ಖರೀದಿದಾರರ ಟಾಪ್ ಆಯ್ಕೆ ಈ ಫೋನ್‌ಗಳು
ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಪ್ರತಿಯೊಂದು ಕೂಡ ಅತ್ಯಮೂಲ್ಯ ಅಂಶವನ್ನು ಪ್ರತಿಪಾದಿಸುತ್ತದೆ. ವಿನ್ಯಾಸದಿಂದ ಹಿಡಿದು ಡಿವೈಸ್ ಗಾತ್ರ ಅದರಲ್ಲಿರುವ ಪ್ರಮುಖಾಂಶಗಳು ಹೀಗೆ ಪ್ರತಿಯೊಂದಕ್ಕೂ ನಾವು ಗಮನ ನೀಡುವುದು ಅತ್ಯವಶ್ಯಕವಾಗಿರುತ್ತದೆ. ಇನ್ನು ಫೋನ್‌ನಲ್ಲೂ ಹಲವಾರು ವೈವಿಧ್ಯತೆಗಳನ್ನು ನಾವು ಕಾಣಬಹುದಾಗಿದ್ದು ಈ ವೈವಿಧ್ಯತೆಗಳು ಬಳಕೆದಾರರಿಗೆ ಹಿಡಿಯುವಂತಿದೆ.
ಓದಿರಿ: ಟಾಪ್ 10 ಉಚಿತ ಅಪ್ಲಿಕೇಶನ್‌ಗಳು: ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ
ಇಂದಿನ ಲೇಖನದಲ್ಲಿ ಇಂತಹುದೇ ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡು ಬಂದಿರುವ ಡಿವೈಸ್‌ಗಳತ್ತ ಗಮನ ಹರಿಸೋಣ. ಈ ಡಿವೈಸ್‌ಗಳು ಬಳಕೆದಾರರ ಕಣ್ಮಣಿಯಾಗಿ ಇದೀಗ ಮಾರುಕಟ್ಟೆಯಲ್ಲಿ ಜಾದೂವನ್ನುಂಟು ಮಾಡುತ್ತಿದ್ದು ಇನ್ನಷ್ಟು ವಿವರಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್
2014 ರಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ ಈ ಪ್ಲಾಸ್ಟಿಕ್ ಫೋನ್‌ಗಳು ಸ್ಯಾಮ್‌ಸಂಗ್ ಪ್ರೇಮಿಗಳಿಗೆ ರಸದೌತಣವನ್ನು ಉಣಬಡಿಸಿದ್ದಂತೂ ಸುಳ್ಳಲ್ಲ. ಗ್ಯಾಲಕ್ಸಿ ಎಸ್ ಫ್ಲ್ಯಾಗ್‌ಶಿಪ್ ಅಡಿಯಲ್ಲಿ ಬಂದಿರುವ ಎಲ್ಲಾ ಫೋನ್‌ಗಳು ಒಂದಿಲ್ಲೊಂದು ವಿಶೇಷತೆಗಳಿಂದ ಬಳಕೆದಾರರ ಮನವನ್ನು ಕದ್ದಿದ್ದು ಅಂತಹುದೇ ಮೋಡಿ ಈ ಡಿವೈಸ್‌ಗಳಲ್ಲಿ ಕೂಡ ನಡೆದಿದೆ. ಮೆಟಲ್ ಫ್ರೇಮ್, ಎರಡು ಗ್ಲಾಸ್ ಪ್ಯಾನೆಲ್‌ಗಳು , ಶಕ್ತಿಯುತ ಹಾರ್ಡ್‌ವೇರ್ ಹೀಗೆ ಇದರ ವಿಶೇಷತೆಗಳನ್ನು ಪಟ್ಟಿಮಾಡಬಹುದಾಗಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್3
ಸೋನಿಯ ಪ್ರಸ್ತುತ ಫ್ಲ್ಯಾಗ್‌ಶಿಪ್ ಎಕ್ಸ್‌ಪೀರಿಯಾ ಜೆಡ್ 3 ಸ್ನ್ಯಾಪ್‌ಡ್ರಾಗನ್ 801 ಸಾಕ್, 3 ಜಿಬಿ RAM, ಮತ್ತು ಅತ್ಯುನ್ನತ ನೋಟದಿಂದ ಮನಸೆಳೆಯುವಂತೆ ಮಾಡಿದೆ.

ಒಪ್ಪೊ ಆರ್1 ಎಕ್ಸ್
ಸ್ನ್ಯಾಪ್‌ಡ್ರಾಗನ್ 615 ಮತ್ತು 2 ಜಿಬಿ RAM ಅನ್ನು ಡಿವೈಸ್ ಹೊಂದಿದ್ದು ಮೆಟಲ್ ಫ್ರೇಮ್ ಮತ್ತು ಗ್ಲಾಸ್ ಅನ್ನು ಎರಡೂ ಬದಿಗಳಲ್ಲಿ ಪಡೆದುಕೊಂಡಿದೆ. ಇದರ ಹಿಂಭಾಗ ಕೂಡ ಡೈಮೆಂಡ್ ಪ್ಯಾಟ್ರನ್ ಅನ್ನು ಪಡೆದುಕೊಂಡಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಇದು ಬೆಳಕನ್ನು ಪ್ರತಿಫಲಿಸುತ್ತದೆ.

ಹುವಾಯಿ ಅಸೆಂಡ್ ಪಿ 7
ಅಸೆಂಡ್ ಪಿ7 ಹೋಮ್ ಮೇಡ್ ಕಿರಿನ್ 910 ಸಾಕ್ ಮತ್ತು 2ಜಿಬಿ RAM ಅನ್ನು ಪಡೆದುಕೊಂಡಿದ್ದು ಕ್ಲಾಸಿ ಲುಕ್‌ನಲ್ಲಿ ಮನಸೆಳೆಯುವಂತಿದೆ.

ಶ್ಯೋಮಿ ಎಮ್ಐ ನೋಟ್ ಮತ್ತು ಎಮ್ಐ ನೋಟ್ ಪ್ರೊ
64 ಬಿಟ್ ಸ್ನ್ಯಾಪ್‌ಡ್ರಾಗನ್ 810 ಸಾಕ್ ಮತ್ತು 4 ಜಿಬಿ RAM ಅನ್ನು ಡಿವೈಸ್ ಹೊಂದಿದೆ. 3ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು ಕರ್ವ್ ಗ್ಲಾಸ್ ಅನ್ನು ಹಿಂಭಾಗದಲ್ಲಿ ಫೋನ್ ಹೊಂದಿದೆ.

ಬ್ಲು ವಿವೊ Iv
ತೆಳು ಹ್ಯಾಂಡ್‌ಸೆಟ್ ಆಗಿದ್ದು ಅತ್ಯುನ್ನತ ಹಾರ್ಡ್‌ವೇರ್ ಅನ್ನು ಒದಗಿಸುತ್ತದೆ. MediaTek 6592 ಜೊತೆಗೆ 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು ಎರಡೂ ಬದಿಗಳಲ್ಲಿ ಗ್ಲಾಸ್ ಪ್ಯಾನಲ್‌ಗಳನ್ನು ಹೊಂದಿದೆ.

ಬ್ಲು ವಿವೊ ಏರ್
ಇದು ಜಿಯೋನಿ ಇಲೈಫ್ ಎಸ್5.1 ಆಗಿದ್ದು ವಿವೊ Iv ಗಿಂತಲೂ ತೆಳುವಾಗಿದೆ. 0.2" / 5.15 ಎಮ್‌ಎಮ್ ಪ್ರೊಫೈಲ್ ಅನ್ನು ಇದು ಒದಗಿಸುತ್ತಿದ್ದು, MT 6592 SoC ಇದರಲ್ಲಿದೆ. 1 ಜಿಬಿ RAM ಡಿವೈಸ್‌ನಲ್ಲಿದ್ದು ಸುಂದರ ನೋಟವನ್ನು ಡಿವೈಸ್ ನೀಡುತ್ತಿದೆ.


Click it and Unblock the Notifications








