ಜಿಯೋಗೆ ಶಾಕ್ ನೀಡಿದ BSNL: ರೂ.499ಕ್ಕೆ ಫೀಚರ್ ಫೋನ್, ರೂ.153ಕ್ಕೆ ವರ್ಷದ ಆಫರ್..!
ದೇಶಿಯ ಟೆಲಿಕಾಂ ವಲಯದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದ್ದು, ಎಲ್ಲಾ ಟೆಲಿಕಾಂ ಕಂಪನಿಗಳು ಜಿಯೋ ಮಾದರಿಯಲ್ಲಿ ತಮ್ಮ ಫೋನ್‌ಗಳನ್ನು ಬಿಡುಗಡೆ ಮಾಡಲು ಶುರು ಮಾಡಿವೆ.

ಓದಿರಿ: ಟೆಲಿಕಾಂ ವಲಯದಲ್ಲಿ ಹೊಸ ಅಲೆ ಹುಟ್ಟಿಸಲಿದೆ BSNL ಹೊಸ ಆಫರ್...!
ತಮ್ಮದೇ ಫೋನ್‌ನೊಂದಿಗೆ ಗ್ರಾಹಕರಿಗೆ ಹೆಚ್ಚಿನ ಡೇಟಾ ಮತ್ತು ಕರೆಯ ಆಫರ್‌ಗಳನ್ನು ನೀಡುತ್ತಿದ್ದು, ಹೆಚ್ಚಿನ ದಿನಗಳ ಕಾಲ ತಮ್ಮದೇ ನೆಟ್‌ವರ್ಕ್ ಬಳಕೆ ಮಾಡಿಕೊಳ್ಳಲಿ ಎನ್ನುವುದು ಇದರ ಉದ್ದೇಶವಾಗಿದೆ.

BSNL ಫೋನ್:
ಇದೇ ಮಾದರಿಯಲ್ಲಿ ಸರ್ಕಾರಿ ಒಡೆತನಕ್ಕೆ ಸೇರಿರುವ BSNL ಸಹ ತನ್ನದೆ ಫೋನ್ ಬಿಡುಗಡೆಗೆ ಮುಂದಾಗಿದ್ದು, ಡಿಟೆಲ್ D1 ಫೀಚರ್ ಫೋನ್ ಅನ್ನು ಲಾಂಚ್ ಮಾಡಿದ್ದು, ಅದುವೇ ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಈ ಫೋನ್ ಅನ್ನು ಮಾರಾಟ ಮಾಡುತ್ತಿದೆ. ಇದರೊಂದಿಗೆ ಒಂದು ವರ್ಷದ ವಾಯ್ಸ್ ಕಾಲಿಂಗ್ ಆಫರ್ ಸಹ ನೀಡಲು ಮುಂದಾಗಿದೆ.


ರೂ.499ಕ್ಕೆ ಫೋನ್ ಲಾಂಚ್:
ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಫೋನ್‌ಗಳ ಬೆಲೆಯೂ ಕುಸಿಯುತ್ತಿದ್ದು, ಇದೇ ಮಾದರಿಯಲ್ಲಿ ಡಿಟೆಲ್ D1 ಫೀಚರ್ ಫೋನ್ ಅನ್ನು BSNL ರೂ. 499ಕ್ಕೆ ಲಾಂಚ್ ಮಾಡಿದೆ. ಈ ಪೋನ್ ಬೆಲೆ ರೂ.346 ಮಾತ್ರವೇ ಆಗಿದ್ದು, ಇದರೊಂದಿಗೆ BSNL ಆಫರ್ ಸೇರಿ ರೂ.499 ಆಗಿದೆ ಎನ್ನಲಾಗಿದೆ.

BSNL ಆಫರ್:
ಡಿಟೆಲ್ D1 ಫೋನ್‌ನೊಂದಿಗೆ BSNL ರೂ.153ರ ಆಫರ್ ಅನ್ನು ನೀಡಿದೆ. ಇದರಲ್ಲಿ ಬಳಕೆದಾರರು ರೂ.153 ಟಾಕ್ ಟೈಮ್ ಪಡೆದುಕೊಳ್ಳಲಿದ್ದು, ಅಲ್ಲದೇ ವಾಯ್ಸ್ ಕಾಲಿಂಗ್ ಮೇಲೆ ಒಂದು ವರ್ಷಗಳ ಕಾಲ ಡಿಸ್ಕೌಂಟ್ ಅನ್ನು ನೀಡಲಿದೆ ಎನ್ನಲಾಗಿದೆ.

ಡಿಟೆಲ್ D1 ಫೋನ್:
ಡಿಟೆಲ್ D1 ಫೋನಿನಲ್ಲಿ 1.44 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಸಿಂಗಲ್ ಸಿಮ್ ಸಫೋರ್ಟ್ ಮಾಡಲಿದ್ದು, 650mAh ಬ್ಯಾಟರಿಯನ್ನು ಈ ಫೋನಿನಲ್ಲಿದ್ದು, ಟಾರ್ಚ್ ಲೈಟ್ ಅನ್ನು ಸಹ ಈ ಫೋನಿನಲ್ಲಿ ಅಳವಡಿಸಲಾಗಿದೆ.

ಫೀಚರ್ ಫೋನ್ ಕೊಳ್ಳುವವರಿಗೆ ಬೆಸ್ಟ್:
ಫೀಚರ್ ಫೋನ್‌ನೊಂದು ಜೊತೆಗೆ ಇರಬೇಕು ಎನ್ನುವವರಿಗೆ ಈ ಫೋನ್ ಹೇಳಿ ಮಾಡಿಸಿದ ಮಾದರಿಯಲ್ಲಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ಎರಡನೇ ಫೋನ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಲು ಇದು ಉತ್ತಮವಾಗಿದೆ.


Click it and Unblock the Notifications








