Just In
- 9 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 11 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿಯೋಮಿಗೆ ಫುಲ್‌ಸ್ಟಾಪ್ ಇಡಲಿದೆಯೇ ಹೊಸ 'ಗ್ಯಾಲಕ್ಸಿ ಎಂ 30ಎಸ್'?
ದೇಶದಲ್ಲಿ ಗ್ಯಾಲಕ್ಸಿ ಎಂ ಸರಣಿಯ ಯಶಸ್ಸಿನ ಮೇಲೆ ಸವಾರಿ ಮಾಡುತ್ತಿರುವ ಸ್ಯಾಮ್‌ಸಂಗ್ ಕಂಪೆನಿ ತನ್ನ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದೆ. ಇದೇ ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ 48 ಎಂಪಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಬಜೆಟ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ಕಂಪೆನಿ ಸಜ್ಜಾಗಿದ್ದು, ಗ್ಯಾಲಕ್ಸಿ ಎಂ ಸರಣಿಯಲ್ಲಿಯೇ 'ಗ್ಯಾಲಕ್ಸಿ ಎಂ 30ಎಸ್' ಎಂಬ ಹೊಸ ಕ್ಯಾಮೆರಾ ಆಧಾರಿತ ಸ್ಮಾರ್ಟ್‌ಫೋನ್ ಅದಾಗಿರಲಿದೆ ಎಂದು ತಿಳಿದುಬಂದಿದೆ.

ಹೌದು, ಚೀನಾ ಕಂಪೆನಿಗಳಿಗೆ ಸೆಡ್ಡುಹೊಡೆಯುವ ಸಲುವಾಗಿ ಈ ಬಾರಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿಯಲ್ಲಿ 48 ಮೆಗಾಪಿಕ್ಸೆಲ್ ಸಹಿತ ನೂತನ ಕ್ಯಾಮರಾ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಸೆಪ್ಟೆಂಬರ್‌ನಲ್ಲಿ ಈ ಫೋನ್ ಹೊಸ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ತ್ರಿವಳಿ ಕ್ಯಾಮರಾ ವ್ಯವಸ್ಥೆ ಹೊಂದಿರಲಿದೆ ಎಂದು ವರದಿಯಾಗಿದೆ. ಈ ಮೂಲಕ ಗ್ಯಾಲಕ್ಸಿ ಎಂ 10, ಗ್ಯಾಲಕ್ಸಿ ಎಂ 20, ಗ್ಯಾಲಕ್ಸಿ ಎಂ 30 ಮತ್ತು ಗ್ಯಾಲಕ್ಸಿ ಎಂ 40 ಪೋನ್‌ಗಳ ಸಾಲಿಗೆ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್ ಸೇರಿಕೊಳ್ಳುತ್ತಿದೆ.
ಹೊಸ 'ಗ್ಯಾಲಕ್ಸಿ ಎಂ 30ಎಸ್ ಫೋನ್‌ನಲ್ಲಿ ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಇದ್ದು, 48MP ಕ್ಯಾಮರಾ ಇರಲಿದೆ. ಹೆಚ್ಚು ಶಕ್ತಿಶಾಲಿ ಪ್ರೊಸೆಸರ್, 5000 ಎಂಎಹೆಚ್ ಬ್ಯಾಟರಿ ಮತ್ತು 15 ಡಬ್ಲ್ಯೂ ಫಾಸ್ಟ್ ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷ ಫೀಚರ್ಸ್ ಅನ್ನು ನಾವು ನೋಡಬಹುದು. ಇದು ಪ್ರಮುಖವಾಗಿ ಶಿಯೋಮಿ K20 Pro, ಶಿಯೋಮಿ Mi A3 ಮತ್ತು ರಿಯಲ್‌ಮಿ 5 Pro ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ನೀಡಲಿದೆ. ಫಾಸ್ಟ್ ಚಾರ್ಜಿಂಗ್ ಕೂಡ ಇರಲಿದ್ದು, ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಸ್ಟೋರ್ ಮೂಲಕ ಲಭ್ಯವಾಗಲಿದೆ.

ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಫೋನ್‌ಗಳು ಹೆಚ್ಚು ಜನಪ್ರಿಯವಾಗಿವೆ. ಗ್ಯಾಲಕ್ಸಿ ಎಂ 10, ಗ್ಯಾಲಕ್ಸಿ ಎಂ 20, ಗ್ಯಾಲಕ್ಸಿ ಎಂ 30 ಮತ್ತು ಗ್ಯಾಲಕ್ಸಿ ಎಂ 40 ಮಾದರಿಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮಾರುಕಟ್ಟೆ ಪಾಲು ಹೆಚ್ಚಿದೆ. ಹಾಗಾಗಿಯೇ, ಬಜೆಟ್ ಬೆಲೆಯಲ್ಲಿ ಕ್ಯಾಮೆರಾ (48 ಎಂಪಿ ಟ್ರಿಪಲ್ ರಿಯರ್) ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಕಂಪೆನಿ ಮುಂದಾಗಿದೆ ಎಂದು ವರದಿಯೊಂದು ಹೇಳಿದೆ.
ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರತಿಸ್ಪರ್ಧಿ ಶಿಯೋಮಿಯೊಂದಿಗಿನ ಅಂತರವನ್ನು ಕಡಿಮೆಗೊಳಿಸಲು ಗ್ಯಾಲಕ್ಸಿ ಎ ಮತ್ತು ಎಂ ಸರಣಿ ಸ್ಮಾರ್ಟ್‌ಪೋನ್‌ಗಳು ಕಾರಣವಾಗಿವೆ. ಇನ್ನು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳ (ರೂ. 7,000-ರೂ. 25,000) ಮಾರಾಟದ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ, ಸ್ಯಾಮ್‌ಸಂಗ್ ಕಂಪೆನಿ ತನ್ನ ಬಜೆಟ್ ಸ್ಮಾರ್ಟ್‌ಪೋನ್‌ಗಳನ್ನು ಹೆಚ್ಚು ನವೀಕರಣಗೊಳಿಸಲು ಗಮನ ಕೇಂದ್ರೀಕರಿಸಿದೆ.

ನೀವು ಗೂಗಲ್ ಪೇ ಅಥವ ಫೋನ್ ಪೇ ಬಳಸುತ್ತಿದ್ದರೆ ತಪ್ಪದೇ ಒಮ್ಮೆ ಓದಿ!
ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಐದು ನಿಮಿಷ ಬಿಡುವು ಮಾಡಿಕೊಂಡು ಇದನ್ನ ಓದಿ. ಏಕೆಂದರೆ, ಈಗ ಕಾಲ ಬದಲಾದ ಹಾಗೇ ಇಡೀ ಜಗತ್ತೇ ಒಂದು ಸಣ್ಣ ಮೊಬೈಲ್ ಸೇರಿದೆ. ಗೂಗಲ್ ಪೇ ಮತ್ತು ಫೋನ್ ಪೇ ಹೀಗೆ ಅನೇಕ ರೀತಿಯ ಆಪ್‌ಗಳು ಬ್ಯಾಂಕಿಂಗ್ ವ್ಯವಹಾರಕ್ಕೆ ಸಹಾಯವಾಗುತ್ತಿವೆ. ಇವುಗಳ ಬಗ್ಗೆ ನಾವು ಸ್ವಲ್ಪ ಯಾಮಾರಿದರೂ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣ ಮಾತ್ರದಲ್ಲಿ ಖಾಲಿಯಾಗುತ್ತದೆ.
ಇತ್ತೀಚಿನ ನಡೆದ ಆಂತಕಕಾರಿ ಘಟನೆಯೊಂದು ಈ ಬಗ್ಗೆ ನಮ್ಮನ್ನು ಎಚ್ಚರಿಸಿದೆ. ಗೂಗಲ್ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಘಟನೆ ಇತ್ತೀಚಿಗೆ ನಡೆದಿದೆ. ಗೂಗಲ್ ಪೇ ಬಳಕೆದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಗೂಗಲ್ ಪೇ ಕಸ್ಟಮರ್ ಕೇರ್‌ನಿಂದ ಮಾತನಾಡುತ್ತಿರುವುದಾಗಿ ಹೇಳಿ, ಆಪ್‌ನ ಲಿಂಕ್ ಮುಖಾಂತರ ಅವರಿಗೆ ಕ್ಷಣ ಮಾತ್ರದಲ್ಲಿ ವಂಚಿಸಿದ್ದಾನೆ.
ನಂಬಿದರೆ ನಂಬಿ,ನೀವೇನಾದ್ರು ಗೂಗಲ್ ಪೇ ಅಥವಾ ಫೋನ್ ಪೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ ನಿಮ್ಮ ಖಾತೆಯಲ್ಲಿ ಇರೋ ಬರೋ ಎಲ್ಲ ಹಣ ಒಂದೇ ನಿಮಿಷದಲ್ಲಿ ಖಾಲಿ ಆಗುತ್ತದೆ. ಏಕೆಂದರೆ, ಗೂಗಲ್ ಪೇ ಅಥವಾ ಫೋನ್ ಪೇ ಸಂಸ್ಥೆಗಳು ಸಹಾಯವಾಣಿ ಕೇಂದ್ರಗಳನ್ನೇ ಹೊಂದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನೀವು ಗೂಗಲ್ ಪೇ ಅಥವ ಫೋನ್ ಪೇಯಂತಹ ಮೊಬೈಲ್ ವಾಲೆಟ್ ಆಪ್‌ಗಳನ್ನು ಉಪಯೋಗ ಮಾಡುತ್ತಿದ್ದರೆ ಹೇಗೆ ಎಚ್ಚರಿಕೆ ಹೊಂದಿರಬೇಕು ಎಂದು ನಾನು ತಿಳಿಸಿಕೊಡುತ್ತಿದ್ದೇನೆ.

ಹಣ ವರ್ಗಾವಣೆಯಾಗದಿದ್ದರೆ ಕಾಯಿರಿ!
ಫೋನ್ ಪೇ ಅಥವ ಗೂಗಲ್ ಪೇ ಸರ್ವರ್ ಬ್ಯುಸಿ ಆಗೋಗಿ ನಿಮ್ಮ ಖಾತೆಯಿಂದ ಹಣ ಕಟ್ ಆದರು ಸಹ ಸ್ನೇಹಿತರಿಗೆ ಹೋಗಿರೋದಿಲ್ಲ ಅಂತ ಸಮಯದಲ್ಲಿ ಕೆಲವು ಜನರು ಕಾದು ನೋಡೋಣ ಎನ್ನುತ್ತಾರೆ. ಮತ್ತಷ್ಟು ಜನ ಒಂದೆರಡು ತಾಸು ನೋಡಿ ಗೂಗಲ್ ನಿಂದ ಫೋನ್ ಪೇ ಅಥವ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಕಾಲ್ ಮಾಡೋಣ ಅಂತ ನಂಬರ್ ಹುಡುಕಿ ಕಾಲ್ ಕಾಡ್ತಾರೆ. ಇಂತಹ ಸಮಯದಲ್ಲಿ ವಂಚಕರು ನಕಲಿ ವೆಬ್‌ಸೈಟ್ ಸೃಷ್ಟಿಸಿ ಅವರ ನಂಬರ್ ನೀಡುತ್ತಾರೆ. ನಂತರ ನಿಮ್ಮ ಖಾತೆಯಲ್ಲಿನ ಹಣ ಖಾಲಿಯಾಗುತ್ತದೆ.

ವಾಯ್ಸ್ ಕಸ್ಟಮರ್ ಕೇರ್ ಇಲ್ಲವೇ ಇಲ್ಲ
ಗೂಗಲ್ ಪೇ ಮತ್ತು ಫೋನ್ ಪೇಗೆ ಯಾವುದೇ ರೀತಿಯ ವಾಯ್ಸ್ ಕಸ್ಟಮರ್ ಕೇರ್ ಇಲ್ಲವೇ ಇಲ್ಲ ಎಂಬುದನ್ನು ತಿಳಿಯಿರಿ. ಗೂಗಲ್ ನಲ್ಲಿ ನಕಲಿ ಫೋನ್ ಕಸ್ಟಮರ್ ಕೇರ್ ನಂಬರ್ ಹಾಕಿದ್ದಾರೆ. ಇತ್ತೇಚೆಗೆ ನಮ್ಮ ಸ್ನೇಹಿತರು ಒಬ್ಬರು ಗೂಗಲ್ ಪೇ ನಿಂದ 300 ರೂಪಾಯಿ ಕಟ್ ಆಗಿದೆ ಅಂತ ಗೂಗಲ್ ನಲ್ಲಿ ಹುಡುಕಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ ಹೀಗೆ ಆಗಿರುವ ಎರಡೇ ನಿಮಿಸದಲ್ಲಿ ಅಕೌಂಟ್ ನಲ್ಲಿ ಇರುವ ಒಂದೂವರೆ ಲಕ್ಷ ಹಣ ಕಟ್ ಆಗೋಗಿದೆ. ಗೂಗಲ್ ಪೇ ಮತ್ತು ಫೋನ್ ಪೇ ಗೆ ಯಾವುದೇ ರೀತಿಯ ಕಸ್ಟಮರ್ ಸೇವೆ ಇಲ್ಲವೇ ಇಲ್ಲ.

ಯುಪಿಐ ನಂಬರ್ ಶೇರ್ ಮಾಡಬೇಡಿ.
ನೀವು ಬಳಸುತ್ತಿರುವ ಬಹುತೇಕ ಮೊಬೈಲ್ ವಾಲೆಟ್ ಆಪ್‌ಗಳೆಲ್ಲವೂ ಯುಪಿಐ ಆಧಾರದಲ್ಲಿ ಕೆಲ ಮಾಡುತ್ತವೆ. ಈ ಆಪ್‌ಗಳ ಜೀವಾಳವೇ ಯುಪಿಐ ನಂಬರ್ ಎಂದು ಹೇಳಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ನಿಮ್ಮ ಯುಪಿಐ ನಂಬರ್ ಅನ್ನು ಮತ್ತೊಬ್ಬರಿಗೆ ಶೇರ್ ಮಾಡಬೇಡಿ. ಯುಪಿಐ ನಂಬರ್ ಎಷ್ಟು ಸೇಫ್ ಆಗಿ ಇರಬೇಕೆಂದರೆ, ನಿಮ್ಮ ಸಂಗಾತಿಗೂ ಅದು ತಿಳಿಯಬಾರದು.! ಇದು ನಿಮಗೆ ತಮಾಷೆಯಂತೆ ಕಂಡರೂ ನಿಜ. ಏಕೆಂದರೆ, ಅವರು ಕೂಡ ನಿಮ್ಮ ಹಣವನ್ನು ನಿಮಗೆ ತಿಳಿಯದಂತೆ ತೆಗೆದುಕೊಳ್ಳಬಹುದಾದ ಸಾಧ್ಯತೆ ಇದೆ.

'ರಿಕ್ಷೆಸ್ಟ್ ಮನಿ' ಆಯ್ಕೆ ಬಗ್ಗೆ ಎಚ್ಚರವಿರಲಿ
ವಾಲೆಟ್ ಆಪ್‌ಗಳಲ್ಲಿ 'ರಿಕ್ಷೆಸ್ಟ್ ಮನಿ' ಎಂಬ ಆಯ್ಕೆ ಇರುತ್ತದೆ. ಈ 'ರಿಕ್ಷೆಸ್ಟ್ ಮನಿ' ಆಯ್ಕೆಯಲ್ಲಿ ಆಪ್ ಮೂಲಕ ಇತರರಿಗೆ ಹಣಕ್ಕಾಗಿಉ ವಿನಂತಿ ಕಳುಹಿಸಬಹುದು. ಅನಾಮಿಕರು ಕರೆ ಮಾಡಿ, ನಿಮಗೆ ಬಹುಮಾನ ಬಂದಿದೆ. ರಿಕ್ವೆಸ್ಟ್ ಬಂದ ತಕ್ಷಣ ಅಕ್ಸೆಪ್ಟ್ ಅಂತ ಕೊಟ್ಟುಬಿಡಿ ಎಂದು ಹೇಳುತ್ತಾರೆ. ಹಾಗೇ ಒಪ್ಪಿಗೆ ನೀಡಬೇಡಿ. ವಾಸ್ತವವಾಗಿ ನಾವು ಅಕ್ಸೆಪ್ಟ್ ಮಾಡುವುದು ತನ್ನ ಖಾತೆಯಿಂದ ಆ ಅನಾಮಿಕನ ಖಾತೆಗೆ ಹಣ ವರ್ಗಾವಣೆಯನ್ನು ಕೇಳಿರುತ್ತದೆ.! ನಂತರ ಪಿನ್ ನಮೂದಿಸಿದರೆ ಖಾತೆಯಲ್ಲಿನ ಹಣ ಕೂಡ ಖಾಲಿಯಾಗುತ್ತದೆ.

ಸಂದೇಹವಿದ್ದರೆ ಬ್ಯಾಂಕಿಗೆ ಹೋಗಿ
ಬ್ಯಾಂಕ್ ಆಪ್ ಮೊದಲ ಬಾರಿ ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಸಂದೇಹವಿದ್ದರೆ ಬ್ಯಾಂಕಿಗೆ ಹೋಗಿ, ಅಲ್ಲಿನ ಸಿಬ್ಬಂದಿಯ ಸಲಹೆ ಪಡೆದ ಬಳಿಕವೇ ಇನ್‌ಸ್ಟಾಲ್ ಮಾಡಿಕೊಳ್ಳುವುದು ಸೂಕ್ತ. ಯಾರೊಂದಿಗೆ ಕೂಡ ಬ್ಯಾಂಕ್ ಖಾತೆ ಸಂಖ್ಯೆ, ಪಿನ್ ನಂಬರ್, ಪಾಸ್‌ವರ್ಡ್ ಅಥವಾ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಹಂಚಿಕೊಳ್ಳಲು ಹೋಗಬೇಡಿ. ನಿಮ್ಮ ಖಾತೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ ಮತ್ತು ಪಾಸ್‌ವರ್ಡ್ ಕೂಡ ಪದೇ ಪದೇ ಬದಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ.

ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ!
ಬ್ಯಾಂಕಿನ ಲಿಂಕ್ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್ ಯುಆರ್‌ಎಲ್ ಟೈಪ್ ಮಾಡಿ ಮುಂದುವರಿಸಿ. ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್ ಕೆಫೆಗಳಲ್ಲಿ) ಆನ್‌ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸಬೇಡಿ. ವಂಚಕರು ತಕ್ಷ ಣಕ್ಕೆ ಸಿಕ್ಕಿ ಬೀಳುವುದರಿಂದ ತಪ್ಪಿಸಲು, ಬ್ಯಾಂಕ್ ರಜಾದಿನಗಳಲ್ಲೋ ಅಥವಾ ಬ್ಯಾಂಕ್ ತೆರೆಯುವ ಮುನ್ನವೋ ಚಾಕಚಕ್ಯತೆ ಮೆರೆಯುತ್ತಾರೆಂಬುದು ನೆನಪಿರಲಿ. ಈ ಕುರಿತು ನಿಮಗೆ ಸಾಕಷ್ಟು ಎಚ್ಚರವಿರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470