Subscribe to Gizbot

ಸ್ಮಾರ್ಟ್‌ಫೋನ್‌ಗಳ ಮೇಲೆ ಶಾಕಿಂಗ್ ಆಫರ್ ನೀಡಿದ ಫ್ಲಿಪ್‌ಕಾರ್ಟ್‌: ಸ್ಮಾರ್ಟ್‌ಫೋನ್‌ ಖರೀದಿಗೆ ಇದೇ ಒಳ್ಳೆ ಸಮಯ..!!!

Written By:

ಫ್ಲಿಪ್‌ಕಾರ್ಟ್ ಬಿಗ್ 10 ಸೇಲ್ ನಂತರದ ತನ್ನ ಗ್ರಾಹಕರಿಗೆ ಮತ್ತೊಂದು ಭರ್ಜರಿ ಸೇಲ್ ಘೋಷಣೆ ಮಾಡಿದ್ದು, ಸಮ್ಮರ್ ಶಾಪಿಂಗ್ ಡೇಸ್ ಹೆಸರಿನಲ್ಲಿ ವಿವಿಧ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಕಡಿತವನ್ನು ಮಾಡಿದ್ದು, ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದವರಿಗೆ ಹಲವಾರು ಆಯ್ಕೆಗಳನ್ನು ನೀಡಿದೆ.

ಸ್ಮಾರ್ಟ್‌ಫೋನ್‌ಗಳ ಮೇಲೆ ಶಾಕಿಂಗ್ ಆಫರ್ ನೀಡಿದ ಫ್ಲಿಪ್‌ಕಾರ್ಟ್‌

ಓದಿರಿ: ಬಳಕೆದಾರರಿಗೆ ಭರ್ಜರಿ ಆಫರ್ ನೀಡಿದ ವೊಡಾಫೋನ್

ಈ ಸೇಲ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಫ್ಲಿಪ್‌ಕಾರ್ಟ್ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಈ ಸೇಲ್ ಮೂರುದಿನಗಳ ಕಾಲ ನಡೆಯಲಿದೆ. ಬಜೆಟ್ ಫೋನ್, ಮಧ್ಯಮ ಬೆಲೆಯ ಫೋನ್ ಹಾಗೂ ಪ್ರೀಮಿಯಮ್ ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೀಮಿಯಮ್ ಫೋನ್‌ಗಳು:

ಪ್ರೀಮಿಯಮ್ ಫೋನ್‌ಗಳು:

ಮೂರು ದಿನಗಳ ಸೇಲ್‌ನಲ್ಲಿ ಸೋನಿ ಏಕ್‌ಪಿರೀಯಾ Z5 ಸೇರಿದಂತೆ ಐಫೋನ್ 7 ಮತ್ತು 7 ಪ್ಲಸ್ ಫೋನಿನ ಮೇಲೆ ಭರ್ಜರಿ ಆಫರ್ ಘೊಷಣೆ ಮಾಡಲಾಗಿದೆ. ಐಪೋನ್‌ 6 ಎಸ್ ಬೆಲೆಯಲ್ಲಿ 17,000 ಕಡಿತ ಮಾಡಲಾಗಿದೆ. ಅಲ್ಲದೇ ಐಫೋನ್ 7ನ ಬೆಲೆಯಲ್ಲಿ 23% ರಷ್ಟು ಕಡಿತ ಘೋಷಣೆ ಮಾಡಿದೆ. ಸೋನಿ ಏಕ್‌ಪಿರೀಯಾ Z5 ಪೋನಿನ ಮೇಲೆಯೂ 26% ಬೆಲೆ ಕಡಿತವಾಗಿದೆ.

ಮಧ್ಯಮ ಬೆಲೆಯ ಫೋನ್‌ಗಳು:

ಮಧ್ಯಮ ಬೆಲೆಯ ಫೋನ್‌ಗಳು:

ಮಧ್ಯಮ ಬೆಲೆಯ ಪ್ರಮುಖ ಫೋನ್‌ಗಳ ಮೇಲೆ ರೂ. 1000 ದಿಂದ ರೂ.2000ದ ವರೆಗೂ ದರವನ್ನು ಕಡಿತ ಮಾಡಲಾಗಿದೆ. ವಿವೋ, ಓಪ್ಪೋ, ಮೊಟೊ. ಸ್ಯಾಮ್‌ಸಂಗ್ ಫೋನುಗಳ ಮೇಲೆ ಖಚಿತ ಕಡಿತವನ್ನು ಕಾಣಬಹುದಾಗಿದೆ.

ಬಜೆಟ್ ಫೋನ್‌ಗಳು:

ಬಜೆಟ್ ಫೋನ್‌ಗಳು:

ಇದಲ್ಲದೇ ಬಜೆಟ್ ಫೋನ್‌ಗಳ ಬೆಲೆಯ ಮೇಲೆ ಕನಿಷ್ಠ 10% ಕಡಿತವನ್ನು ಫ್ಲಿಪ್ ಕಾರ್ಟ್ ಮಾಡಿದ್ದು, ಕೆಲ ಫೋನಿನ ಬೆಲೆಯಲ್ಲಿ ರೂ.2000 ಕಡಿತವನ್ನು ಮಾಡಿದೆ. ಸ್ಯಾಮ್‌ಸಂಗ್, ಪ್ಯಾನಸೋನಿಕ್, ಮೈಕ್ರೋಮ್ಯಾಕ್ಸ್ ಫೋನ್‌ ಮತ್ತು ಲೈಫ್‌ ಫೋನಿನ ಮೇಲೆ ಭರ್ಜರಿ ಕಡಿತ ಮಾಡಿದೆ.

ಇಎಂಐ ಆಯ್ಕೆ:

ಇಎಂಐ ಆಯ್ಕೆ:

ಇದಲ್ಲದೇ ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಇಎಂಐ ಆಯ್ಕೆಯನ್ನು ನೀಡಿದೆ. ಪ್ರೀಮಿಯಂ, ಬಜೆಟ್ ಮತ್ತು ಮಧ್ಯಮ ಬೆಲೆಯ ಪೋನ್‌ಗಳ ಮೇಲೆ ಇಎಂಐ ಅಯ್ಕೆಯನ್ನು ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
there is good news for customers who failed to buy products during the sales period as Flipkart is set to launch its second sale of the season. It’s called the ‘Summer Shopping Days’ sale. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot