Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 13 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 15 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇವು ಅಂತಿಂತಾ ಸ್ಮಾರ್ಟ್‌ಫೋನ್ ಅಲ್ಲವೇ ಅಲ್ಲ!...ಇವುಗಳ ವೇಗ ಸೂಪರ್!
ಸ್ಮಾರ್ಟ್‌ಫೋನ್‌ಗಳು ಎಲ್ಲರಿಗೂ ಅವಶ್ಯ ಸಾಧನ ಆಗಿದ್ದು, ಬಹುತೇಕ ಆನ್‌ಲೈನ್ ಕೆಲಸಗಳು ಸ್ಮಾರ್ಟ್‌ಫೋನ್ ಮೂಲಕವೇ ನಡೆಯುತ್ತವೆ. ಈ ನಿಟ್ಟಿನಲ್ಲಿ ಅನೇಕ ಜನರು ಹೆಚ್ಚಿನ RAM ಫೀಚರ್ ಇರುವ ಸ್ಮಾರ್ಟ್ ಫೋನ್‌ಗಳನ್ನು ಖರೀದಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್ ಸಂಸ್ಥೆಗಳು ಸಹ ಹೆಚ್ಚಿನ RAM ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಪರಿಚಯಿಸುತ್ತ ಸಾಗಿವೆ.

ಅಧಿಕ RAM ಹಾಗೂ ವೇಗದ ಪ್ರೊಸೆಸರ್ ಬಲ ಒಳಗೊಂಡಿರುವ ಸ್ಮಾರ್ಟ್‌ಫೋನ್ ಗಳು ಮಲ್ಟಿ ಟಾಸ್ಕ್ ಕೆಲಸ ಮಾಡುವಾಗ ಮತ್ತು ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವಾಗ ಕಾರ್ಯ ವೈಖರಿ ಯಾವುದೇ ಅಡೆ ತಡೆ ಆಗುವುದು ಕಡಿಮೆ. ಹೀಗಾಗಿ ಮಲ್ಟಿ ಟಾಸ್ಕ್ ಕೆಲಸಗಳನ್ನು ಹೆಚ್ಚಾಗಿ ಬಳಕೆ ಮಾಡುವ ಗ್ರಾಹಕರು ಹಾಗೂ ಹೈ ಎಂಡ್ ಮೊಬೈಲ್ ಗೇಮ್ ಆಡುವ ಬಳಕೆದಾರರು 16GB ಮತ್ತು ಅದಕ್ಕಿಂತ ಅಧಿಕ RAM ಸಾಮರ್ಥ್ಯದ ಫೋನ್‌ಗಳನ್ನು ಖರೀದಿಸಲು ಇಚ್ಛಿಸುತ್ತಾರೆ.

ಸ್ಯಾಮ್‌ಸಂಗ್, ಶಿಯೋಮಿ, ಒನ್‌ಪ್ಲಸ್, ಐಕ್ಯೂ, ವಿವೋ ಹಾಗೂ ಒಪ್ಪೋ ಮೊಬೈಲ್ ಸಂಸ್ಥೆಗಳು ಅಧಿಕ RAM ಆಯ್ಕೆಯಲ್ಲಿ ಸ್ಟೋರೇಜ್ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಸೆಳೆದಿವೆ. ಸದ್ಯ ನೀವೇನಾದರೂ 16GB RAM ಸಾಮರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲ್ಯಾನ್ ಮಾಡಿದ್ದರೇ, ಈ ಲೇಖನದಲ್ಲಿ ನಾವು ನೀಡಿರುವ ಕೆಲವು ಅತ್ಯುತ್ತಮ 16GB RAM ಸಾಮರ್ಥ್ಯದ ಫೋನ್‌ಗಳ ಲಿಸ್ಟ್ ಒಮ್ಮೆ ಗಮನಿಸಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ಫೋನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ 1,440 x 3,200 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.8 ಇಂಚಿನ ಫುಲ್ ಎಡ್ಜ್ QHD+ ಪ್ಲಸ್ ಜೊತೆಗೆ ಡೈನಾಮಿಕ್ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ 120Hz ರೀಫ್ರೇಶ್ದ ರೇಟ್ ಅನ್ನು ಪಡೆದಿದ್ದು, HDR10+ ಬೆಂಬಲವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಸಂಸ್ಥೆಯ ಆಕ್ಟಾ ಕೋರ್ Exynos 2100 SoC (ಸ್ನ್ಯಾಪ್‌ಡ್ರಾಗನ್ 888) ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಈ ಸ್ಮಾರ್ಟ್‌ಫೋನ್ 12GB ಮತ್ತು 16GB ಆಂತರಿಕ ಸಂಗ್ರಹದ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ OIS ಸಪೋರ್ಟ್ ಜೊತೆಗೆ 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 10ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 40ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ.

ಆಸೂಸ್ ಜೆನ್‌ಫೋನ್ 8
ಆಸೂಸ್ ಜೆನ್‌ಫೋನ್ 8 ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.9 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. 120Hz ರೀಫ್ರೇಶ್ ರೇಟ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ 1,100 nits ಬ್ರೈಟ್ನೆಸ್ ಅನ್ನು ಒಳಗೊಂಡಿದೆ. ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇದೆ.

ಈ ಫೋನ್ 6GB + 128GB, 8GB + 128GB ಮತ್ತು 16GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸಾಮರ್ಥ್ಯ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು ಸಹ 12 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಜೊತೆಗೆ 4,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ.

ಬ್ಲ್ಯಾಕ್ ಶಾರ್ಕ್ 5 ಪ್ರೊ
ಬ್ಲ್ಯಾಕ್ ಶಾರ್ಕ್ 5 ಪ್ರೊ ಗೇಮಿಂಗ್ ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಮತ್ತು 720Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಗೇಮಿಂಗ್ ಫೋನ್ Adreno 730 GPU ಜೊತೆಗೆ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್ ಅನ್ನು ಹೊಂದಿದ್ದು, 16GB RAM ವೇರಿಯಂಟ್ ಆಯ್ಕೆ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 4,650mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 120W ಹೈಪರ್ ಚಾರ್ಜ್ ವೇಗದ ಚಾರ್ಜಿಂಗ್ ಸಪೋರ್ಟ್ ಪಡೆದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470