ಇಂದು 'ಗ್ಯಾಲಕ್ಸಿ ಎಂ 40' ಸ್ಮಾರ್ಟ್‌ಫೋನಿನ ಎರಡನೇ ಫ್ಲಾಶ್‌ಸೇಲ್!

|

ಬಿಡುಗಡೆಯಾದ ನಂತರ ಮೊನ್ನೆ ಮೊನ್ನೆಯಷ್ಟೇ ಮಾರಾಟಕ್ಕೆ ಬಂದಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 40 ಸ್ಮಾರ್ಟ್‌ಫೋನಿನ ಎರಡನೇ ಫ್ಲಾಶ್‌ಸೇಲ್ ಇಂದು ಆರಂಭವಾಗಿದೆ. ಕಳೆದ ಮಂಗಳವಾರ ನಡೆದ ಮೊದಲ ಫ್ಲಾಶ್‌ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 40 ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗದೇ ಇರುವವರು ಇಂದು ಫೋನನ್ನು ಖರೀದಿಸಬಹುದು.

ಇಂದು 'ಗ್ಯಾಲಕ್ಸಿ ಎಂ 40' ಸ್ಮಾರ್ಟ್‌ಫೋನಿನ ಎರಡನೇ ಫ್ಲಾಶ್‌ಸೇಲ್!

ಶಿಯೋಮಿ ರೆಡ್ಮಿ ನೋಟ್ 7 ಪ್ರೊ ಮತ್ತು ರಿಯಲ್‌ಮಿ 3 ಪ್ರೊ ನಂತಹ ಉನ್ನತ ರೂಪಾಂತರಗಳ ಜೊತೆಗೆ ಸ್ಪರ್ಧಿಸುತ್ತಿರುವ 'ಗ್ಯಾಲಕ್ಸಿ ಎಂ 40' ಸ್ಮಾರ್ಟ್‌ಫೋನ್ ಮೊದಲ ಫ್ಲಾಶ್‌ಸೇಲ್‌ನಲ್ಲಿ ಭರ್ಜರಿ ಮಾರಾಟ ಕಂಡಿದೆ. ಹಾಗಾಗಿ, ಕೇವಲ ಎರಡೇ ದಿನಗಳ ಶೀಘ್ರ ಅವಧಿಯಲ್ಲಿಯೇ ಮತ್ತೊಂದು ಫ್ಲಾಶ್‌ಸೇಲ್ ಅನ್ನು ಸ್ಯಾಮ್‌ಸಂಗ್ ಕಂಪೆನಿ ಆಯೋಜಿಸಿದೆ ಎಂದು ತಿಳಿದುಬಂದಿದೆ.

6.3-ಇಂಚಿನ ಪೂರ್ಣ ಎಚ್‌ಡಿ + ಇನ್ಫಿನಿಟಿ-ಒ ಡಿಸ್‌ಪ್ಲೇ, ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಮತ್ತು ಡಿವೈಸ್‌ನಲ್ಲೇ ಆಡಿಯೊ ಕಂಪನಗಳನ್ನು ಉಂಟುಮಾಡುವಂತಹ ವಿಶೇಷತೆಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ. ಹಾಗಾದರೆ, 'ಗ್ಯಾಲಕ್ಸಿ ಎಂ 40' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ವಿನ್ಯಾಸ!

ಸ್ಯಾಮ್ಸಂಗ್ ಗ್ಯಾಲಕ್ಸಿ M40 ವಿನ್ಯಾಸ!

ಮಾರುಕಟ್ಟೆಗೆ ತರುವ ಮುನ್ನವೇ ಗ್ಯಾಲಕ್ಸಿ M40 ಫೋನ್ ಅನ್ನು ಅಮೆಜಾನ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅದರಂತೆ ಗ್ಯಾಲಕ್ಸಿ M40 ಬಹುತೇಕ ಪೂರ್ಣ ಡಿಸ್‌ಪ್ಲೇ ಹೊಂದಿರುವಂತೆ ಕಾಣುತ್ತಿದೆ.ಡಿಸ್‌ಪ್ಲೇ ಎಡಭಾಗದ ಮೂಲೆಯಲ್ಲಿ ಸೆಲ್ಫೀ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್ ಪ್ರಿಂಟ್ ಆಯ್ಕೆಯನ್ನು ಫೋನ್ ಹೊಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಡಿಸ್‌ಪ್ಲೇ

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಡಿಸ್‌ಪ್ಲೇ

ಮೊದಲೇ ತಿಳಿದಂತೆ ಗ್ಯಾಲಕ್ಸಿ M40 ಫೋನ್ 6.3-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 1080×2340 ಪಿಕ್ಸೆಲ್‌ಗಳ ಸಾಮರ್ಥ್ಯದಲ್ಲಿ ಇನ್ಫಿನಿಟಿ ಓ ಪ್ರದರ್ಶನ ಫಲಕವನ್ನು ನೀಡಿ ಸ್ಯಾಮ್‌ಸಂಗ್ ಗಮನಸೆಳೆದಿದೆ. ಫೋನ್ ಸ್ಕ್ರೀನ್ ಧ್ವನಿ ತಂತ್ರಜ್ಞಾನವನ್ನು ಒಳಗೊಂಡಿರುವ ವಿಶೇಷತೆಯಲ್ಲಿ ಗ್ಯಾಲಕ್ಸಿ M40 ಡಿಸ್‌ಪ್ಲೇ ಅತ್ಯುತ್ತಮವಾಗಿ ಮೂಡಿಬಂದಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಪ್ರೊಸೆಸರ್

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಪ್ರೊಸೆಸರ್

ಗ್ಯಾಲಕ್ಸಿ M40 ಸ್ಮಾರ್ಟ್‌ಫೋನಿನಲ್ಲಿ 2GHz ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 675 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 6GB RAM ಮತ್ತು 128GB ಆಂತರಿಕ ಸಂಗ್ರಹಣಾ ಮಾದರಿಯಲ್ಲಿ ಬಿಡುಗಡೆಯಾಗಿರುವ ಫೋನಿನ ಮೆಮೊರಿಯನ್ನು ಮೈಕ್ರೊ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದ್ದು, ಅಡ್ರಿನೊ 612 ಜಿಪಿಯು ಇರುವುದು ಗೇಮಿಂಗ್‌ಗೆ ಅತ್ಯುತ್ತಮವಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಕ್ಯಾಮೆರಾ!

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಕ್ಯಾಮೆರಾ!

ಗ್ಯಾಲಕ್ಸಿ ಎಂ40 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಪ್ರಾಥಮಿಕ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದ್ದರೆ, 8MP ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಮತ್ತು 5MP ಆಳ ಸಂವೇದಕಗಳು ಕ್ಯಾಮೆರಾ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಇದರಲ್ಲಿ 4K ರೆಸೊಲ್ಯೂಶನ್ ವರೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬ್ಯಾಟರಿ

ಗ್ಯಾಲಕ್ಸಿ ಎಂ40 ಫೋನ್ 3,500 mAh ಬ್ಯಾಟರಿಯನ್ನು ಹೊಂದಿರಲಿದೆ ಎಂ ಎಂಬುದು ನಿಜವಾಗಿದೆ. 15W ಯುಎಸ್ಬಿ-ಸಿ ಚಾರ್ಜರ್ನೊಂದಿಗೆ ಗ್ಯಾಲಕ್ಸಿ M30 ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಮೊದಲಿನ ಲೀಕ್ ವರದಿಗಳಲ್ಲಿ 5000 mAh ಬ್ಯಾಟರಿ ಇರಲಿದೆ ಎಂಬ ಗಾಳಿಸುದ್ದಿ ಇದ್ದವು. ಆದರೆ, ಬ್ಯಾಟರಿ ವಿಷಯದಲ್ಲಿ ಸ್ಯಾಮ್‌ಸಂಗ್ ಸ್ವಲ್ಪ ಹಿಂದುಳಿದಿದೆ ಎನ್ನಬಹುದು.

 ಸ್ಯಾಮ್ಸಂಗ್ ಗ್ಯಾಲಕ್ಸಿ M40 ಇತರೆ ಫೀಚರ್ಸ್

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಇತರೆ ಫೀಚರ್ಸ್

ಗ್ಯಾಲಕ್ಸಿ M40 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ದುರದೃಷ್ಟವಶಾತ್, ಹೆಡ್ಫೋನ್ ಜ್ಯಾಕ್ ಫೋನಿನಿಂದ ಕಾಣೆಯಾಗಿದೆ.ಇಯರ್ಪೀಸ್ ಅನ್ನು ಬದಲಿಸಿ ಆಡಿಯೋ ಸೌಂಡ್ ತಂತ್ರಜ್ಞಾನದೊಂದಿಗೆ ಫೋನ್ ಬಿಡುಗಡೆಯಾಗಿದ್ದು, ಒನ್ ಯುಐ ಜೊತೆಗೆ ಆಂಡ್ರಾಯ್ಡ್ ಪೈ ಡಾಲ್ಬಿ ಅಟ್ಮಾಸ್ ಬೆಂಬಲ, ಎನ್ಎಫ್ಸಿ ಮತ್ತು ಬ್ಲೂಟೂತ್ 5.0 ತಂತ್ರಜ್ಞಾನಗಳು ಸೇರಿಕೊಂಡಿವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬೆಲೆಗಳು

ಸ್ಯಾಮ್ಸಂಗ್ ಗ್ಯಾಲಕ್ಸಿ M40 ಬೆಲೆಗಳು

6GB RAM ಮತ್ತು 128GB ಆಂತರಿಕ ಸಂಗ್ರಹಣಾ ಮಾದರಿಯ 'ಗ್ಯಾಲಕ್ಸಿ ಎಂ40' ಸ್ಮಾರ್ಟ್‌ಫೋನ್ 19,990 ರೂಪಾಯಿಗಳಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಜಿಯೋ 'ಗ್ಯಾಲಕ್ಸಿ ಎಂ40' ಮೇಲೆ 198 ಮತ್ತು ರೂ 299 ಡಬಲ್ ಡಾಟಾ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ನೀಡಿದ್ದರೆ, ವೊಡಾಫೋನ್ ಐಡಿಯಾ ಬಳಕೆದಾರರು ರೂ 255 ರೀಚಾರ್ಜ್ ಮೂಲಕ 18 ತಿಂಗಳ ವರೆಗೆ ಹೆಚ್ಚುವರಿ 0.5 ಜಿಬಿ ಡೇಟಾ ಮೌಲ್ಯದ ಕ್ಯಾಶ್ಬ್ಯಾಕ್ ಸ್ವೀಕರಿಸುತ್ತಾರೆ.ಇನ್ನು ಗ್ಯಾಲಕ್ಸಿ M40 ನೊಂದಿಗೆ 10 ತಿಂಗಳ ಅವಧಿಯಲ್ಲಿ ಏರ್‌ಟೆಲ್ 100 ರಷ್ಟು ಹೆಚ್ಚುವರಿ ಡೇಟಾವನ್ನು ಒದಗಿಸುತ್ತಿದೆ.

Best Mobiles in India

English summary
The Samsung Galaxy M40 price in India is Rs. 19,990, and the smartphone is available in a single 6GB + 128GB storage variant. The second sale of the Samsung Galaxy M40 will begin at 12pm (noon) at Amazon India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X