ಫ್ಲಿಪ್‌ಕಾರ್ಟ್‌ನಲ್ಲಿ 'ವಿವೋ' ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

|

ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್ ಭರ್ಜರಿ ಆಫರ್‌ಗಳನ್ನು ನೀಡಿತ್ತಾ ಸಾಗಿದ್ದು, ಅದರಲ್ಲೂ ಗ್ಯಾಜೆಟ್‌ಗಳಿಗೆ ವಿಶೇಷ ಡಿಸ್ಕೌಂಟ್‌ಗಳನ್ನು ಒದಗಿಸುತ್ತದೆ. ಹೀಗಾಗಿ ಫ್ಲಿಪ್‌ಕಾರ್ಟ್‌ ಬಹುತೇಕರಿಗೆ ಸ್ಮಾರ್ಟ್‌ಫೋನ್‌ ಖರೀದಿಸುವ ಫೇವರೇಟ್ ತಾಣವಾಗಿದೆ. ಇದೀಗ ಇ ಕಾಮರ್ಸ್‌ ದೈತ್ಯ 'ವಿವೋ' ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇದೀಗ ಬಿಗ್‌ ಡಿಸ್ಕೌಂಟ್‌ ನೀಡಿದೆ.

ಫ್ಲಿಪ್‌ಕಾರ್ಟ್‌ನಲ್ಲಿ 'ವಿವೋ' ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

ಹೌದು, ಫ್ಲಿಪ್‌ಕಾರ್ಟ್‌ ಚೀನಾ ಮೂಲದ ವಿವೋ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ರಿಯಾಯಿತಿ ನೀಡಿದ್ದು, ಅವುಗಳಲ್ಲಿ ವಿವೋ ನೆಕ್ಸ್‌, ವಿವೋ ವಿ11 ಪ್ರೊ, ವಿವೋ ವಿ9 ಪ್ರೊ, ವಿವೋ ವೈ95, ವಿವೋ ವಿ11, ವಿವೋ ವೈ81 ಸೇರಿದಂತೆ ಆಯ್ದ ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ ಡಿಸ್ಕೌಂಟ್‌ ಲಭ್ಯವಾಗಲಿದೆ. ಸದ್ಯ ವಿವೋ ಸ್ಮಾರ್ಟ್‌ಫೋನ್ ಖರೀದಿಸಲು ಗ್ರಾಹಕರಿಗೆ ಇದು ಸುಗ್ಗಿಕಾಲ ಎನ್ನಬಹುದಾಗಿದೆ.

ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!

ಫ್ಲಿಪ್‌ಕಾರ್ಟ್‌ನಲ್ಲಿ 'ವಿವೋ' ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರಿಗೆ ಫ್ಲಿಪ್‌ಕಾರ್ಟ್‌ ರಿಯಾಯಿತಿ ಸೇರಿದಂತೆ ಕೇಲವು ಆಯ್ದ ಬ್ಯಾಂಕ್‌ಗಳಿಂದ ನೋ ಕಾಸ್ಟ್‌ ಇಎಮ್‌ಐ ಆಯ್ಕೆ ದೊರೆಯಲಿದೆ. ಜೊತೆಗೆ ಆಕ್ಸಸ್‌ ಬಜ್‌ ಕ್ರೆಡಿಟ್‌ ಕಾರ್ಡ್‌ ಹೊಂದಿದ ಗ್ರಾಹಕರಿಗೆ ಶೇ.5% ಡಿಸ್ಕೌಂಟ್‌ ಸೀಗಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿಗೆ ಲಭ್ಯವಿರುವ ವಿವೋ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : 'ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್‌'ನ ಹಿಡೆನ್‌ ಕ್ಯಾಮೆರಾ ಫೀಚರ್ಸ್‌ ಬಗ್ಗೆ ನಿಮಗೆ ಗೊತ್ತಾ? ಓದಿರಿ : 'ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್‌'ನ ಹಿಡೆನ್‌ ಕ್ಯಾಮೆರಾ ಫೀಚರ್ಸ್‌ ಬಗ್ಗೆ ನಿಮಗೆ ಗೊತ್ತಾ?

ವಿವೋ ನೆಕ್ಸ್

ವಿವೋ ನೆಕ್ಸ್

6.59 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 845 ಚೀಪ್‌ಸೆಟ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್‌ ಸ್ಥಳಾವಕಾಶವನ್ನು ಒಳಗೊಂಡಿದೆ. ಹಿಂಬದಿಯಲ್ಲಿ ಡ್ಯುಯಲ್‌(12+5ಎಂಪಿ) ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ನೀಡಲಾಗಿದೆ. ಇದರ ಬೆಲೆಯು 44,990ರೂ ಆಗಿದ್ದು, ಈಗ ಆಫರ್‌ನಲ್ಲಿ 39,990ರೂ.ಗಳಿಗೆ ಲಭ್ಯವಾಗಲಿದೆ.

ವಿವೋ ವಿ11 ಪ್ರೊ

ವಿವೋ ವಿ11 ಪ್ರೊ

ವಿವೋ ವಿ11 ಪ್ರೊ ಸ್ಮಾರ್ಟ್‌ಫೋನ್‌ 6.41 ಇಂಚಿನ ಸಂಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್‌ 660 SoC ಪ್ರೊಸೆಸರ್‌ ಹೊಂದಿದೆ. 6GB RAM ಮತ್ತು 64GB ಸ್ಟೋರೇಜ್‌ ಸಾಮರ್ಥ್ಯವಿದ್ದು, ಹಿಂಬದಿಯಲ್ಲಿ ಡ್ಯುಯಲ್‌(12+5ಎಂಪಿ) ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿಗಾಗಿ 25 ಎಂಪಿ ಕ್ಯಾಮೆರಾ ನೀಡಲಾಗಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯ ಇದೆ. ಆಫರ್‌ ಬೆಲೆಯು 23,990ರೂ.ಗಳು ಆಗಿದೆ.

ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!ಓದಿರಿ : ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್ ನೀಡಿದ 'ಯೂಟ್ಯೂಬ್'!

ವಿವೋ ವಿ11

ವಿವೋ ವಿ11

ಈ ಸ್ಮಾರ್ಟ್‌ಫೋನ್‌ ಮೀಟಿಯಾಟೆಕ್‌ ಹಿಲಿಯೊ P60 ಚಿಪ್‌ಸೆಟ್‌ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. 6GB RAM ಮತ್ತು 64GB ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿದ್ದು, 6 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹಾಗೆಯೇ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ಹೊಂದಿದ್ದು, ಅವುಗಳಯ 16+5ಎಂಪಿ ಸಾಮರ್ಥ್ಯದಲ್ಲಿವೆ. ಸೆಲ್ಫಿಗಾಗಿ 25ಎಂಪಿ ಕ್ಯಾಮೆರಾ ನೀಡಲಾಗಿದೆ. ಆಫರ್‌ ಬೆಲೆಯು 19,990ರೂ.ಗಳು ಆಗಿದೆ.

ವಿವೋ ವಿ9 ಪ್ರೊ

ವಿವೋ ವಿ9 ಪ್ರೊ

4GB RAM ಮತ್ತು 64GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರುವ ವಿವೋ ವಿ9 ಪ್ರೊ ಸ್ಮಾರ್ಟ್‌ಫೋನ್‌ ಆಫರ್‌ನಲ್ಲಿ 14,990ರೂ.ಗಳಿಗೆ ಲಭ್ಯವಿದೆ. ಈ ಫೋನ್‌ 6.3 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರಾಗನ್‌ 660 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದೆ. ಹಿಂಬದಿಯಲ್ಲಿ 13+2ಎಂಪಿ ಸೆನ್ಸಾರ್‌ನ ಡ್ಯುಯಲ್‌ ಕ್ಯಾಮೆರಾ ಇದ್ದು, ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಹೊಂದಿದೆ.

ವಿವೋ ವೈ95

ವಿವೋ ವೈ95

ವಿವೋ ವೈ95 ಸ್ಮಾರ್ಟ್‌ಫೋನ್‌ 720 x 1520 ಪಿಕ್ಸಲ್‌ ರೆಸಲ್ಯೂಶನ್‌ ನೊಂದಿಗೆ 6.22 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. 4GB RAM ಮತ್ತು 64GB ಸಂಗ್ರಹದ ಶಕ್ತಿ ಇದ್ದು, ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್‌ ಹಾಗೂ ಅಂಡ್ರೆನೊ 505 GPU ಸಹ ಇದೆ. ಎರಡು ಕ್ಯಾಮೆರಾ ಒದಗಿಸಲಾಗಿದ್ದು, ಜೊತೆಗೆ 4,030mAh ಸಾಮರ್ಥ್ಯದ ಬಿಗ್‌ ಬ್ಯಾಟರಿಯನ್ನು ಒಳಗೊಂಡಿದೆ.

ಓದಿರಿ : 'ಅಮೆಜಾನ್ ಅಲೆಕ್ಸಾ'ದಲ್ಲಿ ಬಹುಶಃ ಇಂಥದೊಂದು ಫೀಚರ್‌ ನೀವು ನಿರೀಕ್ಷಿಸಿರಲಿಲ್ಲ!ಓದಿರಿ : 'ಅಮೆಜಾನ್ ಅಲೆಕ್ಸಾ'ದಲ್ಲಿ ಬಹುಶಃ ಇಂಥದೊಂದು ಫೀಚರ್‌ ನೀವು ನಿರೀಕ್ಷಿಸಿರಲಿಲ್ಲ!

Best Mobiles in India

English summary
Flipkart is offering discounts up to Rs 10,200 on several Vivo smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X