ಹೆಚ್.ಟಿ.ಸಿ ಓಶನ್ ನೋಟ್ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳು.

ಹೆಚ್.ಟಿ.ಸಿಯ ಹೊಸ ಫ್ಯಾಬ್ಲೆಟ್ ಹೆಚ್.ಟಿ.ಸಿ ಓಶನ್ ನೋಟ್ ನಲ್ಲಿ ಹೊಸ ಕ್ಯಾಮೆರಾ, ಕರ್ವ್ಡ್ ಪರದೆ ಮತ್ತು ಉತ್ತಮ ಆಡಿಯೋ ಇರಲಿದೆ.

|

2017ರ ಮೊದಲ ತಿಂಗಳಲ್ಲಿ ಹೆಚ್.ಟಿ.ಸಿ ಹೊಸ ಫ್ಲಾಗ್ ಶಿಪ್ ಫ್ಯಾಬ್ಲೆಟ್ ಅನ್ನು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ. ತೈವಾನ್ ಕಂಪನಿ ಹೆಚ್.ಟಿ.ಸಿ ಈ ಹೊಸ ಫ್ಯಾಬ್ಲೆಟ್ ಗೆ ಕೊಟ್ಟಿರುವ ಹೆಸರು ಓಶನ್ ನೋಟ್. ಕ್ಯಾಮೆರಾ, ಸಾಫ್ಟ್ ವೇರ್, ಪರದೆ ಮತ್ತು ಆಡಿಯೋ ವಿಭಾಗಗಳಲ್ಲಿ ಗಮನಾರ್ಹ ಸುಧಾರಣೆ ಈ ಫ್ಯಾಬ್ಲೆಟ್ ನ ವಿಶೇಷ.

ಹೆಚ್.ಟಿ.ಸಿ ಓಶನ್ ನೋಟ್ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳು.

ವರದಿಗಳ ಪ್ರಕಾರ ಹೆಚ್.ಟಿ.ಸಿ ಓಶನ್ ನೋಟ್ ಫ್ಯಾಬ್ಲೆಟ್ ಆ್ಯಪಲ್ ಐಫೋನ್ 7ರ ರೀತಿಯಲ್ಲೇ 3.5ಎಂಎಂ ಹೆಡ್ ಫೋನ್ ಜ್ಯಾಕ್ ಅನ್ನು ತೊರೆಯಲಿದೆ. ಈ ಫ್ಯಾಬ್ಲೆಟ್ ನಲ್ಲಿ ಟೈಪ್ ಸಿ ಯು.ಎಸ್.ಬಿ ಪೋರ್ಟ್ ಇರಲಿದೆ. 3.5 ಎಂಎಂ ಜ್ಯಾಕ್ ನ ಅಲಭ್ಯತೆಯನ್ನು ಸರಿಪಡಿಸಲು ಹೆಚ್.ಟಿ.ಸಿ ಓಶನ್ ನೋಟ್ ನಲ್ಲಿ ಅಡಾಪ್ಟೀವ್ ಆಡಿಯೋ ತಂತ್ರಜ್ಞಾನವಿರಲಿದೆ. ಈ ತಂತ್ರಜ್ಞಾನದ ಸಹಾಯದಿಂದ ಸುತ್ತಮುತ್ತಲ ಗದ್ದಲವನ್ನು ಅಳೆದು ಆಡಿಯೋ ಸೆಟ್ಟಿಂಗ್ಸ್ ತನ್ನಿಂತಾನೇ ಬದಲಾಗಲಿದೆ.

ಓದಿರಿ: ಗಿಝ್ಬಾಟ್ ಪ್ರಶಸ್ತಿ: 2016ರ ಅತ್ಯುತ್ತಮ ಸ್ಮಾರ್ಟ್ ಫೋನುಗಳು.
ಹೆಚ್.ಟಿ.ಸಿ ತನ್ನ ಹೊಸ ಫ್ಯಾಬ್ಲೆಟ್ಟಿನ ಪರದೆಯ ದಕ್ಷತೆ ಮತ್ತು ಕ್ಯಾಮೆರಾದ ಗುಣಮಟ್ಟವನ್ನು ಉತ್ತಮಗೊಳಿಸುವತ್ತ ಗಮನ ಹರಿಸಿದೆ. ಈ ಮುಂಚೆ ಸೋರಿಕೆಯಾದ ಮಾಹಿತಿಗಳ ಪ್ರಕಾರ ಈ ಹೊಸ ಫ್ಯಾಬ್ಲೆಟ್ ನಲ್ಲಿ 2ಕೆ ರೆಸೊಲ್ಯೂಷನ್ನಿನ 5.7 ಇಂಚಿನ ಪರದೆಯಿರಲಿದೆ. ಕೆಲವು ಮಾಹಿತಿಗಳ ಪ್ರಕಾರ ಹೆಚ್.ಟಿ.ಸಿ ಓಶನ್ ನೋಟ್ ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್ ನಲ್ಲಿರುವಂತೆಯೇ ಕರ್ವ್ಡ್ ಪರದೆಯಿರಲಿದೆ.

ಹೆಚ್.ಟಿ.ಸಿ ಓಶನ್ ನೋಟ್ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳು.

ವಿನ್ಯಾಸದಲ್ಲೂ ಬದಲಾವಣೆಯನ್ನು ಮಾಡುತ್ತಿದೆ ಹೆಚ್.ಟಿ.ಸಿ. ಜಿ.ಎಸ್.ಎಂ ಅರೇನಾದ ವರದಿಗಳ ಪ್ರಕಾರ ಹೆಚ್.ಟಿ.ಸಿ ಓಶನ್ ನೋಟ್ ನ ಮುಂಭಾಗದಲ್ಲಿ ಯಾವುದೇ ಫಿಸಿಕಲ್ ಬಟನ್ನುಗಳಿರುವುದಿಲ್ಲ. ಇಡೀ ಫ್ಯಾಬ್ಲೆಟ್ ಅನ್ನು ಲೋಹದಿಂದ ತಯಾರಿಸಲಾಗುತ್ತದೆ.

ಹೆಚ್.ಟಿ.ಸಿ ಓಶನ್ ನೋಟ್ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳು.

ಹೆಚ್.ಟಿ.ಸಿ ಓಶನ್ ನೋಟ್ ನ ಮತ್ತೊಂದು ಆಕರ್ಷಣೆಯೆಂದರೆ ಅದರ ಕ್ಯಾಮೆರ. ವರದಿಗಳ ಪ್ರಕಾರ ಹೆಚ್.ಟಿ.ಸಿ ತನ್ನ ಹೊಸ ಫ್ಯಾಬ್ಲೆಟ್ಟಿನ ಕ್ಯಾಮೆರಾದ ಗುಣಮಟ್ಟವನ್ನು ಗೂಗಲ್ ಪಿಕ್ಸೆಲ್ ಗಿಂತ ಉತ್ತಮವಾಗಿರಿಸುವುದಕ್ಕೆ ಪ್ರಯತ್ನ ಪಡುತ್ತಿದೆ. ಗೂಗಲ್ ಪಿಕ್ಸೆಲ್ ಕ್ಯಾಮೆರಾಗೆ ಡಿ.ಎಕ್ಸ್.ಒ ಮಾರ್ಕ್ ರೇಟಿಂಗ್ ನಲ್ಲಿ ಸಿಕ್ಕಿರುವ ಅಂಕಗಳಿಗಿಂತ ಕನಿಷ್ಠ ಎರಡು ಅಂಕ ಹೆಚ್ಚು ಗಳಿಸಲು ಹೆಚ್.ಟಿ.ಸಿ ಪ್ರಯತ್ನಿಸುತ್ತಿದೆ. ಗೂಗಲ್ ಪಿಕ್ಸೆಲ್ ನ ಹಾರ್ಡ್ ವೇರ್ ಅನ್ನು ವಿನ್ಯಾಸಗೊಳಿಸಿದ್ದೇ ಹೆಚ್.ಟಿ.ಸಿ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹೆಚ್.ಟಿ.ಸಿ ಓಶನ್ ನೋಟ್ ಫ್ಯಾಬ್ಲೆಟ್ ನಲ್ಲಿ ಮೀಡಿಯಾಟೆಕ್ ಚಿಪ್ ಇರಲಿದೆ ಮತ್ತು ಈ ಹೊಸ ಫ್ಯಾಬ್ಲೆಟ್ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
HTC Ocean Note will be a phablet offering a curved display and much improved camera. The phablet will also ditch the 3.5mm headphone jack for Type C USB port.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X