ಬ್ಲಾಕ್‌ಬೆರ್ರಿ 'DTEK50' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಲಾಂಚ್‌; ರೂ 20,000

Written By:

ಬ್ಲಾಕ್‌ಬೆರ್ರಿ ಕಂಪನಿ ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಮ್‌ ಆಧಾರಿತ ತನ್ನ ಎರಡನೇ ಸ್ಮಾರ್ಟ್‌ಫೋನ್‌ ಅನ್ನು ಮಂಗಳವಾರ (ಜುಲೈ 26) ಬಿಡುಗಡೆ ಮಾಡಿದೆ. ಆಲ್ಫಾಬೆಟ್‌ ಕಂಪನಿಯ ಪ್ರಖ್ಯಾತ ಸಾಫ್ಟ್‌ವೇರ್‌ ಮತ್ತು ಹೆಚ್ಚಿನ ಅಪ್‌ಗಳ ಕ್ಯಾಟಲಾಗ್‌ ಹೊಂದಿದೆ. ಅಲ್ಲದೇ ಹೆಚ್ಚಿನ ಸುರಕ್ಷತೆ ಫೀಚರ್‌ಗಳನ್ನು ಸಹ ಹೊಂದಿದ್ದು, ಅತಿ ಕಡಿಮೆ ಬೆಲೆಯ ಬ್ಲಾಕ್‌ ಬೆರ್ರಿ ಸ್ಮಾರ್ಟ್‌ಫೋನ್‌ ಇದಾಗಿದೆ.

ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ 'ಬ್ಲಾಕ್‌ಬೆರ್ರಿ DTEK50' ಬಿಡುಗಡೆಗೊಂಡಿರುವುದರಿಂದ ಹಿಂದಿನ ಬ್ಲಾಕ್‌ಬೆರ್ರಿ ಫೋನ್‌ಗಿಂತ ಹೆಚ್ಚಿನ ಮಾರಾಟ ಪಡೆಯುವ ಭರವಸೆಯನ್ನು ಕಂಪನಿ ಹೊಂದಿದೆ. ಬ್ಲಾಕ್‌ಬೆರ್ರಿಯ ಮೊದಲ ಫೋನ್‌ ಸಹ ಆಂಡ್ರಾಯ್ಡ್ ಓಎಸ್‌ ಹೊಂದಿತ್ತು, ಆದರೆ ಹೆಚ್ಚಿನ ಬೆಲೆ ಕಾರಣದಿಂದ ಮಾರಾಟ ಕುಸಿದಿತ್ತು ಎಂದು ಕಂಪನಿ ಪ್ರಧಾನ ಕಾರ್ಯದರ್ಶಿ 'ಜಾಜ್‌ ಚೆನ್‌ ಹೇಳಿದ್ದಾರೆ.

ಬ್ಲಾಕ್‌ಬೆರ್ರಿ 'DTEK50' ಫೋನ್‌ ಅನ್ನು ಕಂಪನಿಯ ಆನ್‌ಲೈನ್‌ ಶಾಪ್‌ನಲ್ಲಿ ಬುಕ್ ಮಾಡಬಹುದಾಗಿದ್ದು, ಕಂಪನಿ ಫೋನ್‌ ಅನ್ನು ಆಗಸ್ಟ್‌ 8 ರಿಂದ ವಿತರಣೆ ಮಾಡಲಿದೆ. 'ಬ್ಲಾಕ್‌ಬೆರ್ರಿ DTEK50' ಸ್ಮಾರ್ಟ್‌ಫೋನ್‌ ಬೆಲೆ $299 (20,000 ರೂ). ಬ್ಲಾಕ್‌ಬೆರ್ರಿಯ ಬಜೆಟ್‌ ಬೆಲೆಯ 'DTEK50' ವಿಶೇಷ ಫೀಚರ್‌ಗಳೇನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ದೊಡ್ಡ ಸ್ಕ್ರೀನ್ ಉಳ್ಳ ಸ್ಮಾರ್ಟ್‌ಫೋನ್ಸ್ ರೂ 7000 ದೊಳಗಿನ ಬೆಲೆಯಲ್ಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 'DTEK50' ಸ್ಮಾರ್ಟ್‌ಫೋನ್‌

'DTEK50' ಸ್ಮಾರ್ಟ್‌ಫೋನ್‌

'DTEK50' ಸ್ಮಾರ್ಟ್‌ಫೋನ್‌ ಅನ್ನು 'ಪ್ರಪಂಚದ ಹೆಚ್ಚಿನ ಸುರಕ್ಷಿತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌' ಎಂದು ಕರೆಯಲಾಗಿದೆ. ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಮೈಕ್ರೋಫೋನ್‌ ಅನ್ನು ಯಾರಾದರೂ ರಿಮೋಟ್‌ ಮೂಲಕ ಬಳಸುತ್ತಿದ್ದಲ್ಲಿ ಅಥವಾ ಫೋನ್‌ ಸ್ಥಳವನ್ನು(ಲೊಕೇಷನ್‌) ಟ್ರ್ಯಾಕ್ ಮಾಡುತ್ತಿದ್ದಲ್ಲಿ ಸೂಚನೆ ನೀಡುತ್ತದಂತೆ.

ಅಮೆಜಾನ್‌ನಲ್ಲಿ ಮಾರಾಟ ಸಂಭವ

ಅಮೆಜಾನ್‌ನಲ್ಲಿ ಮಾರಾಟ ಸಂಭವ

ಬ್ಲಾಕ್‌ಬೆರ್ರಿ ಅಧಿಕೃತವಾಗಿಯಲ್ಲದಿದ್ದರೂ ಸಹ ಅಮೆಜಾನ್‌ನಲ್ಲಿ ಮಾರಾಟ ಮಾಡುವ ಸಂಭವ ಇದ್ದು ಅಥವಾ ತನ್ನ ಸ್ವಂತ ಆನ್‌ಲೈನ್‌ ಶಾಪ್‌ನಲ್ಲೇ ಮಾರಾಟ ಮಾಡಲಿದೆ. ಮುಂಗಡವಾಗಿ ಅಮೆರಿಕ, ಕೆನೆಡಾ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ಸ್ಪೇನ್‌, ಇಟಲಿ ಮತ್ತು ನೆದರ್‌ಲ್ಯಾಂಡ್‌ನ ಬ್ಲಾಕ್‌ಬೆರ್ರಿ ಆನ್‌ಲೈನ್ ಶಾಪ್‌ಗಳಲ್ಲಿ ಬುಕ್‌ ಮಾಡಬಹುದಾಗಿದೆ.

 'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

ಆಂಡ್ರಾಯ್ಡ್‌ ಓಎಸ್‌ ಹೊಂದಿರುವ 'DTEK50' ಸ್ಮಾರ್ಟ್‌ಫೋನ್‌, ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 617 1.2GHz ಆಕ್ಟಾ ಕೋರ್ ಪ್ರೊಸೆಸರ್‌ ಹೊಂದಿದೆ.

 'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

3GB RAM ಮತ್ತು 16GB ಆಂತರಿಕ ಶೇಖರಣಾ ಸಾಮರ್ಥ್ಯ ಹೊಂದಿದೆ. ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದ್ದು, 2000GB ಮೈಕ್ರೋ ಎಸ್‌ಡಿ ಕಾರ್ಡ್‌ವರೆಗೂ ವಿಸ್ತರಣೆ ಹೊಂದಬಹುದಾಗಿದೆ.

 'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

5.20 ಇಂಚಿನ ಟಚ್‌ ಸ್ಕ್ರೀನ್‌ ಡಿಸ್‌ಪ್ಲೇ ಹೊಂದಿದ್ದು, 1080*1920 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. ಕಪ್ಪು ಬಣ್ಣದಲ್ಲಿರುವ ಸ್ಮಾರ್ಟ್‌ಫೋನ್‌ 135 ಗ್ರಾಂ ತೂಕವಿದೆ.

 'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

13Mp ಹಿಂಭಾಗ ಕ್ಯಾಮೆರಾ ಮತ್ತು 8mp ಮುಂಭಾಗ ಕ್ಯಾಮೆರಾ ಜೊತೆಗೆ ಫ್ಲ್ಯಾಶ್‌ ಫೀಚರ್‌ ಹೊಂದಿದೆ.

 'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

'DTEK50' ಸ್ಮಾರ್ಟ್‌ಫೋನ್‌ ಫೀಚರ್‌ಗಳು

2610mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ರಿಮೂಮಾಡಲಾಗದ ಬ್ಯಾಟರಿ ಹೊಂದಿದೆ.

ಸಂಪರ್ಕಗಳು

ಸಂಪರ್ಕಗಳು

ವೈಪೈ, 3G, 4G/LTE, ಜಿಪಿಎಸ್, ಬ್ಲೂಟೂತ್‌ ಕನೆಕ್ಟಿವಿಟಿ ಜೊತೆಗೆ ಎಫ್‌ಎಂ, ಹೆಡ್‌ಫೋನ್‌ ಸಂಪರ್ಕಗಳು ಸಹ ಇವೆ. ಮೈಕ್ರೋಸಿಮ್ ಕನೆಕ್ಟಿವಿಟಿ ಫೋನ್‌ ಇದಾಗಿದೆ. ಉತ್ತಮ ಸೆನ್ಸಾರ್‌ ಫೀಚರ್‌ಗಳನ್ನು ಸಹ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

Read more about:
English summary
BlackBerry DTEK50 Android Smartphone Launched. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot