Home
ಮೊಬೈಲ್

4 ಕ್ಯಾಮೆರಾದ ಜಿಯೋನಿ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು? ಫೀಚರ್ಸ್ ಹೇಗಿದೆ?

ಈಗ ಬಿಡುಗಡೆಯಾಗಿರುವ s10, s10B ಮತ್ತು s10C ಎಂಬ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಅತ್ಯದ್ಬುತವಾಗಿದೆ.!!

By Bhaskar N J

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿರುವ ಜಿಯೋನಿ ಕಂಪೆನಿ ಇದೀಗ ಆಪಲ್ ಮತ್ತು ಸ್ಯಾಮ್‌ಸಂಗ್‌ಗೆ ಸೆಡ್ಡು ಹೊಡೆಯಲು ನಿಂತಿದೆ.!!ಹೌದು, ಚೀನಾ ಮೂಲದ ಜಿಯೋನಿ ಕಂಪೆನಿ 'ಜಿಯೋನಿ S10' ಎಂಬ ಹೊಸ ಮೂರು ಆವೈತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.!!

ಇದೇ ಮೊದಲ ಬಾರಿಗೆ 4 ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಈಗ ಬಿಡುಗಡೆಯಾಗಿರುವ s10, s10B ಮತ್ತು s10C ಎಂಬ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಅತ್ಯದ್ಬುತವಾಗಿದೆ.!! ಹಾಗಾದರೆ, s10 ಸ್ಮಾರ್ಟ್‌ಫೋನ್ ಹೇಗಿದೆ? ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಜಿಯೋನಿ s10 ಸ್ಮಾರ್ಟ್ಫೋನ್ 5.5 ಇಂಚ್ ಫುಲ್ ಡಿಸ್‌ಪ್ಲೇ ಹೊಂದಿದೆ. ಅತ್ಯದ್ಬುತ ಮಲ್ಟಿಮೀಡಿಯಾ ಸಪೋರ್ಟ್ ನೀಡುವ ಡಿಸ್‌ಪ್ಲೇ ಹೊಸ ಮಾದರಿಯ ಗೋರಿಲ್ಲಾ ಗ್ಲಾಸ್ ಹೊಂದಿದೆ.!! ಇನ್ನು ಟೆಕ್ ಹೆಲಿಯೋ ಪಿ ಪ್ರೊಸೆಸರ್ ಮತ್ತು ಅಮಿಗೊ 4.0 ಒಎಸ್ ಮೂಲಕ ಸ್ಮಾರ್ಟ್‌ಫೋನ್ ರನ್ ಆಗುತ್ತದೆ.!!

RAM ಮತ್ತು ಆಂತರಿಕ ಮೆಮೊರಿ.!!

RAM ಮತ್ತು ಆಂತರಿಕ ಮೆಮೊರಿ.!!

ಹೊಸದಾಗಿ ಬಿಡುಗಡೆಯಾಗಿರುವ ಜಿಯೋನಿ s10 ಸ್ಮಾರ್ಟ್‌ಫೋನ್ 6GB RAM ಮತ್ತು 64GB ಆಂತರಿಕ ಸ್ಟೋರೇಜ್ ಹೊಂದಿದೆ.! ಇದೇ ಮೊದಲ ಬಾರಿಗೆ ಇಂತಹ ಫೀಚರ್ ಅನ್ನು ಜಿಯೋನಿ ಹೊರತಂದದ್ದು, ಸ್ಮಾರ್ಟ್‌ಫೋನ್ ನಿರ್ವಹಣೆ ಅತ್ಯತ್ತಮವಾಗರಲಿದೆ.!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಜಿಯೋನಿ ಬಿಡುಗಡೆ ಮಾಡಿರುವ ಮೂರು ಮಾದರಿಯ ಸ್ಮಾರ್ಟ್‌ಫೋನ್‌ಗಳು ನಾಲ್ಕು ಕ್ಯಾಮೆರಾ ಹೊಂದಿರುವುದು ವಿಶೇಷ.! 16MP ಮತ್ತು 8MP ರಿಯರ್ ಕ್ಯಾಮೆರಾ ಮತ್ತು 2೦MP ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿವೆ.!!

ಬ್ಯಾಟರಿ ಶಕ್ತಿ ಮತ್ತು ಬೆಲೆ ಎಷ್ಟು?

ಬ್ಯಾಟರಿ ಶಕ್ತಿ ಮತ್ತು ಬೆಲೆ ಎಷ್ಟು?

ಜಿಯೋನಿ s10 ಸ್ಮಾರ್ಟ್‌ಫೋನ್ 3100Mah ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಸಂಪೂರ್ಣ 42 ಗಂಟೆಗಳ ಬ್ಯಾಕಪ್ ನೀಡುತ್ತದೆ ಎಂದು ಜಿಯೋನಿ ಹೇಳಿದೆ.! ಇನ್ನು ಇಷ್ಟೆಲ್ಲಾ ಫೀಚರ್ ಹೊಂದಿರುವ ಈ ಮೊಬೈಲ್ ಬೆಲೆ ಕೇವಲ 24 ಸಾವಿರ ರೂ. ಆಸುಪಾಸಿನಲ್ಲಿದೆ.!!

Best Mobiles in India

English summary
Gionee S10 gets dual camera setup on front as well as rear side. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+