂಪ್ಯೂಟರ್ ಪ್ರಪಂಚದಲ್ಲಿ ಬೇಕಾದಷ್ಟಿದೆ. ಹೀಗಾಗಿಯೇ ಅವನ್ನು ಟ್ರೋಜನ್ ಹಾರ್ಸ್ ಅಥವಾ 'ಟ್ರೋಜನ್'ಗಳೆಂದು ಕರೆಯುತ್ತಾರೆ. ಬಳಕೆದಾರರು ಸಾಮಾನ್ಯವಾಗಿ ಟ್ರೋಜನ್ ಬಲೆಗೆ ಬೀಳುವುದು ಖೊಟ್ಟಿ ಜಾಹೀರಾತುಗಳ ಮೇಲೆ ಕ್ಲಿಕ್ಕಿಸುವ ಅಥವಾ ಸಂಶಯಾಸ್ಪದ ಇಮೇಲ್ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವ ಮೂಲಕ. ಯಾವುದೋ ಉಪಯುಕ್ತ ತಂತ್ರಾಂಶವನ್ನೋ ಫೈಲನ್ನು ಡೌನ್‌ಲೋಡ್ ಮಾಡುತ್ತಿದ್ದೇವೆ ಎಂದುಕೊಳ್ಳುವ ಅವರು ತಮಗೆ ತಿಳಿಯದಂತೆಯೇ ಕುತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ.
ಮಾಹಿತಿ: ಇಜ್ಞಾನ.ಕಾಂ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot