ಸ್ಯಾಮ್‌ಸಂಗ್ ಬಿಕ್ಸ್‌ಬಿ ವಾಯ್ಸ್ ಅಸಿಸ್ಟೆಂಟ್ ವಿಶೇಷತೆ ಏನು?

By Shwetha PS

  ಗೂಗಲ್, ಆಪಲ್, ಅಮೆಜಾನ್ ಹಾದಿಯಲ್ಲಿ ಇದೀಗ ಸ್ಯಾಮ್‌ಸಂಗ್ ಕೂಡ ತನ್ನ ಗ್ಯಾಲಕ್ಸಿ ಎಸ್8 ಸಿರೀಸ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ಎಐ ಚಾಲಿತ ವಾಯ್ಸ್ ಅಸಿಸ್ಟೆಂಟ್ ಆದ ಬಿಕ್ಸ್‌ಬಿಯನ್ನು ಸ್ಥಾಪಿಸಿದೆ. ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಮಾತ್ರವೇ ಈ ವಾಯ್ಸ್ ಅಸಿಸ್ಟೆಂಟ್ ಲಭ್ಯವಿದ್ದು ಯುಎಸ್ ಮತ್ತು ವಿಶ್ವದ ಇತರ ಭಾಗಗಳಿಗೆ ಮುಂಬರುವ ವರ್ಷಗಳಲ್ಲಿ ಕಾಲಿರಿಸಲಿದೆ.

  ಸ್ಯಾಮ್‌ಸಂಗ್ ಬಿಕ್ಸ್‌ಬಿ ವಾಯ್ಸ್ ಅಸಿಸ್ಟೆಂಟ್ ವಿಶೇಷತೆ ಏನು?

  ಇಂದಿನ ಲೇಖನದಲ್ಲಿ ಬಿಕ್ಸ್‌ಬಿಯೊಂದಿಗೆ ಇತರ ಎರಡು ವಾಯ್ಸ್ ಅಸಿಸ್ಟೆಂಟ್‌ಗಳಾದ ಗೂಗಲ್ ನೌ ಮತ್ತು ಸಿರಿಯ ನಡುವಿನ ಹೋಲಿಕೆಗಳನ್ನು ಮಾಡಲಿದ್ದು, ಭಾರತೀಯ ಬಳಕೆದಾರರಿಗೆ ಯಾವುದು ಉತ್ತಮ ಎಂಬುದನ್ನು ಅರಿತುಕೊಳ್ಳಲಿದ್ದೇವೆ.

  ಪ್ರಥಮವಾಗಿ ಗೂಗಲ್ ನೌ ಮತ್ತು ಸಿರಿ ಆದೇಶವಾದ "ಓಕೆ ಗೂಗಲ್" ಮತ್ತು "ಹೇ ಸಿರಿ" ಯ ಮೂಲಕ ಸಕ್ರಿಯಗೊಳ್ಳುತ್ತದೆ. ಆದರೆ ಬಿಕ್ಸ್‌ಬೇ ಆರಂಭವಾಗಲು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್8 ಫೋನ್‌ನ ಎಡಭಾಗದಲ್ಲಿರುವ ಡೆಡಿಕೇಟೆಡ್ ಬಟನ್ ಅನ್ನು ತ್ವರಿತವಾಗಿ ಪ್ರೆಸ್ ಮಾಡಬೇಕು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಅಪ್ಲಿಕೇಶನ್ ವೈಶಿಷ್ಟ್ಯ

  ಸ್ಯಾಮ್‌ಸಂಗ್ ಹೇಳುವಂತೆ, ಬಿಕ್ಸ್‌ಬೇ ಎಸ್‌ಡಿಕೆ ಕಾರ್ಯಾಚರಣೆಯನ್ನು ಮಾಡಿದ ಬಳಿಕ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವ ವಿಶೇಷತೆಯನ್ನು ಒಳಗೊಂಡ ಇನ್ನಷ್ಟು ಅಪ್ಲಿಕೇಶನ್‌ಗಳನ್ನು ಲಾಂಚ್ ಮಾಡಲಿದ್ದೇವೆ ಎಂಬುದಾಗಿ ಹೇಳಿಕೊಂಡಿದೆ.

  ಬಿಕ್ಸ್‌ಬಿ ನೇರವಾಗಿ ಇಮೇಜ್ ಇನ್‌ಪುಟ್‌ಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದು, ಇದನ್ನು ನೇರವಾಗಿ ಕ್ಯಾಮೆರಾಗಳು ಅಥವಾ ಪ್ರಸ್ತುತವಿರುವ ಚಿತ್ರದ ಗ್ಯಾಲರಿಯ ಮೂಲಕ ಇಂಟಿಗ್ರೇಟ್ ಮಾಡಬಹುದಾಗಿದೆ. ಇದು ಫೋಟೋಗಳು ಮತ್ತು ಹಾಡುಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

  ಮೂರನೇ ವ್ಯಕ್ತಿ ಅಪ್ಲಿಕೇಶನ್ (ಥರ್ಡ್ ಪಾರ್ಟಿ ಅಪ್ಲಿಕೇಶನ್) ಗೂಗಲ್ ಅಸಿಸ್ಟೆಂಟ್ ಕೂಡ ಯೂಟ್ಯೂಬ್, ಸ್ಪಾಟಿಫೈ, ನೆಟ್‌ಫ್ಲಿಕ್ಸ್, ಉಬರ್, ಮೊದಲಾದವುಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇನ್ನು ಸಿರಿ ಕೂಡ ಯೆಲ್ಪ್, ಫೇಸ್‌ಬುಕ್, ಪಿನ್‌ಟ್ರೆಸ್ಟ್, ವಾಟ್ಸಾಪ್, ಪೇಪಾಲ್, ಲಿಫ್ಟ್, ಉಬರ್‌ನೊಂದಿಗೆ ಕೆಲಸ ಮಾಡುತ್ತದೆ. ಒಟ್ಟಾರೆಯಾಗಿ ಈ ಮೂರು ಅಪ್ಲಿಕೇಶನ್‌ಗಳು ನಿಮಗೆ ಕರೆಮಾಡುವುದರ ಜೊತೆಗೆ ಅಲರಾಂ ಹೊಂದಿಸುವುದು, ಸಂದೇಶ ರವಾನೆ ಹೀಗೆ ಹೆಚ್ಚಿನದನ್ನು ಮಾಡಲಿದೆ.

  ವೇರಿಯೇಬಲ್‌ಗಳು

  ಗೂಗಲ್ ಅಸಿಸ್ಟೆಂಟ್ ಆಂಡ್ರಾಯ್ಡ್ ವೇರ್ 2.0 ಅನ್ನು ಲಾಂಚ್ ಮಾಡಿದೆ. ಸಿರಿ ಕೂಡ ಆಪಲ್‌ನ ವಾಚ್ ಅನ್ನು ಪ್ರಸ್ತುತಪಡಿಸಿದ್ದು ವಾಯ್ಸ್ ಕಮಾಂಡ್‌ಗಳನ್ನು ಇದರಲ್ಲಿ ಸೆಟ್ ಮಾಡಿದೆ. ಇದರ ಜೊತೆಗೆ ಮ್ಯೂಸಿಕ್ ಪ್ಲೇ ಮಾಡುವುದು, ಸಂದೇಶಗಳನ್ನು ಕಳುಹಿಸುವುದು ಹೀಗೆ ಹಲವು ಕೆಲಸಗಳನ್ನು ಮಾಡಬಹುದಾಗಿದೆ. ಬಿಕ್ಸ್‌ಬಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ಅನ್ನು ಬೆಂಬಲಿಸುತ್ತಿದ್ದು ಸ್ಯಾಮ್‌ಸಂಗ್ ವೇರಿಯೇಬಲ್‌ಗಳಲ್ಲಿ ಇತರ ಫೀಚರ್‌ಗಳನ್ನು ಸೇರಿಸಿಲ್ಲ.

  ಸ್ಮಾರ್ಟ್ ಹೋಮ್ಸ್

  ಗೂಗಲ್ ಮತ್ತು ಸ್ಯಾಮ್‌ಸಂಗ್ ತಮ್ಮದೇ ಆದ ಸ್ಮಾರ್ಟ್‌ ಫೋನ್‌ಗಳನ್ನು ಹೊಂದಿದ್ದು ಇದು ಇಂಟಿಗ್ರೇಟೆಡ್ ಅಸಿಸ್ಟೆಂಟ್‌ಗಳನ್ನು ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್ ಬಿಕ್ಸ್‌ಬೇಯನ್ನು ತನ್ನ ಮುಂಬರುವ ಫೋನ್‌ಗಳಲ್ಲಿ ಹೊರತರುವ ಉದ್ದೇಶವನ್ನು ಹೊಂದಿದ್ದು ಅಂತೆಯೇ ರೆಫ್ರಿಜರೇಟರ್‌ಗಳಲ್ಲಿ ಕೂಡ ಇದನ್ನು ಆರಂಭಿಸಲಿದೆ. ಗೂಗಲ್ ಅಸಿಸ್ಟೆಂಟ್ ಹೆಚ್ಚಿನ ಸಾಧನಗಳನ್ನು ಬೆಂಬಲಿಸುತ್ತಿದ್ದು ಇದರಲ್ಲಿ ಗೂಗಲ್ ಹೋಮ್, ಗೂಗಲ್ ವೈಫೈ, ನೆಸ್ಟ್ ಥರ್ಮೋಸ್ಟಾಟ್ಸ್ ಮೊದಲಾದವು ಸೇರಿದೆ.

  ಬೆಂಬಲಿಸುವ ಸಾಧನಗಳು

  ಸ್ಯಾಮ್‌ಸಂಗ್‌ನ ಬಿಕ್ಸ್‌ಬಿಯನ್ನು ಗ್ಯಾಲಕ್ಸಿ ಎಸ್8 ಫೋನ್‌ಗಳಲ್ಲಿ ಮಾತ್ರವೇ ಪರಿಚಯಿಸುತ್ತಿದ್ದು, ಇತರ ಸಾಧನಗಳಿಗೆ ಈ ವಾಯ್ಸ್ ಅಸಿಸ್ಟೆಂಟ್ ಆಗಮಿಸಲಿದೆ. ಅದನ್ನು ಈ ವರ್ಷವೇ ನಾವು ನಿರೀಕ್ಷಿಸಬಹುದಾಗಿದೆ. ಸಿರಿ ಆಪಲ್ ಡಿವೈಸ್‌ಗಳಿಗೆ ಮಾತ್ರವೇ ಸೀಮಿತವಾಗಿದ್ದು, ಗೂಗಲ್ ಅಸಿಸ್ಟೆಂಟ್ ಎಲ್ಲಾ ಆಂಡ್ರಾಯ್ಡ್ ಚಾಲಿತ ಫೋನ್‌ಗಳಿಗೂ ಲಭ್ಯವಿದೆ. ಇದರಲ್ಲಿ ಗ್ಯಾಲಕ್ಸಿ ಎಸ್8 ಕೂಡ ಸೇರಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Following the suit of Apple, Google and Amazon, Samsung launched its AI powered voice assistant called as Bixby with the launch of Galaxy S8 series of smartphones. Today, we have pitted Bixby against the other two voice assistants -- Google Now and Siri.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more