ಸೆಲ್ಫಿ ಮರಣಗಳಿಗೆ ಭಾರತ ಟಾಪ್‌ ಶ್ರೇಣಿ: ಸೆಲ್ಫಿ ಪ್ರಿಯರು ತಿಳಿಯಲೇಬೇಕಾದ ವಿಷಯ!

By Suneel
|

ಹ್ಹಾ.... ನೆಕ್ಸ್ಟ್‌ ಟೈಮ್‌ ತಾಜ್‌ ಮಹಲ್‌ ಪ್ರವಾಸದಲ್ಲಿರುತ್ತೀರಿ, ಬೇಡ ಬಿಡಿ ಯಾವುದೋ ದೊಡ್ಡ ಜಲಪಾತ ನೋಡಲು ಹೋಗಿರುತ್ತೀರಿ. ಅದು ಬೇಡ ಅಂದ್ರೆ ಅತಿವೇಗದಲ್ಲಿ ಬರುವ ರೈಲನ್ನೇ ಉದಾಹರಣೆಗೆ ತೆಗೆದುಕೊಂಡರೇ ಇವುಗಳನ್ನೆಲ್ಲಾ ನೋಡಿ ಎಂಜಾಯ್‌ ಮಾಡುವುದಕ್ಕಿಂತಲೂ ಹೆಚ್ಚಾಗಿ, ಕ್ಲಿಯರ್‌ ಆಗಿ, ಭಯಾನಕವಾಗಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುವುದೇ ಇತ್ತೀಚಿನ ದಿನಗಳಲ್ಲಿ ಜನರು ಮಾಡುವ ಚಟುವಟಿಕೆಯಾಗಿದೆ.

ಸೆಲ್ಫಿ ಮರಣಗಳಿಗೆ ಭಾರತ ಟಾಪ್‌ ಶ್ರೇಣಿ: ಸೆಲ್ಫಿ ಪ್ರಿಯರು ತಿಳಿಯಲೇಬೇಕಾದ ವಿಷಯ!

ಹೌದು, ಜಸ್ಟ್ ಈ ಮೂರು ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭಾರತದಲ್ಲಿ 76 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಾಹಿತಿ ಅಮೆರಿಕ ಮೂಲದ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಇಂದ್ರಪ್ರಸ್ಥ ಮಾಹಿತಿ ತಂತ್ರಜ್ಞಾನ ಇನ್ಸ್ಟಿಟ್ಯೂಟ್ ಅಧ್ಯಯನದಿಂದ ತಿಳಿಯಲಾಗಿದೆ.

ಕಳೆದ 2 ವರ್ಷಗಳ ಅವಧಿಯಲ್ಲಿ ಕೂಲೆಸ್ಟ್ ಸೆಲ್ಫಿ ಕ್ಲಿಕ್ಕಿಸಲು ಹೋದ ಹೆಚ್ಚಿನ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳೆದುಕೊಂಡವರಲ್ಲಿ ಪ್ರಪಂಚ ಒಟ್ಟಾರೆ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚು ಎಂದು "Me, Myself and My Killfie:Characterising and Preventing selfie Deaths" ಹೆಸರಿನ ಅಧ್ಯಯನದ ಪ್ರಕಾರ ತಿಳಿಯಲಾಗಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೆಲ್ಫಿ ಮರಣಗಳಿಗೆ ಭಾರತ ಟಾಪ್‌ ಶ್ರೇಣಿ: ಸೆಲ್ಫಿ ಪ್ರಿಯರು ತಿಳಿಯಲೇಬೇಕಾದ ವಿಷಯ!

ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಸರ್ಚ್ ತಂತ್ರ ಬಳಸಿದ ಸಂಶೋಧಕರು ಮಾರ್ಚ್‌ 2014 ರಿಂದ ಈವರೆಗೆ 127 ಸೆಲ್ಫಿ ಮರಣಗಳನ್ನು ಪತ್ತೆಹಚ್ಚಿದ್ದಾರೆ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್‌ಗಳು ಮತ್ತು ವಿಮರ್ಶೆಗಳನ್ನು ಪಡೆಯಲು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ ಎಂದು ಸಂಶೋಧಕರು ಆರೋಪಿಸಿದ್ದಾರೆ.

ಪ್ರಪಂಚದಾದ್ಯಂತ ಶಾರ್ಕ್‌ ದಾಳಿಗಿಂತ ಭಯಾನಕ ಸೆಲ್ಫಿ ಕ್ಲಿಕ್ಕಿಸಲು ಹೋಗಿ 2015 ರಲ್ಲಿ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಶೋಧಕರು ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸೆಲ್ಫಿ ಮರಣಗಳಿಗೆ ಭಾರತ ಟಾಪ್‌ ಶ್ರೇಣಿ: ಸೆಲ್ಫಿ ಪ್ರಿಯರು ತಿಳಿಯಲೇಬೇಕಾದ ವಿಷಯ!

ಬರುತ್ತಿರುವ ರೈಲಿನ ಮುಂದೆ ನಿಂತು ಡಾರ್ಲಿಂಗ್ ಸೆಲ್ಫಿ ತೆಗೆದುಕೊಂಡು ಉತ್ತರ ಭಾರತದ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ, ಜಾಗತಿಕವಾಗಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವಿಗೀಡಾದವರ ಸಂಖ್ಯೆಯಲ್ಲಿ ಎರಡನೇ ಹೆಚ್ಚು ಜನರನ್ನು ಹೊಂದಿದ್ದು, ಭಾರತದ ನಂತರದಲ್ಲಿ ಎರಡನೇ ಶ್ರೇಣಿಯಲ್ಲಿದೆ.

ಸೆಲ್ಫಿ ಕ್ರೇಜ್ ಇವರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ!!!

ಸೆಲ್ಫಿ ಪ್ರಿಯರನ್ನೇ ತಲ್ಲಣಿಸುವ ಅಪಾಯಕಾರಿ ಸೆಲ್ಫಿಗಳು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
India tops ranking for selfie deaths. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X