Subscribe to Gizbot

ಟೆಲಿಕಾಂ ವಲಯದಲ್ಲಿ ಹೊಸ ಅಲೆ ಹುಟ್ಟಿಸಲಿದೆ BSNL ಹೊಸ ಆಫರ್...!

Written By:

ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ BSNL ಮಾರುಕಟ್ಟೆಯಲ್ಲಿ ಹೊಸ ಹೊಸ ಆಫರ್ ಗಳನ್ನು ಪರಿಚಯ ಮಾಡುತ್ತಿದೆ. ಜಿಯೋ ಮತ್ತು ಏರ್‌ಟೆಲ್ ಆಫರ್ ಗಳಿಗೆ ಸ್ಪರ್ಧೆಯನ್ನು ನೀಡುವ ಆಫರ್ ವೊಂದನ್ನು ಲಾಂಚ್ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಐಡಿಯಾ ಸಹ ಇದೇ ಮಾದರಿ ಆಫರ್ ಬಿಟ್ಟಿದ್ದು, BSNL ಕೊಂಚ ಭಿನ್ನವಾಗಿ ಹೊಸ ಆಫರ್ ಲಾಂಚ್ ಮಾಡಿದೆ.

ಟೆಲಿಕಾಂ ವಲಯದಲ್ಲಿ ಹೊಸ ಅಲೆ ಹುಟ್ಟಿಸಲಿದೆ BSNL ಹೊಸ ಆಫರ್...!

ಓದಿರಿ: ಶಿಯೋಮಿ ಅಲೆ ಅಳಿಸಲಿದೆ 10.or D ಸ್ಮಾರ್ಟ್‌ಪೋನ್‌: ರೂ.5000ಕ್ಕೆ ಎಷ್ಟೇಲ್ಲಾ ನೀಡುತ್ತಿದೆ ಗೊತ್ತಾ..?

BSNL ತನ್ನ ಗ್ರಾಹಕರಿಗೆ 186 ಪ್ಲಾನ್ ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರಿಗೆ ಹೈಸ್ಪೀಡ್ ಡೇಟಾವನ್ನು ನೀಡಲಿದೆ. ಇದರಲ್ಲಿ ಉಚಿತ SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದ್ದು, ಜೊತೆಗೆ ಉಚಿತ ಕರೆ ಮಾಡುವ ಸೇವೆಯನ್ನು ನೀಡಲಿದೆ. ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಆಫರ್ ಅನ್ನು ಲಾಂಚ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಬೇರೆ ಕಂಪನಿಗಳಿಗೆ ಇದು ಮಾದರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.186 ಪ್ಲಾನ್:

ರೂ.186 ಪ್ಲಾನ್:

BSNL ರೂ.186 ಪ್ಲಾನ್ ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದು, ಆಫರ್ 28 ದಿನಗಳ ಕಾಲದ ವ್ಯಾಲಿಡಿಯನ್ನು ಹೊಂದಿರಲಿದ್ದು, ಇದನ್ನು ಬಿಟ್ಟು 180 ದಿನಗಳ ಕಾಲ ಗ್ರಾಹಕರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಡೇಟಾ ಪ್ಲಾನ್:

ಡೇಟಾ ಪ್ಲಾನ್:

ಇದರೊಂದಿಗೆ BSNL 5GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ ಈ ಆಫರ್‌ನಲ್ಲಿ ಹೈಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದೆ, ಇದರಲ್ಲಿ ಬಳಕೆದಾರರು ಹೆಚ್ಚಿನ ಪ್ರಮಾಣದ ಡೇಟಾವನ್ನು ಹಾಗೂ ವ್ಯಾಲಿಡಿಯನ್ನು ಬಳಕೆ ಪಡೆಯಬಹುದಾಗಿದೆ, ಇದರಲ್ಲಿ ಗ್ರಾಹಕರು ಡೇಟಾ-ಕರೆ-ವ್ಯಾಲಿಡಿಟಿಯ ಹೆಚ್ಚಿನ ಲಾಭವನ್ನು ಪಡೆದುಕೊಳ್ಳ ಬಹುದಾಗಿದೆ.

ಉಚಿತ SMS ಇದೆ:

ಉಚಿತ SMS ಇದೆ:

ಇದಲ್ಲದೇ BSNL ಈ ಪ್ಲಾನ್‌ನಲ್ಲಿ ಉಚಿತವಾಗಿ ಬಳಕೆದಾರರು 1000 SMS ಅನ್ನು ಕಳುಹಿಸಬಹುದಾಗಿದೆ. ಇದರಿಂದಾಗಿ ಗ್ರಾಹಕರು SMS-ಡೇಟಾ-ಕರೆ ಮಾಡುವ ಮೂರು ಆಫರ್ ಗಳು ದೊರೆಯಲಿದೆ ಎನ್ನಲಾಗಿದೆ.

ಜಿಯೋ-ಐಡಿಯಾ-BSNL:

ಜಿಯೋ-ಐಡಿಯಾ-BSNL:

ಇದೇ ಮಾದರಿಯಲ್ಲಿ ಜಿಯೋ-ಐಡಿಯಾ ಗಳು 28 ದಿನಗಳ ವ್ಯಾಲಿಡಿಟಿಯ ಆಫರ್ ಅನ್ನು ನೀಡಲು ಮುಂದಾಗಿದೆ. ಇದೇ ರೀತಿಯಲ್ಲಿ BSNL ಸಹ ಹೊಸ ಮಾದರಿಯ ಆಫರ್ ಕೊಡುಗೆಯನ್ನು ನೀಡಿದೆ. ಇದು ಟೆಲಿಕಾಂ ವಲಯದಲ್ಲಿ ಹೊಸ ಅಲೆಯನ್ನು ಸೃಷ್ಠಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BSNL Plan 186 Revised to Offer High-Speed 5GB Data and 1000 SMS for 28 Days. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot