ಗೆಲಾಕ್ಸಿ A50s ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಇನ್ನಷ್ಟು ಆಕರ್ಷಕ, ಉಲ್ಲಾಸಮಯ..!

By Gizbot Bureau
|

ಸ್ಯಾಮ್‌ಸಂಗ್ ಇತ್ತೀಚೆಗೆ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ ಗೆಲಾಕ್ಸಿ ಎ-ಸೀರೀಸ್ ಸ್ಮಾರ್ಟ್‌ಫೋನ್‌ ಶ್ರೇಣಿಯನ್ನು ನವೀಕರಿಸಿದೆ. ಹೊಸ ಉತ್ಪನ್ನಗಳ ಸಾಲಿನಲ್ಲಿ ಗೆಲಾಕ್ಸಿ A50s, ಗೆಲಾಕ್ಸಿ A30s ಮತ್ತು A10s ಸ್ಮಾರ್ಟ್‌ಫೋನ್‌ಗಳು ಬಂದು ನಿಂತಿವೆ. ಗೆಲಾಕ್ಸಿ A50s ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 22,999 ರೂ. ಆಗಿದ್ದು, ಹೊಸ ವಿನ್ಯಾಸ ಮತ್ತು ನವೀಕರಿಸಿದ ಕ್ಯಾಮೆರಾದೊಂದಿಗೆ ತರುತ್ತದೆ.

ಆಕರ್ಷಣೀಯ ವಿನ್ಯಾಸ

ಆಕರ್ಷಣೀಯ ವಿನ್ಯಾಸ

ಸ್ಯಾಮ್‌ಸಂಗ್‌ ಗೆಲಾಕ್ಸಿ A50s ಸ್ಮಾರ್ಟ್‌ಫೋನ್‌‌A50ಯ ಮುಂದುವರೆದ ಆವೃತ್ತಿಯಾಗಿದ್ದು, ನವೀಕರಿಸಿದ ಕ್ಯಾಮೆರಾ ಮತ್ತು ಆಕರ್ಷಣೀಯ ವಿನ್ಯಾಸದೊಂದಿಗೆ ಬರುತ್ತಿದೆ. ಹೊಸ ಫೋನ್‌ನಲ್ಲಿ ಅಂತರ್ಗತ ಫೀಚರ್‌ ಒಂದಿದ್ದು, ಲಾಕ್ ಸ್ಕ್ರೀನ್‌ನಲ್ಲಿ ಸಮೃದ್ಧ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಈ ಫೀಚರ್‌ನ್ನು ಗ್ಲಾನ್ಸ್ ಎನ್ನಲಾಗುತ್ತದೆ. ಈ ಫೀಚರ್‌ನಿಂದ ನಿಮ್ಮ ಮಂದವಾದ ಲಾಕ್ ಪರದೆ ಅನನ್ಯ ಮತ್ತು ಸುಂದರವಾಗುತ್ತದೆ.

ಸುಲಭ ಬಳಕೆ

ಸುಲಭ ಬಳಕೆ

ಅನ್‌ಲಾಕ್‌ ಮಾಡದೆಯೇ ಮತ್ತು ಆಪ್‌ಗಳ ಮೂಲಕ ಹುಡುಕದೇ ನಿಮ್ಮ ಆಯ್ಕೆಯ ವಿಷಯವನ್ನು ಗ್ಲಾನ್ಸ್‌ ಫೀಚರ್‌ ಮುಖೇನ ನೀವು ವೀಕ್ಷಿಸಬಹುದು. ಗ್ಲಾನ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಪ್ರತಿ ಬಾರಿ ನಿಮ್ಮ ಫೋನ್‌ನ್ನು ಆನ್‌ ಮಾಡಿದಾಗ ಸಣ್ಣ ಹೆಡ್‌ಲೈನ್‌ನೊಂದಿಗೆ ಸುಂದರ ಚಿತ್ರವೊಂದು ಲಾಕ್‌ ಸ್ಕ್ರೀನ್‌ನಲ್ಲಿ ಮೂಡಲಿದೆ. ಹೆಚ್ಚಿನ ಬಾರಿ ಇದು ವಿಡಿಯೋ ರೂಪದಲ್ಲಿರುತ್ತದೆ ಮತ್ತು ಈ ಫೀಚರ್‌ನ್ನು ಸುಲಭವಾಗಿ ಬಳಸಬಹುದು.

ಕಸ್ಟಮೈಸ್‌ ಲಾಕ್‌ ಸ್ಕ್ರೀನ್‌

ಕಸ್ಟಮೈಸ್‌ ಲಾಕ್‌ ಸ್ಕ್ರೀನ್‌

ಗ್ಲಾನ್ಸ್‌ ಫೀಚರ್‌ನಿಂದ ನಿಮ್ಮ ಲಾಕ್ ಸ್ಕ್ರೀನ್‌ನ್ನು ಕಸ್ಟ್‌ಮೈಸ್‌ ಮಾಡಬಹುದು. ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಿಗೆ ಹೋಗಿ ನಿಮ್ಮ ಆಸಕ್ತಿಯ ವಿಷಯಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಪ್ರಯಾಣ, ಆಹಾರ, ಫ್ಯಾಷನ್, ಕ್ರೀಡೆ ಮತ್ತು ಸುದ್ದಿಯಂತಹ ಆಯ್ಕೆಗಳು ನಿಮ್ಮ ಮುಂದಿರಲಿವೆ. ಆಟಗಳು, ಸಮೀಕ್ಷೆಗಳು ಮತ್ತು ಗ್ಲಾನ್ಸ್ ಟಿವಿಯಂತಹ ಆಯ್ಕೆಗಳು ಬಳಕೆದಾರರಿಗೆ ಸಿಗಲಿವೆ. ಇದಕ್ಕಿಂತ ಹೆಚ್ಚಾಗಿ, ನಿಮ್ಮ ಲಾಕ್ ಪರದೆಯನ್ನು ಮತ್ತಷ್ಟು ವೈಯಕ್ತೀಕರಿಸಲು ಗ್ಯಾಲರಿಯಿಂದ ನಿಮ್ಮ ನೆಚ್ಚಿನ ಚಿತ್ರಗಳನ್ನು ಸೇರಿಸಬಹುದು. ದೃಶ್ಯಗಳು ಮತ್ತು ವಿಷಯ ಉತ್ತಮ ಗುಣಮಟ್ಟದಿಂದ ಕೂಡಿದ್ದು, ರಿಚ್‌ ಆಗಿ ಕಾಣುತ್ತದೆ. ಈ ಫೀಚರ್‌ನಿಂದ ಬ್ಯಾಟರಿ ಬಾಳಿಕೆ ಮತ್ತು ಸಾಮರ್ಥ್ಯದ ಮೇಲೆ ಯಾವುದೇ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

 ಉಲ್ಲಾಸಕರ ಜೀವನಕ್ಕೆ ಗ್ಲಾನ್ಸ್‌

ಉಲ್ಲಾಸಕರ ಜೀವನಕ್ಕೆ ಗ್ಲಾನ್ಸ್‌

ಗ್ಲಾನ್ಸ್‌ ಫೀಚರ್‌ ಸರಳತೆ, ಪ್ರವೇಶವನ್ನು ಸುಲಭಗೊಳಿಸುತ್ತದೆ ಮತ್ತು ವಿಷಯ ಬಳಕೆಗೆ ಅನುಕೂಲ ಮಾಡಿಕೊಡುತ್ತದೆ. ಪ್ರತಿ ಬಾರಿ ನಿಮ್ಮ ಫೋನ್‌ನ್ನು ಆನ್‌ ಮಾಡಿದಾಗ ನೀವು ಆಸಕ್ತಿದಾಯಕ ಮತ್ತು ಉಲ್ಲಾಸಕರವಾದದ್ದನ್ನು ನೋಡುತ್ತೀರಿ. ದಿನವಿಡೀ ಸಕಾರಾತ್ಮಕತೆಯ ಪ್ರತಿಬಿಂಬ ನೀಡಲು ಈ ಫೀಚರ್‌ ಸಹಾಯ ಮಾಡುತ್ತದೆ. ಎ50 ಸರಣಿ ಹೊರತುಪಡಿಸಿ, ಎಂ, ಜೆ ಮತ್ತು ಇತರ ಎ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲೂ ಗ್ಲಾನ್ಸ್ ಫೀಚರ್‌ ಲಭ್ಯವಿದೆ.

Best Mobiles in India

Read more about:
English summary
Glance Makes Galaxy A50s AMOLED Display Livelier And Full Of Informational Content

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X