ಇನ್ನು ಫೇಸ್‌ಬುಕ್ ಪುಟಗಳಲ್ಲಿ ರುಚಿ ರುಚಿ ಖಾದ್ಯಗಳು

Written By:

ತನ್ನ ನಿಯಮಿತ ಬಳಕೆದಾರರ ಮತ್ತು ಹೆಚ್ಚಿನ ಜಾಹೀರಾತುಗಳನ್ನು ಪಡೆಯುವ ನಿಟ್ಟಿನಲ್ಲಿ ಫೇಸ್‌ಬುಕ್ ಗುರುವಾರ ರೆಸ್ಟೋರೆಂಟ್ ಖಾದ್ಯಗಳನ್ನು ತನ್ನ ಪುಟದಲ್ಲಿ ಮುದ್ರಿಸಲು ರೆಸ್ಟೋರೆಂಟ್‌ಗಳಿಗೆ ಅನುಮತಿಯನ್ನು ನೀಡಿದೆ.

ಈ ಸಾಮಾಜಿಕ ದೈತ್ಯ ತ್ವರಿತ ಸಂಪರ್ಕಗಳ ಸಿಂಗಲ್ ಪ್ಲಾಟ್‌ಫಾರ್ಮ್ ಆನ್‌ಲೈನ್ ಪಟ್ಟಿಯನ್ನು ಬಳಸಿಕೊಂಡು ಸ್ಥಳೀಯ ವ್ಯವಹಾರಗಳಿಗೆ ಉತ್ಪನ್ನಗಳು, ಫೋಟೋಗಳನ್ನು ಮತ್ತು ಮೆನುಗಳನ್ನು ತೋರಿಸಲು ಸಹಾಯ ಮಾಡುತ್ತದೆ. ಯುಎಸ್ ಮತ್ತು ಕೆನಡಾದಲ್ಲಿ ಈ ಪ್ರೊಗ್ರಾಮ್ ಮಾತ್ರ ಲಭ್ಯವಿದ್ದು, ಈ ದೇಶಗಳನ್ನು ಬಿಟ್ಟು ಹೊರದೇಶಗಳಲ್ಲಿ ಕೂಡ ನಿಮ್ಮ ವ್ಯವಹಾರ ಇದ್ದರೆ, ಸೆಟ್ಟಿಂಗ್‌ಗಳು ಅಡಿಯಲ್ಲಿ "ಪೇಜ್ ಇನ್‌ಫೋ" ಮೂಲಕ ನಿಮ್ಮ ಮೆನುವಿನ ಪಿಡಿಎಫ್ ಅನ್ನು ನಿಮಗೆ ಅಪ್‌ಲೋಡ್ ಮಾಡಬಹುದು.

ಇನ್ನು ಫೇಸ್‌ಬುಕ್ ಪುಟಗಳಲ್ಲಿ ರುಚಿ ರುಚಿ ಖಾದ್ಯಗಳು

ರೆಸ್ಟೋರೆಂಟ್ ಕೂಡ ಫೇಸ್‌ಬುಕ್ ಪುಟದಲ್ಲಿ ತನ್ನ ಮೆನುವಿನ ಪಟ್ಟಿಯನ್ನು ಪೋಸ್ಟ್ ಮಾಡುತ್ತದೆ. ಇದರಿಂದ ನಿಮಗೆ ರೆಸ್ಟೋರೆಂಟ್‌ನಲ್ಲಿರುವ ಆಹಾರ ಮಾಹಿತಿ ಕುಳಿತಲ್ಲೇ ಸಿಗುತ್ತದೆ. ನಿಮಗೆ ರೆಸ್ಟೋರೆಂಟ್‌ನಲ್ಲಿ ಟೇಬಲ್ ಕಾಯ್ದಿರಿಸುವ ವ್ಯವಸ್ಥೆ ಕೂಡ ಈ ಪುಟ ಮಾಡುತ್ತದೆ.

ಯೆಲ್ಪ್ ಎಂಬ ತಂತ್ರಜ್ಞಾನ ಮೆನುಗಳ ಪಟ್ಟಿಯನ್ನು ಫೇಸ್‌ಬುಕ್‌ನಲ್ಲಿ ಪ್ರಚಾರಪಡಿಸಲು ನೆರವಾಗುತ್ತಿದೆ. ಯೆಲ್ಪ್ ಮುಖಾಂತರ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಈ ಸೇವೆಯನ್ನು ಒದಗಿಸುತ್ತಿದ್ದು ಇದರಿಂದಾಗಿ ಯೆಲ್ಪ್ ಸ್ಟಾಕ್ 5% ದಷ್ಟು ಹೆಚ್ಚಾಗಿದೆ ಎಂಬುದು ವರದಿಯಿಂದ ತಿಳಿದುಬಂದಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot