Just In
- 1 hr ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 1 hr ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 3 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- 5 hrs ago
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
Don't Miss
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಿಝ್ಬಾಟ್ ಪ್ರಶಸ್ತಿ: 2016ರ ಅತ್ಯುತ್ತಮ ಸ್ಮಾರ್ಟ್ ಫೋನುಗಳು.
2016ರಲ್ಲಿ ಹಲವು ಹೊಸ ತಂತ್ರಜ್ಞಾನದ ಫೋನುಗಳನ್ನು ನೋಡಿದೆವು. ಬೆಝೆಲ್ ಲೆಸ್ ಪರದೆ, ಡುಯಲ್ ಕ್ಯಾಮೆರಾ, ಮಾಡ್ಯುಲಾರ್ ಫೋನುಗಳು, ಅನಿಯಮಿತ ಸಂಗ್ರಹ ಸಾಮರ್ಥ್ಯದ ಫೋನುಗಳು 2016ರಲ್ಲಿ ಮಾರುಕಟ್ಟೆಗೆ ಬಂದವು.

ವರ್ಷದುದ್ದಕ್ಕೂ ಹಲವು ಉತ್ತಮ ಸ್ಮಾರ್ಟ್ ಫೋನುಗಳು ಬಿಡುಗಡೆಗೊಂಡವು. ಹೆಚ್ಚು ಕಡಿಮೆ ಪ್ರತಿ ಫೋನನ್ನೂ ನಾವು ಉಪಯೋಗಿಸಿದ್ದೇವೆ. ವಿವಿಧ ವಿಭಾಗಗಳ ಉತ್ತಮ ಸ್ಮಾರ್ಟ್ ಫೋನುಗಳ ಪಟ್ಟಿಯನ್ನಿಲ್ಲಿ ನೀಡಿದ್ದೇವೆ. ಇದು ಗಿಝ್ಬಾಟ್ ಪ್ರಶಸ್ತಿಗಳ ಮೊದಲ ಆವೃತ್ತಿ.
ಓದಿರಿ: ಕೇಂದ್ರ ಸರ್ಕಾರದಿಂದ ಎಲ್ಲೆಡೆ ಪಬ್ಲಿಕ್ ವೈ-ಫೈ ನೆಟ್‌ವರ್ಕ್: ಟ್ರಾಯ್!!
ಸೂಚನೆ: ಈ ಪಟ್ಟಿಯಲ್ಲಿ ಒಟ್ಟು ಹನ್ನೊಂದು ವಿಭಾಗಗಳಿವೆ. ಪ್ರತಿಯೊಂದು ವಿಭಾಗದಲ್ಲಿ ಎರಡು ಫೋನುಗಳನ್ನು ಆರಿಸಿದ್ದೇವೆ. ಮೊದಲ ಮತ್ತು ಎರಡನೆಯ ಸ್ಥಾನದ ಫೋನುಗಳೆಂದು ಪರಿಗಣಿಸಬಹುದು.

ಉತ್ತಮ ಕಾಂಪ್ಯಾಕ್ಟ್ ಫ್ಲಾಗ್ ಶಿಪ್ ಫೋನ್ - ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7, ಹೆಚ್.ಟಿ.ಸಿ 10.
ಅನುಮಾನವೇ ಬೇಡ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7 ವರುಷದ ಅತ್ಯುತ್ತಮ ಫ್ಲಾಗ್ ಶಿಪ್ ಫೋನ್. ಇದರಲ್ಲಿ ಅತ್ಯುತ್ತಮ ಕ್ಯಾಮೆರಾ ಇದೆ (ನಂತರ ಬಂದ ಗೂಗಲ್ ಪಿಕ್ಸೆಲ್ ಇದನ್ನು ಹಿಂದಿಕ್ಕಿತು), ಉತ್ತಮ ಬ್ಯಾಟರಿಯಿದೆ ಮತ್ತು ಅದ್ಭುತ ಪರದೆಯಿದೆ.
ಎರಡನೆಯ ಸ್ಥಾನದಲ್ಲಿ ಹೆಚ್.ಟಿ.ಸಿ 10 ಇದೆ. ಹೆಚ್.ಟಿ.ಸಿ ಕಂಪನಿಯನ್ನು ಮತ್ತೆ ಯಶದ ಹಳಿಗೆ ಕರೆತಂದ ಫೋನಿದು. ಹೆಚ್.ಟಿ.ಸಿ 10ರ ವಿನ್ಯಾಸ ಆಕರ್ಷಕವಾಗಿದೆ, ಉತ್ತಮ ಬ್ಯಾಟರಿಯಿದೆ ಮತ್ತು ಕ್ಯಾಮೆರಾ ಕೂಡ ಉತ್ತಮವಾಗಿದೆ.

ಉತ್ತಮ ಕ್ಯಾಮೆರಾ ಸ್ಮಾರ್ಟ್ ಫೋನ್ - ಗೂಗಲ್ ಪಿಕ್ಸೆಲ್ ಎಕ್ಸ್.ಎಲ್, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಮತ್ತು ಐಫೋನ್ 7 ಪ್ಲಸ್.
ಇದು ಕಠಿಣ ವಿಭಾಗ. 2016ರಲ್ಲಿ ಸ್ಮಾರ್ಟ್ ಫೋನುಗಳ ಕ್ಯಾಮೆರಾ ವಿಭಾಗದಲ್ಲಿ ಬಹಳಷ್ಟು ಬದಲಾವಣೆಗಳಾದವು. ಡುಯಲ್ ಕ್ಯಾಮೆರ ಬಂದ ವರ್ಷವಿದು. ಕ್ಯಾಮೆರಾ ವಿಭಾಗದಲ್ಲಿ ನಮ್ಮ ಮೊದಲ ಆಯ್ಕೆ ಗೂಗಲ್ ಪಿಕ್ಸೆಲ್ ಎಕ್ಸ್.ಎಲ್. ಸಂಪೂರ್ಣವಾಗಿ ಗೂಗಲ್ ತಯಾರಿಸಿದ ಈ ಫೋನಿನ ಕ್ಯಾಮೆರಾವನ್ನು ಡಿ.ಎಕ್ಸ್.ಒಮಾರ್ಕ್ ಅತ್ಯುತ್ತಮ ಸ್ಮಾರ್ಟ್ ಫೋನ್ ಕ್ಯಾಮೆರಾ ಎಂದು ರೇಟಿಂಗ್ ನೀಡಿದೆ.
ಎರಡನೆಯ ಸ್ಥಾನವನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಮತ್ತು ಐಫೋನ್ 7 ಪ್ಲಸ್ ಗೆ ನೀಡಬಹುದು. ಪಿಕ್ಸೆಲ್ ಫೋನ್ ಬರುವವರೆಗೂ ಮಾರುಕಟ್ಟೆಯಲ್ಲಿ ಪ್ರಾತಿನಿಧ್ಯ ಪಡೆದಿದ್ದು ಐಫೋನ್ 7 ಪ್ಲಸ್. ಇದರಲ್ಲಿ ವಿಶೇಷವಾದ ಡುಯಲ್ ಕ್ಯಾಮೆರಾ ಇದೆ.

ಉತ್ತಮ ಬ್ಯಾಟರಿ ಇರುವ ಸ್ಮಾರ್ಟ್ ಫೋನ್: ಮೊಟೊರೊಲ ಮೊಟೊ ಝಡ್ ಪ್ಲೇ, ಲಿನೊವೊ ಝಡ್2 ಪ್ಲಸ್, ಆ್ಯಪಲ್ ಐಫೋನ್ 7 ಪ್ಲಸ್.
ಈ ವಿಭಾಗದಲ್ಲಿ ಬಹಳಷ್ಟು ಸ್ಮಾರ್ಟ್ ಫೋನುಗಳು ವಿಫಲವಾಗಿಬಿಡುತ್ತಿದ್ದವು. ಈ ವರ್ಷ ವಿಭಿನ್ನವಾದದು. ಸ್ನಾಪ್ ಡ್ರಾಗನ್ 625 ಎಸ್.ಒ.ಸಿ ಇರುವ ಮೊಟೊರೊಲ ಮೊಟೊ ಝಡ್ ಪ್ಲೇ ಫೋನಿನ ಬ್ಯಾಟರಿ ಅತ್ಯುತ್ತಮವಾಗಿದೆ, ಸತತವಾಗಿ ಉಪಯೋಗಿಸಿದರೂ ಆರು ಘಂಟೆಗಳಷ್ಟು ಆನ್ ಸ್ಕ್ರೀನ್ ಸಮಯ ನೀಡುವ ಬ್ಯಾಟರಿ ಇದರಲ್ಲಿದೆ. ಲಿನೊವೊ ಝಡ್ 2 ಪ್ಲಸ್ ನಲ್ಲಿ ಐದು ಘಂಟೆಗಳ ಆನ್ ಸ್ಕ್ರೀನ್ ಸಮಯವಿದ್ದರೆ ಆ್ಯಪಲ್ ಐಫೋನ್ 7 ಪ್ಲಸ್ ಕೂಡ ತನ್ನ ಉತ್ತಮ ಬ್ಯಾಟರಿಯಿಂದಾಗಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಉತ್ತಮ ಫ್ಲಾಗ್ ಶಿಪ್ ಫ್ಯಾಬ್ಲೆಟ್ ಫೋನ್ - ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಎಡ್ಜ್, ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ ಮತ್ತು ಎಲ್.ಜಿ ವಿ20.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ನ ಅಣ್ಣನಂತಿರುವ ಗ್ಯಾಲಕ್ಸಿ ಎಸ್7 ಎಡ್ಜ್ ಅತ್ಯುತ್ತಮ ಸ್ಮಾರ್ಟ್ ಫೋನುಗಳಲ್ಲೊಂದು. 5.5 ಇಂಚಿನ ಪರದೆಯಿರುವ ಈ ಫೋನಿನ ವಿನ್ಯಾಸ ಆಕರ್ಷಕವಾಗಿದೆ, ಉತ್ತಮ ಬ್ಯಾಟರಿ ಮತ್ತು ಕ್ಯಾಮೆರ ಇದರಲ್ಲಿದೆ; ಆಕರ್ಷಕ ವಿನ್ಯಾಸವಿಲ್ಲದ ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ ಮತ್ತು ಸಾಮಾನ್ಯ ಕ್ಯಾಮೆರಾ ಹೊಂದಿರುವ ಎಲ್.ಜಿ ವಿ20 ನಂತರದ ಸ್ಥಾನಗಳಲ್ಲಿದೆ.

ಉತ್ತಮ ವಿನ್ಯಾಸದ ಸ್ಮಾರ್ಟ್ ಫೋನ್ - ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7, ಶಿಯೋಮಿ ಎಂಐ ಮಿಕ್ಸ್.
ಅನುಮಾನವೇ ಬೇಡ, ಹಿಂಬದಿಯಲ್ಲೂ ಗಾಜು ಹೊಂದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 ಉತ್ತಮ ವಿನ್ಯಾಸದ ಸ್ಮಾರ್ಟ್ ಫೋನ್. ಇದು ಜಾರುವುದೂ ಇಲ್ಲ. ಎರಡನೇ ಸ್ಥಾನದಲ್ಲಿ ಹಿಂಬದಿಯಲ್ಲಿ ಸೆರಾಮಿಕ್ ದೇಹವನ್ನೊಂದಿರುವ ಶಿಯೋಮಿಯ ಕಾನ್ಸೆಪ್ಟ್ ಫೋನ್ ಎಂಐ ಮಿಕ್ಸ್ ಇದೆ.

ಸರಿಯಾಗಿ ಅಂದಾಜಿಸದ ಫೋನುಗಳು - ಹುವಾಯಿ ಪಿ9, ಹೆಚ್.ಟಿ.ಸಿ 10, ಎಲ್.ಜಿ ವಿ20.
ನಮ್ಮ ಪ್ರಕಾರ 2016ರಲ್ಲಿ ಸರಿಯಾಗಿ ಅಂದಾಜಿಸದ ಫೋನುಗಳಲ್ಲಿ ಮೊದಲ ಸ್ಥಾನ ಹುವಾಯಿ ಪಿ9ಗೆ. ಇದರಲ್ಲಿ ತುಂಬ ಒಳ್ಳೆಯ ಯುನಿ ಮೆಟಲ್ ವಿನ್ಯಾಸವಿದೆ, ಅದ್ಬುತ ಡುಯಲ್ ಕ್ಯಾಮೆರಾ ಇದೆ ಮತ್ತು ಉತ್ತಮ ಬ್ಯಾಟರಿ ಕೂಡ ಇದೆ. ಆದರೂ ಇದು ಗ್ರಾಹಕರ ಮನಸೆಳೆಯಲು ವಿಫಲವಾಯಿತು. ಹೆಚ್.ಟಿ.ಸಿ 10 ಉತ್ತಮ ಫೋನ್, ಆದರೆ ದುಬಾರಿ ಬೆಲೆ. ಎಲ್.ಜಿ ಜಿ5 ಫೋನಿನಲ್ಲಿ ಹೆಸರು ಕೆಡಿಸಿಕೊಂಡ ಪರಿಣಾಮವಾಗಿ ಎಲ್.ಜಿ ವಿ20 ಕೂಡ ಗ್ರಾಹಕರನ್ನು ಆಕರ್ಷಿಸಲಿಲ್ಲ.

ಕೈಗೆಟುಕುವ ದರದ ಫ್ಲಾಗ್ ಶಿಪ್ ಫೋನ್ - ಒನ್ ಪ್ಲಸ್ 3ಟಿ, ಶಿಯೋಮಿ ಎಂಐ 5, ಲಿನೊವೊ ಝಡ್2 ಪ್ಲಸ್.
ಕೈಗೆಟುಕುವ ದರದ ಅತ್ಯುತ್ತಮ ಫೋನಿನ ಪಟ್ಟಿಯಲ್ಲಿ ಮೊದಲ ಸ್ಥಾನ ಒನ್ ಪ್ಲಸ್ 3ಟಿ ಫೋನಿಗೆ. ಒನ್ ಪ್ಲಸ್ 3ರ ಬ್ಯಾಟರಿ ಕಳಪೆಯಾಗಿತ್ತು, ಆ ಸಮಸ್ಯೆಯನ್ನು ಒನ್ ಪ್ಲಸ್ 3ಟಿಯಲ್ಲಿ ಸರಿಪಡಿಸಲಾಗಿದೆ. ನಂತರದ ಸ್ಥಾನದಲ್ಲಿ ಎಂಐಯುಐ ಸಮಸ್ಯೆಗಳಿದ್ದ ಶಿಯೋಮಿ ಎಂಐ 5 ಹಾಗೂ ಸ್ನಾಪ್ ಡ್ರಾಗನ್ 820 ಚಿಪ್ ಬಳಸುತ್ತಿದ್ದ ಲಿನೊವೊ ಝಡ್ 2 ಪ್ಲಸ್ ಫೋನುಗಳಿವೆ.

2016ರ ಕ್ರೇಜಿ ಫೋನುಗಳು - ಶಿಯೋಮಿ ಎಂಐ ಮಿಕ್ಸ್, ಹುವಾಯಿ ಹಾನರ್ ಮ್ಯಾಜಿಕ್.
ಕಂಪನಿಯೊಂದು ತುಂಬಾ ಧೈರ್ಯದಿಂದ ಉತ್ಪಾದಿಸಿದ ಫೋನೆಂದರೆ ಶಿಯೋಮಿ ಎಂಐ ಮಿಕ್ಸ್. ಇದರಲ್ಲಿರುವ ಅದ್ಭುತ ಬೆಝೆಲ್ ಲೆಸ್ ಪರದೆಯಿದೆ ಹಾಗೂ ಹಲವು ನವೀನ ತಂತ್ರಜ್ಞಾನಗಳು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ಸು ಕಂಡವು. ಈ ಪಟ್ಟಿಯಲ್ಲಿ ಹೆಸರು ಮಾಡಿದ ಮತ್ತೊಂದು ಫೋನೆಂದರೆ ಹುವಾಯಿ ಹಾನರ್ ಮ್ಯಾಜಿಕ್.

2016ರಲ್ಲಿ ನಿರಾಸೆ ಮೂಡಿಸಿದ ಫೋನುಗಳು - ಎಲ್.ಜಿ ಜಿ5, ಐಫೋನ್ 7, ಗ್ಯಾಲಕ್ಸಿ ನೋಟ್ 7.
ಸ್ಫೋಟಗೊಳ್ಳುವ ಸಮಸ್ಯೆ ಇಲ್ಲದೇ ಹೋಗಿದ್ದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ವರುಷದ ಅತ್ಯುತ್ತಮ ಫ್ಯಾಬ್ಲೆಟ್ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿತ್ತು. ಸ್ಫೋಟದ ಸಮಸ್ಯೆಯಿಂದಾಗಿ ಅದು ವರುಷದಲ್ಲಿ ಅತಿ ಹೆಚ್ಚು ನಿರಾಸೆ ಮೂಡಿಸಿದ ಫೋನಾಗಿಬಿಟ್ಟಿತು. ಆ್ಯಪಲ್ ಐಫೋನ್ 7 ಕೂಡ ನಿರಾಸೆ ಮೂಡಿಸಿತು, ಐಫೋನ್ 6ಗೆ ಹೋಲಿಸಿದಾಗ ಇದರಲ್ಲಿ ಯಾವುದೇ ಹೇಳಿಕೊಳ್ಳುವಂತಹ ವಿಶೇಷತೆಗಳಿರಲಿಲ್ಲ. ಆದರೆ ಐಫೋನ್ 7 ಪ್ಲಸ್ ತನ್ನ ಡುಯಲ್ ಕ್ಯಾಮೆರಾದಿಂದಾಗಿ ಗಮನ ಸೆಳೆಯಿತು. ಎಲ್.ಜಿ. ಜಿ5 ತನ್ನ ಮಾಡ್ಯುಲಾರ್ ವ್ಯವಸ್ಥೆ ಹಾಗೂ ಕೆಟ್ಟ ಬ್ಯಾಟರಿಯಿಂದಾಗಿ ಸೋಲನ್ನಪ್ಪಿತು. ಆದರೆ ಕಂಪನಿಯು ಎಲ್.ಜಿ ವಿ20 ಮೂಲಕ ಒಂದಷ್ಟು ಚೇತರಿಕೆ ಕಂಡಿತು.

2016ರ ವಿಭಿನ್ನ ಟೆಕ್ ಫೋನುಗಳು - ನೆಕ್ಸ್ಟ್ ಬಿಟ್ ರಾಬಿನ್, ಮೊಟೊರೊಲ ಮೊಟೊ ಝಡ್, ಎಲ್.ಜಿ ಜಿ5.
ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಂಡ ನೆಕ್ಸ್ಟ್ ಬಿಟ್ ರಾಬಿನ್ ಫೋನುಗಳು ಸಂಗ್ರಹದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಒತ್ತು ನೀಡಿದ್ದವು. ತನ್ನ ವಿಶಿಷ್ಟ ಕ್ಲೌಡ್ ಸ್ಟೋರೇಜ್ ನಿಂದಾಗಿ ಗಮನ ಸೆಳೆಯಿತು ನೆಕ್ಸ್ಟ್ ಬಿಟ್ ರಾಬಿನ್. ಮಾಡ್ಯುಲಾರ್ ಫೋನುಗಳಾದ ಮೊಟೊರೊಲ ಮೊಟೊ ಝಡ್ ಮತ್ತು ಎಲ್.ಜಿ ಜಿ5 ಕೂಡ ಈ ವರುಷ ಗಮನ ಸೆಳೆದ ಫೋನುಗಳು. ಎಲ್.ಜಿ ಜಿ5 ಗ್ರಾಹಕರನ್ನು ಆಕರ್ಷಿಸಲು ವಿಫಲವಾದರೂ ಮೊಟೊರೊಲದ ಮೊಟೊ ಮೊಡ್ಸ್ ವ್ಯವಸ್ಥೆ ಜನಮೆಚ್ಚುಗೆಗೆ ಪಾತ್ರವಾಯಿತು.

ಉತ್ತಮ ಬಜೆಟ್ ಸ್ಮಾರ್ಟ್ ಫೋನ್ - ಶಿಯೋಮಿ ರೆಡ್ ಮಿ ನೋಟ್ 3.
ಸದ್ಯ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬಜೆಟ್ ಸ್ಮಾರ್ಟ್ ಫೋನೆಂದರೆ ಶಿಯೋಮಿ ರೆಡ್ ಮಿ ನೋಟ್ 3, ಇದರಲ್ಯಾವುದೇ ಅನುಮಾನ ಬೇಡ. ಇಷ್ಟು ಒಳ್ಳೆಯ ಫೋನಿಗೆ ಬದಲಿಯಾಗಬಹುದಾದ ಯಾವ ಫೋನೂ ನಮ್ಮ ಪಟ್ಟಿಯಲ್ಲಿಲ್ಲ!!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470