ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು

By Gizbot Bureau
|

ಭಾರತೀಯ ಮಾರುಕಟ್ಟೆ ಬಜೆಟ್ ಸ್ನೇಹಿಯಾಗಿದೆ ಮತ್ತು ಎಂಟ್ರಿ ಲೆವೆಲ್ ನ ಸ್ಮಾರ್ಟ್ ಫೋನ್ ಗಳು ಇಲ್ಲಿ ಹೆಚ್ಚು ಮಾರಾಟವಾಗುತ್ತದೆ. ಹಾಗಂತ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೂ ಕೂಡ ಸಾಕಷ್ಟು ಖರೀದಿದಾರರು ಇಲ್ಲಿದ್ದಾರೆ. ಆದರೆ ಆಕರ್ಷಕವಾಗಿರುವ ಮತ್ತು ಹೊಸತನದಿಂದ ಕೂಡಿರುವ ಫೀಚರ್ ಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಗಳಿಗೆ ಇಲ್ಲಿನ ಜನರು ಹೆಚ್ಚು ಆಸೆ ಪಡುತ್ತಾರೆ. ಕೈಗೆಟುಕುವ ಬೆಲೆಯಲ್ಲಿ ಇದು ಸಿಗಬೇಕು ಎಂದು ಕೂಡ ಇಚ್ಛಿಸುತ್ತಾರೆ.

ಪ್ರೀಮಿಯಂ ಸ್ಮಾರ್ಟ್ ಫೋನ್

ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೇಳುವುದಾದರೆ ಒನ್ ಪ್ಲಸ್ ಸಂಸ್ಥೆ ಬೆಸ್ಟ್ ಬ್ರ್ಯಾಂಡ್ ಅನ್ನಿಸಿಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಈ ಬ್ರ್ಯಾಂಡಿನ ಡಿವೈಸ್ ಗಳು ಗ್ರಾಹಕರ ಕೈಸೇರುತ್ತದೆ. ಆಪಲ್, ಸ್ಯಾಮ್ ಸಂಗ್,ಎಲ್ ಜಿ ಮತ್ತು ಇತ್ಯಾದಿ ಕಂಪೆನಿಗಳು ಕೂಡ ಇದರಿಂದ ಹಿಂದೆ ಸರಿದಿಲ್ಲ. ನೀವೂ ಕೂಡ ಪ್ರೀಮಿಯಂ ಡಿವೈಸ್ ಗಳನ್ನು ಖರೀದಿಸುವುದಕ್ಕೆ ಇಚ್ಛಿಸುತ್ತಿದ್ದರೆ ನಾವಿಲ್ಲಿ ನಿಮಗಾಗಿ ಅದರ ಪಟ್ಟಿಯನ್ನು ನೀಡುತ್ತಿದ್ದೇವೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ನೀವು ಇವುಗಳನ್ನು ಖರೀದಿಸಬಹುದು.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ ಪಾಪ್ ಅಪ್ ಕ್ಯಾಮರಾ ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ಆಗಿದ್ದು ಹಿಂಭಾಗದಲ್ಲಿ ಈ ಕ್ಯಾಮರಾವಿದೆ ಮತ್ತು QHD+ ಡಿಸ್ಪ್ಲೇ ವ್ಯವಸ್ಥೆ ಇದೆ. ಇದರಲ್ಲಿ 6.67-ಇಂಚಿನ ಫ್ಲೂಯಿಡ್ AMOLED ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಮತ್ತು ಟ್ರಿಪಲ್ ಕ್ಯಾಮರಾ ವ್ಯವಸ್ಥೆಯನ್ನು ಇದು ಹೊಂದಿದೆ.

ವಿವೋ iQOO 3

ವಿವೋ iQOO 3

ವಿವೋ iQOO 3 6.44-ಇಂಚಿನ ಸೂಪರ್ AMOLED ಡಿಸ್ಪ್ಲೇ, ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 865 SoC, 4400mAh ಬ್ಯಾಟರಿ,12GB ವರೆಗಿನ RAM, 256GB ವರೆಗಿನ ಸ್ಟೋರೇಜ್ ಜಾಗ ಮತ್ತು ಕ್ವಾಡ್ ಕ್ಯಾಮರಾ ಜೊತೆಗೆ 48MP ಪ್ರೈಮರಿ ಕ್ಯಾಮರಾ ಸೆನ್ಸರ್ ನ್ನು ಇದು ಹೊಂದಿದೆ.

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್

ಆಪಲ್ ಐಫೋನ್ 11 ಪ್ರೋ ಮ್ಯಾಕ್ಸ್ ಐಫೋನ್ ಗಳಲ್ಲೇ ಅತೀ ಹೆಚ್ಚು ನೂತನವಾಗಿರುವ ಡಿವೈಸ್ ಆಗಿದ್ದು ಇದರ 6.5-ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ, ಆಪಲ್ ಎ 13 ಬಯೋನಿಕ್ ಚಿಪ್ ಸೆಟ್, ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದೆ ಮತ್ತು ಇತರೆ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಲೈಟ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್, 4500mAh ಬ್ಯಾಟರಿ ಇದ್ದು ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನಗಳ ಬ್ಯಾಟರಿ ಲೈಫ್ ನೀಡುತ್ತದೆ. ಪ್ರೋ ಕ್ಯಾಮರಾ ಮೋಡ್ ಜೊತೆಗೆ 48MP ಪ್ರೈಮರಿ ಕ್ಯಾಮರಾ ಸೆನ್ಸರ್, 32MP ಸೆಲ್ಫೀ ಕ್ಯಾಮರಾ ಮತ್ತು ಇತ್ಯಾದಿ ಹಲವು ಫೀಚರ್ ಗಳನ್ನು ಹೊಂದಿದೆ.

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ 6.67-ಇಂಚಿನ ಫ್ಲೂಯಿಡ್ AMOLED ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 855+ ಪ್ರೊಸೆಸರ್, 8GB ವರೆಗಿನ RAM, 256GB ವರೆಗಿನ ಸ್ಟೋರೇಜ್ ಜಾಗ ಮತ್ತು 4085mAh ಬ್ಯಾಟರಿ ಲೈಫ್ ನ್ನು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್ ಎರಡನೇ ಜನರೇಷನ್ನಿನ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಇದಾಗಿದೆ. ಫೋಲ್ಡಿಂಗ್ ಗ್ಲಾಸ್ ಸ್ಕ್ರೀನ್ ನ್ನು ಇದು ಹೊಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್ 6.7-ಇಂಚಿನ ಫೋಲ್ಡೇಬಲ್ ಡೈನಾಮಿಕ್ AMOLED ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

Best Mobiles in India

Read more about:
English summary
Buying Guide: Best Premium Smartphones Available In India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X