ರೂ.3,299'ರ ಸೆಲ್ಕಾನ್ 'ಮಿಲೇನಿಯಾ ಯುಫೀಲ್' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್‌

By Suneel
|

ಸೆಲ್ಕಾನ್ ತನ್ನ ಹೊಸ ಸ್ಮಾರ್ಟ್‌ಫೋನ್‌ 'ಮಿಲೇನಿಯಾ ಯುಫೀಲ್' ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಕೇವಲ ಬೆಲೆ ರೂ. 3,299 ಖರೀದಿಸಬಹುದಾದ ಹೊಸ ಹ್ಯಾಂಡ್‌ಸೆಟ್ ಅನ್ನು ಪ್ರಸ್ತುತದಲ್ಲಿ ರಿಜಿಸ್ಟರ್‌ ಮಾಡಬಹುದಾಗಿದೆ. ಅಂದಹಾಗೆ ಸ್ಮಾರ್ಟ್‌ಫೋನ್‌ ಮೊದಲ ಮಾರಾಟ ಆಗಸ್ಟ್‌ 24 ರಂದು ನೆಡೆಯಲಿದೆ.

ರೂ.3,299'ರ ಸೆಲ್ಕಾನ್ 'ಮಿಲೇನಿಯಾ ಯುಫೀಲ್' ಸ್ಮಾರ್ಟ್‌ಫೋನ್‌  ಭಾರತದಲ್ಲಿ ಲಾಂಚ್

ಡ್ಯುಯಲ್‌ ಸಿಮ್ 'ಸೆಲ್ಕಾನ್‌ ಮಿಲೇನಿಯಾ ಯುಫೀಲ್‌' ಆಂಡ್ರಾಯ್ಡ್ 5.1 ಲಾಲಿಪಪ್ ಓಎಸ್‌ನಿಂದ ಆಪರೇಟ್ ಆಗುತ್ತದೆ. 5 ಇಂಚಿನ FWVGA (480*854 P) IPS ಡಿಸ್‌ಪ್ಲೇ ಜೊತೆಗೆ 2.5D ಡ್ರಾಗನ್ ಟ್ರೈಲ್‌ ಗ್ಲಾಸ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ "ಮಿಲೇನಿಯಾ ಯುಫೀಲ್‌' 1.2GHz ಕ್ವಾಡ್‌ಕೋರ್‌ ಸ್ಪ್ರೆಡ್‌ಟ್ರಮ್ SC7731C ಪ್ರೊಸೆಸರ್ ಚಾಲಿತವಾಗಿದ್ದು, 1GB RAM ಹೊಂದಿದೆ. 5MP LED ಫ್ಲ್ಯಾಶ್‌ ಆಟೋಫೋಕಸ್‌ ಹಿಂಭಾಗ ಕ್ಯಾಮೆರಾ, 3.2MP ಸೆಲ್ಫಿ ಕ್ಯಾಮೆರಾ ಫೀಚರ್‌ ಹೊಂದಿದೆ. 8GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿದ್ದು, 32GB ವರೆಗೂ ವಿಸ್ತರಣೆ ಮಾಡಬಹುದು. 3G(HSPA+), ವೈಫೈ 802.11 b/g/n, ಬ್ಲೂಟೂತ್‌ 4.0, ಮೈಕ್ರೋ ಯುಎಸ್‌ಬಿ 2.0, ಜಿಪಿಎಸ್‌/ ಎ-ಜಿಪಿಎಸ್‌, ಮತ್ತು 3.5mm ಆಡಿಯೋ ಜಾಕ್‌ ಸಂಪರ್ಕಗಳನ್ನು ಹೊಂದಿದೆ. ವಿಶೇಷ ಅಂದ್ರೆ ಸ್ಮಾರ್ಟ್‌ಫೋನ್‌ ರೆಗ್ಯುಲರ್‌ ಸಿಮ್ ಕಾರ್ಡ್‌ ಮತ್ತು ಮೈಕ್ರೋ ಸಿಮ್‌ ಅನ್ನು ಬಳಸುತ್ತದೆ.

ರೂ.3,299'ರ ಸೆಲ್ಕಾನ್ 'ಮಿಲೇನಿಯಾ ಯುಫೀಲ್' ಸ್ಮಾರ್ಟ್‌ಫೋನ್‌  ಭಾರತದಲ್ಲಿ ಲಾಂಚ್

ಮಿಲೇನಿಯಾ ಯುಫೀಲ್‌ 2000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 200 ಗಂಟೆಗಳ ಕಾಲ ಸ್ಟ್ಯಾಂಡ್‌ ಬೈ ಟೈಮ್‌ ರೇಟಿಂಗ್‌ ನೀಡಿದೆ. ಅಲ್ಲದೇ 7 ಗಂಟೆಗಳ ಕಾಲ ಟಾಕ್ ಟೈಮ್‌ ನೀಡಿದೆ. 121 ಗ್ರಾಂ ತೂಕವಿರುವ 'ಮಿಲೇನಿಯಾ ಯುಫೀಲ್' ಸ್ಮಾರ್ಟ್‌ಫೋನ್‌ ಅಕ್ಸೆಲೆರೊಮೀಟರ್, ವ್ಯಾಪಕ ಬೆಳಕಿನ ಸೆನ್ಸಾರ್, ಮತ್ತು ಸಾಮೀಪ್ಯ ಸೆನ್ಸಾರ್‌ ಒಳಗೊಂಡಿದೆ.

ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು'

Best Mobiles in India

Read more about:
English summary
Celkon Millennia Ufeel With 5 Inch Display Launched at Rs. 3,299. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X