ಫೇಸ್‌ಬುಕ್‌ನಿಂದ ಉಚಿತ ಮಾಹಿತಿ ಅಪ್ಲಿಕೇಶನ್

Written By:

ಡೇಟಾ ಶುಲ್ಕವಿಲ್ಲದೆ ಆರೋಗ್ಯ, ಉದ್ಯೋಗ ಮತ್ತು ಸ್ಥಳೀಯ ಮಾಹಿತಿ ಸೇವೆಯನ್ನು ಮೊಬೈಲ್ ಫೋನ್‌ಗಳಲ್ಲಿ ಲಭ್ಯವಾಗುವಂತೆ ಮಾಡುವ ಹೊಸ ಅಪ್ಲಿಕೇಶನ್ ಅನ್ನು ಫೇಸ್‌ಬುಕ್ ಇಂದು ಸ್ಥಾಪಿಸಿದೆ.

'Internet.org' ಎನ್ನುವ ಈ ಅಪ್ಲಿಕೇಶನ್ AirtelBSE ಲಭ್ಯವಾಗುತ್ತಿದ್ದು ಜಾಂಬಿಯಾದಲ್ಲಿರುವ 1.02 % ಚಂದಾದಾರರಿಗೆ ಇದು ಮೊದಲು ಲಭ್ಯವಾಗುತ್ತಿದ್ದು ಕಂಪೆನಿಯು ಜಗತ್ತಿನ ಇತರ ಭಾಗಗಳಿಗೆ ಈ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿದೆ.

ಮೂಲ ಅಂತರ್ಜಾಲ ಸೇವಾ ಆಪ್ ಫೇಸ್‌ಬುಕ್‌ನಿಂದ

ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್ ಪುಟದಲ್ಲಿ 'Internet.org' ಜಗತ್ತಿನ ಪ್ರತಿಯೊಬ್ಬರಿಗೂ ಲಭ್ಯವಾಗುವಂತಹ ಅಂತರ್ಜಾಲ ಸೇವೆಯನ್ನು ತರಲಿದೆ ಎಂದು ಪ್ರಕಟಿಸಿದ್ದಾರೆ. ಉಚಿತ ಮೂಲ ಅಂತರ್ಜಾಲ ಸೇವೆಗೆ ಪ್ರತಿಯೊಬ್ಬನೂ ಪ್ರವೇಶವನ್ನು ಹೊಂದಬೇಕಾಗಿದೆ ಎಂದು ನಾವು ನಂಬಿರುವೆವು ಇದು ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಮೂಲ ಸಂವಹನಗಳಿಗಾಗಿ ಉಪಕರಣಗಳನ್ನು ಒದಗಿಸಲಿದೆ. ಇನ್ನಷ್ಟು ಹೆಚ್ಚಿನ ದೇಶಗಳಿಗೆ ಉಚಿತ ಮೂಲ ಸೇವೆಯನ್ನು ನಾವು ತರಲಿದ್ದೇವೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.

ಅಪ್ಲಿಕೇಶನ್ ಮೂಲಕ ಉಚಿತ ಸೇವೆಯನ್ನು ಒದಗಿಸಿ, ನಾವು ಹೆಚ್ಚಿನ ಜನರನ್ನು ಅಂತರ್ಜಾಲದ ಸಮೀಪಕ್ಕೆ ಕೊಂಡೊಯ್ಯುತ್ತಿದ್ದೇವೆ ಮತ್ತು ಅವರಿಗೆ ತಿಳಿಯದೇ ಇರುವಂತಹ ಮೌಲ್ಯಯುತ ಸೇವೆಗಳನ್ನು ಒದಗಿಸಿಕೊಡುವ ಪ್ರಯತ್ನ ನಮ್ಮದಾಗಿದೆ ಎಂದು ಯೋಜನೆಯ ಡೈರೆಕ್ಟರ್ ಗೇ ರೋಸನ್ ತಿಳಿಸಿದ್ದಾರೆ. ಈ ಅಪ್ಲಿಕೇಶನ್ ಅನ್ನು ಸುಧಾರಿಸುವುದಕ್ಕಾಗಿ ಕಂಪೆನಿಯು ಮೊಬೈಲ್ ಆಪರೇಟರ್‌ಗಳೊಂದಿಗೆ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಜುಕರ್ ಬರ್ಗ್ ತಿಳಿಸಿದ್ದಾರೆ.

ಫೇಸ್‌ಬುಕ್ ಇತಿಹಾಸದಲ್ಲೇ ಇದೊಂದು ಸಾಧನೆಯಾಗಿದೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ. ಅಪ್ಲಿಕೇಶನ್ ಮೂಲಕ, ಜಾಂಬೀಯಾದಲ್ಲಿರುವ ಏರ್‌ಟೆಲ್ ಗ್ರಾಹಕರು ಹವಾಮಾನ ಗೂಗಲ್ ಹುಡುಕಾಟ ಮತ್ತು ವಿಕಿಪೀಡಿಯಾ ಕುರಿತ ವೆಬ್‌ಸೈಟ್‌ಗಳಿಗೆ ಪ್ರವೇಶಗಳಿಗೆ ಮೂಲ ಪ್ರವೇಶವನ್ನು ಹೊಂದಿರಬಹುದು.

Read more about:
English summary
This article tells about Facebook launches free internet app for basic online services.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot