ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ನೋಕಿಯಾ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಇತ್ತೀಚೆಗೆ ಹೆಚ್ಎಂಡಿ ಗ್ಲೋಬಲ್ ತನ್ನ ಕೆಲವು ಎಂಟ್ರಿ-ಲೆವೆಲ್ ಹ್ಯಾಂಡ್ ಸೆಟ್ ಗಳನ್ನು ಆಂಡ್ರಾಯ್ಡ್ 10(ಗೋ ಎಡಿಷನ್) ಓಎಸ್ ನಲ್ಲಿ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿತ್ತು. ಮುಂದಿನ ಡಿವೈಸ್ ಗಳಲ್ಲಿ ಕಂಪೆನಿಯು ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಇಟ್ಟಿರುವ ಸಾಧ್ಯತೆ ಇದೆ. ಸದ್ಯ ಭಾರತದಲ್ಲಿ ನೀವು ಕೆಲವು ನೋಕಿಯಾ ಡಿವೈಸ್ ಗಳನ್ನು ಖರೀದಿಸಬಹುದಾಗಿದ್ದು ಫ್ಲಿಪ್ ಕಾರ್ಟ್ ನಡೆಸುತ್ತಿರುವ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಭರ್ಜರಿ ರಿಯಾಯಿತಿ ಮತ್ತು ಆಫರ್ ಗಳನ್ನು ಈ ಫೋನ್ ಗಳಿಗೆ ನೀಡಲಾಗುತ್ತಿದೆ.

ನೋಕಿಯಾ ಸ್ಮಾರ್ಟ್ ಫೋನ್ ಗಳಿಗೆ ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ರಿಯಾಯಿತಿಗಳು ಮತ್ತು ಆಫರ್ ಗಳು

ಬಳಕೆದಾರರು ನೋಕಿಯಾ ಫೋನ್ ಗಳನ್ನು ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸುವ ಮೂಲಕ ಖರೀದಿಸಿ 5% ಕ್ಯಾಷ್ ಬ್ಯಾಕ್ ನ್ನು ಪಡೆದುಕೊಳ್ಳಬಹುದು ಮತ್ತು ಜೊತೆಗೆ ಆಕ್ಸಿಸ್ ಬ್ಯಾಂಕಿನ ಬಝ್ ಕ್ರೆಡಿಟ್ ನಲ್ಲೂ ಕೂಡ ಹೆಚ್ಚುವರಿ 5% ರಿಯಾಯಿತಿ ಪಡೆಯುವುದಕ್ಕೆ ಅವಕಾಶವಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ಅನಿಯಮಿತ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ. ವಾರೆಂಟಿ ಸೇವೆಗಳು, ಫ್ಲಿಪ್ ಕಾರ್ಟಿನ ಸೇಲ್ ಸಮಯದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಳ್ಳುವುದಾದರೆ 10% ವಾರೆಂಟಿ ಸೇವೆಗಳು ಕೂಡ ಲಭ್ಯವಾಗುತ್ತದೆ.

ನೋಕಿಯಾ 6.1 ಪ್ಲಸ್ ಗೆ ರುಪಾಯಿ. 12,099

ನೋಕಿಯಾ 6.1 ಪ್ಲಸ್ ಗೆ ರುಪಾಯಿ. 12,099

ಈ ಸ್ಮಾರ್ಟ್ ಫೋನ್ ರಿಯಾಯಿತಿ ಬೆಲೆಯಲ್ಲಿ ಅಂದರೆ 12,999 ರುಪಾಯಿ ಬೆಲೆಯ ಆಯ್ಕೆಯಲ್ಲಿ ನಿಮಗೆ ಕೈಗೆಟುಕುತ್ತದೆ. ಹೆಚ್ಚುವರಿಯಾಗಿ 2,780 ಆಫರ್ ನಿಮಗೆ ಈ ಹ್ಯಾಂಡ್ ಸೆಟ್ ಗೆ ಸಿಗುತ್ತದೆ. ಇದರಲ್ಲಿ 3,060 mAh ಬ್ಯಾಟರಿ ಸೌಲಭ್ಯವಿದ್ದು, ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ಮತ್ತು FHD+ ಡಿಸ್ಪ್ಲೇ ಇದೆ.

ನೋಕಿಯಾ 2.2 ಗೆ ರುಪಾಯಿ 6,999

ನೋಕಿಯಾ 2.2 ಗೆ ರುಪಾಯಿ 6,999

ಈ ಸ್ಮಾರ್ಟ್ ಫೋನ್ ನಿಮಗೆ ಮಾಸಿಕ 584 ರುಪಾಯಿ ಇಎಂಐ ಆಯ್ಕೆಯಲ್ಲಿ ಕೂಡ ಲಭ್ಯವಿದೆ. ಇದನ್ನು ಖರೀದಿಸುವುದರಿಂದಾಗಿ ನಿಮಗೆ ಹೆಚ್ಚುವರಿಯಾಗಿ 1,600 ರುಪಾಯಿ ರಿಯಾಯಿತಿ ಸಿಗುತ್ತದೆ.

ನೋಕಿಯಾ 3.1 ಪ್ಲಸ್ ಗೆ ರುಪಾಯಿ 8,079

ನೋಕಿಯಾ 3.1 ಪ್ಲಸ್ ಗೆ ರುಪಾಯಿ 8,079

ಈ ಫೋನ್ ನಿಮಗೆ ರಿಯಾಯಿತಿ ಬೆಲೆಯಲ್ಲಿ ಅಂದರೆ 8,079 ರುಪಾಯಿಗೆ ಸಿಗುತ್ತದೆ. ಈ ಹ್ಯಾಂಡ್ ಸೆಟ್ ನ ಬೆಸ್ಟ್ ಫೀಚರ್ ಎಂದರೆ ಇದರಲ್ಲಿ 3GB RAM, 32 GB ROM, 6-ಇಂಚಿನ ಡಿಸ್ಪ್ಲೇ, 13MP ಹಿಂಭಾಗದ ಕ್ಯಾಮರಾ ಮತ್ತು 3500 mAh ಬ್ಯಾಟರಿ ವ್ಯವಸ್ಥೆ ಇದೆ.

ನೋಕಿಯಾ 3.2 ಗೆ 7,999 ರುಪಾಯಿಗಳು

ನೋಕಿಯಾ 3.2 ಗೆ 7,999 ರುಪಾಯಿಗಳು

ಈ ಸ್ಮಾರ್ಟ್ ಫೋನ್ ನಿಮಗೆ 7,800 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಲಭ್ಯವಾಗುತ್ತದೆ. ನಿಮಗೆ 2,200 ರುಪಾಯಿ ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಾಗುತ್ತದೆ. 7,999 ರುಪಾಯಿ ಬೆಲೆಗೆ ಈ ಡಿವೈಸ್ ನಲ್ಲಿ ಆಶ್ಚರ್ಯವೆನ್ನುವಂತೆ 4,000 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಸೌಲಭ್ಯವಿರುತ್ತದೆ.

ನೋಕಿಯಾ 5.1 ಗೆ 7,999 ರುಪಾಯಿಗಳು

ನೋಕಿಯಾ 5.1 ಗೆ 7,999 ರುಪಾಯಿಗಳು

ಬೇರೆಬೇರೆ ರೀತಿಯ ಇಎಂಐ ಪ್ಲಾನ್ ನಲ್ಲಿ ನೀವು ಈ ಡಿವೈಸ್ ನ್ನು ಖರೀದಿಸಬಹುದು. ಆರಂಭಿಕ ಪ್ಲಾನ್ ಮಾಸಿಕ 514 ರುಪಾಯಿ ಬೆಲೆಯಲ್ಲಿ ಸಿಗುತ್ತದೆ.3GB RAM ಮತ್ತು 32GB ROM ಇರುವ ಸ್ಟೋರೇಜ್ ಆಯ್ಕೆಗೆ 7,999 ರುಪಾಯಿಗಳು.

ನೋಕಿಯಾ 8.1 ಗೆ 14,499 ರುಪಾಯಿಗಳು

ನೋಕಿಯಾ 8.1 ಗೆ 14,499 ರುಪಾಯಿಗಳು

ಈ ಸ್ಮಾರ್ಟ್ ಫೋನ್ ಮಾಸಿಕ 1,248 ರುಪಾಯಿ ಇಎಂಐ ಆಯ್ಕೆಯಲ್ಲಿ ಲಭ್ಯವಾಗುತ್ತದೆ. ಇದು 6GB RAM,ಫುಲ್ HD+ ಡಿಸ್ಪ್ಲೇ ಮತ್ತು ಸ್ನ್ಯಾಪ್ ಡ್ರ್ಯಾಗನ್ 710 ಸಾಕೆಟ್ ನ್ನು ಹೊಂದಿರುತ್ತದೆ.

ನೋಕಿಯಾ 3.1 ಗೆ 7,999 ರುಪಾಯಿಗಳು

ನೋಕಿಯಾ 3.1 ಗೆ 7,999 ರುಪಾಯಿಗಳು

ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸುವ ಮುಖಾಂತರ ಈ ಹ್ಯಾಂಡ್ ಸೆಟ್ ಗೆ ನೀವು 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು. 377 ರುಪಾಯಿ ಮಾಸಿಕ ಕಂತಿನ ರೂಪದಲ್ಲೂ ಕೂಡ ಖರೀದಿಸುವ ಅವಕಾಶ ಗ್ರಾಹಕರಿಗಿದೆ.

ನೋಕಿಯಾ 7.1 ಗೆ 12,399 ರುಪಾಯಿಗಳು

ನೋಕಿಯಾ 7.1 ಗೆ 12,399 ರುಪಾಯಿಗಳು

ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 10% ಇನ್ಸೆಂಟ್ ರಿಯಾಯಿತಿಯನ್ನು ಈ ಹ್ಯಾಂಡ್ ಸೆಟ್ ಗೆ ಪಡೆದುಕೊಳ್ಳಬಹುದು. 377 ರುಪಾಯಿಯ ಮಾಸಿಕ ಇಎಂಐ ಆಯ್ಕೆಯಲ್ಲೂ ಕೂಡ ಖರೀದಿಸುವ ಅವಕಾಶವಿದೆ.

ನೋಕಿಯಾ 7.2 ಗೆ 18,599 ರುಪಾಯಿಗಳು

ನೋಕಿಯಾ 7.2 ಗೆ 18,599 ರುಪಾಯಿಗಳು

ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸುವ ಮೂಲಕ 10% ಇನ್ಸೆಂಟ್ ರಿಯಾಯಿತಿಯನ್ನು ಈ ಹ್ಯಾಂಡ್ ಸೆಟ್ ಗೆ ಪಡೆದುಕೊಳ್ಳಬಹುದು. 377 ರುಪಾಯಿಯ ಮಾಸಿಕ ಇಎಂಐ ಆಯ್ಕೆಯಲ್ಲೂ ಕೂಡ ಖರೀದಿಸುವ ಅವಕಾಶವಿದೆ.

Best Mobiles in India

English summary
Flipkart Big Billion Days Sale: Offers and Discounts on Nokia Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X