20,000 ರುಪಾಯಿಗಳೊಳಗಿನ ಎಲ್.ಇ.ಡಿ ಫ್ಲಾಷ್ ಹೊಂದಿರುವ ಸ್ವಂತಿ ಕ್ಯಾಮೆರಾ ಇರುವ ಟಾಪ್ 8 ಆ್ಯಂಡ್ರಾಯ್ಡ್ ಫೋನುಗಳು.

|

ಸ್ವಂತಿ ತೆಗೆಯುವ ಹವ್ಯಾಸ ಪ್ರಾರಂಭವಾಗಿ ಕೆಲವೇ ವರುಷಗಳಾಗಿವೆ, ಆದರೆ ಈ ಹವ್ಯಾಸ ಸರ್ವವ್ಯಾಪಿಯಾಗಿಬಿಟ್ಟಿದೆ!ಸ್ವಂತಿ ಗೀಳಿರುವ ಅನೇಕರನ್ನು ನೀವು ನಿಮ್ಮ ಸುತ್ತಮುತ್ತ ನೋಡಿರಬಹುದು ಅಥವಾ ನೀವೇ ಒಬ್ಬರಾಗಿರಬಹುದು!

ಓದಿರಿ: ಸ್ಯಾಮ್ಸಂಗ್, ಹೆಚ್.ಟಿ.ಸಿ ಮತ್ತು ಇತರೆ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ರಹಸ್ಯ ಕೋಡುಗಳು
ಸ್ವಂತಿ ತೆಗೆಯುವುದು ನಿಮಗೆ ಆಸಕ್ತಿದಾಯಕವಾಗಿದ್ದರೆ, ಉತ್ತಮ ಸ್ವಂತಿ ಚಿತ್ರಗಳನ್ನು ತೆಗೆಯುವ ಸೌಲಭ್ಯವಿರುವ ಫೋನುಗಳನ್ನು ನೀವು ಖರೀದಿಸಬೇಕು, ಮುಂಭಾಗದ ಸ್ವಂತಿ ಕ್ಯಾಮೆರಾದ ಜೊತೆಗೊಂದು ಎಲ್.ಇ.ಡಿ ಫ್ಲಾಷ್ ಇದ್ದರೆ ಇನ್ನೂ ಉತ್ತಮ. ಇತ್ತೀಚೆಗಷ್ಟೇ ಬಿಡುಗಡೆಯಾದ ಒಪ್ಪೋ ಎಫ್1ಎಸ್ ಫೋನಿನಲ್ಲಿ 16 ಮೆಗಾಪಿಕ್ಸಲ್ಲಿನ ಮುಂಭಾಗದ ಕ್ಯಾಮೆರಾ ಹಾಗೂ ಚಿತ್ರ ಸುಂದರವಾಗಿಸಲು ಬ್ಯೂಟಿಫೈ 4.0 ಲಭ್ಯವಿತ್ತು. ಒಪ್ಪೋ ಎಫ್1ಎಸ್ಸಿನ ಬೆಲೆ 17,990.

ಓದಿರಿ: ಐಫೋನ್ ಛಾಯಾಗ್ರಹಣದಲ್ಲಿ ಮಾಡುವ ಹತ್ತು ಸಾಮಾನ್ಯ ತಪ್ಪುಗಳು.. ಅದನ್ನು ತಪ್ಪಿಸುವುದೇಗೆ
ಸ್ವಂತಿ ತೆಗೆಯುವ ಆಸಕ್ತಿಯುಳ್ಳವರಿಗೆ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋ ತೆಗೆಯುವ ಸಾಮರ್ಥ್ಯವಿರುವ 20,000 ರುಪಾಯಿಗಳೊಳಗಿನ, ಮುಂಭಾಗದಲ್ಲಿ ಎಲ್.ಇ.ಡಿ ಫ್ಲಾಷ್ ಇರುವ ಫೋನುಗಳ ಪಟ್ಟಿಯನ್ನಿಲ್ಲಿ ನೀಡುತ್ತಿದ್ದೇವೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಪಟ್ಟಿಯನ್ನು ನೋಡಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 (2016)

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 (2016)

•5.5 ಇಂಚಿನ ಸೂಪರ್ ಅಮೊಲೆಡ್ ಹೆಚ್.ಡಿ ಪರದೆ
•1.6 ಗಿಗಾಹರ್ಟ್ಜ್ ಸಾಮರ್ಥ್ಯದ ಎಂಟು ಹೃದಯಗಳ ಎಕ್ಸಿನೋಸ್ 7870 ಪ್ರೊಸೆಸರ್, 2 ಜಿಬಿ ರ್ಯಾಮ್
•ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಎರಡು ಸಿಮ್ ಹಾಕುವ ಸೌಲಭ್ಯ
•f/1.9 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿದ 13 ಮೆಗಾಪಿಕ್ಸಲ್ಲಿನ ಮುಖ್ಯ ಕ್ಯಾಮೆರಾ, ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸಲ್ಲಿನ ಮುಂಬದಿಯ ಸ್ವಂತಿ ಕ್ಯಾಮೆರ ಮತ್ತು 120 ಡಿಗ್ರಿಯ ವೈಡ್ ಆ್ಯಂಗಲ್ ಲೆನ್ಸ್
•4ಜಿ ಎಲ್.ಟಿ.ಇ ಸೌಲಭ್ಯ, 3,300 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 (2016)

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ5 (2016)

•5.2 ಇಂಚಿನ ಸೂಪರ್ ಅಮೊಲೆಡ್ ಹೆಚ್.ಡಿ ಪರದೆ
•1.2 ಗಿಗಾಹರ್ಟ್ಜ್ ಸಾಮರ್ಥ್ಯದ ಎಂಟು ಹೃದಯಗಳ ಸ್ನಾಪ್ ಡ್ರಾಗನ್ 410 ಪ್ರೊಸೆಸರ್, 2 ಜಿಬಿ ರ್ಯಾಮ್
•16 ಜಿಬಿಯಷ್ಟು ಆಂತರಿಕ ಸಂಗ್ರಹ; 128ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯ
•ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಎರಡು ಸಿಮ್ ಹಾಕುವ ಸೌಲಭ್ಯ
•f/1.9 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿದ 13 ಮೆಗಾಪಿಕ್ಸಲ್ಲಿನ ಮುಖ್ಯ ಕ್ಯಾಮೆರಾ, ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸಲ್ಲಿನ ಮುಂಬದಿಯ ಸ್ವಂತಿ ಕ್ಯಾಮೆರ ಮತ್ತು 120 ಡಿಗ್ರಿಯ ವೈಡ್ ಆ್ಯಂಗಲ್ ಲೆನ್ಸ್
•4ಜಿ ಎಲ್.ಟಿ.ಇ ಸೌಲಭ್ಯ, 3,100 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ

ಮೈಕ್ರೊಮ್ಯಾಕ್ಸ್ ಯುನೈಟ್ 4

ಮೈಕ್ರೊಮ್ಯಾಕ್ಸ್ ಯುನೈಟ್ 4

•5 ಇಂಚಿನ ಹೆಚ್.ಡಿ ಐ.ಪಿ.ಎಸ್ ಪರದೆ
•1 ಗಿಗಾಹರ್ಟ್ಜಿನ ನಾಲ್ಕು ಹೃದಯಗಳ ಮೀಡಿಯಾಟೆಕ್ ಎಂಟಿ6735ಪಿ ಪ್ರೊಸೆಸರ್, 1 ಜಿಬಿ ರ್ಯಾಮ್
•8 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, 64 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
•ಇಂಡಸ್ ಓಎಸ್ಸಿನೊಂದಿಗೆ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಎರಡು ಸಿಮ್ ಹಾಕುವ ಸೌಲಭ್ಯ
•ಎಲ್.ಇ.ಡಿ ಫ್ಲಾಷ್ ಇರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ, ಎಲ್.ಇ.ಡಿ ಫ್ಲಾಷ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ
•4ಜಿ ಎಲ್.ಟಿ.ಇ, 2500 ಎಂ.ಎ.ಹೆಚ್ ಬ್ಯಾಟರಿ, ಬೆರಳಚ್ಚು ಸಂವೇದಕ

ಲೈಫ್ ಅರ್ಥ್ 2

ಲೈಫ್ ಅರ್ಥ್ 2

•5 ಇಂಚಿನ ಫುಲ್ ಹೆಚ್.ಡಿ, ಐ.ಪಿ.ಎಸ್, 2.5 ಡಿ ಬಾಗಿದ ಪರದೆ, ಗೊರಿಲ್ಲಾ ಗಾಜು 3
•1.5ಗಿಗಾಹರ್ಟ್ಜಿನ ಎಂಟು ಹೃದಯಗಳ ಸ್ನಾಪ್ ಡ್ರಾಗನ್ 615 ಪ್ರೊಸೆಸರ್, 3ಜಿಬಿ ರ್ಯಾಮ್
•32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, 64 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
•ಆ್ಯಂಡ್ರಾಯ್ಡ್ 5.1.1 ಲಾಲಿಪಪ್, ಎರಡು ಸಿಮ್
•ಎಲ್.ಇ.ಡಿ ಫ್ಲಾಷ್ ಮತ್ತು ಲೇಸರ್ ಆಟೋಫೋಕಸ್ ಇರುವ 13 ಮೆಗಾಪಿಕ್ಸಲ್ಲಿನ ಹಿಂಬದಿ ಕ್ಯಾಮೆರಾ, ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸಲ್ಲಿನ ಸ್ವಂತಿ ಕ್ಯಾಮೆರ
•4ಜಿ ಎಲ್.ಟಿ.ಇ, 2500 ಎಂ.ಎ.ಹೆಚ್ ಬ್ಯಾಟರಿ, ಬೆರಳಚ್ಚು ಸಂವೇದಕ

ಲಾವಾ ಎಕ್ಸ್81

ಲಾವಾ ಎಕ್ಸ್81

•5 ಇಂಚಿನ ಹೆಚ್.ಡಿ, ಐ.ಪಿ.ಎಸ್, 2.5 ಡಿ ಬಾಗಿದ ಪರದೆ, ಗೊರಿಲ್ಲಾ ಗಾಜು 3
•1.3 ಗಿಗಾಹರ್ಟ್ಜಿನ ನಾಲ್ಕು ಹೃದಯಗಳ ಮೀಡಿಯಾಟೆಕ್ ಪ್ರೊಸೆಸರ್, 3 ಜಿಬಿ ರ್ಯಾಮ್
•16 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, 64 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
•ಸ್ಟಾರ್ ಓಎಸ್ಸಿನೊಂದಿಗೆ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಎರಡು ಸಿಮ್ ಹಾಕುವ ಸೌಲಭ್ಯ
•f/2.0 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿದ 13 ಮೆಗಾಪಿಕ್ಸಲ್ಲಿನ ಹಿಂಬದಿ ಕ್ಯಾಮೆರಾ, ಎಲ್.ಇ.ಡಿ ಫ್ಲಾಷ್ ಹೊಂದಿದ 5 ಮೆಗಾಪಿಕ್ಸಲ್ಲಿನ ಸ್ವಂತಿ ಕ್ಯಾಮೆರ
•4ಜಿ ಎಲ್.ಟಿ.ಇ, 2700 ಎಂ.ಎ.ಹೆಚ್ ಬ್ಯಾಟರಿ

ಏಸಸ್ ಝೆನ್ ಫೋನ್ ಸೆಲ್ಫಿ

ಏಸಸ್ ಝೆನ್ ಫೋನ್ ಸೆಲ್ಫಿ

•5.5 ಇಂಚಿನ ಫುಲ್ ಹೆಚ್.ಡಿ, ಪರದೆ, ಗೊರಿಲ್ಲಾ ಗಾಜು 4
•ಎಂಟು ಹೃದಯಗಳ ಸ್ನಾಪ್ ಡ್ರಾಗನ್ 615 ಪ್ರೊಸೆಸರ್, 2ಜಿಬಿ/3ಜಿಬಿ ರ್ಯಾಮ್
•16/32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, 64 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
•ಝೆನ್ ಯು.ಐ 2.0 ಹೊಂದಿರುವ ಆ್ಯಂಡ್ರಾಯ್ಡ್ 5.0 ಲಾಲಿಪಪ್, ಎರಡು ಸಿಮ್
•f/2.0 ಅಪರ್ಚರ್, ಎಲ್.ಇ.ಡಿ ಫ್ಲಾಷ್ ಹೊಂದಿದ 13 ಮೆಗಾಪಿಕ್ಸಲ್ಲಿನ ಹಿಂಬದಿ ಕ್ಯಾಮೆರಾ, ಎಲ್.ಇ.ಡಿ ಫ್ಲಾಷ್ ಮತ್ತು ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 13 ಮೆಗಾಪಿಕ್ಸಲ್ಲಿನ ಸ್ವಂತಿ ಕ್ಯಾಮೆರ
•4ಜಿ ಎಲ್.ಟಿ.ಇ, 3000 ಎಂ.ಎ.ಹೆಚ್ ಬ್ಯಾಟರಿ

ಲೈಫ್ ವಾಟರ್ 1

ಲೈಫ್ ವಾಟರ್ 1

•5.5 ಇಂಚಿನ ಅಮೊಲೆಡ್ ಫುಲ್ ಹೆಚ್.ಡಿ ಪರದೆ
•1.5 ಗಿಗಾಹರ್ಟ್ಜಿನ ಎಂಟು ಹೃದಯಗಳ ಸ್ನಾಪ್ ಡ್ರಾಗನ್ 615 ಪ್ರೊಸೆಸರ್, 3 ಜಿಬಿ ರ್ಯಾಮ್
•32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
•ಆ್ಯಂಡ್ರಾಯ್ಡ್ 5.1.1 ಲಾಲಿಪಪ್, ಎರಡು ಸಿಮ್
•ಎಲ್.ಇ.ಡಿ ಫ್ಲಾಷಿನೊಂದಿಗೆ 13 + 2 ಮೆಗಾಪಿಕ್ಸಲ್ಲಿನ ಎರಡು ಕ್ಯಾಮೆರಾ ಹಿಂಬದಿಯಲ್ಲಿ, ಹೆಚ್.ಡಿ.ಆರ್ ಮತ್ತು ಎಲ್.ಇ.ಡಿ ಫ್ಲಾಷ್ ಸೌಲಭ್ಯವಿರುವ 5 ಮೆಗಾಪಿಕ್ಸಲ್ಲಿನ ಸ್ವಂತಿ ಕ್ಯಾಮೆರ
•4ಜಿ ಎಲ್.ಟಿ.ಇ, 3500 ಎಂ.ಎ.ಹೆಚ್ ಬ್ಯಾಟರಿ

ಟಿಸಿಎಲ್ 562

ಟಿಸಿಎಲ್ 562

•5.5 ಇಂಚಿನ ಫುಲ್ ಹೆಚ್.ಡಿ ಪರದೆ
•ಎಂಟು ಹೃದಯಗಳ ಮೀಡಿಯಾಟೆಕ್ ಹೆಲಿಯೋ ಪಿ 10 ಪ್ರೊಸೆಸರ್, 3 ಜಿಬಿ ರ್ಯಾಮ್
•32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯ, 64 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು
•ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಎರಡು ಸಿಮ್
•f/2.0 ಅಪರ್ಚರ್, ಎರಡು ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸಲ್ಲಿನ ಹಿಂಬದಿ ಕ್ಯಾಮೆರಾ, ವೈಡ್ ಆ್ಯಂಗಲ್ ಲೆನ್ಸ್ ಹೊಂದಿದ 5 ಮೆಗಾಪಿಕ್ಸಲ್ಲಿನ ಸ್ವಂತಿ ಕ್ಯಾಮೆರ
•4ಜಿ ಎಲ್.ಟಿ.ಇ, 2500 ಎಂ.ಎ.ಹೆಚ್ ಬ್ಯಾಟರಿ, ಬೆರಳಚ್ಚು ಸಂವೇದಕ

Best Mobiles in India

English summary
With the growing selfie trend, you can get a smartphone with a front-facing flash to get amazing low light selfies. Take a look at some of the best Android smartphones priced less than Rs 20,000 with front flash from here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X