20,000ರೂ. ಒಳಗೆ ಖರೀದಿಸಬಹುದಾದ ಮೊಟೊರೊಲಾ ಮೊಬೈಲ್‌ಗಳು

|

ಮೊಟೊರೊಲಾ ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಬಂದಿದೆ. ಕೆಲವು ಅತ್ಯುತ್ತಮ ಫೋನ್‌ಗಳ ಮೂಲಕ ಮೊಟೊರೊಲಾ ಸಂಸ್ಥೆ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ಮೊಟೊರೊಲಾ ಕಂಪನಿಯು ಬಜೆಟ್‌ ದರದ ಫೋನ್‌ಗಳೊಂದಿಗೆ ದುಬಾರಿ ದರದ ಫೋನ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ಲಭ್ಯ ಮಾಡಿದೆ.

ಮೊಬೈಲ್‌

ಈ ಯುಗದಲ್ಲಿ ಎಲ್ಲಾ ಮೊಬೈಲ್‌ಗಳು ಸಹ ಒಂದಲ್ಲಾ ಒಂದೊಂದು ವಿಶೇಷತೆ ಇಟ್ಟುಕೊಂಡು ಜನರ ಕೈ ಸೇರುತ್ತಿವೆ. ಇದರ ನಡುವೆ ಮೊಟೊರೊಲಾ ಸಹ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಕಡಿಮೆ ಬೆಲೆಗೆ ಒಳ್ಳೆಯ ಫೀಚರ್ಸ್ ಇರುವ ಮೊಬೈಲ್‌ಗಳನ್ನು ನೀಡುತ್ತಾ ಬಂದಿದೆ. ಇಲ್ಲಿ ನಾವು ನಿಮಗೆ 20,000 ಬೆಲೆಯ ಒಳಗೆ ಇರುವ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ನೀವೇನಾದರೂ ಈ ಬಜೆಟ್ನಲ್ಲಿ ಮೊಬೈಲ್‌ ಕೊಂಡುಕೊಳ್ಳುವವರಿದ್ದರೆ ಈ ಲೇಖನ ನಿಮಗೆ ಉಪಯೋಗ ಆಗಲಿದೆ.

ಮೊಟೊರೊಲಾ ಮೊಟೊ ಎಡ್ಜ್‌ 20 ಫ್ಯೂಷನ್‌

ಮೊಟೊರೊಲಾ ಮೊಟೊ ಎಡ್ಜ್‌ 20 ಫ್ಯೂಷನ್‌

ಈ ಸ್ಮಾರ್ಟ್‌ಫೋನ್‌ 6.7 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, 90 Hz ರಿಪ್ರೆಶ್‌ ರೇಟ್‌ ಇದೆ. ಈ ಸ್ಮಾರ್ಟ್‌ಫೋನ್‌ ಸಂಯೋಜಿತ ಗೂಗಲ್ ಸಹಾಯಕ ಬಟನ್ ಆಯ್ಕೆ ಪಡೆದಿದ್ದು, ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 800U CPU ನಿಂದ ಕಾರ್ಯನಿರ್ವಹಿಸಲಿದ್ದು, 6GB ಹಾಗೂ 8GB RAM ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಎರಡೂ ಮಾದರಿಗಳು 128GB ಆಂತರಿಕ ಸ್ಟೋರೇಜ್‌ ಒಳಗೊಂಡಿವೆ. ಟ್ರಿಪಲ್‌ ಕ್ಯಾಮರಾ ರಚನೆ ಇದ್ದು, 108-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಕ್ಯಾಮೆರಾ ಇದರಲ್ಲಿದೆ. ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್‌ನ ಕ್ಯಾಮರಾ ಇದೆ. ಪಾಸ್ಟ್‌ ಚಾರ್ಜಿಂಗ್‌ ಆಗುವ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದರ ಬೆಲೆ 19,999 ರೂ. ಗಳು.

ಮೊಟೊರೊಲಾ ಮೊಟೊ G60

ಮೊಟೊರೊಲಾ ಮೊಟೊ G60

ಈ ಸ್ಮಾರ್ಟ್‌ಫೋನ್‌ ಸಹ ಕಡಿಮೆ ಬೆಲೆಗೆ ಲಭ್ಯವಾಗಲಿದ್ದು, ಇದು 6.8 ಇಂಚಿನ ಎಲ್‌ಸಿಡಿ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. 20.5:9 ರ ಆಕಾರ ಅನುಪಾತ ಇದ್ದು, 120Hz ರಿಫ್ರೆಶ್ ದರ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, 6GB RAM ಮತ್ತು 128GB ಆಂತರಿಕ ಸ್ಟೋರೇಜ್‌ ಇರಲಿದೆ. 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹಾಗೂ 108 ಮೆಗಾಪಿಕ್ಸೆಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಭಾರಿ ಸಾಮರ್ಥ್ಯ ಇರುವ 6000 mAh ಬ್ಯಾಟರಿಯನ್ನು ಪಡೆದಿದೆ. ಇದರ ಬೆಲೆ 17, 999 ರೂ.ಗಳು.

ಮೊರೊರೊಲಾ ಮೊಟೊ G5S ಪ್ಲಸ್‌

ಮೊರೊರೊಲಾ ಮೊಟೊ G5S ಪ್ಲಸ್‌

ಈ ಸ್ಮಾರ್ಟ್‌ಫೋನ್ 5.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಪರದೆಯ ರೆಸಲ್ಯೂಶನ್ 1080 x 1920 ಪಿಕ್ಸೆಲ್‌ ಇದೆ. ಆಂಡ್ರಾಯ್ಡ್ v7.1 ನೌಗಾಟ್ ಆಪರೇಟಿಂಗ್ ಸಿಸ್ಟಮ್ ಜೊತೆಗೆ 2.0GHz ಸ್ನಾಪ್‌ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. 4GB RAM ಹಾಗೂ 64GB ಆಂತರಿಕ ಸಂಗ್ರಹಣೆ ಜೊತೆಗೆ 128GB ವರೆಗೆ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. 13+13 ಮೆಗಾಪಿಕ್ಸೆಲ್‌ ಡ್ಯುಯಲ್ ಹಿಂಬದಿಯ ಕ್ಯಾಮರಾ ಜೊತೆಗೆ LED ಫ್ಲಾಷ್ ಒಳಗೊಂಡಿದೆ. ಜೊತೆಗೆ 8 ಮೆಗಾಪಿಕ್ಸೆಲ್‌ ಮುಂಭಾಗದ ಕ್ಯಾಮೆರಾ ಈ ಸ್ಮಾರ್ಟ್‌ಫೋನ್‌ನಲ್ಲಿದೆ. 3000 mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ 15W ಟರ್ಬೊ ಚಾರ್ಜಿಂಗ್ ವ್ಯವಸ್ಥೆ ಇದೆ. ಇದರ ಬೆಲೆ 16,999 ರೂ.ಗಳು.

ಮೊಟೊರೊಲಾ ಒನ್‌ ಪವರ್

ಮೊಟೊರೊಲಾ ಒನ್‌ ಪವರ್

ಈ ಸ್ಮಾರ್ಟ್‌ಫೋನ್‌ 1080 x 2246 ಪಿಕ್ಸೆಲ್‌ಗಳ ಡಿಸ್‌ಪ್ಲೇ ರೆಸಲ್ಯೂಶನ್‌ನೊಂದಿಗೆ 6.2 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಹೊಂದಿದೆ. ಇದು 1.8GHz ಮತ್ತು 1.6GHz ಗಡಿಯಾರದ ವೇಗದೊಂದಿಗೆ ಎರಡು Kryo 260 ಕ್ವಾಡ್-ಕೋರ್ ಪ್ರೊಸೆಸರ್ ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಚಿಪ್ಸೆಟ್ನಲ್ಲಿ ಕೆಲಸ ನಿರ್ವಹಿಸಲಿವೆ. ಈ ಫೋನ್‌ 4GB RAM ಹಾಗೂ 64GB ಯ ಆಂತರಿಕ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ ಹಾಗೆ ಇದನ್ನು 256GB ವರೆಗೆ ವಿಸ್ತರಿಸಬಹುದು. 16 ಮೆಗಾಪಿಕ್ಸೆಲ್‌ ಮತ್ತು 5 ಮೆಗಾಪಿಕ್ಸೆಲ್‌ ಹೊಂದಿರುವ ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ರಚನೆ ಇದೆ. 12 ಮೆಗಾಪಿಕ್ಸೆಲ್‌ ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಷ್ ಅನ್ನು ಸಹ ಒಳಗೊಂಡಿದೆ ಜೊತೆಗೆ ಇದು 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ವೈ-ಫೈ 802.11, ಬ್ಲೂಟೂತ್ v5.0, GPS, ಗ್ಲೋನಾಸ್, USB ಟೈಪ್-C ಇದರ ಇನ್ನಿತರ ವೈಶಿಷ್ಟ.ಇದರ ಬೆಲೆ 15.999 ರೂ.ಗಳು.

ಮೊಟೊರೊಲಾ ಮೊಟೊ G31

ಮೊಟೊರೊಲಾ ಮೊಟೊ G31

ಈ ಸ್ಮಾರ್ಟ್‌ಫೋನ್‌ 6.4 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. 2 GHz, 1.8 GHz ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೋ G85 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. 64GB ಆಂತರಿಕ ಸ್ಟೋರೇಜ್‌ ಜೊತೆಗೆ 4GB RAM, 128GB ಆಂತರಿಕ ಸ್ಟೋರೇಜ್‌ ಜೊತೆಗೆ 4GB RAM ವೇರಿಯಂಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯ. ಇದು ಕ್ರಮವಾಗಿ 50+8+2 ಮೆಗಾಪಿಕ್ಸೆಲ್‌ನ ಟ್ರಿಪಲ್‌ ಕ್ಯಾಮರಾ ರಚನೆ ಹೊಂದಿದೆ ಹಾಗೂ 13 ಮೆಗಾಪಿಕ್ಸೆಲ್‌ ಸಿಂಗಲ್‌ ಸೆಲ್ಪಿ ಕ್ಯಾಮೆರಾ ಈ ಸ್ಮಾರ್ಟ್‌ಫೋನ್‌ನಲ್ಲಿದೆ. 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮೊಬೈಲ್‌ ಮಿನರಲ್‌ ಗ್ರೇ ಹಾಗೂ ಬೇಬಿ ಬ್ಲೂ ಬಣ್ಣದಲ್ಲಿ ಲಭ್ಯ. ಇದರ ಬೆಲೆ 12.999ರೂ. ಗಳು.

Best Mobiles in India

English summary
Best Motorola phones under 20000 in India offer numerous features. here we describe this mobile features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X