ನುಬಿಯಾದ ಹೊಸ ಬೆಝೆಲ್ ಲೆಸ್ ಫೋನ್ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳಿವು.

|

2016ರಲ್ಲಿ ಡುಯಲ್ ಲೆನ್ಸ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನುಗಳು ಸದ್ದು ಮಾಡಿದವು. 2017ರಲ್ಲಿ ಬೆಝೆಲ್ ಲೆಸ್ ಪರದೆಗಳಿರುವ ಫೋನುಗಳು ಸುದ್ದಿ ಮಾಡುವಂತೆ ಕಾಣುತ್ತಿದೆ. ಶಿಯೋಮಿಯ ಎಂಐ ಮ್ಯಾಕ್ಸ್ ನ ನಂತರ ಈ ಮುಂಚೆ ಚೀನಾದ ಕಂಪನಿ - ಝಡ್.ಟಿ.ಇಯ ಭಾಗವಾಗಿದ್ದ ನುಬಿಯಾ 'ಬೆಝೆಲ್ ಲೆಸ್' ಪರದೆಯಿರುವ ಸ್ಮಾರ್ಟ್ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತದೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

ನುಬಿಯಾದ ಹೊಸ ಬೆಝೆಲ್ ಲೆಸ್ ಫೋನ್ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳಿವು.

ಓದಿರಿ: ಸೆಲ್ಫಿ ಮರಣಗಳಿಗೆ ಭಾರತ ಟಾಪ್‌ ಶ್ರೇಣಿ: ಸೆಲ್ಫಿ ಪ್ರಿಯರು ತಿಳಿಯಲೇಬೇಕಾದ ವಿಷಯ!

ಐ.ಎ.ಎನ್.ಎಸ್ ಪ್ರಕಾರ, ನುಬಿಯಾದ ಈ ಫೋನು ಇತರೆ ಕಂಪನಿಗಳ 'ಫ್ರೇಮ್ ಲೆಸ್ ವಿನ್ಯಾಸ'ಕ್ಕಿಂತ ವಿಭಿನ್ನವಾಗಿದೆ ಎನ್ನಲಾಗಿದೆ. ಈ ಹೊಸ ಫೋನಿನ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.

ಬೆಝೆಲ್ ಲೆಸ್ ಪರದೆ.

ಬೆಝೆಲ್ ಲೆಸ್ ಪರದೆ.

ವರದಿಗಳ ಪ್ರಕಾರ ನುಬಿಯಾದ ಹೊಸ ಫ್ಲಾಗ್ ಶಿಪ್ ಮೊಬೈಲಿನಲ್ಲಿ ಎಡ್ಜ್ ಲೆಸ್ ಪರದೆಯಿರಲಿದೆ, ಇದು ಇತರೆ ಕಂಪನಿಗಳ 'ಫ್ರೇಮ್ ಲೆಸ್ ವಿನ್ಯಾಸ'ಕ್ಕಿಂತ ವಿಭಿನ್ನವಾಗಿರುತ್ತದೆ.

ನುಬಿಯಾ ಈ ಹೊಸ ಫೋನಿನಲ್ಲಿ ಏನನ್ನು ಅಡಕವಾಗಿಸಿದೆ ಎಂದು ಈಗಲೇ ಹೇಳುವುದು ಸ್ವಲ್ಪ ಕಷ್ಟವೇ, ಆದರೆ ಶಿಯೋಮಿ ಎಂಐ ಮ್ಯಾಕ್ಸ್ ಜೊತೆಗೆ ಹೊಸ ಹೊಸ ಸ್ಮಾರ್ಟ್ ಫೋನುಗಳು ಸ್ಪರ್ಧೆಗೆ ಇಳಿದಿರುವುದು ಆಸಕ್ತಿ ಮೂಡಿಸುವ ಸಂಗತಿ.

ಫ್ರೇಮ್ ಇಂಟರ್ಯಾಕ್ಟೀವ್ ತಂತ್ರಜ್ಞಾನ 2.0.

ಫ್ರೇಮ್ ಇಂಟರ್ಯಾಕ್ಟೀವ್ ತಂತ್ರಜ್ಞಾನ 2.0.

ವರದಿಗಳ ಪ್ರಕಾರ ಸ್ಮಾರ್ಟ್ ಫೋನಿನಲ್ಲಿ ಹ್ಯಾಂಡ್ ಹೆಲ್ಡ್ ಎಲೆಕ್ಟ್ರಾನಿಕ್ ಅಪರ್ಚರ್ ಹೊಂದಿರುವ ಫ್ರೇಮ್ ಇಂಟರ್ಯಾಕ್ಟೀವ್ ತಂತ್ರಜ್ಞಾನ 2.0 ಇರಲಿದೆ. ಈ ತಂತ್ರಜ್ಞಾನವು ಮೊದಲಿಗೆ ನುಬಿಯಾ ಝಡ್9 (2015) ನಲ್ಲಿ ಕಾಣಿಸಿಕೊಂಡಿತ್ತು, ಇದರಿಂದಾಗಿ ಫೋನಿನ ಎಡ ಮತ್ತು ಬಲಬದಿಯನ್ನು ಬಳಸಿಕೊಂಡು ಬಳಕೆದಾರರು ಕಮ್ಯಾಂಡುಗಳನ್ನು ಕೊಡಬಹುದಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಯಾಮೆರ.

ಕ್ಯಾಮೆರ.

ಸ್ಮಾರ್ಟ್ ಫೋನಿನಲ್ಲಿ ಸೋನಿ ಐ.ಎಂ.ಎಕ್ಸ್298 ಸೆನ್ಸಾರ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಇರಲಿದೆ. ಮೂರು ಫೋಕಸ್ ಮತ್ತು ನಾಲ್ಕು ಶಟರ್ ಆಯ್ಕೆಗಳಿವೆ. ಮುಂಬದಿಯ ಕ್ಯಾಮೆರಾದ ಬಗ್ಗೆ ಯಾವುದೇ ವರದಿಗಳಿಲ್ಲ, ನುಬಿಯಾ ಕನಿಷ್ಟವೆಂದರೂ 8ಮೆಗಾಪಿಕ್ಸೆಲ್ಲಿನ ಸೆಲ್ಫಿ ಕ್ಯಾಮೆರ ನೀಡಲಿದೆ.

ಸಾಫ್ಟ್ ವೇರ್.

ಸಾಫ್ಟ್ ವೇರ್.

ವರದಿಗಳ ಪ್ರಕಾರ ಸ್ಮಾರ್ಟ್ ಫೋನಿನಲ್ಲಿ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಆಧಾರಿತ ನುಬಿಯಾ ಯು.ಐ 4.0 ಇರಲಿದೆ. ವಿಶೇಷ ಕಪ್ಪು ಮತ್ತು ಚಿನ್ನದ ಬಣ್ಣದ ಥೀಮ್ ಗಳಿಂದ ಫೋನನ್ನು ತಮ್ಮಿಚ್ಛೆಗೆ ತಕ್ಕಂತೆ ಬದಲಿಸಿಕೊಳ್ಳಬಹುದು.

ನುಬಿಯಾದವರು ಬೆಝೆಲ್ ಲೆಸ್ ಫ್ರೇಮ್ ಗೆ ಸೂಕ್ತವಾಗುವಂತೆ ಯು.ಐನಲ್ಲಿ ಬದಲಾವಣೆಗಳನ್ನು ಮಾಡಿರುತ್ತಾರೆ ಎಂದು ನಮ್ಮ ನಂಬಿಕೆ.

ಸ್ನಾಪ್ ಡ್ರಾಗನ್ 821 ಸಿಪಿಯು ಮತ್ತು 6 ಜಿಬಿ ರ್ಯಾಮ್.

ಸ್ನಾಪ್ ಡ್ರಾಗನ್ 821 ಸಿಪಿಯು ಮತ್ತು 6 ಜಿಬಿ ರ್ಯಾಮ್.

ಇದು ಫ್ಲಾಗ್ ಶಿಪ್ ಫೋನಾಗಿರುವ ಕಾರಣ, ನುಬಿಯಾ ಇದರಲ್ಲಿ ಸ್ನಾಪ್ ಡ್ರಾಗನ್ 821 ಸಿಪಿಯು ಮತ್ತು 6 ಜಿಬಿ ರ್ಯಾಮ್ ಕೊಡಲಿದೆ ಎಂದು ನಿರೀಕ್ಷಿಸಬಹುದು.

ಕಂಪನಿಯು ಇತ್ತೀಚೆಗೆ ಫ್ಲಾಗ್ ಶಿಪ್ ಝಡ್11 ಅನ್ನು ಹೊರತಂದಿತ್ತು, ಇದರಲ್ಲಿ ಬೆಝೆಲ್ ಲೆಸ್ ವಿನ್ಯಾಸವಿತ್ತು, 81ಪರ್ಸೆಂಟ್ ಸ್ಕ್ರೀನ್ - ಬಾಡಿ ರೇಷಿಯೋ ಇತ್ತು. ಆ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಮತ್ತು 4/6 ಜಿಬಿ ರ್ಯಾಮ್ ಹಾಗೂ 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿತ್ತು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Find out what Nubia has to offer with its Bezel-less smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X