ಜಿ ಫೈವ್ ನಿಂದ ಬರಲಿದೆ ಟ್ರಿಪಲ್ ಸಿಮ್ ಮೊಬೈಲ್

Posted By: Staff


ಇದುವರೆಗು ಡ್ಯೂಯಲ್ ಸಿಮ್ ಮೊಬೈಲ್ ಗಳನ್ನು ನೋಡಿದ್ದಿರಿ. ಇದೀಗ ಟ್ರಿಪಲ್ ಸಿಮ್ ಮೊಬೈಲ್ ಕಾಲ ಬಂದಿದೆ. ಮೂರು ಸಿಮ್ ಗಳನ್ನು ನಿಭಾಯಿಸಬಲ್ಲ ಹೊಸ ಮೊಬೈಲೊಂದನ್ನು ಚೈನಾ ಮೂಲದ ಜಿ ಫೈವ್ ಕಂಪನಿ ಹೊರತರಲಿದೆ. ಜಿ ಫೈವ್ ಕಂಪನಿ ಭವಿಷ್ಯದ ತಂತ್ರಜ್ಞಾನವನ್ನು ಗಮನದಲ್ಲಿಟ್ಟುಕೊಂಡು ಜಿ ಫೈವ್ G303 ಮತ್ತು ಜಿ ಫೈವ್ G616 ಎಂಬ ಹ್ಯಾಂಡ್ ಸೆಟ್ ಗಳನ್ನು ಹೊರತಂದಿದೆ. ಇದರಲ್ಲಿ G616 ಟ್ರಿಪಲ್ ಸಿಮ್ ಆಯ್ಕೆಯನ್ನು ಹೊಂದಿದೆ.

ಜಿ ಫೈವ್ G303 ಮೊಬೈಲ್ ಡ್ಯೂಯಲ್ ಸಿಮ್ ಮೊಬೈಲ್ ಆಗಿದ್ದು, ಟಚ್ ಮತ್ತು ಟೈಪ್ ಎರಡೂ ಆಯ್ಕೆಗಳನ್ನು ಒಳಗೊಂಡಿದೆ. G303 ಮೊಬೈಲ್ ಕಪ್ಪು, ಕೆಂಪು ಮತ್ತು ಕಾಫಿ ಬಣ್ಣಗಳಲ್ಲಿ ಲಭ್ಯವಿದ್ದು,  ಜಿ ಫೈವ್ G616 ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಾಗಲಿದ್ದು, ಕ್ವೆರ್ಟಿ ಕೀ ಪ್ಯಾಡ್ ನೀಡಲಾಗಿದೆ.

ಜಿ ಫೈವ್ G303 ಮೊಬೈಲ್ ವಿಶೇಷತೆ:

* 2.8 ಇಂಚಿನ ಡಿಸ್ಪ್ಲೇ

* ಟಚ್ ಅಂಡ್ ಟೈಪ್

* ಡ್ಯೂಯಲ್ ಸಿಮ್

* ಡ್ಯೂಯಲ್ ಕ್ಯಾಮೆರಾ

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ, ಫ್ಲಾಶ್

* ಸೆಕೆಂಡರಿ ಡಿಜಿಟಲ್ ಕ್ಯಾಮೆರಾ

* LED ಟಾರ್ಚ್ ಮತ್ತು A2DP ಬ್ಲೂಟೂಥ್ ಸಂಪರ್ಕ

* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ಜಿಫೈವ್ G616 ಮೊಬೈಲ್ ವಿಶೇಷತೆ:

* ಟ್ರಿಪಲ್ ಸಿಮ್

* ಕ್ವೆರ್ಟಿ ಕೀ ಪ್ಯಾಡ್

* 2.6 ಇಂಚಿನ ಡಿಸ್ಪ್ಲೇ

* ಡಿಜಿಟಲ್ ಕ್ಯಾಮೆರಾ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ಜಿ ಫೈವ್ G303 ಮೊಬೈಲ್ 850 mAh ಬ್ಯಾಟರಿ ಹೊಂದಿದ್ದು, ಒಳ್ಳೆಯ ಬ್ಯಾಟರಿ ಬ್ಯಾಕಪ್ ನೀಡಲಿದೆ. G616 ಫೋನ್ 900 mAh ಬ್ಯಾಟರಿ ಹೊಂದಿದ್ದು, ಈ ಮೊಬೈಲ್ ನಲ್ಲಿ ಅನಲಾಗ್ TV ನೀಡಿರುವುದು ವಿಶೇಷವೆನಿಸಿದೆ. ಎರಡೂ ಮೊಬೈಲ್ ಗಳ ಜೊತೆ 500 ದಿನಗಳ ವಾರೆಂಟಿ ನೀಡಲಾಗಿದೆ.

ಜಿಫೈವ್ G303 ಮೊಬೈಲ್ ಬೆಲೆ 4,000ರು ಆಗಿದ್ದರೆ ಜಿ ಫೈವ್ G616 ಬೆಲೆ 3,000ರು ಎಂದು ತಿಳಿದುಬಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot