ಫೇಸ್‌ಬುಕ್‌ನಿಂದ ಮೊಬೈಲ್‌ಗಳಿಗೆ ಹೊಚ್ಚಹೊಸ ಕೊಡುಗೆ

Written By:

ಜನಪ್ರಿಯ ಸಾಮಾಜಿಕ ಮಾಧ್ಯಮ ಸೇವೆಯಾದ ಫೇಸ್‌ಬುಕ್ ಹೆಚ್ಚು ಬೆಳೆಯುತ್ತಿರುವ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಜಾಲತಾಣವಾಗಿದೆ. ಇದೀಗ ಕಂಪೆನಿ ತನ್ನ ಆಂಡ್ರಾಯ್ಡ್ ಹಾಗೂ ಐಓಎಸ್ ಅಪ್ಲಿಕೇಶನ್‌ಗಳಿಗೆ ಇನ್ನೊಂದು ನವೀಕರಣವನ್ನು ಆರಂಭಿಸಿದೆ.

ತನ್ನ ಮೊಬೈಲ್ ಕೊಡುಗೆಗಳಿಗೆ ಎರಡು ಹೊಸ ನವೀಕರಣಗಳನ್ನು ಅಳವಡಿಸಿರುವ ಫೇಸ್‌ಬುಕ್ ನಿಯರ್‌ಬೈ ಫ್ರೆಂಡ್ಸ್ ಫ್ಯೂಚರ್‌ ಇನ್ನಷ್ಟು ಹೊಸದಾಗಿ ಕಂಡುಬಂದಿದೆ. ಇದರಲ್ಲಿ ಇನ್ನು ಆಫ್‌ಲೈನ್ ಪೋಸ್ಟಿಂಗ್ ಕೂಡ ಸಾಧ್ಯವಿದೆ.

ಫೇಸ್‌ಬುಕ್‌ನಿಂದ ಆಂಡ್ರಾಯ್ಡ್ ಆಪ್‌ಗೆ ಹೊಸ ನವೀಕರಣ

ಕಂಪೆನಿ ಈ ವೈಶಿಷ್ಟ್ಯವನ್ನು ಅಳವಡಿಸುವುದರೊಂದಿಗೆ ಹೊಸ ನವೀಕರಣವನ್ನು ಅಳವಡಿಸಲಾಗಿದೆ ಎಂದು ಮಾತ್ರ ಹೇಳಿಕೊಂಡಿದೆ. ಆದರೂ ನಿಯರ್‌ಬೈ ಫ್ರೆಂಡ್ಸ್‌ಗಾಗಿ ಎರಡು ನವೀಕರಣಗಳನ್ನು ಟೆಕ್‌ಕ್ರಂಚ್ ಕಂಡುಕೊಂಡಿದೆ. ಹುಡುಕಾಟ ಮತ್ತು ಸ್ನೇಹಿತರನ್ನು ಆಮಂತ್ರಿಸಿ ಬಟನ್‌ಗಳನ್ನು ಫೇಸ್‌ಬುಕ್ ಇದಕ್ಕೆ ಸೇರ್ಪಡಿಸಿದೆ. ಆದರೆ ಇದರಲ್ಲಿ ಮಾಡಿದ ಈ ನವೀಕರಣ ನಿಮ್ಮ ಬಳಿ ತಲುಪಲು ಸ್ವಲ್ಪ ಸಮಯ ಬೇಕಾಗಬಹುದು ಎಂಬುದು ನಮ್ಮ ಅಭಿಪ್ರಾಯಾಗಿದೆ.

ತನ್ನ ನೇರ ಸ್ಪರ್ಧಿಯಾಗಿರುವ ಫೋರ್ಸಕ್ವೇರ್ ಸ್ವಾರ್ಮ್ ಅನ್ನು ಸೋಲಿಸಲು ಫೇಸ್‌ಬುಕ್ ನಿಯರ್ ಬೈ ಫ್ರೆಂಡ್ಸ್ ಅನ್ನು ತ್ವರಿತವಾಗಿ ನಿರ್ವಹಿಸುವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಟೆಕ್ ಕ್ರಂಚ್ ತಿಳಿಸಿದೆ.

ಅಪ್ಲಿಕೇಶನ್‌ಗಳಿಗಾಗಿ ಇವೆರಡೂ ನವೀಕರಣಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot