ಸ್ಮಾರ್ಟ್‌ಫೋನ್ ಖರೀದಿಗೆ ಸುಗ್ಗಿಕಾಲ ; ಶುರುವಾಗಿದೆ ಫ್ಲಿಪ್‌ಕಾರ್ಟ್ ಮೊಬೈಲ್ ಬೋನಾಂಜಾ!

|

ಆಫರ್‌ಗಳ ಅಡ್ಡಾ ಎಂದೇ ಕರೆಸಿಕೊಳ್ಳುವ ಪ್ರಮುಖ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ ಗ್ರಾಹಕರಿಗೆ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ರಿಯಾಯಿತಿ ನೀಡುತ್ತಲೇ ಜನಪ್ರಿಯವಾಗಿದೆ. ಹಾಗೇ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡುವ ಫ್ಲಿಪ್‌ಕಾರ್ಟ್‌ನ 'ಮೊಬೈಲ್ ಬೋನಾಂಜಾ' ಮತ್ತೆ ಬಂದಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸೆಳೆಯುವ ಸುಗ್ಗಿಕಾಲ ಇದಾಗಿದೆ.

ಸ್ಮಾರ್ಟ್‌ಫೋನ್ ಖರೀದಿಗೆ ಸುಗ್ಗಿಕಾಲ;ಶುರುವಾಗಿದೆ ಮೊಬೈಲ್ ಬೋನಾಂಜಾ!

ಫ್ಲಿಪ್‌ಕಾರ್ಟ್‌ ಮೊಬೈಲ್‌ ಬೋನಾಂಜಾ ಮೇಳವನ್ನು ಆಯೋಜಿಸಿದ್ದು, ಇದೇ ಮಾರ್ಚ್‌ 25 ರಿಂದ ಆರಂಭವಾಗಿರುವ ಈ ಮೇಳವು ಇದೇ ಮಾರ್ಚ್‌ 28ರ ವರೆಗೂ ಇರಲಿದೆ. ಮೇಳದಲ್ಲಿ ಕ್ಯಾಶ್‌ ಡಿಸ್ಕೌಂಟ್‌, ನೋ ಇಎಮ್‌ಐ ಕಾಸ್ಟ್‌, ಬ್ಯಾಂಕ್‌ಗಳಿಂದ 5% ಇನ್‌ಸ್ಟಂಟ್‌ ರಿಯಾಯಿತಿ ಸೇರಿದಂತೆ ಎಕ್ಸ್‌ಚೇಂಜ್ ಕೊಡುಗೆಗಳು ಸಹ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗಾದರೇ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿಯಿದೆ ಎಂಬುದನ್ನು ನೋಡೋಣ ಬನ್ನಿರಿ.

ಬ್ಯಾಂಕ್ ಆಫರ್

ಬ್ಯಾಂಕ್ ಆಫರ್

ಫ್ಲಿಪ್‌ಕಾರ್ಟ್‌ ಮೊಬೈಲ್‌ ಬೋನಾಂಜಾ ಮೇಳದಲ್ಲಿ ಆಕ್ಸ್‌ಸ್ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಬಳಸಿ ಇಎಮ್‌ಐ ಆಯ್ಕೆ ಮಾಡಿಕೊಂಡರೆ, ಗ್ರಾಹಕರಿಗೆ ಬ್ಯಾಂಕ್ ವತಿಯಿಂದ ಇನ್‌ಸ್ಟಂಟ್ ಶೇ 5% ಡಿಸ್ಕೌಂಟ್ ಸಹ ಲಭ್ಯವಾಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್ ಮೇಲೆ ವಿಶೇಷ ರಿಯಾಯಿತಿಗಳು ಇವೆ.

ಫೋಕೋ ಎಫ್‌1

ಫೋಕೋ ಎಫ್‌1

ಶಿಯೋಮಿ ಕಂಪನಿಯ ಫೋಕೋ ಎಫ್‌1 ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸ್ಟೊರೇಜ್‌ ಸಾಮರ್ಥ್ಯದ ವೇರಿಯಂಟ್ ಬೆಲೆಯು 24,999ರೂ.ಗಳು ಆಗಿದ್ದು, ಮೊಬೈಲ್‌ ಬೋನಾಂಜ್ ಕೊಡುಗೆಯಲ್ಲಿ 20,999ರೂ.ಗಳಿಗೆ ದೊರೆಯಲಿದೆ.

ರಿಯಲ್‌ ಮಿ 2 ಪ್ರೋ

ರಿಯಲ್‌ ಮಿ 2 ಪ್ರೋ

4GB RAM ಮತ್ತು 64GB ಸ್ಟೊರೇಜ್‌ ಸಾಮರ್ಥ್ಯದ ವೇರಿಯಂಟ್‌ ರಿಯಲ್‌ ಮಿ 2 ಪ್ರೋ ಸ್ಮಾರ್ಟ್‌ಫೋನ್‌ ಬೆಲೆಯು 14,990ರೂ.ಗಳು ಆಗಿದ್ದು, ಫ್ಲಿಪ್‌ಕಾರ್ಟ್‌ ಮೊಬೈಲ್‌ ಬೋನಾಂಜ್ ಆಫರ್‌ನಲ್ಲಿ 11,990ರೂ.ಗಳಿಗೆ ಲಭ್ಯವಾಗಲಿದೆ.

ವಿವೋ Y81

ವಿವೋ Y81

3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯದ ವಿವೋ Y81 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜ್ ಆಫರ್‌ನಲ್ಲಿ 8,490ರೂ.ಗಳಿಗೆ ಲಭ್ಯವಾಗಲಿದ್ದು, ಇದರ ಬೆಲೆಯು 13,990ರೂ.ಗಳು ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ನೋಟ್‌ 8

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ನೋಟ್‌ 8

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ನೋಟ್‌ 8 ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಆಂತರಿಕ ಸ್ಟೊರೇಜ್ ಸಾಮರ್ಥ್ಯ ಹೊಂದಿದ್ದು, ಈ ಸ್ಮಾರ್ಟ್‌ಫೋನ್ ಬೆಲೆಯು 74,000ರೂ.ಗಳು ಆಗಿದೆ ಫ್ಲಿಪ್‌ಕಾರ್ಟ್‌ ಮೇಳದಲ್ಲಿ 36,990ರೂ.ಗಳಿಗೆ ದೊರೆಯಲಿದೆ.

ಹಾನರ್‌ 10 ಲೈಟ್‌

ಹಾನರ್‌ 10 ಲೈಟ್‌

ಹಾನರ್‌ 10 ಲೈಟ್‌ ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯದಲ್ಲಿ ದೊರೆಯಲಿದ್ದು, ಇದರ ಬೆಲೆಯು 13,999ರೂ.ಗಳು ಆಗಿದೆ. ಮೊಬೈಲ್ ಬೋನಾಂಜಾ ಮೇಳದ ರಿಯಾಯಿತಿಯಲ್ಲಿ 11,999 ರೂ.ಗಳಿಗೆ ದೊರೆಯಲಿದೆ.

ಗೂಗಲ್‌ ಪಿಕ್ಸಲ್ 3

ಗೂಗಲ್‌ ಪಿಕ್ಸಲ್ 3

ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜಾ ಮೇಳದಲ್ಲಿ 4GB RAM ಮತ್ತು 64GB ಸ್ಟೊರೇಜ್‌ ಸಾಮರ್ಥ್ಯದ ವೇರಿಯಂಟ್‌ ಗೂಗಲ್ ಪಿಕ್ಸಲ್ 3 ಸ್ಮಾರ್ಟ್‌ಫೋನ್‌ 57,999ರೂ.ಗಳಲ್ಲಿ ದೊರೆಯಲಿದೆ. ಇದರ ದರವು 71000ರೂ.ಗಳು ಆಗಿದೆ.

ನೋಕಿಯಾ 5.1 ಪ್ಲಸ್‌

ನೋಕಿಯಾ 5.1 ಪ್ಲಸ್‌

3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯದ ನೋಕಿಯಾ 5.1 ಪ್ಲಸ್‌ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜ್ ಆಫರ್‌ನಲ್ಲಿ 8,999 ರೂ.ಗಳಿಗೆ ಲಭ್ಯವಾಗಲಿದ್ದು, ಇದರ ಬೆಲೆಯು 13,199ರೂ.ಗಳು ಆಗಿದೆ.

ಝೆನ್‌ಫೋನ್ ಮ್ಯಾಕ್ಸ್‌ ಪ್ರೋ ಎಂ1

ಝೆನ್‌ಫೋನ್ ಮ್ಯಾಕ್ಸ್‌ ಪ್ರೋ ಎಂ1

ಝೆನ್‌ಫೋನ್ ಮ್ಯಾಕ್ಸ್‌ ಪ್ರೋ ಎಂ1 ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಈ ಫೋನ್ ಫ್ಲಿಪ್‌ಕಾರ್ಟ್‌ ಮೊಬೈಲ್ ಬೋನಾಂಜ್ ಆಫರ್‌ನಲ್ಲಿ 7,999 ರೂ.ಗಳಿಗೆ ಲಭ್ಯವಾಗಲಿದ್ದು, ಇದರ ಬೆಲೆಯು 10,999ರೂ.ಗಳು ಆಗಿದೆ.

Best Mobiles in India

English summary
Flipkart Mobiles Bonanza sale has kicked off with discounts and offers on a number of mobile phones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X