ಗ್ಯಾಲಾಕ್ಸಿ ನೋಟ್‌ 2 ಡ್ಯೂಯೆಲ್‌ ಸಿಮ್ ನಲ್ಲಿ ಬರಲಿದೆ

Posted By: Staff
ಗ್ಯಾಲಾಕ್ಸಿ ನೋಟ್‌ 2 ಡ್ಯೂಯೆಲ್‌ ಸಿಮ್ ನಲ್ಲಿ ಬರಲಿದೆ

ದಕ್ಷಿಣ ಕೊರಿಯಾ ಮೂಲದ ಸ್ಮಾರ್ಟ್ ಫೋನ್‌ ತಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಬಹು ಚರ್ಚಿತ ನೆಕ್ಸ್ಟ್ ಜೆನೆರೇಷನ್‌ ಫೋನ್‌ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ನ ಡ್ಯೂಯೆಲ್‌ ಸಿಮ್ ಮಾದರಿ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2 ಸಹ ಹೊರತರಲು ಯೋಜನೆ ರೂಪಿಸಿದೆ.

ವರದಿಗಳ ಪ್ರಕಾರ ಸ್ಯಾಮ್ಸಂಗ್‌ ಚೈನಾ ಯುನಿಕಾಂ ಮೂಲಕ ಚೀನಾದ ಮಾರುಕಟ್ಟೆಯಲ್ಲಿ ಡ್ಯೂಯೆಲ್‌ ಸಿಮ್ ಮಾದರಿಯ ಗ್ಯಾಲಾಕ್ಸಿ ನೋಟ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. ಚೀನಾಗಾಗಿಯೆ ಸ್ಯಾಮ್ಸಂಗ್‌ ವಿಶೇಷ ಮಾದರಿಯ ಸೆಕೆಂಡ್‌ ಜೆನೆರೇಷನ್‌ ನೋಟ್‌ ತರಲಿದ್ದು ಡ್ಯೂಯೆಲ್ ಸಿಮ್ ಹಾಗೂ ಡ್ಯೂಯೆಲ್‌ ಸ್ಟ್ಯಾಂಡ್‌ಬೈ ಇರಲಿದೆ ಎಂದು ವರದಿಗಳು ತಿಳಿಸಿವೆ.

ವರದಿಯು ಸೋರಿಕೆಯಾದಂತಹ ಚಿತ್ರಗಳನ್ನು ಸಹ ಬಹಿರಂಗ ಪಡಿಸಿದ್ದು, ಚಿತ್ರದಲ್ಲಿ ಫೊನ್ ನ ಬ್ಯಾಟೆರಿ ಕೆಳಭಾಗದಲ್ಲಿ 3 ಸ್ಲಾಟ್ ಗಳಿದ್ದು ಮೈಕ್ರೋ SD ಕಾರ್ಡ್, ಸಾಮಾನ್ಯ ಸಿಮ್ ಕಾರ್ಡ್ ಹಾಗೂ ಮೈಕ್ರೋ ಸಿಮ್ ಕಾರ್ಡ್ ಅಳವಡಿಸಬಹುದಾಗಿದೆ. ಹೆಚ್ಚಿನ ಮಾಹಿತೀ ಅನುಸಾರ ಇದರ ಹೋರತಾಗಿ ಉಳಿದೆಲ್ಲಾ ವಿಶೇಷತೆಗಳು ಹಾಗೆಯೇ ಇದೆ.

ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಸುದ್ಧಿಯಲ್ಲಿರುವ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್ 2ನಲ್ಲಿ 5.5 ಇಂಚಿನ ಸೂಪರ್‌ AMOLED ಟಚ್‌ಸ್ಕ್ರೀನ್ ದರ್ಶಕದ ಜೊತೆಗೆ 1280x720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. 1.6GHz ಕ್ವಾಡ್‌ ಕೊರ್ ಪ್ರೊಸೆಸರ್, 2GB RAM, 8MP ಹಿಂಬದಿಯ ಕ್ಯಾಮೆರಾ ಹಾಗೂ 1.9MP ಮುಂಬದಿಯ ಕ್ಯಾಮೆರಾ ಸೇರಿದಂತೆ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ OS, Wi-Fi 802.11 a/b/g/n, DNLA, Wi-Fi ಡೈರೆಕ್ಟ್, A2DP ಜೊತೆಗೆ ಬ್ಲೂಟೂತ್‌, 3,100 mAh ಬೃಹತ್ ಸಾಮರ್ತ್ಯದ ಬ್ಯಾಟರಿ ಹಾಗೂ S-Pen ಬೆಂಬಲಿತದೊಂದಿಗೆ, ರಬ್ಬರ್‌ ಟಿಪ್ ಹಾಗೂ ಉತ್ತಮ ಟಾರ್ಚ್ ರೆಸ್ಪಾನ್ಸ್ ಹೊಂದಿದೆ.

2012 ರ ಸೆಪ್ಟೆಂಬರ್‌ 22 ರಂದು ಮಾರುಕಟ್ಟೆಗೆ ಬರಲಿರುವ ಫಾಬ್ಲೆಟ್‌ 16GB, 32GB ಹಾಗೂ 64GB ಮಾದರಿಯಲ್ಲಿ ಬರಲಿದೆ ಎಂದು ಸ್ಯಾಮ್ಸಂಗ್‌ ದೃಢೀಕರಿಸಿದ್ದು ಮೈಕ್ರೋ SD ಕಾರ್ಡ್ ಸ್ಲಾಟ್ 32GB ವರೆಗು ವಿಸ್ತರಿಸಿಕೊಳ್ಳ ಬಹುದಾಗಿದೆ.

ಅಂದಹಾಗೆ ಭಾರತದಲ್ಲಿ ಗ್ಯಾಲಾಕ್ಸಿ ನೋಟ್‌ 2 ಕೊಳ್ಳಲು ಇಚ್ಚಿಸುವವರು ಆನ್ಲೈನ್ ಮೂಲಕ Infibeam ನಲ್ಲಿ ರೂ.38.500 ಗಳಿಗೆ ಪ್ರೀ ಆರ್ಡರ್‌ ಮಾಡಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot