ಗುಡುಗು ಮಿಂಚು ಬಂದಾಗ ಎಲೆಕ್ಟ್ರಾನಿಕ್ ವಸ್ತುಗಳನ್ನು ಅನ್ ಪ್ಲಗ್ ಮಾಡಬೇಕಾ?

By Gizbot Bureau
|

ನಾವು ಸಣ್ಣವರಿದ್ದಾಗ ಪೋಷಕರು ಮಳೆ ಅಥವಾ ಮಿಂಚು,ಗುಡುಗು ಬರುತ್ತಿದ್ದಾಗ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಅಪ್ಲಯನ್ಸಸ್ ಗಳನ್ನು ಅನ್ ಪ್ಲಗ್ ಮಾಡುವುದಕ್ಕೆ ಹೇಳುತ್ತಿದ್ದದ್ದು ನಿಮಗೆ ನೆನಪಿರಬಹುದು. ಇಂತಹ ಸಂದರ್ಬದಲ್ಲಿ ಅವುಗಳ ಶಾರ್ಟ್ ಸರ್ಕ್ಯೂಟ್ ಗೆ ಒಳಗಾಗಿ ಹಾಳಾಗುತ್ತವೆ ಹಾಗಾಗಿ ಎಲ್ಲವನ್ನೂ ಅನ್ ಪ್ಲಗ್ ಮಾಡಿಡಬೇಕು ಎಂಬುದು ಇದರ ಹಿಂದಿರುವ ಉದ್ದೇಶ.

ಗುಡುಗು ಮಿಂಚು ಬಂದಾಗ ಎಲೆಕ್ಟ್ರಾನಿಕ್ ವಸ್ತುಗಳನ್ನು ಅನ್ ಪ್ಲಗ್ ಮಾಡಬೇಕಾ?

ಬಹುಶ್ಯಃ ನೀವು ಅನ್ ಪ್ಲಗ್ ಮಾಡದೇ ಇರುವ ಕಾರಣದಿಂದಾಗಿ ಯಾವುದೋ ಪ್ರಮುಖ ಎಲೆಕ್ಟ್ರಾನಿಕ್ ವಸ್ತು ಹಾಳಾಗಿರುವ ಅನುಭವವೂ ನಿಮಗೆ ಆಗಿರಬಹುದು ಅಥವಾ ಇಂತಹ ಮಾಹಿತಿಯೊಂದನ್ನು ಯಾರಾದರೂ ನಿಮಗೆ ಹಂಚಿಕೊಂಡಿರಬಹುದು ಮತ್ತು ಈ ವಿಚಾರ ನಿಜವೆಂದು ನೀವೂ ಭಾವಿಸಿರಬಹುದು.

ನಿಜಕ್ಕೂ ಮಿಂಚು ಬರುವಾಗ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಅನ್ ಪ್ಲಗ್ ಮಾಡಬೇಕೇ? ಈ ಬಗೆಗಿನ ಕೆಲವು ವಿಚಾರಗಳು ಇಲ್ಲಿವೆ ನೋಡಿ.

ಸತ್ಯವೋ ಅಥವಾ ಮಿಥ್ಯವೋ?

ಸತ್ಯವೋ ಅಥವಾ ಮಿಥ್ಯವೋ?

ಹೋಮ್ ಲ್ಯಾಂಡ್ ಸೆಕ್ಯುರಿಟಿ ಡಿಪಾರ್ಟ್ ಮೆಂಟ್ ಹೇಳುವ ಪ್ರಕಾರ ನೀವು ಮಿಂಚಿನ ಸಂದರ್ಬದಲ್ಲಿ ಎಲ್ಲಾ ಅಪ್ಲಯನ್ಸಸ್ ಗಳನ್ನು ಅನ್ ಪ್ಲಗ್ ಮಾಡಿ ಇಡಬೇಕು. ಯಾಕೆಂದರೆ ಮಿಂಚು ನಿಮ್ಮ ಹತ್ತಿರದ ಸ್ಥಳೀಯ ಎಲೆಕ್ಟ್ರಾನಿಕ್ ಪೋನ್ ನಲ್ಲಿ ಎಲೆಕ್ಟ್ರಿಸಿಟಿ ಶಾರ್ಟ್ ಸರ್ಕ್ಯೂಟ್ ನ್ನು ಉಂಟು ಮಾಡಿ ಪವರ್ ಲೈನ್ ನಲ್ಲಿ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಉತ್ತರ ಅಮೇರಿಕಾದಲ್ಲಿ ಔಟ್ ಲೆಟ್ ನ ಗೋಡೆಯಲ್ಲಿನ ಪ್ಲಗ್ ಗಳನ್ನು 120 ವೋಲ್ಟ್ ಎಲೆಕ್ಟ್ರಿಸಿಟಿಯಲ್ಲಿ ಬಳಕೆ ಮಾಡುವಂತೆ ಡಿಸೈನ್ ಮಾಡಲಾಗಿರುತ್ತದೆ ಮತ್ತು ಅದು 169 ವೋಲ್ಟ್ಸ್ ವರೆಗಿನ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಶ್ವದ ಇತರೆ ಭಾಗಗಳಲ್ಲಿ 240 ವೋಲ್ಟ್ಸ್ ವರೆಗೆ ಡಿವೈಸ್ ಗೆ ಪವರ್ ಸಪ್ಲೈ ಆಗುವಂತೆ ಪ್ಲಗ್ ಗಳನ್ನು ಡಿಸೈನ್ ಮಾಡಲಾಗಿರುತ್ತದೆ.

ವೋಲ್ಟ್ ನಲ್ಲಿ ಅಧಿಕ:

ವೋಲ್ಟ್ ನಲ್ಲಿ ಅಧಿಕ:

ಯಾವಾಗ ಮಿಂಚು ಕರೆಂಟ್ ಲೈನ್ ಗಳಿಗೆ ಅಪ್ಪಳಿಸುತ್ತದೆಯೋ ಆಗ ಅದರ ವೋಲ್ಟ್ 169 ಅಥವಾ 240 ವೋಲ್ಟ್ ಗಿಂತ ಅದೆಷ್ಟೋ ಪಟ್ಟು ಹೆಚ್ಚಾಗಿರುತ್ತದೆ. ಅದು ಮಿಲಿಯನ್ ಗಟ್ಟಲೆ ವೋಲ್ಟ್ ನಲ್ಲಿರುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಯಾವುದೇ ಡಿವೈಸ್ ಗಳು ಕೂಡ ಈ ಮಟ್ಟದ ಎಲೆಕ್ಟ್ರಿಸಿಟಿ ಬಳಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಗೋಡೆಯ ಸಾಕೆಟ್ ನಲ್ಲಿ ಒಮ್ಮೆಲೆ ಅತೀ ಹೆಚ್ಚು ಕರೆಂಟ್ ಪ್ರವಹಿಸಿದಾಗ ಡಿವೈಸ್ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಿಂಚಿನಿಂದಾಗಿ ವಿದ್ಯುತ್ ಅಚಾನಕ್ ಹೆಚ್ಚಳ:

ಮಿಂಚಿನಿಂದಾಗಿ ವಿದ್ಯುತ್ ಅಚಾನಕ್ ಹೆಚ್ಚಳ:

ಮಿಂಚಿನಿಂದ ವಿದ್ಯುತ್ ಒಮ್ಮೆ ಹೆಚ್ಚಾಗುವ ಸಾಧ್ಯತೆ ಕಡಿಮೆ. ಆದರೆ ನೀವು ನಿಮ್ಮ ಎಲೆಕ್ಟ್ರಾನಿಕ್ ಮೆಟಿರಿಯಲ್ ಗಳನ್ನು ಅನ್ ಪ್ಲಗ್ ಮಾಡುವುದನ್ನು ಮರೆಯಬೇಡಿ ಉದಾಹರಣೆಗೆ ಟಿವಿ,ಗೇಮಿಂಗ್ ಪ್ರೊಡಕ್ಟ್ ಗಳು, ಇತ್ಯಾದಿ. ಫ್ರಿಡ್ಜ್ ನ್ನು ಅನ್ ಪ್ಲಗ್ ಮಾಡಲು ನಾವು ಸಲಹೆ ನೀಡುವುದಿಲ್ಲ ಯಾಕೆಂದರೆ ಅದರಲ್ಲಿರುವ ಆಹಾರ ಪದಾರ್ಥಗಳು ಹಾಳಾಗುವ ಸಾಧ್ಯತೆ ಇರುತ್ತದೆ. ಇನ್ನು ನಿಮ್ಮ ಸ್ಟವ್ ಪ್ಲಗ್ ನ್ನು ಕೂಡ ಹಾಗೆಯೇ ಇಡಬಹುದು ಯಾಕೆಂದರೆ ಅದನ್ನು ಸಾಕೆಟ್ ನಿಂದ ಅನ್ ಪ್ಲಗ್ ಮಾಡುವುದು ಕಷ್ಟವಾಗುವ ಸಾಧ್ಯತೆ ಇದೆ.

ಹುಷಾರಾಗಿರಿ :

ಹುಷಾರಾಗಿರಿ :

ಪ್ಲಗ್ ಗಳನ್ನು ಪುಲ್ ಮಾಡುವಾಗ ಒಂದು ವಿಚಾರವನ್ನು ಚೆನ್ನಾಗಿ ನೆನಪಿಡಬೇಕಾಗುತ್ತದೆ.ಕಾರ್ಡ್ ನ್ನು ಮುಟ್ಟಿ ಪ್ಲಗ್ ನ್ನು ಕೀಳಲು ಹೋದರೆ ನಿಮಗೆ ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರದೇಶದಲ್ಲಿ ಮಿಂಚು, ಮಳೆ ಆರಂಭವಾಗುವ ಮುನ್ನವೇ ಅನ್ ಪ್ಲಗ್ ಮಾಡುವುದು ಉತ್ತಮ ಎಂದು ನ್ಯಾಷನಲ್ ವೆಲ್ದರ್ ಸರ್ವೀಸ್ ಅಭಿಪ್ರಾಯ ಪಡುತ್ತದೆ.

ಮಿಂಚು ಆರಂಭವಾಗುವ ಸನ್ನಿವೇಶವನ್ನು ನೀವು ಮೊದಲೇ ಗುರುತಿಸುವುದು ಒಳ್ಳೆಯದು. ಸ್ಥಳೀಯ ವಾತಾವರಣದ ಬಗ್ಗೆ ಅಂತರ್ಜಾಲದ ಸಹಾಯದಿಂದ ಮಾಹಿತಿ ಪಡೆದುಕೊಳ್ಳಬಹುದು. ಸಣ್ಣ ಮಳೆಗೆಲ್ಲ ಅನ್ ಪ್ಲಗ್ ಮಾಡುವ ಅಗತ್ಯತೆ ಇಲ್ಲ ಆದರೆ ಮಿಂಚು ಗುಡುಗು ಇದ್ದು ಮಳೆಯ ಲಕ್ಷಣಗಳು ಕಂಡುಬಂದಾಗ ಅನ್ ಪ್ಲಗ್ ಮಾಡುವುದು ಒಳ್ಳೆಯದು.

ಒಂದು ವೇಳೆ ಸರ್ಜ್ ಪ್ರೊಟೆಕ್ಟರ್ ಇದ್ದಾಗ ಏನಾಗುತ್ತದೆ?

ಹೆಚ್ಚಿನವರು ತಮ್ಮ ಬಳಿ ಸರ್ಜ್ ಪ್ರೊಟೆಕ್ಟರ್ ಇದೆ ಮತ್ತು ಇವು ತಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸುತ್ತದೆ ಎಂದು ಭಾವಿಸಿರುತ್ತಾರೆ. ಆದರೆ ಇದು ಸುಳ್ಳು.

Best Mobiles in India

Read more about:
English summary
Can a thunderstorm destroy your electronics?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X